7 ಕೋಟಿ ರೂ. ಪಡೆಯಲು ಮುಖವಾಡ ಹಾಕಿ ಎಂಟ್ರಿ ಕೊಟ್ಟಿದ್ದ!

ಆದರೆ ಈ ರೀತಿಯಾಗಿ ಬಹುಮಾನ ಸ್ವೀಕರಿಸಲು ಕೂಡ ಒಂದು ಕಾರಣವಿದೆ. ಏಕೆಂದರೆ ಜಮೈಕಾ ಸೇರಿದಂತೆ ಹಲವು ಕಡೆ ಲಾಟರಿ ವಿಜೇತರನ್ನು ದರೋಡೆಕೋರರು ಗುರಿಯಾಗಿಸುತ್ತಾರೆ.

zahir | news18
Updated:February 14, 2019, 7:18 PM IST
7 ಕೋಟಿ ರೂ. ಪಡೆಯಲು ಮುಖವಾಡ ಹಾಕಿ ಎಂಟ್ರಿ ಕೊಟ್ಟಿದ್ದ!
@Newshub
  • News18
  • Last Updated: February 14, 2019, 7:18 PM IST
  • Share this:
ಒಂದೇ ರಾತ್ರಿಯಲ್ಲಿ ಕೋಟ್ಯಾಧಿಪತಿಯಾದರೆ ಯಾರಿಗೆ ತಾನೆ ಖುಷಿಯಾಗುವುದಿಲ್ಲ? ಹಾಗೆ ಶ್ರೀಮಂತರಾಗಬೇಕಿದ್ದರೆ, ಲಾಟರಿ ಹೊಡೆಯಲೇಬೇಕು. ಜಮೈಕಾದ ಕ್ಯಾಂಬೆಲ್​ ಎಂಬ ವ್ಯಕ್ತಿಗೂ 1.1 ಮಿಲಿಯನ್​ ಡಾಲರ್ ( ಸುಮಾರು 7 ಕೋಟಿ)​ ಮೊತ್ತದ ಲಾಟರಿ ಹೊಡೆದಿದೆ. ಒಂದೇ ದಿನದಲ್ಲಿ ಅದೃಷ್ಟ ಖುಲಾಯಿಸಿದ ಖುಷಿ ಒಂದೆಡೆಯಾದರೆ, ಅಷ್ಟೊಂದು ಮೊತ್ತವನ್ನು ಹೇಗೆ ಪಡೆಯುದೆಂಬ ಚಿಂತೆ ಮತ್ತೊಂದೆಡೆ.

ಸುಪ್ರೀಂ ವೆಂಚರ್ಸ್​ ಸೂಪರ್ ಲೊಟ್ಟೊ ಲಾಟರಿ ವಿಜೇತ ಕ್ಯಾಂಬೆಲ್ ಅವರ ಫೋಟೋ ಈಗ ಸಖತ್ ವೈರಲ್ ಆಗಿದೆ. ಇದಕ್ಕೆ ಕಾರಣ ಬಹುಮಾನ ಮೊತ್ತವನ್ನು ಸ್ವೀಕರಿಸಲು ಬಂದ ವಿಜೇತನ ಲುಕ್. ಬಹುಮಾನ ಮೊತ್ತದ ಚೆಕ್​ ಪಡೆಯಲು ಬಂದ ಕ್ಯಾಂಬೆಲ್​ ಮುಖ​ ನೋಡಿ ಎಲ್ಲರು ಒಂದು ಕ್ಷಣ ದಂಗಾಗಿದ್ದರು. ಏಕೆಂದರೆ ಕ್ಯಾಂಬೆಲ್ ದೆವ್ವದ ಮುಖವಾಡ ಧರಿಸಿ ಆಗಮಿಸಿದ್ದರು. ತಾನು ಯಾರೆಂಬುದು ತಿಳಿಯದಂತೆ ಚೆಕ್​ ಸ್ವೀಕರಿಸಲು ಅವರು ನಿರ್ಧರಿಸಿದ್ದರು. ಅದರಂತೆ ಮುಖವಾಡ ಧರಿಸಿದ ಲಾಟರಿ ವಿನ್ನರ್​ ಫೋಟೋವನ್ನು ಸುಪ್ರೀಂ ವೆಂಚರ್ಸ್​ ಸಂಸ್ಥೆ ಟ್ವಿಟರ್​ನಲ್ಲಿ ಹಂಚಿಕೊಂಡಿದ್ದರು. ಈ ಫೋಟೋಗೆ ಹಲವು ರೀತಿಯ ಹಾಸ್ಯ ಪ್ರತಿಕ್ರಿಯೆ ವ್ಯಕ್ತವಾಗಿದ್ದವು.

ಆದರೆ ಈ ರೀತಿಯಾಗಿ ಬಹುಮಾನ ಸ್ವೀಕರಿಸಲು ಕೂಡ ಒಂದು ಕಾರಣವಿದೆ. ಏಕೆಂದರೆ ಜಮೈಕಾ ಸೇರಿದಂತೆ ಹಲವು ಕಡೆ ಲಾಟರಿ ವಿಜೇತರನ್ನು ದರೋಡೆಕೋರರು ಗುರಿಯಾಗಿಸುತ್ತಾರೆ. ಇಂತಹ ವ್ಯಕ್ತಿಗೆ ಲಾಟರಿ ಹೊಡೆದಿದೆ ಎಂದು ಗೊತ್ತಾದರೆ ಅವರ ಮೇಲೆ ದಾಳಿ ನಡೆಸಲಾಗುತ್ತದೆ. ಇದರಿಂದ ಬಚಾವಾಗಲು ತಾನು ಈ ಉಪಾಯ ಮಾಡಿರುವುದಾಗಿ ಕ್ಯಾಂಬೆಲ್ ತಿಳಿಸಿದ್ದಾರೆ.

ಇದನ್ನೂ ಓದಿ: ಪಬ್​ಜಿಯಿಂದ ಪ್ರಾರಂಭವಾದ ಆಟ ಈಗ ಪ್ರಣಯದಾಟಕ್ಕೆ ಬಂದು ನಿಂತಿದೆ!

ಕ್ಯಾಂಬೆಲ್​ ಅದೃಷ್ಟದಿಂದ ಸಿಕ್ಕಿರುವ 1.1 ಮಿಲಿಯನ್ ಡಾಲರ್​ನಲ್ಲಿ ಕನಸಿನ ಮನೆಯನ್ನು ಕಟ್ಟಿಕೊಳ್ಳುವ ಬಯಕೆ ಇದೆ. ಹಾಗೆಯೇ ಸಣ್ಣದಾಗಿ ಒಂದು ಉದ್ಯಮವನ್ನು ಪ್ರಾರಂಭಿಸುವುದಾಗಿ ಜಮೈಕಾದ ಹೊಸ ಕೋಟ್ಯಾಧಿಪತಿ ತಿಳಿಸಿದ್ದಾರೆ.


ಇದನ್ನೂ ಓದಿ: LIC ಪಾಲಿಸಿದಾರರ ಗಮನಕ್ಕೆ: ಇನ್ಮುಂದೆ ಖಾತೆಯನ್ನು ಲಿಂಕ್ ಮಾಡುವುದು ಕಡ್ಡಾಯ!
First published:February 14, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ