Baby Elephant: ಕಾಪಾಡಿದವನ ಕಾಲು ಹಿಡಿದು ಕೃತಜ್ಞತೆ ಹೇಳಿದ ಮರಿಯಾನೆ; ಮನಸ್ಸು ಕರಗಿಸುತ್ತೆ ಈ ಫೋಟೋ

ಅದು ತಮಿಳುನಾಡಿನಲ್ಲಿ ರಕ್ಷಿಸಲ್ಪಟ್ಟ ಆನೆಮರಿಯೊಂದು, ಅರಣ್ಯ ಅಧಿಕಾರಿಯನ್ನು ಅಪ್ಪಿಕೊಂಡಿರುವ ಚಿತ್ರ. ಈ ಚಿತ್ರವನ್ನು ಭಾರತೀಯ ಅರಣ್ಯ ಸೇವಾ (ಐಎಫ್‍ಎಸ್) ಅಧಿಕಾರಿ ಪ್ರವೀಣ್ ಕಸ್ವಾನ್ ಪೋಸ್ಟ್ ಮಾಡಿದ್ದಾರೆ.

ಅರಣ್ಯಾಧಿಕಾರಿಯ ಕಾಲು ತಬ್ಬಿಕೊಂಡಿರುವ ಮರಿಯಾನೆ

ಅರಣ್ಯಾಧಿಕಾರಿಯ ಕಾಲು ತಬ್ಬಿಕೊಂಡಿರುವ ಮರಿಯಾನೆ

  • Share this:
ಪ್ರಾಣಿಗಳೇ(Animals) ಗುಣದಲಿ ಮೇಲು, ಮಾನವನ(Human)ದಕ್ಕಿಂತ ಕೀಳು ಎಂಬ ಡಾ.ರಾಜ್​ಕುಮಾರ್ ಅವರ ಹಾಡನ್ನು ಎಲ್ಲರೂ ಕೇಳೇ ಇರುತ್ತೀರಿ. ಈ ಮಾತು ಅಕ್ಷರಶಃ ಸತ್ಯ ಕೂಡ ಹೌದು. ಮಾತು ಬಾರದಿದ್ದರೂ ತಮ್ಮ ಭಾವನೆಗಳನ್ನು ವ್ಯಕ್ತಪಡಿಸುವಲ್ಲಿ ಪ್ರಾಣಿಗಳು ಮನುಷ್ಯನಿಗಿಂತ ಒಂದು ಕೈ ಹೆಚ್ಚು ಎಂದರೆ ತಪ್ಪಾಗಲಾರದು. ಇತ್ತೀಚೆಗೆ ಸೋಷಿಯಲ್ ಮೀಡಿಯಾ(Social Media)ದಲ್ಲಿ ಆನೆ ಮರಿಯೊಂದು ಅರಣ್ಯಾಧಿಕಾರಿಯ(Forest Officer) ಕಾಲನ್ನು ಸೊಂಡಿಲಿನಿಂದ ತಬ್ಬಿ ಹಿಡಿದುಕೊಂಡಿರುವ ದೃಶ್ಯ ಸಾಷಕ್ಟು ವೈರಲ್(Viral Photo) ಆಗಿದೆ. ಆನೆಮರಿ(Elephant calf) ತನ್ನನ್ನು ರಕ್ಷಿಸಿ ತಾಯಿಯ ಬಳಿ ಬಿಟ್ಟ ಅರಣ್ಯಾಧಿಕಾರಿಗೆ ಕೃತಜ್ಞತಾ ಭಾವವನ್ನು ತೋರುತ್ತಿದೆ. ಅದರ ಮುಗ್ಧತೆ ಜನರ ಮನಸ್ಸನ್ನು ಗೆದ್ದಿದೆ.

ಬಹುಪಾಲು ಮನುಷ್ಯರಲ್ಲಿ ಕೃತಜ್ಞತೆಗಿಂತಲೂ, ಕೃತಘ್ನತೆಯೇ ಹೆಚ್ಚಿರುತ್ತದೆ ಎಂದರೆ ತಪ್ಪಾಗಲಾರದು. ಆದರೆ ಪ್ರಾಣಿಗಳು ಹಾಗಲ್ಲ, ತಮಗೆ ಮಾಡಿದ ಉಪಕಾರವನ್ನು ಸದಾ ಕೃತಜ್ಞತೆಯಿಂದ ಸ್ಮರಿಸುತ್ತವೆ. ಪ್ರೀತಿ, ಕರುಣೆ, ಭಾಂದವ್ಯ, ಕೃತಜ್ಞತೆ, ಪ್ರಾಮಾಣಿಕತೆ ಮತ್ತಿತರ ಭಾವನೆಗಳನ್ನು ಮನುಷ್ಯನಿಗಿಂತ ಹೆಚ್ಚು ಆಳವಾಗಿ ಹೊಂದಿರುವ ಪ್ರಾಣಿಪಕ್ಷಿಗಳಿಗೆ, ಅದನ್ನು ವ್ಯಕ್ತಪಡಿಸಲು, ಮನುಷ್ಯನಂತೆ ಅಥವಾ ಮನುಷ್ಯ ಭಾಷೆ ತಿಳಿಯದು, ಆದರೆ ಅವು ತಮ್ಮದೇ ಆದ ಮೂಕ ಭಾಷೆಯಲ್ಲಿ , ಸಂಜ್ಞೆಯ ಮೂಲಕ ಎಲ್ಲವನ್ನು ವ್ಯಕ್ತಪಡಿಸಬಲ್ಲವು. ಅದನ್ನು ಅರ್ಥ ಮಾಡಿಕೊಳ್ಳಬಲ್ಲ ದೊಡ್ಡ ಮನಸ್ಸು ನಮಗಿರಬೇಕು ಅಷ್ಟೆ. ಅಂತದ್ದೇ ಒಂದು , ಸಂವೇದನೆಯ ಚಿತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಅದನ್ನು ಕಂಡು ಮಂತ್ರಮುಗ್ಧರಾಗಿದ್ದಾರೆ. ಅದು ತಮಿಳುನಾಡಿನಲ್ಲಿ ರಕ್ಷಿಸಲ್ಪಟ್ಟ ಆನೆಮರಿಯೊಂದು, ಅರಣ್ಯ ಅಧಿಕಾರಿಯನ್ನು ಅಪ್ಪಿಕೊಂಡಿರುವ ಚಿತ್ರ. ಈ ಚಿತ್ರವನ್ನು ಭಾರತೀಯ ಅರಣ್ಯ ಸೇವಾ (ಐಎಫ್‍ಎಸ್) ಅಧಿಕಾರಿ ಪ್ರವೀಣ್ ಕಸ್ವಾನ್ ಪೋಸ್ಟ್ ಮಾಡಿದ್ದಾರೆ.

ಇದನ್ನೂ ಓದಿ:Viral News: ನವರಾತ್ರಿಯಂದು 2 ತಲೆ , 3 ಕಣ್ಣುಗಳಿರುವ ವಿಚಿತ್ರ ಹಸು ಜನನ- ದುರ್ಗೆಯ ರೂಪ ಎಂದು ಜನರಿಂದ ಪೂಜೆ

“ಪ್ರೀತಿಗೆ ಯಾವುದೇ ಭಾಷೆಯಿಲ್ಲ. ಆನೆಮರಿಯೊಂದು ಅರಣ್ಯ ಅಧಿಕಾರಿಯನ್ನು ಅಪ್ಪಿಕೊಂಡಿದೆ. ತಂಡ ಈ ಮರಿಯನ್ನು ರಕ್ಷಿಸಿತು ಮತ್ತು ತನ್ನ ತಾಯಿಯೊಡನೆ ಮತ್ತೆ ಸೇರಿಸಿತು” ಎಂದು ಕಸ್ವಾನ್ ಎಂದು ಆ ಪೋಸ್ಟ್​​ಗೆ ಅಡಿಬರಹವನ್ನು ನೀಡಿದ್ದಾರೆ. ಆ ಪೋಸ್ಟ್​​ನಲ್ಲಿ, ಆನೆಮರಿಯೊಂದು ಒಬ್ಬ ಅರಣ್ಯ ಅಧಿಕಾರಿಯ ಜೊತೆ ನಿಂತುಕೊಂಡು, ತನ್ನ ಸೊಂಡಿಲಿನಿಂದ ಆತನನ್ನು ಅಪ್ಪಿಕೊಂಡಿರುವುದನ್ನು ಕಾಣಬಹುದು.


ಈ ಪೋಟೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು, 12 ಸಾವಿರಕ್ಕೂ ಅಧಿಕ ಮೆಚ್ಚುಗೆಗಳನ್ನು ಪಡೆದಿದೆ. ಅಷ್ಟು ಮಾತ್ರವಲ್ಲ, 1,000 ಕ್ಕೂ ಹೆಚ್ಚು ಮಂದಿ ಈ ಪೋಸ್ಟನ್ನು ಮರುಟ್ವೀಟ್ ಮಾಡಿದ್ದಾರೆ. ಆ ಆನೆಮರಿಯು ಅರಣ್ಯ ಅಧಿಕಾರಿಯನ್ನು ತಬ್ಬಿಕೊಂಡಿರುವ ದೃಶ್ಯವನ್ನು ನೋಡಿ ನೆಟ್ಟಿಗರು ಅತ್ಯಂತ ಖುಷಿ ಪಟ್ಟಿದ್ದಾರೆ.
“ಪ್ರಾಣಿಗಳು ಭಾವನೆಗಳನ್ನು ಅನುಭವಿಸಬಲ್ಲವು, ಮನುಷ್ಯರಲ್ಲ ! ಈ ಮರಿ ಮನುಷ್ಯರ ಬಗ್ಗೆ ಒಳ್ಳೆಯದನ್ನು ಯೋಚಿಸುವಂತೆ ಮಾಡಿದ ಅರಣ್ಯ ಅಧಿಕಾರಿಗೆ ನಾನು ಸೆಲ್ಯೂಟ್ ಮಾಡುತ್ತೇನೆ! “ ಎಂದು ಒಬ್ಬ ಸಾಮಾಜಿಕ ಬಳಕೆದಾರ ಬರೆದುಕೊಂಡಿದ್ದರೆ, ಇನ್ನೊಬ್ಬರು “ ಇದನ್ನು ನೋಡಿ ನಾನು ಮೂಕವಿಸ್ಮಿತನಾದೆ ಮತ್ತು ನನ್ನ ಕಣ್ಣಾಲಿಗಳು ತುಂಬಿಕೊಂಡವು” ಎಂದು ಪ್ರತಿಕ್ರಿಯಿಸಿದ್ದಾರೆ.

“ಈ ಚಿತ್ರವೂ ತುಂಬಾ ಕಸುವುಳ್ಳದಾಗಿದ್ದು, ವರ್ಷದ ಸಂರಕ್ಷಿತ ಚಿತ್ರವಾಗುವ ಸಾಮರ್ಥ್ಯವನ್ನು ಹೊಂದಿದೆ! “ ಎಂದು ಮತ್ತೊಬ್ಬ ಸಾಮಾಜಿಕ ಬಳಕೆದಾರರು ಬರೆದುಕೊಂಡಿದ್ದಾರೆ. “ ಈ ಚಿತ್ರ ನನ್ನ ಮೊಗದಲ್ಲಿ ನಗು ಮೂಡಿಸಿತು ಮತ್ತು ಉತ್ತಮವಾದ ಅನುಭೂತಿ ನೀಡಿತು. ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು” ಎಂದು ಇನ್ನೊಬ್ಬ ನೆಟ್ಟಿಗ ಬರೆದುಕೊಂಡಿದ್ದಾರೆ.

ಕಳೆದ ವಾರ, ಐಎಫ್‍ಎಸ್ ಅಧಿಕಾರಿ ಸುಧಾ ರಾಮೆನ್, ಆನೆ ಮರಿಯೊಂದು ತನ್ನ ಅಮ್ಮನನ್ನು ಸೇರುವ ಹಾದಿಯಲ್ಲಿರುವ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದರು.
“ಈ ಆನೆಮರಿ , ತಮಿಳುನಾಡು ಅರಣ್ಯ ಸಿಬ್ಬಂದಿಯ ತಂಡ ಝೆಟ್ ಪ್ಲಸ್ ಭದ್ರತೆಯೊಂದಿಗೆ ತನ್ನ ತಾಯಿಯನ್ನು ಸೇರಲು ಖುಷಿಯಿಂದ ನಡೆದುಕೊಂಡು ಹೋಗುತ್ತದೆ. ಈ ಮೊದಲು ಈ ಆನೆ ಮರಿ ಒಂಟಿಯಾಗಿ ಸಿಕ್ಕಿತ್ತು ಮತ್ತು ಅದು ಗಾಯಗೊಂಡಿತ್ತು. ತಮಿಳು ನಾಡು ಅರಣ್ಯ ಸಿಬ್ಬಂದಿಯ ತಂಡ ಈ ಮರಿಯನ್ನು ರಕ್ಷಿಸಿ, ಚಿಕಿತ್ಸೆ ನೀಡಿತು ಮತ್ತು ತನ್ನ ತಾಯಿಯನ್ನು ಮತ್ತೆ ಸೇರಿಸಲು ಬೆಂಗಾವಲಾಯಿತು” ಎಂದು ಆಕೆ ಹೇಳಿದ್ದಾರೆ.
Published by:Latha CG
First published: