LPG Price Today: ಗ್ರಾಹಕರಿಗೆ ಗುಡ್ ನ್ಯೂಸ್, ಪ್ರತಿ ಸಿಲಿಂಡರ್ ಮೇಲೆ ರೂ 122 ಕಡಿತ !

LPG Price June 2021: ಜೂನ್ 1 ರಿಂದ ದೆಹಲಿಯಲ್ಲಿ ಸಿಲಿಂಡರ್‌ಗಳ ಬೆಲೆ ಪ್ರತಿ ಸಿಲಿಂಡರ್‌ಗೆ 1473.50 ರೂಪಾಯಿ ಆಗಿದೆ. ಈ ಮೊದಲು ಅದರ ಬೆಲೆ 1595.50 ರೂಪಾಯಿ ಇತ್ತು. ಅಂದರೆ, ಸಿಲಿಂಡರ್ ಬೆಲೆಯನ್ನು 122 ರೂಪಾಯಿಗಳಷ್ಟು ಕಡಿತಗೊಳಿಸಲಾಗಿದೆ.

ಎಲ್​ಪಿಜಿ ಗ್ಯಾಸ್.

ಎಲ್​ಪಿಜಿ ಗ್ಯಾಸ್.

  • Share this:
LPG Price June 2021: ಎಷ್ಟೊಂದು ದಿನಗಳ ನಂತರ ಸಾಮಾನ್ಯ ಜನರಿಗೆ ಸಿಹಿ ಸುದ್ದಿ ಸಿಕ್ಕಂತಾಗಿದೆ. ಸದಾ ಬೆಲೆಯೇರಿಕೆಯ ಗಾಬರಿ ಸುದ್ದಿಗಳನ್ನೇ ನೋಡಿ, ಓದಿ, ಕೇಳಿ ಸುಸ್ತಾಗಿದ್ದ ಜನರಿಗೆ ಒಂದು ಒಳ್ಳೆ ಸುದ್ದಿ ಸಿಕ್ಕಿದೆ. ಇಂಡಿಯನ್ ಆಯಿಲ್ ಕಾರ್ಪೊರೇಶನ್ 19 ಕೆಜಿ ವಾಣಿಜ್ಯ ಸಿಲಿಂಡರ್‌ಗಳ ಬೆಲೆಯನ್ನು ಕಡಿತಗೊಳಿಸಿದೆ. ಆದರೆ ಮನೆಗಳಲ್ಲಿ ಬಳಸುವ ದೇಶೀಯ ಎಲ್‌ಪಿಜಿಯ ಬೆಲೆಯಲ್ಲಿ ಅಂದರೆ 14.2 ಕೆಜಿ ಸಿಲಿಂಡರ್ ಬೆಲೆಗಳಲ್ಲಿ ಯಾವುದೇ ಬದಲಾವಣೆ ಇಲ್ಲ. ಇದಕ್ಕೂ ಮೊದಲು ಮೇ ತಿಂಗಳ ಆರಂಭದಲ್ಲಿ 19 ಕೆಜಿ ಸಿಲಿಂಡರ್‌ ಬೆಲೆಯನ್ನು ಇಳಿಕೆ ಮಾಡಲಾಗಿತ್ತು.

ಐಒಸಿ ಈ ವಿಚಾರವನ್ನು ತನ್ನ ವೆಬ್‌ಸೈಟ್‌ನಲ್ಲೇ ಹಾಕಿಕೊಂಡಿದೆ. ಇದರ ಪ್ರಕಾರ, ಜೂನ್ 1 ರಿಂದ ದೆಹಲಿಯಲ್ಲಿ 19 ಕೆಜಿ ವಾಣಿಜ್ಯ ಸಿಲಿಂಡರ್‌ಗಳ (Commercial Cylinder) ಬೆಲೆ ಪ್ರತಿ ಸಿಲಿಂಡರ್‌ಗೆ 1473.50 ರೂಪಾಯಿ ಆಗಿದೆ. ಈ ಮೊದಲು ಅದರ ಬೆಲೆ 1595.50 ರೂಪಾಯಿ ಇತ್ತು. ಅಂದರೆ, ಸಿಲಿಂಡರ್ ಬೆಲೆಯನ್ನು 122 ರೂಪಾಯಿಗಳಷ್ಟು ಕಡಿತಗೊಳಿಸಲಾಗಿದೆ. ಸರ್ಕಾರಿ ಪೆಟ್ರೋಲಿಯಂ ಕಂಪನಿಗಳು ಮೇ ತಿಂಗಳಲ್ಲಿ 19 ಕೆಜಿ ವಾಣಿಜ್ಯ ಸಿಲಿಂಡರ್ ಬೆಲೆಯನ್ನು 45.50 ರೂ ವರೆಗೆ ಕಡಿಮೆ ಮಾಡಿದ್ದವು. ಆಗ ಅದರ ಬೆಲೆ 1641 ರೂ.ನಿಂದ 1595.5 ರೂಪಾಯಿಗೆ ಇಳಿದಿತ್ತು.

ಇದನ್ನೂ ಓದಿ: Petrol Price Today: ಮುಂಬೈ, ರಾಜಸ್ಥಾನದಲ್ಲಿ 100 ರೂ. ದಾಟಿದ ಪೆಟ್ರೋಲ್ ಬೆಲೆ; ಡೀಸೆಲ್ ಬೆಲೆಯಲ್ಲೂ ಏರಿಕೆ

ಇಂಡಿಯನ್ ಆಯಿಲ್ ಕಾರ್ಪೊರೇಶನ್ ವೆಬ್‌ಸೈಟ್ ಪ್ರಕಾರ, ದೆಹಲಿಯಲ್ಲಿ 19 ಕೆಜಿ ಗ್ಯಾಸ್ ಸಿಲಿಂಡರ್‌ನ ಹೊಸ ಬೆಲೆ ಈಗ 1595.50 ಬದಲಿಗೆ 1473.5 ರೂಪಾಯಿ ಆಗಿದೆ. ಹೊಸ ಬೆಲೆ ಮುಂಬೈನಲ್ಲಿ 1545 ರೂಪಾಯಿಗೆ ಬದಲಾಗಿ 1422.5 ರೂಪಾಯಿ, ಕೋಲ್ಕತ್ತಾದಲ್ಲಿ 1667.50 ರೂಪಾಯಿಗೆ ಬದಲಾಗಿ 1544.5 ರೂಪಾಯಿ ಮತ್ತು ಚೆನ್ನೈನಲ್ಲಿ 1725.50 ರೂಪಾಯಿಗಳ ಬದಲು 1603 ರೂಪಾಯಿ ಆಗಿದೆ.

ಜೂನ್‌ನಲ್ಲಿ 19 ಕೆಜಿ ಎಲ್‌ಪಿಜಿ ಸಿಲಿಂಡರ್ ಬೆಲೆ ಹೀಗಿದೆ:ದೆಹಲಿ                  ರೂ 1473.5         ರೂ 1595.50

ಮುಂಬೈ              ರೂ 1422.5         ರೂ 1545.00

ಕೋಲ್ಕತಾ          ರೂ 1544.5         ರೂ 1667.50

ಚೆನ್ನೈ                  ರೂ 1603.0         ರೂ 1725.50

ಆದರೆ ದೇಶೀಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯಲ್ಲಿ ಯಾವುದೇ ಬದಲಾವಣೆಗಳಾಗಿಲ್ಲ. ಇಂದಿಗೂ ದೆಹಲಿಯ ದೇಶೀಯ ಎಲ್‌ಪಿಜಿಯ ಬೆಲೆ ಪ್ರತಿ ಸಿಲಿಂಡರ್‌ಗೆ 809 ರೂಪಾಯಿ ಇದೆ. ಏಪ್ರಿಲ್‌ನಲ್ಲಿ ದೇಶೀಯ ಎಲ್‌ಪಿಜಿ ಸಿಲಿಂಡರ್‌ನ ಬೆಲೆಯನ್ನು 10 ರೂಪಾಯಿಗಳಷ್ಟು ಇಳಿಕೆಯಾಗಿತ್ತು. ಅದರ ಬೆಲೆ ನೇರವಾಗಿ 819 ರೂ.ಗಳಿಂದ 809 ರೂ.ಗೆ ಇಳಿದಿದೆ. ಈ ವರ್ಷದ ಜನವರಿಯಲ್ಲಿ ದೆಹಲಿಯಲ್ಲಿ, ಎಲ್‌ಪಿಜಿ ಸಿಲಿಂಡರ್‌ನ ಬೆಲೆ 694 ರೂ. ಇತ್ತು. ಇದನ್ನು ಫೆಬ್ರವರಿಯಲ್ಲಿ ಪ್ರತಿ ಸಿಲಿಂಡರ್‌ಗೆ 719 ರೂ.ಗೆ ಹೆಚ್ಚಿಸಲಾಯಿತು. ಫೆಬ್ರವರಿ 15 ರಂದು ಮತ್ತೆ ಬೆಲೆಯನ್ನು 769 ರೂ.ಗೆ ಹೆಚ್ಚಿಸಲಾಯಿತು. ನಂತರ ಫೆಬ್ರವರಿ 25 ರಂದು ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು 794 ರೂ.ಗೆ ಏರಿಸಲಾಯಿತು. ಮಾರ್ಚ್‌ನಲ್ಲಿ ದೇಶೀಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು 819 ರೂ.ಗೆ ಏರಿಸಲಾಯಿತು.

ಮತ್ತೊಂದೆಡೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಬಹುತೇಕ ಪ್ರತಿದಿನ ಏರಿಕೆಯಾಗುತ್ತಲೇ ಇದೆ. ಇಂದು ನವದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 94.49 ರೂ. ಇದೆ. ಮುಂಬೈನಲ್ಲಿ 100.72 ರೂ, ಜೈಪುರದಲ್ಲಿ 101.02 ರೂ, ಬೆಂಗಳೂರಿನಲ್ಲಿ 97.64 ರೂ, ಹೈದರಾಬಾದ್​ನಲ್ಲಿ 98.20 ರೂ, ತಿರುವನಂತಪುರದಲ್ಲಿ 96.47 ರೂ, ಚೆನ್ನೈನಲ್ಲಿ 95.99 ರೂ, ಕೊಲ್ಕತ್ತಾದಲ್ಲಿ 94.50 ರೂ. ಇದೆ.
Published by:Soumya KN
First published: