2020 ರಲ್ಲಿ ಓಹಿಯೋ ನದಿಯಲ್ಲಿ (Ohio river) 3300 ಫೀಟ್ (3300 feet) ಅಡಿಯನ್ನು ಈಜುತ್ತಾ ದಾಟಿ ಬಂದ ನಾಯಿಯನ್ನು ಅಮೆರಿಕಾದ ಪ್ರಾಣಿ ರಕ್ಷಕ ತಂಡವು (Animal rescue from the United States) ರಕ್ಷಿಸಿತ್ತು. ಇದೀಗ ಈ ನಾಯಿಯನ್ನು ದತ್ತು (Adopted) ತೆಗೆದುಕೊಳ್ಳಲಾಗಿದೆ. ಆಲಿ (Allie) ಹೆಸರಿನ ನಾಯಿಯು ತನ್ನ ಹಿಂದಿನ ಮಾಲೀಕನ ಮನೆಯಿಂದ ಡಿಸೆಂಬರ್ 5, 2020 ರಂದು ಓಡಿ ಬಂದಿತ್ತು ಹಾಗೂ ಓಹಿಯೋ ನದಿಯಲ್ಲಿ ಈಜುತ್ತಾ ಬಂದಿತ್ತು. ನಾಯಿಯನ್ನು ನದಿಯಿಂದ ರಕ್ಷಿಸಿದ್ದ ಮಿಶೇಲ್ ಫಿಲಿಪ್ಸ್ (Michelle Philips) ಶ್ವಾನವನ್ನು ದತ್ತು ತೆಗೆದುಕೊಂಡಿದ್ದಾರೆ ಎಂದು ಫಾಕ್ಸ್ ನ್ಯೂಸ್ ವರದಿ ಮಾಡಿದೆ.
ಗಂಟೆಗಳ ಕಾಲ ದಾಟುವ ಪ್ರಯತ್ನ
2020 ರಲ್ಲಿ ಆಲಿ ತನ್ನ ಮಾಲೀಕರ ಮನೆಯಿಂದ ಮೊದಲು ತಪ್ಪಿಸಿಕೊಂಡಾಗ ಓಹಿಯೋ ನದಿಯಲ್ಲಿ ಈಜಲು ಪ್ರಯತ್ನಿಸುತ್ತಾ ಗಂಟೆಗಳ ಕಾಲ ದಾಟುವ ಪ್ರಯತ್ನವನ್ನು ನಡೆಸಿತ್ತು.
ಸ್ಥಳೀಯ ಇವಾನ್ಸ್ವಿಲ್ಲೆ ಪೊಲೀಸ್, ಅಗ್ನಿಶಾಮಕ ಮತ್ತು ಪ್ರಾಣಿ ನಿಯಂತ್ರಣ ಇಲಾಖೆಗಳ ಅಧಿಕಾರಿಗಳು ಆಕೆಯನ್ನು ನದಿಯಿಂದ ಹೊರತೆಗೆಯಲು ಪ್ರಯತ್ನಿಸಿದರೂ ನಾಯಿ ಯಾರನ್ನೂ ತನ್ನ ಹತ್ತಿರಕ್ಕೆ ಬರಲು ಬಿಡಲಿಲ್ಲ ಹಾಗೂ ಬಾರ್ಜ್ಗೆ ಢಿಕ್ಕಿ ಕೂಡ ಹೊಡೆಯಿತು.
ಪರಿಸ್ಥಿತಿ ಭಯಂಕರ
ಆಕೆಯ ಪರಿಸ್ಥಿತಿ ಭಯಂಕರವಾಗಿತ್ತು ಹಾಗೂ ಅನೇಕ ಬಾರಿ ಆಕೆ ಪ್ರವಾಹಕ್ಕೆ ಸಿಲುಕೊಂಡಿರುವುದೂ ಕಂಡುಬಂದಿತ್ತು. ಆದರೆ ಅದೃಷ್ಟವಶಾತ್ ಆಲಿಗೆ ಕೆಂಟುಕಿಯಾದ್ಯಂತ ಈಜಲು ಸಾಧ್ಯವಾಯಿತು. ಅದಾಗ್ಯೂ ಮರದ ಸಹಾಯವನ್ನು ಆಕೆ ಪಡೆದುಕೊಂಡಳು ಮತ್ತು ಒಂದು ವಾರಕ್ಕೂ ಹೆಚ್ಚು ಕಾಲ ಶೋಧ ಕಾರ್ಯಾಚರಣೆ ನಡೆಸಲಾಯಿತು. ರಕ್ಷಕರು ಆಲಿಯ ಹತ್ತಿರ ಬಂದಾಗಲೆಲ್ಲಾ ಆಕೆ ಓಡಿಹೋಗಲು ಪ್ರಯತ್ನಿಸುತ್ತಿದ್ದಳು. ಅದಾಗ್ಯೂ ರಕ್ಷಕರು ಭರವಸೆಯನ್ನು ಕಳೆದುಕೊಳ್ಳಲಿಲ್ಲ ಮತ್ತು ನದಿಯಿಂದ ಅಂತಿಮವಾಗಿ ಪಾರು ಮಾಡಲು ರಕ್ಷಣಾ ತಂಡಕ್ಕೆ ಸಾಧ್ಯವಾಯಿತು. ಈ ಕುರಿತು SWNS ಗೆ ಮಾಹಿತಿ ನೀಡಿದ ಫಿಲಿಪ್ ಆಲಿಯನ್ನು ಮನೆಗೆ ಕರೆತಂದ ತಕ್ಷಣ ಅವಳು ಓಡಿ ಹೋಗಿ ನಮ್ಮ ಮಂಚದ ಮೇಲೆ ಮಲಗಿಕೊಂಡಳು ಎಂದು ತಿಳಿಸಿದ್ದಾರೆ.
ತರಬೇತಿ
ಫಿಲಿಪ್ ಅವರ ಮನೆಯಲ್ಲಿ ಆರಂಭದ ದಿನಗಳಲ್ಲಿ ಆಲಿ ತುಂಬಾ ಹೆದರಿಕೊಳ್ಳುತ್ತಿದ್ದಳು. ತರಬೇತಿ ನೀಡುವ ಸಮಯದಲ್ಲಿ ಕೂಡ ಮನೆಯವರೊಂದಿಗೆ ಬೆರೆತುಕೊಳ್ಳಲು ಹಿಂಜರಿಯುತ್ತಿದ್ದಳು. ಜನರಲ್ಲಿ ಆಕೆ ನಂಬಿಕೆಯನ್ನೇ ಕಳೆದುಕೊಂಡಿದ್ದಳು ಎಂಬುದು ಆಕೆಯ ಭಯ ಹಾಗೂ ಹಿಂಜರಿಕೆಯಿಂದಲೇ ಅರಿಯಬಹುದಾಗಿತ್ತು. ತರಬೇತಿದಾರರು ಸಾವಕಾಶವಾಗಿ ತರಬೇತಿ ನೀಡುವ ಮೂಲಕ ಆಲಿಯಲ್ಲಿ ನಂಬಿಕೆ ತರಲು ಪ್ರಯತ್ನಿಸಿದರು.
ಒಂದು ಕಾಲದಲ್ಲಿ ಜನರೆಂದರೆ ಭಯಪಡುತ್ತಿದ್ದ ಆಲಿ ಇದೀಗ ಜನರಲ್ಲಿ ವಿಶ್ವಾಸ ಪಡೆದುಕೊಂಡಿದೆ. ಹಾಗೂ ಸ್ನೇಹದಿಂದ ವರ್ತಿಸುತ್ತಿದೆ. ಸಂಕೋಲೆಯಿಂದ ನಾವು ಆಕೆಯನ್ನು ಬಂಧಿಸದೇ ಇದ್ದರೂ ಆಕೆ ನಮ್ಮನ್ನು ಬಿಟ್ಟು ಓಡಿಹೋಗುವ ಪ್ರಯತ್ನವನ್ನು ಎಂದಿಗೂ ಮಾಡಲಿಲ್ಲ ಎಂದು ಫಿಲಿಪ್ ತಿಳಿಸಿದ್ದಾರೆ.
ಸಂರಕ್ಷಿಸಿದ ಒಂದು ವರ್ಷದ ನಂತರ
ಆಕೆಯನ್ನು ಯಶಸ್ವಿಯಾಗಿ ಸಂರಕ್ಷಿಸಿದ ಒಂದು ವರ್ಷದ ನಂತರ ತರಬೇತಿಗಾಗಿ ಆಲಿಯನ್ನು ಫಿಲಿಪ್ ಅವರ ಮನೆಯಲ್ಲಿ ಕೆಲವು ತಿಂಗಳ ಕಾಲ ಕಳೆಯಬೇಕಾಯಿತು. ಈ ಸಮಯದಲ್ಲಿ ಆಕೆಯನ್ನು ಔಪಚಾರಿಕವಾಗಿ ಸಾಕುಪ್ರಾಣಿಯಂತೆ ನೋಡಿಕೊಳ್ಳಲಾಯಿತು.
ಹಿಂದಿನ ಮಾಲೀಕರ ಮನೆಯಿಂದ ಆಕೆ ಯಾವ ಕಾರಣಕ್ಕಾಗಿ ಓಡಿಬಂದಳು ಎಂಬುದು ತಿಳಿಯದೇ ಇದ್ದರೂ ನಾಯಿಯ ಭಯ ಹಾಗೂ ಹಿಂಜರಿಕೆಯನ್ನು ಗಮನಿಸಿದಾಗ ಅದು ಅಪಾಯದಲ್ಲಿತ್ತು ಎಂಬುದು ಮನವರಿಕೆಯಾಗುತ್ತದೆ ಎಂದು ಫಿಲಿಪ್ ತಿಳಿಸಿದ್ದಾರೆ.
Published by:vanithasanjevani vanithasanjevani
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ