ಟೆಕ್ಸಾಸ್ ಜೋಡಿಯ ಪ್ರೇಮ ನಿವೇದನೆ ವೇಳೆ ಮಹಿಳೆಯಿಂದ ಫೋಟೋಬಾಂಬ್!

ಟೆಕ್ಸಾಸ್‌ನಲ್ಲಿಪ್ರೇಮಿಗಳಿಬ್ಬರು ತಮ್ಮ ಪ್ರೇಮ ನಿವೇದನೆ ಮಾಡಿಕೊಳ್ಳಲು ಕಾರಂಜಿ ಬಳಿ ವಿಡಿಯೋಗೆ ಪೋಸ್ ನೀಡುತ್ತಾ ನಿಂತಿದ್ದರು. ಆ ಸಂದರ್ಭದಲ್ಲಿ ಮಹಿಳೆಯೊಬ್ಬರು ಈ ಜೋಡಿಗಳ ಹಿನ್ನೆಲೆಯಲ್ಲಿ ಕಾಣಿಸಿಕೊಂಡಿರುವುದು ಸೆರೆಯಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಫೋಟೊ ಬಾಂಬ್ಸ್! ಭಾರತೀಯರಿಗೆ ತೀರಾ ಪರಿಚಯವಲ್ಲದ ಹೊಸ ಪದವಿದು. ವಿದೇಶದಲ್ಲಿ ಈ ಪೋಟೋ ಬಾಂಬ್ ಸಾಕಷ್ಟು ಚರ್ಚೆಗೆ ಒಳಪಡುತ್ತದೆ. ಇದೊಂದು ರೀತಿಯ ಖಾಸಗಿತನಕ್ಕೆ ಉಂಟಾಗುವ ಧಕ್ಕೆಯಂತೆ. ಅಂದರೆ ನೀವು ನಿಮ್ಮ ಫೋಟೋ ಅಥವಾ ವಿಡಿಯೋ ಚಿತ್ರೀಕರಣ ಮಾಡುತ್ತಿರುವ ಸಂದರ್ಭದಲ್ಲಿ ಅಪರಿಚಿತರು ನಿಮ್ಮ ಫೋಟೋದಲ್ಲಿ ಅಥವಾ ವಿಡಿಯೋದಲ್ಲಿ ಉದ್ದೇಶಪೂರ್ವಕವಾಗಿ ಕಾಣಿಸಿಕೊಳ್ಳ ಬಯಸುವ ಒಂದು ನಡವಳಿಕೆ. ಈಗ ಇಂತಹದ್ದೇ ಘಟನೆ ಟೆಕ್ಸಾಸ್‌ನಲ್ಲಿ ನಡೆದಿದೆ. ಪ್ರೇಮಿಗಳಿಬ್ಬರು ತಮ್ಮ ಪ್ರೇಮ ನಿವೇದನೆ ಮಾಡಿಕೊಳ್ಳಲು ಕಾರಂಜಿ ಬಳಿ ವಿಡಿಯೋಗೆ ಪೋಸ್ ನೀಡುತ್ತಾ ನಿಂತಿದ್ದರು. ಆ ಸಂದರ್ಭದಲ್ಲಿ ಮಹಿಳೆಯೊಬ್ಬರು ಈ ಜೋಡಿಗಳ ಹಿನ್ನೆಲೆಯಲ್ಲಿ ಕಾಣಿಸಿಕೊಂಡಿರುವುದು ಸೆರೆಯಾಗಿದೆ. ಈ ಫೋಟೋ ಬಾಂಬ್ ಸದ್ಯ ಇಂಟರ್ನೆಟ್‌ನಲ್ಲಿ ಸದ್ದು ಮಾಡುತ್ತಿದೆ. ಅದು ಏಕೆ ಇಲ್ಲಿದೆ ಗಮನಿಸಿ.

ಇತ್ತೀಚೆಗೆ ಅಂತರ್ಜಾಲದ ಚರ್ಚೆಯಲ್ಲಿ, ಒಬ್ಬ ವ್ಯಕ್ತಿಯ ಪ್ರೇಮ ನಿವೇದನೆಯ ವಿಡಿಯೋ ಸಾಮಾಜಿಕ ಶಿಷ್ಟಾಚಾರದ ಕುರಿತು ನೆಟ್ಟಿಗರಲ್ಲಿ ಭಾರೀ ಚರ್ಚೆಯನ್ನು ಹುಟ್ಟುಹಾಕಿದೆ. ಮಹಿಳೆಯೊಬ್ಬರು ಯುವ ಜೋಡಿಗಳ ಪ್ರೇಮ ನಿವೇದನೆಯನ್ನು ಅಡ್ಡಿಪಡಿಸುತ್ತಿದ್ದು, ಆ ವಿಡಿಯೋವಿನ ಹಿನ್ನೆಲೆಯಲ್ಲಿ ಆಕೆ ತನ್ನ ಫೋಟೋವನ್ನು ತೆಗೆದುಕೊಳ್ಳಲು ಬಯಸುತ್ತಿದ್ದಳು ಎಂದು ಟಿಕ್ಟಾಕ್‌ನಲ್ಲಿ ಬಳೆಕದಾರರು ಹಂಚಿಕೊಂಡಿದ್ದಾರೆ.

ಜೇವಿಯರ್ ಮಾಲ್ಡೋನಾಡೋ ಎನ್ನುವ ಟಿಕ್ಟಾಕ್ ಬಳಕೆದಾರರು @pinkbellabean ತನ್ನ ಸಂಗಾತಿ ಆಂಟೋನಿ ರೋಡ್ರಿಗಸ್ ಅವರಿಗೆ ಹ್ಯೂಸ್ಟನ್‌ನ ಜೆರಾಲ್ಡ್ ಡಿ ಹೈನ್ಸ್ ವಾಟರ್‌ಪಾರ್ಕ್‌ನಲ್ಲಿ ಕಳೆದ ತಿಂಗಳು ಪ್ರೇಮ ನಿವೇದನೆ ಮಾಡಿಕೊಂಡಿದ್ದರು. ಆದರೆ ಈ ವಿಡಿಯೋ ಬಹು ಬೇಗನೇ ಎಲ್ಲಾ ಕಡೆ ವೈರಲ್ ಆಯ್ತು. ಮಹಿಳೆಯೊಬ್ಬರು ಈ ಜೋಡಿಗಳ ಹಿಂದೆ ನಿಂತು ಪೋಸ್ ನೀಡುತ್ತಿದ್ದ ಕಾರಣ, ಫೋಟೋ ಬಾಂಬಿಂಗ್ ಎಂದು ಎಲ್ಲರ ಗಮನ ಸೆಳೆದಿದೆ.

ಮಹಿಳೆ ಕಪ್ಪು ಉಡುಗೆ ಧರಿಸಿದ್ದು, ಕಾರಂಜಿಯ ಬಳಿ ಜೋಡಿಗಳ ಹಿಂದೆ ವಿಡಿಯೋ ಬಾಂಬ್‌ನಲ್ಲಿ ಸೆರೆಯಾಗಿದೆ. ಮಾಲ್ಡೋನಾಡೋ ಈ ಕ್ಲಿಪ್ ಅನ್ನು ಟಿಕ್ ಟಾಕ್‌ಗೆ ಅಪ್ಲೋಡ್ ಮಾಡಿದ್ದು, 'ನಾನು ಪ್ರೇಮ ನಿವೇದನೆ ಮಾಡಿಕೊಳ್ಳುವ ಸಮಯದಲ್ಲಿ ಮಹಿಳೆಯೊಬ್ಬರು ಚಿತ್ರಗಳನ್ನು ತೆಗೆದುಕೊಳ್ಳಲು ನಿರ್ಧರಿಸಿದಾಗ' ಎಂದು ಶೀರ್ಷಿಕೆ ನೀಡಿದ್ದಾರೆ. ಅಲ್ಲದೇ ಆಕೆಯ ಗೆಳೆಯ ವಿಡಿಯೋ ಮಾಡಲು ಕಾಯುತ್ತಿದ್ದರು. ಆದರೆ ಆ ಮಹಿಳೆಗೆ ಅದರ ಅಗತ್ಯವಿರಲಿಲ್ಲ ಎಂದಿದ್ದಾರೆ. ಕೆಲವು ಸಮಯದ ಬಳಿಕ ಮಾಲ್ಡೋನಾಡೋ ವಿವರಿಸುತ್ತಾ, 'ಚಿತ್ರಕ್ಕಾಗಿ ಉತ್ತಮ ಸ್ಥಳದ ಆಯ್ಕೆಗಾಗಿ ಆಕೆ ನಮ್ಮ ಬಳಿ ಬಂದಳು. ಬರುತ್ತಲೇ ಇದು, ಇದುವೇ ಒಳ್ಳೆಯ ಸ್ಥಳವೆಂದು' ಆಕೆ ಹೇಳಿದಳು ಎಂದಿದ್ದಾರೆ.

'ಐ ಲವ್ ಯು, ನಾನು ಬಯಸುವ ಪುರುಷ ನೀನೇ. ನಾನು ನನ್ನ ಉಳಿದ ಜೀವನವನ್ನು ನಿನ್ನ ಜೊತೆಗೆ ಬದುಕಲು ಬಯಸುತ್ತೇನೆ. ನೀನು ನನ್ನನ್ನು ಮದುವೆಯಾಗುತ್ತೀಯಾ?' ಎಂದು ಮಾಲ್ಡೋನಾಡೋ ಮಂಡಿಯೂರಿ ಉಂಗುರ ಹಿಡಿದು ರೋಡ್ರಿಗಸ್‌ಗೆ ಪ್ರೇಮ ನಿವೇದಿಸಿದ್ದಾರೆ. ಆ ನಂತರ ಆಕೆಗೆ ತನ್ನ ತಪ್ಪು ಅರಿವಾಗಿದೆ. ಅದೇನೆಂದರೆ ಈ ಸಮಯದಲ್ಲಿ ಆ ಮಹಿಳೆ ಇವರನ್ನು ನೋಡುತ್ತಾ ನಿಧಾನವಾಗಿ ಫ್ರೇಂನಿಂದ ಹೊರ ನಡೆದಿದ್ದಾಳೆ ಎಂದು ಡೈಲಿ ಮೇಲ್ ವರದಿ ಮಾಡಿದೆ.

ಟಿಕ್ಟಾಕ್‌ನಲ್ಲಿ ಈ ಕ್ಲಿಪ್ ಅಪ್ಲೋಡ್ ಮಾಡಲಾಗಿದ್ದು , 3 ಮಿಲಿಯನ್ ವೀಕ್ಷಣೆ ಗಳಿಸಿದೆ. ಅಲ್ಲದೇ ಮಹಿಳೆಯ ಈ ನಡವಳಿಕೆ ಬಗ್ಗೆ ನೆಟ್ಟಿಗರಿಂದ ಸಾವಿರಾರು ಕಮೆಂಟ್ಸ್ ಹರಿದು ಬಂದಿದೆ. ಮಹಿಳೆಯ ವರ್ತನೆಯಿಂದ ಕೆಲವರು ಆಕ್ರೋಶಗೊಂಡರೆ, ಕೆಲವರು ಉದ್ಯಾನವನವು ಸಾರ್ವಜನಿಕ ಆಸ್ತಿ ಎಂದು ಮಹಿಳೆಯ ವರ್ತನೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಒಬ್ಬ ಬಳಕೆದಾರರು ಬರೆಯುತ್ತಾ, 'ಆ ಮಹಿಳೆ ಅವರನ್ನು ನೋಡಲಿಲ್ಲ ಎಂದು ನಟಿಸುವ ಮೂಲಕ ಅವರನ್ನು ನೋಡಿದ್ದಾಳೆ' ಎಂದಿದ್ದಾರೆ. ಇನ್ನೊಬ್ಬ ಬಳಕೆದಾರರು ಆಕೆಯ ವರ್ತನೆ ಬಗ್ಗೆ ಮಾತನಾಡುತ್ತಾ. 'ಆಕೆ ಈಗ ನಿಮ್ಮ ಮದುವೆಗೆ ಬೆಲೆ ತೆರಬೇಕು. ಆಕೆ ನಿಮ್ಮ ನಿಶ್ಚಿತಾರ್ಥದ ಭಾಗವಾಗಿದ್ದಾರೆ' ಎಂದು ಹೇಳಿದ್ದಾರೆ. ಇನ್ನು ಕೆಲವರು ಮಹಿಳೆಯ ವರ್ತನೆ ಸಮರ್ಥಿಸಿಕೊಂಡಿದ್ದಾರೆ. 'ಇದು ನಿಜವಾಗಿಯೂ ಒಂದು ಮುಗ್ಧವಾದ ವಿಷಯ. ಆಕೆ ದೂರದಲ್ಲಿ ನಿಂತಿದ್ದಾಗ, ಆಕೆ ನಿಮ್ಮ ವಿಡಿಯೋದಲ್ಲಿರುವ ವಿಚಾರ ಆಕೆಗೆ ತಿಳಿದೇ ಇಲ್ಲ' ಎಂದಿದ್ದಾರೆ.
First published: