Just Miss: ಯಮರಾಜ ಊಟಕ್ಕೆ ಬ್ರೇಕ್ ತಗೊಂಡಿದ್ದಕ್ಕೆ ಈ ವ್ಯಕ್ತಿ ಜೀವ ಉಳಿಯಿತಂತೆ! ವೈರಲ್ ವಿಡಿಯೋ ನೋಡಿ
ವ್ಯಕ್ತಿಯೊಬ್ಬನು ಕುಸಿದು ಬೀಳುತ್ತಿರುವ ಕಾಂಕ್ರೀಟ್ ಫುಟ್ ಬಾತ್ ನೊಳಗೆ ಬೀಳುವ ಅಪಾಯದಿಂದ ಕೂದಲ ಎಳೆಯ ಅಂಚಿನಲ್ಲಿ ಪಾರಾಗಿದ್ದಾನೆ. ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
ಕುಸಿದು ಬೀಳುತ್ತಿರುವ ಕಾಂಕ್ರೀಟ್ ಫುಟ್ ಪಾತ್ ನಿಂದ ಪಾರಾದ ವ್ಯಕ್ತಿ
ಜೀವನದಲ್ಲಿ ಅಪಾಯ, ಆಪಘಾತಗಳು (Accident) ಯಾವಾಗ ಸಂಭವಿಸುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಯಾವ ದಿಕ್ಕಿನಿಂದ ಯಾವ ಯಾವ ರೀತಿಯಾದ ಅಪಾಯಗಳು (Dangerous) ಬರುತ್ತದೆ ಎಂಬುದನ್ನು ಊಹಿಸಲೂ ಸಾಧ್ಯವಿಲ್ಲ. ಆದರೆ ಕೆಲವೊಮ್ಮೆ ಕ್ಷಣಾರ್ಧದಲ್ಲೆ ಅಪಾಯದಿಂದ ತಪ್ಪಿಸಿಕೊಂಡು ಬದುಕಿದುಳಿದವರು ಇದ್ದಾರೆ. ಅದೃಷ್ಟವೆಂಬ(Luck) ಕಾಣಿಗೆ ಕಾಣದ ಶಕ್ತಿ ಯಾವಾಗ ಯಾರನ್ನು ರಕ್ಷಿಸುತ್ತದೆ ಎಂಬುದು ತಿಳಿದಿಲ್ಲ. ಆದರೆ ಇತ್ತೀಚೆಗೆ ಅಪಾಯದಿಂದ ಕ್ಷಣಾರ್ಧದಲ್ಲಿ ಪಾರಾದ ವೀಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಗಿ ವೈರಲ್ ಆಗುತ್ತಿದೆ. ಕುಸಿದು ಬೀಳುವ ಕಾಂಕ್ರೀಟ್ (Concert) ಫುಟ್ ಪಾತ್ (Footpath) ನಿಂದ ಕೂದಲ ಎಳೆಯಲ್ಲಿ ತಪ್ಪಿಸಿಕೊಂಡಿದ್ದಾನೆ.
ಅಂಗಡಿಯತ್ತ ನಡೆದುಕೊಂಡು ಬರುತ್ತಿದ್ದ ವ್ಯಕ್ತಿ
ವೀಡಿಯೋವನ್ನು ಗಮನಿಸುವಂತೆ ವ್ಯಕ್ತಿಯೊಬ್ಬನು ತನ್ನ ಪಾಡಿಗೆ ಅಂಗಡಿಯತ್ತ ನಡೆದುಕೊಂಡುಬರುವುದನ್ನು ಕಾಣಬಹುದಾಗಿದೆ. ಆದರೆ ನಂತರದಲ್ಲಿ ಅವನು ಕ್ಷಣಾಧರ್ದಲ್ಲೆ ಒಂದು ಅಪಾಯದಿಂದ ತಪ್ಪಿಸಿಕೊಂಡಿದ್ದಾನೆ. ಇದು ಅವನ ಅದೃಷ್ಟದ ಫಲವೇ ಎಂದು ಜನರು ಹೇಳಿಕೊಂಡಿದ್ಧಾರೆ.
ಕುಸಿದುಬಿದ್ದ ಕಾಂಕ್ರೀಟ್ ಫುಟ್ ಪಾತ್
ವ್ಯಕ್ತಿ ನಡೆದುಕೊಂಡು ಅಂಗಡಿಯತ್ತ ಬರುವ ವೇಳೆಯಲ್ಲಿ ಅವನು ಒಂದು ಫುಟ್ ಪಾತ್ ದಾಟುವುದನ್ನು ಕಾಣಬಹುದು. ಅವನು ಜಸ್ಟ್ ಫುಟ್ ಪಾತ್ ನಿಂದ ಪಾಸ್ ಆಗಿ ಒಂದು ಕಾಲು ಮೇಲೆತ್ತುವಾಗ ಅಲ್ಲಿನ ಕಾಂಕ್ರೀಟ್ ಫುಟ್ ಪಾತ್ ಕುಸಿದು ಬೀಳುತ್ತದೆ.
ಕೂದಲ ಎಳೆಯ ಅಂತರದಲ್ಲಿ ಪಾರಾದ ವ್ಯಕ್ತಿ ವೀಡಿಯೋದಲ್ಲಿ ನೋಡುವಂತೆ, ವ್ಯಕ್ತಿ ಫುಟ್ ಪಾತ್ ನಿಂದ ಪಾಸಾಗಿ ಅಂಗಡಿಗೆ ಹೋಗುವವನು ಎಂಬಂತೆ ಕಾಣುತ್ತದೆ. ಆದರೆ ಅವನು ಫುಟ್ ಪಾತನ್ನು ಜಸ್ಟ್ ಪಾಸ್ ಆದ ಕೂಡಲೇ ಕಾಂಕ್ರಿಟ್ ಕುಸಿದು ಬೀಳುತ್ತದೆ. ಕೂದಲ ಎಳೆಯ ಅಂತರದಲ್ಲಿ ಅವನು ಅದರೊಳಗೆ ಬಿಳುವುದರಿಂದ ಪಾರಾಗಿದ್ದಾನೆ.
ವೈರಲ್ ಆದ ವೀಡಿಯೋ
ಈ ವೀಡಿಯೋವನ್ನು ಸಾಗರ್ ಎಂಬುವವರು ಟ್ಟಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಹಂಚಿಕೊಂಡಾಗಿನಿಂದ ಈ ವೀಡಿಯೋ ತುಂಬಾನೇ ವೈರಲ್ ಆಗುತ್ತಿದೆ. ಈ ವೀಡಿಯೋವನ್ನು ನೋಡಿದ ನೆಟ್ಟಿಗರು ಬೆರಗಾಗಿದ್ದಾರೆ. ಆಗಸ್ಟ್ ಮೂರರಂದು ಈ ವೀಡಿಯೋವನ್ನು ಖಾತೆಯಲ್ಲಿ ಹಂಚಿಕೊಂಡಿದ್ದಾರೆ. 14 ಸೆಕೆಂಡುಗಳ ಕಾಲದ ಈ ವೀಡಿಯೊ 68.8k ವೀಕ್ಷಣೆಯನ್ನು ಪಡೆದಿದೆ. 8,683 ರೀಟ್ವೀಟ್ ಮಾಡಿದ್ದಾರೆ.
ಯಮರಾಜ ಊಟಕ್ಕೆ ಬ್ರೇಕ್ ತಗೊಂಡಿದ್ದಕ್ಕೆ ಈ ವ್ಯಕ್ತಿ ಜೀವ ಉಳಿಯಿತಂತೆ ಎಂದು ಈ ವೀಡಿಯೋಗೆ ಶೀರ್ಷಿಕೆಯನ್ನು ನೀಡಿದ್ದಾರೆ. ಬದುಕಿನಲ್ಲಿ ಇಂತಹ ಅಪಾಯಗಳಿಂದ ಪಾರಾಗುವುದೇ ನಿಜವಾದ ಅದೃಷ್ಟ ಎಂಬುದು ಇಂತಹ ವೀಡಿಯೋಗಳಿಂದ ತಿಳಿಯಬಹುದಾಗಿದೆ.
ಆದರೆ ಈ ವೀಡಿಯೋವನ್ನು ನೋಡಿದ ನೆಟ್ಟಿಗನೊಬ್ಬನು ಫುಟ್ಪಾತ್ ಆಕಸ್ಮಿಕವಾಗಿ ಮುರಿದು ಬಿದ್ದದಲ್ಲ ಬದಲಾಗಿ ಅವನ ದೇಹದ ಭಾರದಿಂದ ಕುಸಿದಿದೆ. ಅದ್ದರಿಂದ ಅದರ ವೆಚ್ಚವನ್ನು ಅವನೇ ಭರಿಸಬೇಕೆಂದು ಎಂದು ಕಮೆಂಟ್ ನಲ್ಲಿ ಬರೆದಿದ್ದಾನೆ. ಆದರೆ ಇದಕ್ಕೆ ಪ್ರತಿಯಾಗಿ ಇನ್ನೊಬ್ಬ ನೆಟ್ಟಿಗ ಒಂದು ವೇಳೆ ಅದು ನೀವು ಹೇಳಿದಂತೆ ಆಗಿದ್ದರು ಅವನು ಬೇಕೆಂತಲೆ ಮಾಡಿರಲು ಸಾಧ್ಯವಿಲ್ಲ ಎಂದರು.
ಎಚ್ಚರಿಕಾ ಸೂಚನೆಗಳನ್ನು ಹಾಕಬೇಕಿತ್ತು
ಒಂದು ವೇಳೆ ಫುಟ್ ಪಾತ್ ಅಪಾಯದಲ್ಲಿದೆ ಎಂದು ಅಲ್ಲಿನ ಜನತೆಗೆ ತಿಳಿದಿದದ್ದರೆ ಅಲ್ಲಿ ಬ್ಯಾರಿಕೇಡ್ ಅಥವಾ ಎಚ್ಚರಿಕಾ ಬೋರ್ಡ್ ಆದರೂ ಹಾಕಬೇಕಿತ್ತು ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ.
Published by:Nalini Suvarna
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ