ಸಿಯಾಟಲ್ ಎಂಬ ಮಹಿಳೆ 2019 ರ ನವೆಂಬರ್ ತಿಂಗಳಲ್ಲಿ ಯಾವುದೋ ಕೆಲಸದ ನಿಮಿತ್ತ 70ನೇ ನಂಬರ್ ಬಸ್‌ನಲ್ಲಿ ಸಾಗುತ್ತಿರುವಾಗ, ಒಬ್ಬ ಅಪರಿಚಿತ ವ್ಯಕ್ತಿಯು ಅವಳಿಗೆ ಅಡ್ಡಲಾಗಿ ಕುಳಿತಿದ್ದನು, ಅವನನ್ನು ಗಮನಿಸಿದ ನಾನು ’’ಆ ವ್ಯಕ್ತಿಯ ಕಣ್ಣ ನೋಟಕ್ಕೆ ಮನಸೋತೆ’’ ಎಂದು ಸಾಮಾಜಿಕ ಜಾಲತಾಣದ ಒಂದು ಅಪ್ಲಿಕೇಶನ್‌ನಲ್ಲಿ ಫೋಸ್ಟ್ ಮಾಡುವ ಮೂಲಕ ತಮ್ಮ ಅನುಭವನ್ನು ಹಂಚಿಕೊಂಡಿದ್ದಳು.
ಪರಸ್ಪರ ಕಣ್ಣಿನಲ್ಲಿಯೇ ಸಂಪರ್ಕ ಮಾಡಿರುವ ಈ ಜೋಡಿಗಳು, ಇಡೀ ಪ್ರಯಾಣದ ಇದ್ದಕ್ಕೂ ಒಂದೂ ಮಾತನ್ನೂ ಆಡದೆ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದರು, ಒಂದೇ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದರೂ ಅವರಿಬ್ಬರಿಗೂ ತಮ್ಮ ಪರಿಚಯ ಮಾಡಿಕೊಳ್ಳಲು ಹಾಗು ತಮ್ಮ ಅನುಭವಗಳನ್ನು ಪರಸ್ಪರ ಹಂಚಿಕೊಳ್ಳಲು ಆ ಸಮಯದಲ್ಲಿ ಯಾಕೋ ಸಾಧ್ಯವಾಗಿರಲಿಲ್ಲ ಎಂದು ಸಿಯಾಟಲ್ ಬೇಸರದಿಂದ ಬರೆದು ಹಾಕಿದ್ದಳು.
ಅವಳು ಅವನನ್ನು ಡೇಟಿಂಗ್ ಅಪ್ಲಿಕೇಶನ್ ಟಿಂಡರ್‌ನಲ್ಲಿ ಹುಡುಕಲು ನಿರ್ಧರಿಸಿದಳು. "ನಾನು ನವೆಂಬರ್ 2019 ಮತ್ತು ಜನವರಿ 2020 ರಲ್ಲಿ 70 ನಂಬರ್ ಬಸ್‌ನಲ್ಲಿ ಒಬ್ಬ ವ್ಯಕ್ತಿಯ ಕಣ್ಣ ಸಂಪರ್ಕಕ್ಕೆ ಮನಸೋತು ಮುಗುಳು ನಗೆ ಬೀರಿದೆನು. ನೀವು ಅವನಾಗಿದ್ದರೆ ತುಂಬಾ ಧನ್ಯವಾದಗಳು" ಎಂದು ಸಿಯಾಟಲ್ ತನ್ನ ಬಯೋದಲ್ಲಿ ಬರೆದಳು. ಅದೃಷ್ಟವಶಾತ್, ಆ ವ್ಯಕ್ತಿ ಅವಳನ್ನು ಕಂಡುಹಿಡಿದು ಅವಳಿಗೆ ಸಂದೇಶವನ್ನು ಕಳುಹಿಸಿದನು.
"ಸರಿ, ಇದು ಮುಜುಗರವಾಗಬಹುದು ...ಆದರೆ ನಿಮ್ಮ ಬಯೋದಲ್ಲಿ ನೀವು ನನ್ನ ಬಗ್ಗೆ ಮಾತನಾಡುತ್ತಿದ್ದೀರಾ? ನಾನು ಫ್ರೆಡ್ ಹಚ್‌ಗೆ ಹೋಗುವ ದಾರಿಯಲ್ಲಿ 70 ನಂಬರ್ ಬಸ್‌ನಲ್ಲಿ ಸವಾರಿ ಮಾಡುತ್ತಿದ್ದೆ. ನಿಮ್ಮ ಮುಖವನ್ನು ನಾನು ಖಂಡಿತವಾಗಿಯೂ ನೆನಪಿಸಿಕೊಳ್ಳುತ್ತೇನೆ (ಮೂಗುತಿಯನ್ನು ಹೊಂದಿರುವ ತುಂಬಾ ಮುದ್ದಾದ ಕೆಂಪು ಕೂದಲು) ಎಂದು ಕಾಮೆಂಟ್ ಮಾಡಿದ್ದಾರೆ. ನಾವಿಬ್ಬರು ಒಮ್ಮೆ ಅಥವಾ ಎರಡು ಬಾರಿ ಕಣ್ಣಿನಲ್ಲಿ ಮಾತನಾಡಿದ್ದೇವೆ ಹಾಗೂ ನಾನು ನಿಮ್ಮನ್ನು ನೋಡಿ ಒಳಗೆ ನಗುತ್ತಿದ್ದೆ! " ಎಂದು ಅತ್ಯಂತ ಹೃದಯಸ್ಪರ್ಶಿಯಾಗಿ ಗ್ರೆಗ್ ಸಂದೇಶದಲ್ಲಿ ಬರೆದಿದ್ದಾರೆ.
"ಹಾಗಿದ್ದಲ್ಲಿ, ನಾನು ನಿಮ್ಮೊಂದಿಗೆ ಕಾಫಿ ಅಥವಾ ಏನನ್ನಾದರೂ ಕುಡಿಯಲು ಇಷ್ಟಪಡುತ್ತೇನೆ, ಮತ್ತು ನಂತರ (ಅಂತಿಮವಾಗಿ ನಿಮ್ಮನ್ನು ನೋಡಲು ಬಯುಸುತ್ತೇನೆ). ಇಲ್ಲದಿದ್ದರೆ, ನಾನು ಮರಣ ಹೊಂದುತ್ತೇನೆ" ಎಂದು ಅವರು ಸಂದೇಶದಲ್ಲಿ ಹೇಳಿದ್ದಾರೆ.
"ಹಾಹಾಹಾ, ಮುಜುಗರ ಬೇಡ, ಖಂಡಿತಾ ನಿಮ್ಮನ್ನು ನಾನು 100% ಭೇಟಿಯಾಗುತ್ತೇನೆ. ಅಲ್ಲದೇ ಮುಂದೆದೂ ನಾನು ನಿಮ್ಮನ್ನು ಭೇಟಿ ಮಾಡುತ್ತಲೇ ಇರುತ್ತೇನೆ. ಈಗ ಮತ್ತೆ ನಾವು ಭೇಟಿ ಮಾಡುತ್ತೇವೆ ಎಂದು ಭಾವಿಸಿರಲಿಲ್ಲ. ಹಲೋ ಗ್ರೆಗ್! ನಾನು ನಿಮ್ಮೊಂದಿಗೆ ಏನನ್ನಾದರೂ ಕುಡಿಯಲು ಇಷ್ಟಪಡುತ್ತೇನೆ." ಎಂದು ಸಿಯಾಟಲ್ ಉತ್ತರಿಸಿದ್ದಾರೆ.
ನಂತರ ವೀಡಿಯೊವೊಂದರಲ್ಲಿ, "ಬಸ್‌ನಿಂದ ಅವನು ಇಳಿಯುವಾಗ ಕಿಟಕಿಯತ್ತ ಹಿಂತಿರುಗಿ, ನೇರವಾಗಿ ನನ್ನತ್ತ ನೋಡಿದನು, ಮುಗುಳ್ನಕ್ಕು, ತಲೆ ಅಲ್ಲಾಡಿಸಿದನು. . "ಎಂದು ಸಿಯಾಟಲ್ ವಿವರಿಸಿದ್ದಾರೆ. ಇನ್ನೂ ಕೆಲವೊಂದು ವಿಚಾರಗಳನ್ನು ಹೇಳುತ್ತಾ ಸಿಯಾಟಲ್, "ನಾವು ಸಂದೇಶವನ್ನು ಫಾರ್ವರ್ಡ್ ಮಾಡಿದ ಎರಡು ತಿಂಗಳ ನಂತರ, ಮತ್ತೆ ಬಸ್ಸಿನಲ್ಲಿ ಭೇಟಿಯಾದೆವು ಮತ್ತು ನಾವು ಮತ್ತೆ ನಮ್ಮ ಕಣ್ಣುಗಳನ್ನು ನೋಡಿಕೊಂಡು ಮಾತನಾಡಿದೆವು, ಇಡೀ ಜಗತ್ತಿನಲ್ಲಿ ಕಣ್ಣೀನ ಭಾಷೆಯೆ ಒಂದು ಅದ್ಬುತ.
ನನ್ನ ಹುಡುಗನನ್ನು ನಾನು ನೇರವಾಗಿ ನೋಡಿದಾಗ ನಾನು ಭಯಭೀತಳಾಗಿದ್ದೆ. ಏನು ಮಾಡಬೇಕೆಂದು ನನಗೆ ತಿಳಿಯದೆ ಹೋಯಿತು, ನಾನು ಬೇಗನೆ ಬಸ್‌ನಿಂದ ಇಳಿದು ಹೋದೆ. ಮತ್ತು ಹಾಗೆ ಮಾಡಿದ್ದಕ್ಕೆ ನಾನು ವಿಷಾದಿಸುತ್ತೇನೆ ಅದು ತಪ್ಪೆಂದು ನನಗೆ ತಿಳಿದಿತ್ತು ನಾನು ಈ ವ್ಯಕ್ತಿಯೊಂದಿಗೆ ಮಾತನಾಡಬೇಕಿತ್ತು." ಎಂದು ತಮ್ಮ ಅನುಭವನ್ನು ಸಿಯಾಟಲ್ ಹಂಚಿಕೊಂಡಿದ್ದಾರೆ.
ಟಿಂಡರ್ ಆ್ಯಪ್ ಮೂಲಕ ನಾವಿಬ್ಬರು ನಿಕಟರಾಗಿದ್ದೇವೆ ಹಾಗೂ ಪರಸ್ಪರ ಪ್ರೀತಿಸುತ್ತಿದ್ದೇವೆ. ಹೆಚ್ಚಿನ ಸಮಯವನ್ನು ಹೊರಗೆ ಕಳೆಯಲು ನಾವು ಇಷ್ಟಪಡುತ್ತೇವೆ. ಸಮಯದ ಪರಿವೆಯೇ ಇಲ್ಲದೆ ನಾವು ಅಡ್ಡಾಡುತ್ತೇವೆ. ಈ ದಿನಗಳಿಗಾಗಿ ನಾನು ಇಷ್ಟು ಸಮಯದಿಂದ ಕಾಯುತ್ತಿದ್ದೆ ಎಂದು ಸಿಯಾಟಲ್ ಹರ್ಷಚಿತ್ತರಾಗಿ ತಮ್ಮ ಖುಷಿಯವನ್ನು ಹಂಚಿಕೊಂಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ