ಪ್ರೀತಿನೇ ಹಾಗೆ ಅದಕ್ಕೆ ಮೇಲು, ಕೀಳಿಲ್ಲ, ಬಡವ – ಶ್ರೀಮಂತ ಎಂಬ ಭೇದ-ಭಾವವಿಲ್ಲ(Boundaries), ಭಾಷೆಯ ಅವಶ್ಯಕತೆ ಇಲ್ಲ, ಗಡಿ- ಪ್ರಾಂತ್ಯಗಳ ಎಲ್ಲೆ ಇಲ್ಲ. ಇದನ್ನೆಲ್ಲಾ ಮೀರಿದ ಭಾವವೇ ಪ್ರೀತಿ. ಪ್ರೀತಿ ನಿಷ್ಕಲ್ಶಷವಾಗಿದ್ದರೆ ಎಂಥ ಕಠಿಣ ಸಂದರ್ಭಗಳು (Circumstances)ಬಂದರೂ ಪ್ರೇಮಿಗಳು ಒಂದಾಗ್ತಾರೆ.ಈಗಂತೂ ಹೆಚ್ಚು ಯುವಕ ಯುವತಿಯರು ಸಾಮಾಜಿಕ ಜಾಲತಾಣದಲ್ಲೇ ತಮ್ಮ ಸಂಗಾತಿಗಳನ್ನು ಆಯ್ಕೆ ಮಾಡಿಕೊಳ್ಳತ್ತಾರೆ. ಈ ಮೊಬೈಲ್ ಎಲ್ಲಿಂದ ಎಲ್ಲಿವರೆಗೂ ಬೇಕಾದರು ಸಹ ಪ್ರತಿಯೊಬ್ಬರನ್ನು ಸಂಪರ್ಕಿಸುತ್ತದೆ. ರಾಜ್ಯ, ದೇಶ, ವಿದೇಶಗಳಲ್ಲಿರುವ ಜನರನ್ನು ಮೊಬೈಲ್ ನಮ್ಮ ಬಳಿ ತಂದು ಸೇರಿಸಿ ಬಿಡುತ್ತದೆ. ಹೀಗೆ ಅನೇಕರು ಬೇರೆ ಬೇರೆ ಪ್ರದೇಶದ ಜನರನ್ನು ಸಾಮಾಜಿಕ ಜಾಲತಾಣಗಳಲ್ಲಿ(Social Networking Sites) ಒಬ್ಬರಿಗೊಬ್ಬರು ಪರಿಚಿತರಾಗಿ, ಅಲ್ಲಿಯೇ ಪ್ರೀತಿಯಾಗಿ ನಂತರ ಮದುವೆಯಾಗುತ್ತಾರೆ.
ಈ ಎಲ್ಲಾ ಪ್ರೇಮ ಪ್ರಕರಣಗಳು ಯಶಸ್ಸು ಹೊಂದುತ್ತವೆ ಅಂತೇನಿಲ್ಲ. ಆದರೆ ಕೆಲವು ಲವ್ ಸ್ಟೋರಿಗಳು(Love Stories) ನಿಜಕ್ಕೂ ಗೆದ್ದು ಬಿಡುತ್ತವೆ.
ಗಡಿ ದಾಟಿದ ಪ್ರೇಮ ಕಥೆ
ಹೀಗೊಂದು ಭಾಷೆ, ದೇಶ, ಗಡಿ ದಾಟಿದ ಪ್ರೇಮ ಪ್ರಕರಣಕ್ಕೊಂದು ಜಯ ಸಿಕ್ಕಿದೆ. ಮಧ್ಯಪ್ರದೇಶದ ಹುಡುಗ ಮತ್ತು ಮೊರೊಕ್ಕೊ ಹುಡುಗಿ ಕೊನೆಗೂ ಒಂದಾಗಿದ್ದಾರೆ. ಧರ್ಮ, ರಾಷ್ಟ್ರಗಳ ಭಿನ್ನತೆಗಳ ಹೊರತಾಗಿಯೂ ಕುಟುಂಬಗಳು ಈ ಮುದ್ದಾದ ಪ್ರೇಮ ಕಥೆಗೆ ಒಪ್ಪಿಗೆ ನೀಡಿ ಮದುವೆ ಮಾಡಿಸಿದ್ದಾರೆ. ಹೇಗಿತ್ತು ಈ ಗಡಿ ದಾಟಿದ ಪ್ರೇಮ ಕಥೆ, ಏನೆಲ್ಲಾ ಅಡಚಣೆಗಳನ್ನು ದಾಟಿ ಮದುವೆಯಾಗಿದ್ದಾರೆ.. ನೀವೇ ನೋಡಿ.
ಮಧ್ಯಪ್ರದೇಶದ ಹುಡುಗ ಅವಿನಾಶ್ ದೋಹ್ರೆ ಮತ್ತು ಮೊರೊಕ್ಕೊ ಹುಡುಗಿ ಫದ್ವಾ ಲೈಲ್ಮಾಲಿ ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾಗಿ, ಪ್ರೀತಿಸಿ ಮದುವೆಯಾಗಿದ್ದಾರೆ. ನವಭಾರತ ಟೈಮ್ಸ್ ವರದಿಯ ಪ್ರಕಾರ ಅವಿನಾಶ್ ದೋಹ್ರೆ ಮತ್ತು ಫದ್ವಾ ಲೈಲ್ಮಾಲಿ ಸಾಮಾಜಿಕ ಜಾಲತಾಣದಲ್ಲಿ ಪರಸ್ಪರ ಪರಿಚಯವಾಗಿ ಸ್ನೇಹ ಬೆಳೆದಿದೆ. ಸ್ನೇಹ ಮುಂದುವರಿದು ಪ್ರೀತಿಯಾಗಿದೆ. ಇಬ್ಬರು ಪರಸ್ಪರ ಪ್ರೀತಿ ಒಪ್ಪಿಕೊಂಡು ಮದುವೆಗೆ ನಿರ್ಧರಿಸಿದ್ದರು.
ಇದನ್ನೂ ಓದಿ: Love & Border: ಪ್ರಿಯಕರನ ಸೇರಲು ಗಡಿದಾಟಿ ಬಂದ ಬಾಂಗ್ಲಾ ಮಹಿಳೆ, ಈಗ ಪೊಲೀಸರ ಅತಿಥಿ
ದೃಢ ಸಂಕಲ್ಪ
ಆದರೆ ಇವರಿಬ್ಬರು ಒಪ್ಪಿಕೊಂಡಷ್ಟು ಸುಲಭವಾಗಿರಲಿಲ್ಲ ಮುಂದಿನ ಹಂತ. ಫದ್ವಾ ಲೈಲ್ಮಾಲಿ ಮೊರೊಕ್ಕೊದವಳು, ಅಧಿಕೃತವಾಗಿ ಮೊರೊಕ್ಕೊ ರಾಜ್ಯ, ಉತ್ತರ ಆಫ್ರಿಕಾದ ಒಂದು ದೇಶ. ಹಾಗಾಗಿ ಅಲ್ಲಿಂದ ಅವಿನಾಶ್ ಆಕೆಯನ್ನು ಸಂಪರ್ಕಿಸುವುದಾಗಲೀ, ನೋಡುವುದಾಗಲಿ ಕಷ್ಟವಾಗಿತ್ತು. ಎಲ್ಲವೂ ಫೋನ್ ಮೂಲಕವೇ ನಡೆಯಬೇಕಿತ್ತು.
ದೇಶದ ಸಮಸ್ಯೆ ಜೊತೆ ಧರ್ಮದ ಸಮಸ್ಯೆಯೂ ಇಬರಿಬ್ಬರ ಪ್ರೀತಿಗೆ ಅಡ್ಡಿಯಾಗಿತ್ತು. ಅವಿನಾಶ್ ದೋಹ್ರೆ ಹಿಂದೂ ಮತ್ತು ಫದ್ವಾ ಲೈಲ್ಮಾಲಿ ಮುಸ್ಲಿಂ ಮಹಿಳೆಯಾಗಿದ್ದಳು. ಇವೆಲ್ಲಾ ಸಮಸ್ಯೆಗಳನ್ನು ಮೀರಿ ನಿಲ್ಲಲು ಇವರಿಬ್ಬರು ಮೊದಲೇ ನಿರ್ಧರಿಸಿದ್ದರು. ಅದೇನೆ ಆಗಲಿ ಮದುವೆಯಾಗಬೇಕೆಂಬ ದೃಢ ಸಂಕಲ್ಪ ಮಾಡಿದ್ದರು. ಹೀಗಾಗಿ ಕೊನೆಗೆ ಇಬ್ಬರೂ ಒಂದಾಗುವಲ್ಲಿ ಸುಖಾಂತ್ಯ ಕಂಡರು.
ಮದುವೆಗೆ ಒಪ್ಪಿಗೆ
ಅವಿನಾಶ್ ಫದ್ವಾ ಲೈಲ್ಮಾಲಿಯನ್ನು ಭೇಟಿ ಮಾಡಲು ಮಧ್ಯಪ್ರದೇಶದಿಂದ ಮೊರೊಕ್ಕೊಗೆ ಎರಡು ಬಾರಿ ಹೋಗಿ ಬಂದಿದ್ದರು. ಮೊರೊಕ್ಕೊಗೆ ಹೋಗಿ ಫದ್ವಾಳ ತಂದೆಯನ್ನು ಭೇಟಿ ಮಾಡಿ ತಮ್ಮ ಪ್ರೀತಿ ವಿಷಯ ಹೇಳಿ ಮನವರಿಕೆ ಮಾಡಿದ್ದ. ಆದರೆ ಫದ್ವಾಳ ತಂದೆ ಇವರಿಬ್ಬರ ಪ್ರೀತಿಗೆ ಒಪ್ಪಿಗೆ ನೀಡಿರಲಿಲ್ಲ. ಫದ್ವಾಳನ್ನು ಮದುವೆಯಾಗಲು ತಂದೆ ಅವಿನಾಶ್ಗೆ ಕೆಲವು ಷರತ್ತುಗಳನ್ನುಹೇಳಿದ್ದಾರೆ. ಈ ಪ್ರಕಾರ ಫದ್ವಾಳನ್ನು ಮದುವೆಯಾಗಲು ಅವಿನಾಶ್ ಮೊರೊಕ್ಕೊದಲ್ಲಿ ನೆಲೆಸುವಂತೆ ಹೇಳಿದರು.
ಇದನ್ನೂ ಓದಿ: ಗಡಿ ಬೇಲಿ ಹಾರಿ ಪಾಕಿಸ್ತಾನ ಪ್ರವೇಶಿಸಿದ್ದ ಹೈದ್ರಾಬಾದ್ ಟೆಕ್ಕಿಗೆ ಕಡೆಗೂ ಸಿಕ್ತು ಬಿಡುಗಡೆ ಭಾಗ್ಯ
ಫದ್ವಾಳನ್ನು ಮದುವೆ ಆಗಲು ಅವಿನಾಶ್ಗೆ ಇಲ್ಲೇ ಇರುವಂತೆ ಮತ್ತು ತಮ್ಮ ಧರ್ಮಕ್ಕೆ ಬರುವಂತೆ ತಿಳಿಸಿದರು. ಆದರೆ ಇದಕ್ಕೆ ಅವಿನಾಶ್ ಒಪ್ಪಲಿಲ್ಲ ಮತ್ತು ಫದ್ವಾಳ ತಂದೆಯಲ್ಲೇ ಮನವೊಲಿಸಿದ. ನಾನು ನಿಮ್ಮ ಮಗಳಿಗೆ ನಮ್ಮ ಧರ್ಮಕ್ಕೆ ಬರುವಂತೆ ಯಾವುದೇ ಬಲವಂತ ಮಾಡುವುದಿಲ್ಲ ಎಂದು ಮಾತು ನೀಡಿ ಫದ್ವಾಳ ತಂದೆಯನ್ನು ಮದುವೆಗೆ ಒಪ್ಪಿಗೆ ನೀಡುವಂತೆ ಒಲಿಸಿದ. ಹೀಗೆ ಎರಡು ಕುಟುಂಬಗಳು ಒಪ್ಪಿ ದೇಶದಾಚೆಗಿನ ಪ್ರೀತಿಯನ್ನು ಗೆಲ್ಲಿಸಿದರು ಸಧ್ಯ ಫದ್ವಾ ಭಾರತದ ಸೊಸೆಯಾಗಿ ಅವಿನಾಶ್ನ ಕೈ ಹಿಡಿದಿದ್ದಾಳೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ