• ಹೋಂ
  • »
  • ನ್ಯೂಸ್
  • »
  • ಟ್ರೆಂಡ್
  • »
  • Funny Video: ಹುಡುಗಿ ಇಷ್ಟ ಆದ್ಲು ಅಂತ ಕಂಚಿನ ಪದಕ ಬಿಟ್ಟು, ಚಿನ್ನದ ಪದಕ ಹಾಕೋದ? ಏನ್ ಎಡವಟ್ಟಾಗಿದೆ ನೋಡಿ ಇಲ್ಲಿ

Funny Video: ಹುಡುಗಿ ಇಷ್ಟ ಆದ್ಲು ಅಂತ ಕಂಚಿನ ಪದಕ ಬಿಟ್ಟು, ಚಿನ್ನದ ಪದಕ ಹಾಕೋದ? ಏನ್ ಎಡವಟ್ಟಾಗಿದೆ ನೋಡಿ ಇಲ್ಲಿ

ವೈರಲ್​ ವಿಡಿಯೋ

ವೈರಲ್​ ವಿಡಿಯೋ

ಇಲ್ಲೊಬ್ಬ ವ್ಯಕ್ತಿ ಈ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮೂರನೇ ಸ್ಥಾನದಲ್ಲಿ ಜಯ ಗಳಿಸಿದ ಹುಡುಗಿ ತುಂಬಾನೇ ಸುಂದರವಾಗಿದ್ದಾಳೆ ಅಂತ ಆಕೆಯನ್ನೇ ನೋಡುತ್ತಾ ಒಂದು ದೊಡ್ಡ ಎಡವಟ್ಟನ್ನು ಮಾಡಿ ಬಿಟ್ಟಿದ್ದಾನೆ ನೋಡಿ.

  • Share this:

ಸಾಮಾನ್ಯವಾಗಿ ನಾವು ಈ ಕ್ರೀಡಾಕೂಟಗಳ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಹೋದರೆ ಅಲ್ಲಿ ಒಂದು ಪೋಡಿಯಮ್ ಇರಿಸಿರುತ್ತಾರೆ ಮತ್ತು ಅದರಲ್ಲಿ ಮೂರು ಸ್ಥಾನಗಳು ಇರುವುದನ್ನು ನೋಡಿರುತ್ತೇವೆ. ಕ್ರೀಡೆಯಲ್ಲಿ ಮೊದಲ ಸ್ಥಾನ ಪಡೆದವರು ಮಧ್ಯದಲ್ಲಿ ಸ್ವಲ್ಪ ಎತ್ತರದಲ್ಲಿ ನಿಂತುಕೊಂಡರೆ, ಎರಡನೇ ಮತ್ತು ಮೂರನೇ ಸ್ಥಾನಗಳನ್ನು ಗಳಿಸಿಕೊಂಡವರು ಮೊದಲ ಸ್ಥಾನದ ಅಕ್ಕ-ಪಕ್ಕದಲ್ಲಿ ಸ್ವಲ್ಪ ಕೆಳಗೆ ನಿಂತುಕೊಂಡಿರುತ್ತಾರೆ. ಪ್ರಶಸ್ತಿ ಪ್ರದಾನ ಮಾಡುವವರು ಸಹ ಮೊದಲಿಗೆ ಚಿನ್ನದ ಪದಕವನ್ನು ಮೊದಲನೇ ಸ್ಥಾನವನ್ನು ಪಡೆದವರ ಕೊರಳಿಗೆ ಬಂಗಾರದ (Gold) ಪದಕ ಹಾಕಿದರೆ, ಎರಡನೇ ಸ್ಥಾನ ಗಳಿಸಿದವರಿಗೆ ಬೆಳ್ಳಿ ಪದಕ (Silver) ಮತ್ತು ಮೂರನೇ ಸ್ಥಾನದಲ್ಲಿ ಜಯ ಗಳಿಸಿದವರಿಗೆ ಕಂಚಿನ (Bronze) ಪದಕವನ್ನು ಕೊರಳಿಗೆ ಹಾಕುತ್ತಾರೆ. ಇದೆಲ್ಲದರ ಬಗ್ಗೆ ಈಗೇಕೆ ನಾವು ಇಲ್ಲಿ ಹೇಳುತ್ತಿದ್ದೇವೆ ಅಂತ ನಿಮಗೆ ಸ್ವಲ್ಪ ಆಶ್ಚರ್ಯವಾಗಬಹುದು. ಇಲ್ಲೊಬ್ಬ ವ್ಯಕ್ತಿ ಈ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮೂರನೇ ಸ್ಥಾನದಲ್ಲಿ (Third Place) ಜಯ ಗಳಿಸಿದ ಹುಡುಗಿ ತುಂಬಾನೇ ಸುಂದರವಾಗಿದ್ದಾಳೆ ಅಂತ ಆಕೆಯನ್ನೇ ನೋಡುತ್ತಾ ಒಂದು ದೊಡ್ಡ ಎಡವಟ್ಟನ್ನು ಮಾಡಿ ಬಿಟ್ಟಿದ್ದಾನೆ ನೋಡಿ.


ಹುಡುಗಿಯನ್ನ ನೋಡುತ್ತಾ ವ್ಯಕ್ತಿ ಮಾಡಿರುವ ಎಡವಟ್ಟು ನೋಡಿ


ಈ ಎಡವಟ್ಟು ಮಾಡಿರುವ ವಿಡಿಯೋ ಈಗ ಸಾಮಾಜಿಕ ಮಾಧ್ಯಮದಲ್ಲಿ ಸ್ವಲ್ಪ ಜೋರಾಗಿಯೇ ಹರಿದಾಡುತ್ತಿದ್ದು, ಇದನ್ನು ನೋಡಿದರೆ ನಗು ಬರುವುದಂತೂ ಗ್ಯಾರೆಂಟಿ. ಈ ವಿಡಿಯೋ ಆರಂಭದಲ್ಲಿ ಸ್ಪರ್ಧೆಯಲ್ಲಿ ಜಯ ಗಳಿಸಿದ ಮೂವರು ವಿಜೇತರು ವೇದಿಕೆಯ ಮೇಲೆ ಅವರವರ ಸ್ಥಾನದಲ್ಲಿ ನಿಂತಿರುವುದನ್ನು ನಾವು ನೋಡಬಹುದು.


ಇದನ್ನೂ ಓದಿ: ಈ ಮಗುವಿನಲ್ಲಿ ಮೂವರ ಡಿಎನ್​ಎ, ಅಚ್ಚರಿ ಮೂಡಿಸಿದೆ ಯುಕೆಯ ಮೊದಲ 'ಸೂಪರ್ ಬೇಬಿ'!


ಕೆಲವು ಕ್ಷಣಗಳ ನಂತರ, ಚಿನ್ನದ ಪದಕವನ್ನು ಹೊತ್ತ ನಿರೂಪಕನು ಈವೆಂಟ್ ನ ವಿಜೇತರ ಬಳಿಗೆ ಬರುತ್ತಾನೆ. ಆದರೆ ವಿಜೇತಳ ಬದಲು, ವ್ಯಕ್ತಿ 2ನೇ ರನ್ನರ್-ಅಪ್ ಎಂದರೆ ಮೂರನೇ ಸ್ಥಾನ ಗಳಿಸಿದವರ ಬಳಿಗೆ ಹೋಗಿ ಆ ಚಿನ್ನದ ಪದಕವನ್ನು ಅವಳ ಕುತ್ತಿಗೆಗೆ ಹಾಕುತ್ತಾನೆ. ನಂತರ ಆಕೆಯನ್ನು ಅವನು ಪ್ರೀತಿಯಿಂದ ತಬ್ಬಿಕೊಳ್ಳುತ್ತಾನೆ ಮತ್ತು ಅವಳನ್ನು ಚುಂಬಿಸಿದ ನಂತರ ಅಲ್ಲಿಂದ ದೂರ ಹೋಗುತ್ತಾನೆ.


ತಕ್ಷಣವೇ 1ನೇ ರನ್ನರ್ ಅಪ್ ಎಂದರೆ ಎರಡನೇ ಸ್ಥಾನ ಗಳಿಸಿದ ಹುಡುಗಿ ಆ ಎಡವಟ್ಟನ್ನು ಆಕೆಯ ಗಮನಕ್ಕೆ ತರುತ್ತಾಳೆ. ಆಗ ಆ ಹುಡುಗಿಗೆ ತನಗೆ ಚಿನ್ನದ ಪದಕವನ್ನು ನೀಡಿ ಗೌರವಿಸಲಾಗಿದೆ ಎಂದು ತಿಳಿಯುತ್ತದೆ.


ನಂತರ ಆಕೆ ಆ ಪದಕವನ್ನು ತನ್ನ ಕುತ್ತಿಗೆಯಿಂದ ಹೊರತೆಗೆದು ಅರ್ಹ ಹುಡುಗಿಗೆ ಎಂದರೆ ಮೊದಲ ಸ್ಥಾನ ಬಂದ ಹುಡುಗಿಯ ಕೊರಳಿಗೆ ಹಾಕಿ ಆಕೆಯನ್ನು ಅಭಿನಂದಿಸುತ್ತಾಳೆ. ಹುಡುಗಿಯರ ಈ ಸನ್ನೆಗಳಿಂದ, ಈ ಘಟನೆಯು ಕಾರ್ಯಕ್ರಮಕ್ಕೆ ಬಂದ ಅತಿಥಿಗಳನ್ನೆಲ್ಲಾ ನಗುವಿನ ಅಲೆಯಲ್ಲಿ ತೇಲಾಡುವಂತೆ ಮಾಡಿತು.


ಇದನ್ನೂ ಓದಿ: ಸ್ಕೈಡೈವಿಂಗ್‌ ಮಾಡುತ್ತಲೇ ಮೇಕಪ್‌ ಮಾಡಿಕೊಂಡ ಮಹಿಳೆ, ಅಬ್ಬಬ್ಬಾ ಈಕೆಯದ್ದು ಅಂತಿಂಥಾ ಸಾಹಸವಲ್ಲ!


ಸಿಕ್ಕಾಪಟ್ಟೆ ವೈರಲ್ ಆಗಿದೆ ಈ ವಿಡಿಯೋಮೂಲತಃ ಡೆಲಿ ಮಾವಿ ಹಂಚಿಕೊಂಡಿರುವ ಮತ್ತು ಟ್ವಿಟ್ಟರ್ ನಲ್ಲಿ ಫಿಗೆನ್ ಎಂಬುವವರು ಹಂಚಿಕೊಂಡಿರುವ ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಈ ವೀಡಿಯೋವನ್ನು 4,36,000 ಕ್ಕೂ ಅಧಿಕ ಬಾರಿ ವೀಕ್ಷಿಸಲಾಗಿದೆ ಮತ್ತು 8000ಕ್ಕೂ ಹೆಚ್ಚು ಲೈಕ್ ಗಳು ಸಹ ಲಭಿಸಿವೆ.
ಈ ವಿಡಿಯೋ ನೋಡಿದ ಸಾಮಾಜಿಕ ಮಾಧ್ಯಮ ಬಳಕೆದಾರರೊಬ್ಬರು "ಪ್ರಶಸ್ತಿ ನೀಡುವವರ ಹೃದಯ ಗೆದ್ದಿದ್ದು ಯಾರು ಅಂತ ನಮಗೆಲ್ಲರಿಗೂ ತಿಳಿದಿದೆ" ಎಂದು ಕಾಮೆಂಟ್ ಮಾಡಿದರೆ, ಇನ್ನೊಬ್ಬ ಸಾಮಾಜಿಕ ಮಾಧ್ಯಮ ಬಳಕೆದಾರರು "ನಾನು ಇದನ್ನು ನೋಡಿದ ಮೇಲೆ ಏನು ಹೇಳೋದು ಅಂತಾನೆ ತಿಳಿಯುತ್ತಿಲ್ಲ, ಕನಿಷ್ಠ ಆ ಹುಡುಗಿ ಕೆಲವು ಸೆಕೆಂಡುಗಳ ಮಟ್ಟಿಗಾದರೂ ಚಿನ್ನದ ಪದಕವನ್ನು ಧರಿಸಿದ್ದಳಲ್ಲ.


ನಾನು ಅವರೆಲ್ಲರ ಪ್ರತಿಕ್ರಿಯೆಗಳನ್ನು ತುಂಬಾನೇ ಇಷ್ಟಪಡುತ್ತೇನೆ” ಅಂತ ಹೇಳಿದರು. ಮೂರನೇ ಬಳಕೆದಾರರು "ಇಷ್ಟವಾದ ಹುಡುಗಿಗೆ ಮುತ್ತು ನೀಡಲು ಇದು ಒಂದು ನೆಪವಾಗಿತ್ತು" ಎಂದು ಬರೆದಿದ್ದಾರೆ.

First published: