Planeನಲ್ಲಿಯೇ ಹನಿಮೂನ್ ವ್ಯವಸ್ಥೆ: ವಿಶೇಷ ಪ್ಯಾಕೇಜ್ ಘೋಷಿಸಿದ Airlines

ಈ ವಿಮಾನದಲ್ಲಿ ಒಟ್ಟು ಆರು ಜನರು  ಪ್ರಯಾಣಿಸಬಹುದಾಗಿದೆ. ಇದುವರೆಗೂ ನವದಂಪತಿ ಮತ್ತು ಹಿರಿಯ ಜೋಡಿಗಳು ಈ ಸೇವೆ ಪಡೆದುಕೊಂಡು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಲವ್ ಕ್ಲೌಡ್ ಜೆಟ್ ಕಳೆದ ಏಳು ವರ್ಷಗಳಿಂದ ಸೇವೆ ನಡೆಯುತ್ತಿದೆ.

ಹನಿಮೂನ್ ಪ್ಲೇನ್

ಹನಿಮೂನ್ ಪ್ಲೇನ್

  • Share this:
ಅಮೆರಿಕದ ಲಾಸ್ ವೇಗಾಸ್ ನಲ್ಲಿ (Las Vegas, Amercia) ಶ್ರೀಮಂತರಿಗಾಗಿ ವಿಲಾಸಿಮಯ ಪ್ಯಾಕೇಜ್ ಘೋಷಣೆ ಮಾಡಲಾಗಿದೆ. ಕಂಪನಿಯೊಂದು ಶ್ರೀಮಂತ ಜೋಡಿಗಳಿಗೆ (Couple) ದೈಹಿಕ ಸಂಬಂಧ ಹೊಂದಲು ವಿಶೇಷ ಸ್ಥಳದ ಅವಕಾಶ ಕಲ್ಪಿಸುತ್ತಿದೆ. ಲವ್ ಕ್ಲೌಡ್ ಜೆಟ್ ಚಾರ್ಟರ್ ಹೆಸರಿನ ಕಂಪನಿ ಈ ವಿಶೇಷ ಪ್ಯಾಕೇಜ್ (Package)ನೀಡಲು ಮುಂದಾಗಿದೆ. ಈ ಸೇವೆಗಾಗಿ ಕಂಪನಿ 995 ಅಮೆರಿಕನ್ ಡಾಲರ್ (ಅಂದಾಜು 73 ಸಾವಿರ ರೂ.) ಹಣ ನಿಗದಿ ಮಾಡಿದೆ. ಅದು ಕೇವಲ 45 ನಿಮಿಷಗಳಿಗೆ ಮಾತ್ರ ಈ ಸೇವೆ ಜೋಡಿಗಳಿಗೆ ಲಭ್ಯವಾಗಲಿದೆ. 45 ನಿಮಿಷದ ನಂತರವೂ ಈ ಸೇವೆ ಪಡೆಯಲು ಇಚ್ಛಿಸುವ ದಂಪತಿ ಮತ್ತೆ ಮೊತ್ತವನ್ನು ಪಾವತಿಸಬೇಕು.

ಈ ವಿಮಾನದಲ್ಲಿ ಕೇವಲ ಒಬ್ಬ ಪೈಲಟ್ ಮಾತ್ರ ಇರುರತ್ತಾರೆ. ಈ  ಪ್ಲೇನ್ ಎರಡು ಇಂಜಿನ ಸಾಮಾರ್ಥ್ಯವನ್ನು ಹೊಂದಿದೆ. ಯಾತ್ರಿಗಳಿಗಾಗಿಯೇ ಹಿಂಬದಿಯಲ್ಲಿ ವಿಶೇಷ ವ್ಯವಸ್ಥೆ ಕಲ್ಪಿಸಲಾಗಿರುತ್ತದೆ. ಒಟ್ಟು 45 ನಿಮಿಷದ ಪ್ರಯಾಣ ಇದಾಗಿರುತ್ತದೆ. ಪ್ಲೇನ್ ನಲ್ಲಿ ಒಂದು ಗಂಟೆ ಇರಲು ಇಚ್ಛಿಸುವವರು ಒಂದು ಲಕ್ಷ ರೂ.ವರೆಗೂ ಪಾವತಿಸಬೇಕಾಗುತ್ತದೆ.

ವಿಮಾನದಲ್ಲಿ ವ್ಯವಸ್ಥಿತವಾದ ಹಾಸಿಗೆ ಸಿದ್ಧ

ಪ್ಲೇನ್ ಟೇಕಾಫ್ ಆದ ಎರಡು ನಿಮಿಷದ ನಂತರ ಸೀಟ್ ಬೆಲ್ಟ್ ತೆಗೆಯಬಹುದು. ವಿಮಾನ ಸೆಸ್ನಾದಲ್ಲಿ ವಿಸ್ತಾರವಾಗಿ ಹಾಸಿಗೆ ಹಾಕಲಾಗಿರುತ್ತದೆ. ಮುಂಭಾಗದಲ್ಲಿ ಪೈಲಟ್ ಮಾತ್ರ ಇರುತ್ತಾರೆ. ಪೈಲರ್ ಕಾಕ್ ಪಿಟ್ ನಿಂದ ಬೇರೆ ಎಲ್ಲಿಯೂ ಹೋಗಲು ಸಾಧ್ಯವಿಲ್ಲ. ಈ ಕುರಿತು ಮಾತನಾಡಿರುವ ಪೈಲರ್ ಆಂಥೋನಿ ಬ್ಲಾಕ್, ಟೇಕಾಫ್ ಬಳಿಕ ನಾವು ಅಲ್ಲಿಂದ ಎಲ್ಲಿಯೂ ತೆರಳಲು ಸಾಧ್ಯವಿಲ್ಲ. ನನಗೂ ಸೆಕ್ಸ್ ಅಂದ್ರೆ ಇಷ್ಟ. ಆದ್ರೆ ಅದಕ್ಕಿಂತಲೂ ವಿಮಾನ ಹಾರಿಸೋದು ನನಗೆ ಇಷ್ಟವಾದ ಕೆಲಸ ಅಂತ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ:  Viral Video: ವಧು-ವರನ ಗ್ರ್ಯಾಂಡ್ ಎಂಟ್ರಿ ತಂದ ಆಪತ್ತು

ಈ ವಿಮಾನದಲ್ಲಿ ಒಟ್ಟು ಆರು ಜನರು  ಪ್ರಯಾಣಿಸಬಹುದಾಗಿದೆ. ಇದುವರೆಗೂ ನವದಂಪತಿ ಮತ್ತು ಹಿರಿಯ ಜೋಡಿಗಳು ಈ ಸೇವೆ ಪಡೆದುಕೊಂಡು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಲವ್ ಕ್ಲೌಡ್ ಜೆಟ್ ಕಳೆದ ಏಳು ವರ್ಷಗಳಿಂದ ಸೇವೆ ನಡೆಯುತ್ತಿದೆ. ಸಾಮಾನ್ಯ ಸೇವೆ ಜೊತೆಯಲ್ಲಿ ಈ ರೀತಿಯ ವಿಶೇಷ ಪ್ಯಾಕೇಜ್ ಗಳನ್ನು ಸಹ ಘೋಷಿಸುವ ಮೂಲಕ ಗ್ರಾಹಕರನ್ನು ಸೆಳೆಯುತ್ತಿದೆ.

ಹನಿಮೂನ್ ಜೊತೆ ವಿವಿಧ ಸೇವೆಗಳು

ಕಳೆದ ಐದು ತಿಂಗಳಿನಿಂದ ಈ ಸೇವೆಯನ್ನು ಆರಂಭಿಸುವ ಮೂಲಕ ಸುದ್ದಿಯಲ್ಲಿದೆ. ಇದರ ಜೊತೆಗೆ ವಿಮಾನದಲ್ಲಿ ಔತಣಕೂಟ, ಸನ್ಮಾನ ಕಾರ್ಯಕ್ರಮ, ಪ್ರಪೋಸ್ ಹೀಗೆ ಹಲವು ವಿಶೇಷ ಕ್ಷಣಗಳಿಗೆ  ಈ ವಿಮಾನ ಸಾಕ್ಷಿಯಾಗಲಿದೆ. ಕೆಲವರು ಮದುವೆ ಆಗಲು ವಿಮಾನವನ್ನು ಗಂಟೆಯ ಲೆಕ್ಕದಲ್ಲಿ ಬುಕ್ ಮಾಡಿಕೊಳ್ಳುತ್ತಾರೆ.

ಇದನ್ನೂ ಓದಿ:  ಪ್ರೀತಿಗೆ ಕಣ್ಣಿಲ್ಲ, ವಯಸ್ಸು ಮುಖ್ಯವಲ್ಲ! Elon Musk ಮಾಜಿ ಪತ್ನಿಗೆ ತನಗಿಂತ 6 ವರ್ಷ ಚಿಕ್ಕವನ ಮೇಲೆ ಲವ್!

ಮುಂದಿನ ದಿನಗಳಲ್ಲಿ ಮೋಜು ಮಸ್ತಿಗಾಗಿ ಸಹ ವಿಮಾನದಲ್ಲಿ ಸೇವೆ ಕಲ್ಪಿಸುವ ಕುರಿತು ಚಿಂತನೆ ನಡೆಸಲಾಗುತ್ತಿದೆ. ಯಾವುದೇ ಸೇವೆ ಪಡೆದ್ರೂ ಗ್ರಾಹಕರ ಖಾಸಗಿತನಕ್ಕೆ ನಮ್ಮಿಂದ ಕಿಂಚಿತ್ತೂ ತೊಂದರೆ ಆಗಲ್ಲ ಎಂದು ಪೈಲಟ್ ಆಂಥೋನಿ ಹೇಳುತ್ತಾರೆ. ಸದ್ಯ ಹನಿಮೂನ್ ಪ್ಯಾಕೇಜ್ ಸದ್ದು ಮಾಡುತ್ತಿದ್ದು, ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ.

ಸಂಗೀತ ಕಾರ್ಯಕ್ರಮಗಳಿಗೂ ವೇದಿಕೆಯಾಗಲಿದೆ ಬೆಂಗಳೂರು ವಿಮಾನ ನಿಲ್ದಾಣ

ಭಾರತದ ಮೂರನೇ ಅತಿದೊಡ್ಡ ವಿಮಾನ ನಿಲ್ದಾಣ ಎಂಬ ಖ್ಯಾತಿ ಪಡೆದಿರುವ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ (Kempegowda International Airport Bengaluru) ಇನ್ಮುಂದೆ ಮದುವೆ, ಸಂಗೀತ ಕಾರ್ಯಕ್ರಮಗಳಿಗೂ ವೇದಿಕೆಯಾಗಲಿದೆ.

ಐಷಾರಾಮಿ, ಕಣ್ಣಿಗೆ ಹಬ್ಬದಂತೆ ಕಾಣುವ ನಯನಮನೋಹರವಾಗಿರುವ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನನಿಲ್ದಾಣದ ಸೌಂದರ್ಯಕ್ಕೆ ಅನೇಕರು ಮನಸೋತಿದ್ದಾರೆ. ಈ ವಿಮಾನ ನಿಲ್ದಾಣದ ಪ್ರದೇಶವನ್ನು ಈಗ ಮತ್ತಷ್ಟು ವಿಸ್ತರಿಸುವ ಯೋಜನೆಯನ್ನು ರೂಪಿಸಲಾಗಿದೆ. 13 ಸಾವಿರ ಕೋಟಿ ವೆಚ್ಚದಲ್ಲಿ ಈ ವಿಸ್ತರಣಾ ಕಾರ್ಯ ನಡೆಯುತ್ತಿದ್ದು, ಇದನ್ನು ಬಹುಉಪಯೋಗಿ ಯೋಜನೆಗೆ ಬಳಸಿಕೊಳ್ಳಲು ಚಿಂತನೆ ನಡೆಯುತ್ತಿದೆ.
Published by:Mahmadrafik K
First published: