ಇದು ಕಳ್ಳ-ಪೊಲೀಸ್ ಪ್ರೇಮದಾಟ: ಗ್ಯಾಂಗ್​ಸ್ಟರ್​ನ ಮದುವೆಯಾದ ಮಹಿಳಾ ಕಾನ್ಸ್​ಟೇಬಲ್..!

ರಾಹುಲ್ ಬಿಡುಗಡೆಯಾದ ಬಳಿಕ ಲಕ್ನೋನ ಗೌತಮ್ ಬುದ್ಧ ನಿಲ್ದಾಣದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಪಾಯಲ್ ಡ್ಯೂಟಿಗೆ ಹಾಜರಾಗಿಲ್ಲ. ಇಬ್ಬರು ಮದುವೆಯಾಗಿ ಬೇರೊಂದು ಊರಿಗೆ ಶಿಫ್ಟ್​ ಆಗಿದ್ದಾರೆ ಎನ್ನಲಾಗಿದೆ. ರಾಹುಲ್ ಬಿಡುಗಡೆಯಾದ ಬಳಿಕ ಲಕ್ನೋನ ಗೌತಮ್ ಬುದ್ಧ ನಿಲ್ದಾಣದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಪಾಯಲ್ ಡ್ಯೂಟಿಗೆ ಹಾಜರಾಗಿಲ್ಲ. ಇಬ್ಬರು ಮದುವೆಯಾಗಿ ಬೇರೊಂದು ಊರಿಗೆ ಶಿಫ್ಟ್​ ಆಗಿದ್ದಾರೆ.

zahir | news18-kannada
Updated:August 9, 2019, 9:04 PM IST
ಇದು ಕಳ್ಳ-ಪೊಲೀಸ್ ಪ್ರೇಮದಾಟ: ಗ್ಯಾಂಗ್​ಸ್ಟರ್​ನ ಮದುವೆಯಾದ ಮಹಿಳಾ ಕಾನ್ಸ್​ಟೇಬಲ್..!
.
  • Share this:
ಪ್ರೀತಿ ಕುರುಡು..ಪ್ರೇಮಪಾಶದಲ್ಲಿ ಮುಳುಗಿದರೆ ಯಾವುದು ಕೂಡ ಕಣ್ಣಿಗೆ ಕಾಣಿಸಲ್ಲ ಎಂಬ ನಾಣ್ಣುಡಿ ಒಂದಿದೆ. ಈ ಆಡುಮಾತಿಗೆ ಸಾಕ್ಷಿ ಎಂಬಂತೆ ಲಕ್ನೋದಿಂದ ಒಂದು ಲವ್​ ಸ್ಟೋರಿಯೊಂದು ಕೇಳಿ ಬಂದಿದೆ. ಇಲ್ಲಿ ನಾಯಕಿ ಪೊಲೀಸ್ ಕಾನ್​ಸ್ಟೆಬಲ್. ಹಾಗೆಯೇ ನಾಯಕ ಗ್ಯಾಂಗ್​ಸ್ಟರ್. ಅಂದರೆ ಇದೊಂದು ಫಿಲಂ ಸ್ಟೋರಿ ಎಂದು ಅಂದುಕೊಳ್ಳಬೇಡಿ. ಏಕೆಂದರೆ ಯಾವುದೇ ಫಿಲಂಗೂ ಕಮ್ಮಿಯಿಲ್ಲ ಎಂಬಂತೆ ಈಗ ರಾಹುಲ್ ಥಸ್ರಾನಾ ಹಾಗೂ ಪಾಯಲ್ ಪ್ರೇಮ ಕಹಾನಿ ಹರಿದಾಡುತ್ತಿದೆ. ಅಂದಹಾಗೆ ಈ ಕಳ್ಳ- ಪೊಲೀಸ್ ಪ್ರೀತಿಗೆ ಸಾಕ್ಷಿಯಾಗಿದ್ದು ನ್ಯಾಯಾಲಯದ ವಾರಾಂಡ ಎಂಬುದು ಮತ್ತೊಂದು ವಿಶೇಷ.

ಮೇ 8, 2014 ರಂದು ವ್ಯಾಪಾರಿ ಮನಮೋಹನ್ ಗೋಯಲ್ ಅವರ ಹತ್ಯೆಗೆ ಸಂಬಂಧಿಸಿದಂತೆ 30 ವರ್ಷದ ರಾಹುಲ್ ಥಸ್ರಾನಾ ಅವರನ್ನು ಬಂಧಿಸಲಾಗಿತ್ತು. ಹಲವು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ರಾಹುಲ್​ ಮೇಲೆ 12ಕ್ಕೂ ಹೆಚ್ಚಿನ ಕೇಸ್​ಗಳು ದಾಖಲಾಗಿದ್ದವು.

ಇನ್ನೇನು ಸೆರೆಮನೆ ವಾಸದಲ್ಲೇ ಜೀವದೂಡ ಬೇಕಿದ್ದ ರಾಹುಲ್ ಅವರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿತ್ತು. ಈ ವೇಳೆ ಕೋರ್ಟ್ ಭಾಗದಲ್ಲಿ ಡ್ಯೂಟಿ ಮಾಡುತ್ತಿದ್ದ ಪಾಯಲ್ ಗ್ಯಾಂಗ್​ಸ್ಟರ್​ನ ಕಣ್ಣಿನ ಬಿದ್ದಿದೆ. ಮೊದಲ ಭೇಟಿಯೇ ಇಬ್ಬರ ನಡುವೆ ಆತ್ಮೀಯತೆ ಬೆಳೆಯುವಂತೆ ಮಾಡಿತು.

ಥಸ್ರಾನಾನ ಸೂರಜ್​​ಪುರ್ ನ್ಯಾಯಾಲಯ ಸುತ್ತಾಟದೊಂದಿಗೆ ಕಾನ್​ಸ್ಟೇಬಲ್ ಜೊತೆಗಿನ ಕುಶಲೋಪರಿ ಆರಂಭವಾಗಿತ್ತು. ಇದುವೇ ಮುಂದೆ ಪ್ರೇಮ ಕಹಾನಿಗೆ ಮುನ್ನಡಿ ಬರೆಯಿತು. ಅತ್ತ ಪ್ರೇಮ ಪಕ್ಷಿ ಜೈಲಿನಲ್ಲಿ ಬಂಧಿಯಾಗಿದ್ದರೆ, ಅತ್ತ ನ್ಯಾಲಯಾಲಯದಲ್ಲಿ ಕೌಂಪೌಂಡ್​ ಒಳಗೆ ರಾಹುಲ್ ಹಾಜರಿಗಾಗಿ ಪಾಯಲ್ ಕಾಯುತ್ತಾ ಕುಳಿತಿರುದ್ದರು. ಈ ಪ್ರೀತಿಯು ಹಾಗೆಯೇ ಮುಂದುವರೆದಿತ್ತು. ಇನ್ನು ನ್ಯಾಯಾಲಯದಿಂದ ಕೊನೆಗೂ ಜಾಮೀನು ಪಡೆಯುವಲ್ಲಿ ಯಶಸ್ವಿಯಾಗಿ ರಾಹುಲ್ ಹೊರ ಬಂದಿದ್ದರು.

ತನ್ನ ಇನಿಯನ ಬಂಧಮುಕ್ತದೊಂದಿಗೆ ಜೋಡಿ ಹಕ್ಕಿಗಳಾದ ಗ್ಯಾಂಗ್​ಸ್ಟರ್-ಕಾನ್ಸ್​ಟೇಬಲ್ ಸದ್ಯ ಮದುವೆಯಾಗಿ ಊರು ಬಿಟ್ಟಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ತಿಳಿಸಿರುವ ಪೊಲೀಸ್ ಮೂಲಗಳು, ರಾಹುಲ್ ಬಿಡುಗಡೆಯಾದ ಬಳಿಕ ಲಕ್ನೋನ ಗೌತಮ್ ಬುದ್ಧ ನಿಲ್ದಾಣದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಪಾಯಲ್ ಡ್ಯೂಟಿಗೆ ಹಾಜರಾಗಿಲ್ಲ. ಇಬ್ಬರು ಮದುವೆಯಾಗಿ ಬೇರೊಂದು ಊರಿಗೆ ಶಿಫ್ಟ್​ ಆಗಿದ್ದಾರೆ ಎನ್ನಲಾಗಿದೆ. ಕರ್ತವ್ಯಕ್ಕೆ ಹಾಜರಾಗದ  ಬಗ್ಗೆ ಪರಿಶೀಲಿಸಲಾಗುತ್ತಿದ್ದು, ಆ ಬಳಿಕ ಕ್ರಮ ಕೈಗೊಳ್ಳಲಾಗುವುದು ಎಂದು ಎಸ್​ಪಿ ರಣವಿಜಯ್ ಸಿಂಗ್ ತಿಳಿಸಿದ್ದಾರೆ.

2008 ರಲ್ಲಿ ಅನಿಲ್ ದುಜಾನಾ ಗ್ಯಾಂಗ್‌ಗೆ ಸೇರಿದ್ದ ರಾಹುಲ್ ಹಲವು ದರೋಡೆಯಲ್ಲಿ ಭಾಗಿಯಾಗಿದ್ದರು. ಇದಕ್ಕೂ ಮುನ್ನ ಸಿಕಂದ್ರಬಾದ್‌ನಲ್ಲಿ ಆಟೋ ಡ್ರೈವರ್ ಆಗಿದ್ದ ಗ್ಯಾಂಗ್​ಸ್ಟರ್, ಗೋಯಲ್ ಪ್ರಕರಣದೊಂದಿಗೆ ಅಪರಾಧದ ಜಗತ್ತಿಗೆ ಎಂಟ್ರಿಯಾಗಿದ್ದರು. ಇನ್ನು 2016 ರಲ್ಲಿ ಗ್ರಾಮ ಪಂಚಾಯತ್ ಚುನಾವಣೆಗೆ ಸ್ಪರ್ಧಿಸುತ್ತಿದ್ದ ತನ್ನ ತಾಯಿಯ ಪರವಾಗಿ ಮತ ಚಲಾಯಿಸುಂತೆ ಗ್ರಾಮಸ್ಥರಿಗೆ ಬೆದರಿಕೆ ಹಾಕಿದ್ದ ಪ್ರಕರಣವು ರಾಹುಲ್ ಮೇಲಿತ್ತು.

ಇಂತಹ ಹಲವಾರು ಅಪರಾಧ ಪ್ರಕರಣಗಳನ್ನು ಹೊಂದಿದ್ದ ರಾಹುಲ್ ಥಸ್ರಾನಾರನ್ನು ಪೊಲೀಸ್ ಕಾನ್ಸ್​ಟೇಬಲ್ ಪಾಯಲ್ ವಿವಾಹವಾಗಿರುವುದು ಸದ್ಯ ಚರ್ಚೆಗೆ ಕಾರಣವಾಗಿದೆ. ಅಲ್ಲದೆ ಪ್ರೀತಿಗೆ ಕಣ್ಣು ಮಾತ್ರವಲ್ಲ, ಬುದ್ಧಿ ಕೂಡ ಇಲ್ಲ ಎಂಬ ಮಾತುಗಳು ಸಹ ಸಾಮಾಜಿಕ ಜಾಲತಾಣದಲ್ಲಿ ಕೇಳಿ ಬರುತ್ತಿವೆ.
Loading...

First published:August 9, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...