ಭೂಪನೊಬ್ಬ ಈಗಾಗಲೇ ಎರಡು ಮದುವೆಯಾಗಿದ್ದರೂ ಸಹ ಫೇಸ್ಬುಕ್ ಮೂಲಕ ಪರಿಚಯವಾದ ಮತ್ತೊಂದು ಹುಡುಗಿಯನ್ನು ಮದುವೆ ಮಾಡಿಕೊಂಡು, ಮಗುವಿನೊಂದಿಗೆ ಪರಾರಿಯಾಗಿರುವ ಘಟನೆ ಧಾರವಾಡದಲ್ಲಿ ನಡೆದಿದೆ.
ಧಾರವಾಡದ ಸರಸ್ವತಿಪುರ ನಿವಾಸಿ ಝಯೀನ್ ಅಡ್ಡೆವಾಲೆ ಎಂಬಾತ ಮಹಿಳೆಗೆ ಮೋಸ ಮಾಡಿದ ವ್ಯಕ್ತಿ. ರಭಿಯಾ ಎಂಬಾಕೆ ಫೇಸ್ಬುಕ್ ಲವ್ ಮಾಡಿ ಮೋಸ ಹೋದವಳು. ಝಯೀನ್ಗೆ ಈ ಮೊದಲೇ ಎರಡು ಮದುವೆಯಾಗಿತ್ತು. ಆದರೂ ಸಹ ಫೇಸ್ಬುಕ್ ಮೂಲಕ ಪರಿಚಯವಾದ ರಭಿಯಾ ಎಂಬ ಮಹಿಳೆಯನ್ನು ಪ್ರೀತಿಸುತ್ತಿದ್ದ. ರಭಿಯಾ ಕೂಡ ಝಯೀನ್ನ್ನು ಪ್ರೀತಿಸುತ್ತಿದ್ದಳು. ಎರಡು ಮದುವೆಯಾಗಿದ್ದರೂ ಝಯೀನ್ ರಭಿಯಾಳನ್ನು ಮದುವೆಯಾಗಿದ್ದ.
ಚಾಮರಾಜನಗರ: ಯೂಟ್ಯೂಬ್ ಲೈವ್ನಲ್ಲೇ ಮದುವೆ ನೋಡಿ ವಧು-ವರರಿಗೆ ಹರಸಿದ ಬಂಧು-ಮಿತ್ರರು
ಮದುವೆಯಾದ ಬಳಿಕ ಕೆಲಸವಿಲ್ಲದೇ ಖಾಲಿ ಕೈಯಲ್ಲಿ ಅಲೆಯುತ್ತಿದ್ದ ಗಂಡನಿಗೆ ರಭಿಯಾ ಶ್ರೀಲಂಕಾದಲ್ಲಿ ಕೆಲಸ ಕೂಡ ಕೊಡಿಸಿದ್ದಳು ಎಂದು ತಿಳಿದುಬಂದಿದೆ. ಆದರೆ ಝಯೀನ್ ತನ್ನ ವಂಚಕ ಬುದ್ದಿಯನ್ನು ತೋರಿಸಿ, ವರದಕ್ಷಿಣೆಗಾಗಿ ಕಿರುಕುಳ ನೀಡುತ್ತಿದ್ದ. ಪ್ರತಿದಿನ ಹಣ ಕೊಡುವಂತೆ ಪೀಡಿಸುತ್ತಿದ್ದ. ಅವರಿಗೆ ಒಂದು ಮಗು ಕೂಡ ಇತ್ತು ಎಂದು ತಿಳಿದು ಬಂದಿದೆ. ಕೆಲವು ದಿನಗಳ ಬಳಿಕ ಆತ ಮಗುವಿನೊಂದಿಗೆ ಪರಾರಿಯಾಗಿದ್ದಾನೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ