ಪೊಲೀಸರು ನೀಡಿದ ಗುಲಾಬಿಯನ್ನು ಕಂಡು ಗಂಡನ ಶೀಲ ಶಂಕಿಸಿದ ಹೆಂಡತಿ


Updated:July 28, 2018, 6:26 PM IST
ಪೊಲೀಸರು ನೀಡಿದ ಗುಲಾಬಿಯನ್ನು ಕಂಡು ಗಂಡನ ಶೀಲ ಶಂಕಿಸಿದ ಹೆಂಡತಿ
representative pic (Prem Shahi)

Updated: July 28, 2018, 6:26 PM IST
ಟ್ರಾಫಿಕ್​ ನಿಯಮಗಳನ್ನು ಉಲ್ಲಂಘನೆ ಮಾಡುವವರ ವಿರುದ್ಧ ಹೊಸ ಹೊಸ ರೀತಿಯಲ್ಲಿ ಪೊಲೀಸರು ಜಾಗೃತಿ ಕಾರ್ಯಕ್ರಮ ಮಾಡುತ್ತಲೇ ಇದ್ದಾರೆ, ಆದರೆ ನಿಯಮ ಉಲ್ಲಂಘಿಸುವವರ ಸಂಖ್ಯೆಗೇನೂ ಕಡಿಮೆಯಾಗಿಲ್ಲ. ಕೆಲ ದಿನಗಳ ಹಿಂದೆ ಬೆಂಗಳೂರು ಪೊಲೀಸರು ಯಮರಾಜನ ವೇಷದಲ್ಲಿ ಜಾಗೃತಿ ಕಾರ್ಯಕ್ರಮ ಮಾಡಿದ್ದರು.

ಇದೇ ರೀತಿಯ ವಿಶಿಷ್ಟ ಕಾರ್ಯಕ್ರಮಕ್ಕೆ ಮುಂದಾದ ಲಖನೌ ಪೊಲೀಸರು ಹೆಲ್ಮೆಟ್​ ಧರಿಸದೇ ಇರುವವರಿಗೆ ಗುಲಾಬಿ ಕೊಡುವ ಯೋಜನೆಯನ್ನು ಹಮ್ಮಿಕೊಂಡಿದ್ದರು, ಅದರಂತೆಯೇ ಸಂಚಾರಿ ನಿಯಮ ಉಲ್ಲಂಘಿಸಿದವರಿಗೆ ಗುಲಾಬಿ ನೀಡಿದ್ದಾರೆ. ಅದರೊಂದಿಗೆ ಹೆಲ್ಮೆಟ್​ ಕೂಡಾ ಉಚಿತವಾಗಿ ನೀಡಿದ್ದಾರೆ.ಪೊಲೀಸರು ಹೆಲ್ಮೆಟ್​ ನೀಡಿದ್ದು ಯಾವುದೇ ತೊಂದರೆಯನ್ನು ಹುಟ್ಟು ಹಾಕಿಲ್ಲವಾದರೂ ಕಥೆ ಆರಂಭವಾಗಿದ್ದೇ ಅವರು ನೀಡಿದ್ದ ಗುಲಾಬಿಯಿಂದ. ಲಖನೌ ಪೊಲೀಸರು ವ್ಯಕ್ತಿಯೊಬ್ಬರಿಗೆ ಗುಲಾಬಿ ನೀಡಿದ್ದರಂತೆ ಆತನ ಆ ಗುಲಾಬಿಯನ್ನು ಹಿಡಿದು ಮನೆಗೆ ತೆರಳಿದ್ದಾನೆ. ಅಲ್ಲಿ ಆತನ ಹೆಂಡತಿಗೆ ಗುಲಾಬಿ ಕಂಡು ಒಂದು ರಾತ್ರಿ ಎಲ್ಲಾ ಇಬ್ಬರೂ ಗಲಾಟೆ ಮಾಡಿಕೊಂಡೇ ಮಲಗಿದ್ದಾರೆ. ಮರು ದಿನ ಮತ್ತದೇ ದಾರಿಯಲ್ಲಿ ಬರಬೇಕಾದರೆ ಆತನಿಗೆ ಗುಲಾಬಿ ಕೊಟ್ಟ ಪೊಲೀಸರೇ ಸಿಕ್ಕಿದ್ದಾರೆ. ಕೂಡಲೇ ಹಿಂದಿನ ದಿನ ಗುಲಾಬಿ ನೀಡಿದ ಚಿತ್ರವನ್ನು ನೀಡುವಂತೆ ಕೇಳಿಕೊಂಡಿದ್ದಾನಂತೆ.'ಈ ವ್ಯಕ್ತಿ ನನ್ನ ಬಳಿ ಬಂದು ಹಿಂದಿನ ತೆಗೆದ ಚಿತ್ರವನ್ನು ಕೇಳದ್ದಾನೆ, ಆತನ ಧ್ವನಿಯಲ್ಲಿ ಬೇಸರದ ಛಾಯೆಯಿತ್ತು, ಹೀಗಾಗಿ ಆತನ ಬಳಿ ಏನಾದರೂ ಸಂಭವಿಸಿತೇ ಎಂದು ಪ್ರಶ್ನಿಸಿದೆ, ಆತ ಬೇಸರದಿಂದಲೇ ಹಿಂದಿನ ದಿನ ಕೊಟ್ಟ ಗುಲಾಬಿಯಿಂದ ರಾತ್ರಿಯೆಲ್ಲಾ ನಡೆದ ಗಲಾಟೆಯನ್ನು ವಿವರಿಸಿದ. ಹೀಗಾಗಿ ಆತನಿಗೆ ನನ್ನ ಸೆಲ್ಫಿಯೊಂದಿಗೆ ಹಿಂದಿನ ದಿನ ತೆಗದ ಚಿತ್ರಗವನ್ನು ನೀಡಿ ಕಳುಹಿಸಿದ್ದೇವೆ' ಎಂದು ಈ ಕಥೆಯನ್ನು ಸ್ವತಃ ಲಖನೌ ಪೊಲೀಸ್​ ಅಧಿಕಾರಿ ಪ್ರೇಮ್​ ಹೇಳಿಕೊಂಡಿದ್ದಾರೆ.

ಪ್ರೇಮ್​ ಕಥೆಯನ್ನು ಓದಿದ ಮತ್ತೋರ್ವ ಉತ್ತರ ಪ್ರದೇಶ ಪೊಲೀಸ್​ ಅಧಿಕಾರಿ ರಾಹುಲ್​ ಶ್ರೀವಾತ್ಸವ್​, ಇನ್ನು ಮುಂದೆ ಗುಲಾಬಿ ಬದಲು ಕ್ಯಾಬೇಜ್​ ನೀಡಬಹುದು ಎಂದು ವ್ಯಂಗ್ಯದಲ್ಲೇ ಉತ್ತರಿಸಿದ್ದಾರೆ.
First published:July 28, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ