Love Story: 'ದೆವ್ವದ ಗ್ರಾಮ'ದ ಕಾವಲುಗಾರನಿಗೆ 50 ವರ್ಷದ ಬಳಿಕ ಮೊದಲ ಪ್ರೇಯಸಿ ಸಿಕ್ಕಳು!; ಇದೊಂದು ವಿಚಿತ್ರ ಪ್ರೇಮಕತೆ

Haunted Village: ರಾಜಸ್ಥಾನದಲ್ಲಿರುವ ದೆವ್ವದ ಗ್ರಾಮವನ್ನು ಈಗಲೂ ಓರ್ವ ಕಾವಲುಗಾರ ಕಾಯುತ್ತಿದ್ದಾರೆ. ಆ 82 ವರ್ಷದ ಗೇಟ್​ಕೀಪರ್​ಗೆ 50 ವರ್ಷಗಳ ಬಳಿಕ ತಮ್ಮ ಮೊದಲ ಪ್ರೇಯಸಿ ಮತ್ತೆ ಸಿಕ್ಕಿದ್ದಾಳೆ. ಇದೇನಿದು ವಿಚಿತ್ರ ಪ್ರೇಮಕತೆ ಅಂತೀರಾ?

ರಾಜಸ್ಥಾನದ ದೆವ್ವದ ಗ್ರಾಮದ ದ್ವಾರಪಾಲಕ

ರಾಜಸ್ಥಾನದ ದೆವ್ವದ ಗ್ರಾಮದ ದ್ವಾರಪಾಲಕ

  • Share this:
ರಾಜಸ್ಥಾನದ ಜೈಸಲ್ಮೇರ್ ಜಿಲ್ಲೆಯ ಹೃದಯಭಾಗದಲ್ಲಿ ಕುಲಧಾರ ಎಂಬ ನಿರ್ಜನವಾದ ಹಳೆಯ ಪಟ್ಟಣವಿದೆ. 13ನೇ ಶತಮಾನದಲ್ಲಿ ಸ್ಥಾಪನೆಯಾದ ಮತ್ತು ಒಮ್ಮೆ ಸಮೃದ್ಧ ನಗರವಾದ ಕುಲಧಾರ 19ನೇ ಶತಮಾನದಲ್ಲಿ ಗ್ರಾಮಸ್ಥರು ಅದನ್ನು ತ್ಯಜಿಸಿದ ನಂತರ ಶತಮಾನಗಳಿಂದ ನಿರ್ಜನವಾಗಿಯೇ ಉಳಿದಿದೆ. ಇತಿಹಾಸಕಾರರು ಮತ್ತು ವಿಜ್ಞಾನಿಗಳು ನೈಸರ್ಗಿಕ ವಿಪತ್ತುಗಳು ಮತ್ತು ಸ್ಥಳೀಯ ಆಡಳಿತಗಾರರ ಕಿರುಕುಳದಿಂದ ಜನರು ಆ ಗ್ರಾಮವನ್ನು ತೊರೆದರು ಎಂದು ಹೇಳಿದರೆ, ಸ್ಥಳೀಯ ಜಾನಪದವು ಶಾಪಗಳಿಂದಾಗಿ ಆ ಗ್ರಾಮಕ್ಕೆ ಈ ಸ್ಥಿತಿ ಬಂದಿತು ಎನ್ನುತ್ತದೆ ಮತ್ತು ಅಲ್ಲಿ ದೆವ್ವದ ಕಾಟವಿದೆ ಎಂದು ಹೇಳುತ್ತದೆ.

ದೆವ್ವ, ಭೂತ ಇದೆಯೋ ಇಲ್ಲವೋ... ಸದ್ಯ ಈ ಗ್ರಾಮದಲ್ಲಿರೋದು ಒಬ್ಬರೇ ನಿವಾಸಿ. 82 ವರ್ಷದ ದ್ವಾರಪಾಲಕನು ಈ ಸ್ಥಳದಲ್ಲಿ ತನ್ನ ಜೀವನದ ಬಹುಭಾಗವನ್ನು ಕಳೆದಿದ್ದಾರೆ. ಮತ್ತು ಇದು ಅವರ ಮೊದಲ ಪ್ರೀತಿಯ ಕಥೆ.

"ನಾನು ಮೊದಲು ಮರೀನಾಳನ್ನು ಭೇಟಿಯಾದಾಗ 30ರ ಆಸುಪಾಸಿನವನಾಗಿದ್ದೆ. ಅವಳು ಆಸ್ಟ್ರೇಲಿಯದಿಂದ ಜೈಸಲ್ಮೇರ್‌ಗೆ ಬಂದಿದ್ದಳು" ಎಂದು ಗೇಟ್‌ಕೀಪರ್‌ ನೆನಪಿಸಿಕೊಳ್ಳುತ್ತಾರೆ. ಮರೀನಾ ಐದು ದಿನಗಳ ಪ್ರವಾಸಕ್ಕಾಗಿ ರಾಜಸ್ಥಾನಕ್ಕೆ ಬಂದಿದ್ದಳು ಮತ್ತು ಒಂಟೆ ಸವಾರಿ ಮಾಡುವುದು ಹೇಗೆ ಎಂದು ನಾನು ಕಲಿಸಿದ್ದೆ. ''ಅದು 1970 ರ ದಶಕ. ಆ ದಿನಗಳಲ್ಲಿ, ಮೊದಲ ನೋಟದಲ್ಲೇ ಪ್ರೀತಿಯಲ್ಲಿ ಬೀಳಲು ಸಾಧ್ಯವಾಯಿತು, ” ಎಂದು ಅವರು ಹೇಳಿದರು. ಅಲ್ಲದೆ, ಇಬ್ಬರೂ ಸಮಾನವಾಗಿ ಪ್ರೀತಿಸುತ್ತಿದ್ದೆವು ಎಂದೂ ಅವರು ನೆನಪಿಸಿಕೊಂಡರು. “ಪ್ರವಾಸದುದ್ದಕ್ಕೂ, ನಾವು ನಮ್ಮ ಕಣ್ಣುಗಳನ್ನು ನಮ್ಮಿಂದಾಚೆ ಬೇರೆ ಕಡೆಗೆ ನೋಡಲು ಸಾಧ್ಯವಾಗಲಿಲ್ಲ. ಮತ್ತು ಆಸ್ಟ್ರೇಲಿಯಕ್ಕೆ ತೆರಳುವ ಮೊದಲು, ಮರೀನಾ ನನಗೆ ಐ ಲವ್‌ ಯೂ ಹೇಳಿದ್ದಳು'' ಎಂದೂ 82 ವರ್ಷ ವಯಸ್ಸಿನ ಗೇಟ್‌ ಕೀಪರ್‌ ಹೇಳಿಕೊಂಡರು.

ಇತ್ತೀಚೆಗೆ ಹ್ಯೂಮನ್ಸ್ ಆಫ್ ಬಾಂಬೆ (HOB) ಫೇಸ್‌ಬುಕ್ ಪೇಜ್‌ನಲ್ಲಿ ಕಾಣಿಸಿಕೊಂಡ ಅವರು, ಹಲವು ದಶಕಗಳ ಕಾಲ ಉಳಿದ ತಮ್ಮ ವಿಶಿಷ್ಟ ಪ್ರೇಮಕಥೆಯ ಬಗ್ಗೆ ವಿವರಿಸಿದ್ದಾರೆ.

ಇದನ್ನೂ ಓದಿ: ಮದುವೆಯಾಗಲು ಹುಡುಗಿ ಹುಡುಕಿಕೊಡಿ ಎಂದು ಪೊಲೀಸ್ ಠಾಣೆ ಮೆಟ್ಟಿಲೇರಿದ್ದ ವ್ಯಕ್ತಿಗೆ ಈಗ ಸಿಕ್ಕಾಪಟ್ಟೆ ಪ್ರಪೋಸಲ್​

ರಾಜಸ್ಥಾನದ ವ್ಯಕ್ತಿಯ ಪ್ರಕಾರ, ಮರೀನಾ ಆಸ್ಟ್ರೇಲಿಯಾಕ್ಕೆ ಮರಳಿದರೂ ತನ್ನೊಂದಿಗೆ ಸಂಪರ್ಕದಲ್ಲಿದ್ದಳು. ಅವಳು ತನ್ನನ್ನು ಆಕೆಯ ದೇಶಕ್ಕೆ ಆಹ್ವಾನಿಸಿದ್ದಳು. ಅಲ್ಲದೆ, ತಾನು ಅಲ್ಲಿಗೆ ಪ್ರವಾಸ ಹೋಗಲು 30,000 ರೂಗಳನ್ನು ಹೇಗೆ ಸಂಗ್ರಹಿಸಿದೆ ಮತ್ತು ಆಸ್ಟ್ರೇಲಿಯಕ್ಕೆ ತೆರಳಿದೆ ಎಂಬುದನ್ನೂ ಅವರು ನೆನಪಿಸಿಕೊಂಡರು. ತಾನು ಮರೀನಾಲೊಂದಿಗೆ ಮೂರು ತಿಂಗಳು ಜತೆಯಲ್ಲೇ ಇದ್ದೆ. ಆದರೆ ಅವಳು ನನ್ನನ್ನು ಮದುವೆಯಾಗಲು ಕೇಳಿದಾಗ ವಿಷಯಗಳು ಜಟಿಲವಾದವು.

“I was in my 30s when I first met Marina–she had come to Jaisalmer all the way from Australia, for a desert safari. It...

Posted by Humans of Bombay on Wednesday, March 31, 2021


“ನಾನು ನನ್ನ ತಾಯಿನಾಡನ್ನು ಬಿಡಲು ಸಿದ್ಧವಾಗಿರಲಿಲ್ಲ. ಅವಳೂ ಸಹ ಭಾರತಕ್ಕೆ ಬರಲು ಸಿದ್ಧರಿರಲಿಲ್ಲ. ಇದರಿಂದ, “ಇದು ದೀರ್ಘಾವಧಿಯವರೆಗೆ ವರ್ಕ್‌ ಆಗಲು ಸಾಧ್ಯವಿಲ್ಲ” ಎಂದು ನಾನು ಅವಳಿಗೆ ಹೇಳಿದ್ದನ್ನು ಗೇಟ್‌ಕೀಪರ್ ನೆನಪಿಸಿಕೊಂಡರು. ಅವಳು ನನ್ನನ್ನು ಬಿಟ್ಟು ಹೋದ ದಿನ ಮರೀನಾ ಎಷ್ಟು ಅತ್ತಿದ್ದಳೆಂದು ನೆನಪಿಸಿಕೊಂಡ ಅವರು, ನಾನು ಅವಳನ್ನು ಹೋಗಲು ಬಿಡಲೇಬೇಕಾಗಿತ್ತು'' ಎಂದೂ ಹೇಳಿದರು.

ನಂತರ, ವರ್ಷಗಳಲ್ಲಿ ಗೇಟ್‌ಕೀಪರ್ ಆಗಾಗ್ಗೆ ಮರೀನಾಗೆ ಏನಾಯಿತು..? ಅವಳು ಇನ್ನೂ ನನ್ನ ಬಗ್ಗೆ ಯೋಚಿಸುತ್ತಿದ್ದಾಳಾ..? ಅವಳು ಎಂದಾದರೂ ಮದುವೆಯಾಗಿದ್ದಾಳಾ..? ಎಂದು ಆಗಾಗ ನೆನಪಿಸಿಕೊಳ್ಳುತ್ತಿದ್ದರು. ಕುಟುಂಬದ ಒತ್ತಡಕ್ಕೆ ಮಣಿದು ಮದುವೆಯಾಗಿ ಕುಲಧಾರದಲ್ಲಿ ಕೆಲಸ ಮಾಡುತ್ತಿದ್ದೆ. ತನ್ನ ಹೆಂಡತಿ ಇಬ್ಬರು ಗಂಡುಮಕ್ಕಳಿಗೆ ಜನ್ಮ ನೀಡಿದಳು ಮತ್ತು ಸಮಯದೊಂದಿಗೆ, ಅವರೂ ಸಹ ಬೆಳೆದರು ಎಂದು ಅವರು ಹಳೆಯ ದಿನಗಳನ್ನು ನೆನಪಿಸಿಕೊಂಡಿದ್ದಾರೆ.

ಇದನ್ನೂ ಓದಿ: Wasim Akram: ಚಡ್ಡಿ ಧರಿಸಿ ಹೋಳಿಯಾಡಿದ ಪಾಕ್ ಕ್ರಿಕೆಟಿಗ ವಾಸಿಮ್ ಅಕ್ರಮ್!; ಗಂಡನ ಅವತಾರ ನೋಡಿ ಶಾಕ್ ಆದ ಹೆಂಡತಿ

ಆದರೆ ಕಥೆ ಅಲ್ಲಿಗೆ ಮುಗಿಯಲಿಲ್ಲ. ಸುಮಾರು ಎರಡು ತಿಂಗಳ ಹಿಂದೆ, ಅವರು ಮೊದಲು ಮರೀನಾಳನ್ನು ಭೇಟಿಯಾಗಿ 50 ವರ್ಷಗಳ ನಂತರ, ಅವಳು ನನ್ನನ್ನು ಪತ್ತೆಹಚ್ಚಿ ಪತ್ರ ಕಳಿಸಿದ್ದಾಳೆ. ಅದರಲ್ಲಿ, ಅವಳು ತಾನು ಮದುವೆಯಾಗಲಿಲ್ಲ ಎಂದು ಬಹಿರಂಗಪಡಿಸಿದ್ದು, ತಾನು ಶೀಘ್ರದಲ್ಲೇ ಭಾರತಕ್ಕೆ ಮರಳುತ್ತಿದ್ದೇನೆ ಎಂದು ಹೇಳಿದ್ದಳು. ಅಂದಿನಿಂದ, ದ್ವಾರಪಾಲಕನು ತನ್ನ ಮೊದಲ ಪ್ರೀತಿಯೊಂದಿಗೆ ಸಂಪರ್ಕವನ್ನು ಉಳಿಸಿಕೊಂಡಿದ್ದಾನೆ.

ಈ ಸಂಬಂಧ HOB ಫೇಸ್‌ಬುಕ್‌ ಪೇಜ್‌ನೊಂದಿಗೆ ಮಾತನಾಡಿದ 82 ವರ್ಷದ ವ್ಯಕ್ತಿ, ಈ ಪತ್ರವು ತನ್ನನ್ನು ರೋಮಾಂಚಕಗೊಳೀಸಿದ್ದು, ಮತ್ತು ತನಗೆ ಮತ್ತೆ 21 ರ ಹರೆಯದ ಭಾವನೆ ಮೂಡಿಸಿದೆ ಎಂದು ಹೇಳಿದರು. ತನ್ನ ಹಾಗೂ ತನ್ನ ಆಸ್ಟ್ರೇಲಿಯದ ಗೆಳತಿಯ ಭವಿಷ್ಯದ ಬಗ್ಗೆ ತಿಳಿದಿಲ್ಲವಾದರೂ, ತನ್ನ ಮೊದಲ ಪ್ರೀತಿ ಇನ್ನೂ ಆರೋಗ್ಯಕರ, ಜೀವಂತ ಮತ್ತು ಸಂಪರ್ಕದಲ್ಲಿದ್ದಾರೆ. ಅಷ್ಟೊಂದು ಸಮಯ ಕಳೆದರೂ ಸಂಪರ್ಕದಲ್ಲಿದ್ದಾರೆ ಎಂಬ ತೃಪ್ತಿ ವ್ಯಕ್ತಪಡಿಸಿದ್ದಾರೆ ಈ ಗೇಟ್‌ಕೀಪರ್‌.
Published by:Sushma Chakre
First published: