• Home
  • »
  • News
  • »
  • trend
  • »
  • Viral News: ವಿಮಾನದಲ್ಲಿ ನಿಮ್ಮ ಲಗೇಜ್​ಗಳನ್ನು ಹೇಗೆ ಲೋಡ್ ಮಾಡ್ತಾರೆ? ಈ ವೈರಲ್ ವಿಡಿಯೋ ನೋಡಿ

Viral News: ವಿಮಾನದಲ್ಲಿ ನಿಮ್ಮ ಲಗೇಜ್​ಗಳನ್ನು ಹೇಗೆ ಲೋಡ್ ಮಾಡ್ತಾರೆ? ಈ ವೈರಲ್ ವಿಡಿಯೋ ನೋಡಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Viral News: ವಿಮಾನ ನಿಲ್ದಾಣದಲ್ಲಿರುವ ಸಿಬ್ಬಂದಿಗಳು, ನಮ್ಮ ಲಗೇಜ್ ಅನ್ನು ನಿಜವಾಗಿಯೂ ಹೇಗೆ ಲೋಡ್ ಮಾಡುತ್ತಾರೆ ಎಂದು ಅನೇಕರಿಗೆ ಕಾಡುವ ಪ್ರಶ್ನೆಯಾಗಿರುತ್ತದೆ ಅಂತ ಹೇಳಬಹುದು. ಸೂಟ್ಕೇಸ್ ಗಳು ಮತ್ತು ಬ್ಯಾಗ್ ಗಳನ್ನು ವಿಮಾನಕ್ಕೆ ಹೇಗೆ ಲೋಡ್ ಮಾಡಲಾಗುತ್ತದೆ ಎಂಬುದನ್ನು ಒಂದು ವೀಡಿಯೋದಲ್ಲಿ ಸೆರೆಹಿಡಿಯಲಾಗಿದೆ ನೋಡಿ.

ಮುಂದೆ ಓದಿ ...
  • Share this:

ನಮ್ಮಲ್ಲಿ ಸ್ವಲ್ಪ ಹೆಚ್ಚು ದುಡ್ಡಿರುವ ಜನರು ಯಾವುದಾದರೂ ಮಹಾನಗರಕ್ಕೆ ಹೋಗಬೇಕಾದರೆ ರೈಲಿನ (Railway) ಎಸಿ ಬೋಗಿಯಲ್ಲಿ ಕುಳಿತು ಪ್ರಯಾಣಿಸುವುದಕ್ಕಿಂತಲೂ ವಿಮಾನದಲ್ಲಿ (Airplane) ಪ್ರಯಾಣಿಸುವುದನ್ನು ಆಯ್ಕೆ ಮಾಡಿಕೊಳ್ಳುತ್ತಾರೆ ಅಂತ ಹೇಳಬಹುದು. ರೈಲಿನಲ್ಲಿ ಸಮಯ ತುಂಬಾನೇ ಹಿಡಿಯುತ್ತದೆ ಮತ್ತು ನಮ್ಮ ಲಗೇಜ್ ಗಳ ಕಡೆಗೆ ನಾವು ತುಂಬಾನೇ ಕಾಳಜಿಯನ್ನು ವಹಿಸಬೇಕಾಗುತ್ತದೆ. ಆದರೆ ಅದೇ ವಿಮಾನದಲ್ಲಿ ಹೋದರೆ ರೈಲಿಗಿಂತಲೂ ತುಂಬಾನೇ ಬೇಗನೆ ಹೋಗಿ ಆ ಊರಿಗೆ ತಲುಪುತ್ತೇವೆ ಮತ್ತು ನಮ್ಮ ಲಗೇಜ್ ಗಳ (Luggage) ಬಗ್ಗೆ ಗಮನಹರಿಸುವ ಕೆಲಸವು ನಮ್ಮದಾಗಿರುವುದಿಲ್ಲ. ವಿಮಾನ ಹತ್ತುವ ಮುಂಚೆ ಲಗೇಜ್ ಗಳನ್ನು ಅಲ್ಲಿ ವಿಮಾನ ನಿಲ್ದಾಣದಲ್ಲಿ ನೀಡಿದರೆ ಸಾಕು, ಸಿಬ್ಬಂದಿಗಳೇ ಆ ಲಗೇಜ್ ಗಳನ್ನ ವಿಮಾನದಲ್ಲಿ ಲೋಡ್ ಮಾಡುತ್ತಾರೆ ಮತ್ತು ನಾವು ಹೋಗಬೇಕೆಂದಿರುವ ಊರಿಗೆ ಹೋಗಿ ಇಳಿದಾಗ ಆ ವಿಮಾನ ನಿಲ್ದಾಣದಿಂದ ಮತ್ತೆ ನಮ್ಮ ಲಗೇಜ್ ಅನ್ನು ತೆಗೆದುಕೊಂಡು ಹೋಗಬಹುದು.


ಆದರೆ ಕೆಲವೊಮ್ಮೆ ನಮ್ಮ ಲಗೇಜ್ ಗಳು ಡ್ಯಾಮೇಜ್ ಆಗುವ ಅಥವಾ ನಮಗೆ ಗುರುತು ಸಿಗಲು ಸ್ವಲ್ಪ ಸಮಯ ತೆಗೆದುಕೊಳ್ಳುವುದು ಮತ್ತು ಇದರ ಜೊತೆಗೆ ನಮ್ಮ ಬಳಿಯಿದ್ದ ಲಗೇಜ್ ಬಣ್ಣ ಬೇರೆಯವರ ಲಗೇಜ್ ಬಣ್ಣದ ರೀತಿಯಲ್ಲಿದ್ದು, ಅದು ಅದಲು-ಬದಲು ಆಗುವ ಎಲ್ಲಾ ಸಾಧ್ಯತೆಗಳು ಇರುತ್ತವೆ. ಅಷ್ಟಕ್ಕೂ ಈ ಲಗೇಜುಗಳನ್ನು ವಿಮಾನದಲ್ಲಿ ಹೇಗೆ ಲೋಡ್ ಮಾಡುತ್ತಾರೆ ಎಂಬ ಕುತೂಹಲ ನಮ್ಮಲ್ಲಿ ಬಹುತೇಕರಿಗೆ ಇದ್ದೇ ಇರುತ್ತದೆ ಎಂದರೆ ತಪ್ಪಿಲ್ಲ.


ವಿಮಾನದಲ್ಲಿ ಲಗೇಜ್ ಗಳನ್ನ ಹೇಗೆ ಲೋಡ್ ಮಾಡ್ತಾರೆ?:


ವಿಮಾನ ನಿಲ್ದಾಣದಲ್ಲಿರುವ ಸಿಬ್ಬಂದಿಗಳು, ನಮ್ಮ ಲಗೇಜ್ ಅನ್ನು ನಿಜವಾಗಿಯೂ ಹೇಗೆ ಲೋಡ್ ಮಾಡುತ್ತಾರೆ ಎಂದು ಅನೇಕರಿಗೆ ಕಾಡುವ ಪ್ರಶ್ನೆಯಾಗಿರುತ್ತದೆ ಅಂತ ಹೇಳಬಹುದು. ಸೂಟ್ಕೇಸ್ ಗಳು ಮತ್ತು ಬ್ಯಾಗ್ ಗಳನ್ನು ವಿಮಾನಕ್ಕೆ ಹೇಗೆ ಲೋಡ್ ಮಾಡಲಾಗುತ್ತದೆ ಎಂಬುದನ್ನು ಒಂದು ವೀಡಿಯೋದಲ್ಲಿ ಸೆರೆಹಿಡಿಯಲಾಗಿದೆ ನೋಡಿ. ಟ್ವಿಟರ್ ಬಳಕೆದಾರರೊಬ್ಬರು ಅತ್ಯಾಕರ್ಷಕವಾಗಿ ಹಂಚಿಕೊಂಡ ಟೈಮ್-ಲ್ಯಾಪ್ಸ್ ವಿಡಿಯೋ ಸೂಟ್ಕೇಸ್ ಗಳನ್ನು ಸುಲಭವಾಗಿ ಜೋಡಿಸಲು ಸಹಾಯ ಮಾಡಲು ಪೋರ್ಟಬಲ್ ಕನ್ವೇಯರ್ ಬೆಲ್ಟ್ ನೊಂದಿಗೆ ವಿಮಾನದಲ್ಲಿ ಬ್ಯಾಗೇಜ್ ಹ್ಯಾಂಡ್ಲರ್ ಅನ್ನು ತೋರಿಸುತ್ತದೆ.ಆರಂಭದಲ್ಲಿ, ಅವರು ಕೆಲವು ಸೆಕೆಂಡುಗಳ ಕಾಲ ವಿಶ್ರಾಂತಿ ಪಡೆಯುವುದನ್ನು ನೋಡಬಹುದು ಮತ್ತು ಬ್ಯಾಗ್ ಗಳು ಬರಲು ಪ್ರಾರಂಭಿಸಿದ ತಕ್ಷಣ, ಸಿಬ್ಬಂದಿ ಸದಸ್ಯರು ಲಗೇಜ್ ಅನ್ನು ಜೋಡಿಸಲು ಪ್ರಾರಂಭಿಸುತ್ತಾರೆ, ಸಣ್ಣ ಚೀಲಗಳು ಮತ್ತು ಬ್ಯಾಕ್ಪ್ಯಾಕ್ ಗಳ ನಡುವಿನ ಅಂತರವನ್ನು ತುಂಬಲು ಬಳಸಲಾಗುತ್ತದೆ. ಕೆಲವೇ ಸೆಕೆಂಡುಗಳಲ್ಲಿ, ವಿಮಾನದ ಒಂದು ಭಾಗವು ಬ್ಯಾಗ್ ಗಳಿಂದ ತುಂಬಿರುತ್ತದೆ. ಬ್ಯಾಗೇಜ್ ಹ್ಯಾಂಡ್ಲರ್ ಅದೇ ಕೆಲಸವನ್ನ ವಿಮಾನದ ಇನ್ನೊಂದು ಬದಿಯಲ್ಲಿ ಪುನರಾವರ್ತಿಸುತ್ತಾನೆ. ಹಾಗೆ ಮಾಡುವ ಮೊದಲು, ಅವರು ವೀಡಿಯೋದಲ್ಲಿ ಕಾಣುವಂತೆ ಕೆಲವು ಪುಶ್-ಅಪ್ ಗಳನ್ನು ಸಹ ಮಾಡುತ್ತಾರೆ.


ವೈರಲ್ ಆಯ್ತು ವಿಡಿಯೋ:


ಸಾಮಾಜಿಕ ಮಾಧ್ಯಮದಲ್ಲಿ ಈ ವೀಡಿಯೋವನ್ನು ಹಂಚಿಕೊಂಡಾಗಿನಿಂದಲೂ ಸುಮಾರು 1.3 ಮಿಲಿಯನ್ ಬಾರಿ ಇದನ್ನು ವೀಕ್ಷಿಸಲಾಗಿದೆ ಮತ್ತು 14,000 ಲೈಕ್ ಗಳನ್ನು ಸಹ ಈ ವೀಡಿಯೋ ಪಡೆದಿದೆ. ಒಬ್ಬ ಸಾಮಾಜಿಕ ಮಾಧ್ಯಮ ಬಳಕೆದಾರರು ಕಾಮೆಂಟ್ ಮಾಡಿ "ವಾಹ್, ವಿಮಾನಗಳಲ್ಲಿ ಲಗೇಜ್ ಅನ್ನು ಇಡುತ್ತಿರುವ ವ್ಯಕ್ತಿ ಯಾರಿರಬಹುದು ಅಂತ ನಾನು ಎಂದಿಗೂ ಯೋಚಿಸಿರಲಿಲ್ಲ" ಎಂದು ಹೇಳಿದ್ದಾರೆ.


ಇದನ್ನೂ ಓದಿ: Weird Laws: ಈತನಿಗೆ ಐದಲ್ಲ ಹತ್ತಲ್ಲ, ಬರೋಬ್ಬರಿ 8,658 ವರ್ಷ ಜೈಲು ಶಿಕ್ಷೆ! ಅಷ್ಟಕ್ಕೂ ಈ ಧರ್ಮ ಪ್ರಚಾರಕ ಮಾಡಿದ ಪಾಪವಾದ್ರೂ ಏನು?


"ನಾವು ಸ್ವೀಡನ್ ನಲ್ಲೂ ವಿಮಾನಗಳಿಗೆ ಲಗೇಜ್ ಗಳನ್ನ ಇದೇ ರೀತಿಯಾಗಿ ಲೋಡ್ ಮಾಡುತ್ತೇವೆ ಎಂದು ಹೇಳಬಹುದು. ಟ್ರೆಡ್ಮಿಲ್ ಭಾಗವು ಅಗತ್ಯವಿದ್ದರೆ ವೇಗವನ್ನು ಕಡಿಮೆ ಮಾಡಬಹುದು ಮತ್ತು ಹೆಚ್ಚಿಸಬಹುದು" ಎಂದು ಇನ್ನೊಬ್ಬರು ಹೇಳಿದರು. "ಇದು ಕಾಣುವಷ್ಟು ಸರಳವಾಗಿಲ್ಲ ಎಂದು ನಾನು ನಂಬುತ್ತೇನೆ. ಈ ಸಿಬ್ಬಂದಿ ಸ್ಥಿರತೆಗಾಗಿ ವಿವಿಧ ತೂಕಗಳನ್ನು ಸಮತೋಲನಗೊಳಿಸಬೇಕಾಗುತ್ತದೆ" ಎಂದು ಮೂರನೆಯವರು ಕಾಮೆಂಟ್ ಮಾಡಿದ್ದಾರೆ.


"ಇದು ಪ್ಯಾಕ್ ಆಗಿದ್ದರೆ, ಪ್ರಯಾಣಿಕರು ವಿಮಾನವನ್ನು ಹತ್ತಲು ವಿಫಲರಾದರೆ ಅವರು ತಮ್ಮ ಲಗೇಜ್ ಅನ್ನು ಹೇಗೆ ಹಿಂಪಡೆಯುತ್ತಾರೆ" ಎಂದು ಬಳಕೆದಾರರೊಬ್ಬರು ಕೇಳಿದರು. ಈ ವಿಷಯದ ಬಗ್ಗೆ ತಿಳುವಳಿಕೆ ಹೊಂದಿದ್ದ ಒಬ್ಬರು "ನಾನು ಈ ಕೆಲಸವನ್ನು ಮಾಡಿದ್ದೇನೆ ಮತ್ತು ಅದು ಅತ್ಯಂತ ಒತ್ತಡದ ವಿಷಯ. ಏಕೆಂದರೆ ವ್ಯಕ್ತಿ ವಿಮಾನ ಹತ್ತದೆ ಇದ್ದಾಗ ಎಲ್ಲಾ ಲಗೇಜ್ ಗಳನ್ನ ಇಳಿಸಬೇಕಾಗುತ್ತದೆ” ಎಂದು ಹೇಳಿದರು.

Published by:shrikrishna bhat
First published: