• ಹೋಂ
  • »
  • ನ್ಯೂಸ್
  • »
  • ಟ್ರೆಂಡ್
  • »
  • Viral News: 375 ವರ್ಷಗಳಿಂದ ಕಾಣೆಯಾಗಿದ್ದ ಖಂಡ ಕೊನೆಗೂ ಪತ್ತೆಯಾಯ್ತು! ಇದು ವಿಜ್ಞಾನಿಗಳ ಸಂಶೋಧನೆ

Viral News: 375 ವರ್ಷಗಳಿಂದ ಕಾಣೆಯಾಗಿದ್ದ ಖಂಡ ಕೊನೆಗೂ ಪತ್ತೆಯಾಯ್ತು! ಇದು ವಿಜ್ಞಾನಿಗಳ ಸಂಶೋಧನೆ

ವೈರಲ್​

ವೈರಲ್​

ನೀಡಿ ನಡಿಯಲ್ಲಿ ಮರೆಯಾದ ಖಂಡದ 94% ಕ್ಕಿಂತ ಹೆಚ್ಚಿನ ಭೂಪ್ರದೇಶ ಸರಿಸುಮಾರು 1.89 ಮಿಲಿಯನ್ ಚದರ ಮೈಲುಗಳಷ್ಟು ಗಾತ್ರದ ಈ ಖಂಡವು ಒಮ್ಮೆ ಗೊಂಡ್ವಾನಾ ಎಂಬ ಪ್ರಾಚೀನ ಸೂಪರ್ ಖಂಡದ ಭಾಗವಾಗಿತ್ತು, ಇದು 500 ಮಿಲಿಯನ್ ವರ್ಷಗಳ ಹಿಂದೆ ಪಶ್ಚಿಮ ಅಂಟಾರ್ಕ್ಟಿಕಾ ಮತ್ತು ಪೂರ್ವ ಆಸ್ಟ್ರೇಲಿಯಾವನ್ನು ಒಳಗೊಂಡಿತ್ತು.

ಮುಂದೆ ಓದಿ ...
  • Share this:
  • published by :

ಈ ಪ್ರಪಂಚ ತನ್ನಲ್ಲಿ ಅದೆಷ್ಟೋ ಕೌತುಕಗಳನ್ನು ಮುಚ್ಚಿಟ್ಟಿದೆ. ಒಂದೊಂದೇ ಅನ್ವೇಷಣೆಗಳು ಹಾಗೂ ಸಂಶೋಧನೆಗಳು ನಡೆದಂತೆ ಈ ವಿಸ್ಮಯ ಹೊರಜಗತ್ತಿಗೆ ಬಹಿರಂಗಗೊಳ್ಳುತ್ತದೆ. ಇದೀಗ ಬರೋಬ್ಬರಿ 375 ವರ್ಷಗಳ ಪರಿಶೋಧನೆ ಹಾಗೂ ಸಂಶೋಧನೆಗಳ ನಂತರ ವಿಜ್ಞಾನಿಗಳು (Scientist) ಅಂತಿಮವಾಗಿ ಮಾವೊರಿ ಭಾಷೆಯಲ್ಲಿ ಕರೆಯಲಾದ ಝೀಲ್ಯಾಂಡಿಯಾ ಅಥವಾ ಟೆ ರಿಯು-ಎ-ಮೌಯಿ ಹೆಸರಿನ ಕಾಣೆಯಾಗಿತ್ತು ಎಂದು ಹೇಳಲಾದ ಖಂಡ ಅಸ್ತಿತ್ವದಲ್ಲಿದೆ ಎಂಬ ಆಘಾತಕಾರಿ ವಿಸ್ಮಯವನ್ನು ತಿಳಿಸಿದ್ದಾರೆ. ನೀಡಿ ನಡಿಯಲ್ಲಿ ಮರೆಯಾದ ಖಂಡದ 94% ಕ್ಕಿಂತ ಹೆಚ್ಚಿನ ಭೂಪ್ರದೇಶ ಸರಿಸುಮಾರು 1.89 ಮಿಲಿಯನ್ (Million) ಚದರ ಮೈಲುಗಳಷ್ಟು ಗಾತ್ರದ ಈ ಖಂಡವು ಒಮ್ಮೆ ಗೊಂಡ್ವಾನಾ (Gondwana) ಎಂಬ ಪ್ರಾಚೀನ ಸೂಪರ್ ಖಂಡದ ಭಾಗವಾಗಿತ್ತು, ಇದು 500 ಮಿಲಿಯನ್ ವರ್ಷಗಳ ಹಿಂದೆ ಪಶ್ಚಿಮ ಅಂಟಾರ್ಕ್ಟಿಕಾ ಮತ್ತು ಪೂರ್ವ ಆಸ್ಟ್ರೇಲಿಯಾವನ್ನು ಒಳಗೊಂಡಿತ್ತು.


ಆದರೆ 105 ಮಿಲಿಯನ್ ವರ್ಷಗಳ ಹಿಂದೆ ಭೂವಿಜ್ಞಾನಿಗಳು ಈ ಖಂಡದ ಬಗ್ಗೆ ಹೆಚ್ಚು ಹೆಚ್ಚು ಪರಿಶೋಧನೆ ನಡೆಸಿದಂತೆ ಅದು ಇನ್ನಷ್ಟು ವಿಸ್ಮಯಗಳ ಗೂಡಾಗಿ ಪರಿವರ್ತನೆಗೊಂಡಿತು. ಈ ಖಂಡವು ಗೊಂಡ್ವಾನಾದಿಂದ ದೂರಸರಿದಂತೆ ಕ್ರಮೇಣ ಅಲೆಗಳಲ್ಲಿ ಮುಳುಗಿ ಹೋಗಿ ಖಂಡದ 94% ಕ್ಕಿಂತ ಹೆಚ್ಚಿನ ಭೂಪ್ರದೇಶ ಸಹಸ್ರಮಾನಗಳವರೆಗೆ ನೀಡಿನಡಿಯಲ್ಲಿ ಮರೆಯಾಯಿತು.


ಹೊಸ ಖಂಡದ ಉಗಮದ ಅಂಗೀಕಾರಕ್ಕೆ 400 ವರ್ಷಗಳು ಬೇಕಾಯಿತು


ಝೀಲ್ಯಾಂಡಿಯಾ ಅಸ್ತಿತ್ವವನ್ನು ಮೊದಲು 1642 ರಲ್ಲಿ ಡಚ್ ಉದ್ಯಮಿ ಮತ್ತು ನಾವಿಕ ಅಬೆಲ್ ಟ್ಯಾಸ್ಮನ್ ಕಂಡುಹಿಡಿದರು. ಆತ ದಕ್ಷಿಣ ಖಂಡ ಅಥವಾ ಟೆರ್ರಾ ಆಸ್ಟ್ರೇಲಿಸ್ ಅನ್ನು ಕಂಡುಹಿಡಿಯುವ ಕಾರ್ಯಾಚರಣೆಯಲ್ಲಿದ್ದಾಗ ಈ ಖಂಡ ಅವರ ಗಮನಸೆಳೆಯಿತು.


ನ್ಯೂಜಿಲೆಂಡ್‌ನ ದಕ್ಷಿಣ ದ್ವೀಪದಲ್ಲಿ ಝೀಲ್ಯಾಂಡಿಯಾ ಖಂಡದ ಅಸ್ತಿತ್ವ ಅವರಿಗೆ ದೊರೆಯಿತು. ಆದರೆ ಈ ಹೊಸ ಖಂಡದ ಉಗಮವನ್ನು ವಿಜ್ಞಾನಿಗಳು ಒಪ್ಪಿಕೊಳ್ಳಲು 400 ವರ್ಷಗಳ ಸಮಯ ಬೇಕಾಯಿತು.


ಇದನ್ನೂ ಓದಿ: ಈ ಊರಲ್ಲಿ ಮಕ್ಕಳು ಬೆಳ್ಳಗೆ ಹುಟ್ಟಿದ್ರೆ ಕೊಲ್ತಾರೆ, ಕಪ್ಪಾಗಿದ್ರೆ ಬದುಕ್ತಾರೆ! ಈ ವಿಚಿತ್ರ ಆಚರಣೆ ಭಾರತದಲ್ಲೇ ಇದೆ!


2017 ರಲ್ಲಿ, ಜಿಎನ್‌ಎಸ್ ಭೂವಿಜ್ಞಾನಿಗಳು ಅಂತಿಮವಾಗಿ ಝೀಲ್ಯಾಂಡಿಯಾ ಅಸ್ತಿತ್ವವನ್ನು ದೃಢಪಡಿಸಿದರು. ಈ ಹೊಸ ಖಂಡದ ಬಹುಪಾಲು ಅಂದರೆ 6,560 ಅಡಿ (2km) ನೀರಿನೊಳಗೆ ಇದೆ.


ಇನ್ನು ಕೆಲವು ತೊಡಕಿದೆ


ಝೀಲ್ಯಾಂಡಿಯಾ ಕ್ರೌನ್ ರಿಸರ್ಚ್ ಇನ್‌ಸ್ಟಿಟ್ಯೂಟ್ ಜಿಎನ್‌ಎಸ್ ಸೈನ್ಸ್‌ನ ಭೂವಿಜ್ಞಾನಿಗಳಲ್ಲಿ ಒಬ್ಬರಾದ ಆಂಡಿ ಟುಲೋಚ್ ಅವರ ಪ್ರಕಾರ ಝೀಲ್ಯಾಂಡ್‌ನ ಆವಿಷ್ಕಾರವು ಬಹಳ ಸ್ಪಷ್ಟವಾದ ಸಂಗತಿಯನ್ನು ಬಹಿರಂಗಪಡಿಸಲು ಸ್ವಲ್ಪ ಸಮಯ ತೆಗೆದುಕೊಳ್ಳಬಹುದು ಎಂಬುದಕ್ಕೆ ಒಂದು ಉದಾಹರಣೆಯಾಗಿದೆ ಎಂದು ತಿಳಿಸಿದ್ದು ಗೊಂಡ್ವಾನಾದಿಂದ ಝಿಲ್ಯಾಂಡಿಯಾವನ್ನು ಬೇರ್ಪಡಿಸುವುದು ವಿಜ್ಞಾನಿಗಳಿಗೆ ಇನ್ನೂ ಸಂಪೂರ್ಣವಾಗಿ ಅರ್ಥವಾಗದ ಪ್ರಕ್ರಿಯೆಯಾಗಿದೆ ಎಂದು ಟುಲೋಚ್ ವಿವರಿಸಿದ್ದಾರೆ.


ಎಂಟನೆ ಖಂಡವಾಗಿ ಝೀಲ್ಯಾಂಡಿಯಾಗೆ ಮನ್ನಣೆ


ಝೀಲ್ಯಾಂಡಿಯಾ ಈಗ ವಿಶ್ವದ ಎಂಟನೇ ಖಂಡವೆಂದು ಗುರುತಿಸಲ್ಪಟ್ಟಿದೆ, ಆದರೆ ಅದರ ವಿಶಿಷ್ಟ ಗುಣಲಕ್ಷಣಗಳು ಅದನ್ನು ಗ್ರಹದ ಇತರ ಖಂಡಗಳಿಂದ ಎದ್ದು ಕಾಣುವಂತೆ ಮಾಡುತ್ತದೆ.


ಇದನ್ನೂ ಓದಿ: ವಿಶ್ವದ ಅತ್ಯಂತ ಹಳೆಯ ಮುತ್ತಿನ ನಗರ ಪತ್ತೆ! ಸಖತ್​ ಇಂಟ್ರೆಸ್ಟಿಂಗ್​ ಸುದ್ಧಿ


ಅಧ್ಯಯನದ ನೇತೃತ್ವ ವಹಿಸಿರುವ ಭೂವಿಜ್ಞಾನಿ ನಿಕ್ ಮಾರ್ಟಿಮರ್, ಪ್ರತಿ ಇತರ ಖಂಡವು ಅನೇಕ ದೇಶಗಳಿಗೆ ನೆಲೆಯಾಗಿದೆ ಎಂದು ಗಮನಿಸಿದರೆ, ಝೀಲ್ಯಾಂಡಿಯಾವು ಕೇವಲ ಮೂರು ಪ್ರದೇಶಗಳನ್ನು ಹೊಂದಿದೆ.


ಅದರ ನೀರೊಳಗಿನ ಸ್ಥಳದ ಹೊರತಾಗಿಯೂ, ಝೀಲ್ಯಾಂಡಿಯಾ ಭೂಮಿಯ ಭೌಗೋಳಿಕ ಇತಿಹಾಸ ಮತ್ತು ನಾವು ಇಂದು ತಿಳಿದಿರುವಂತೆ ಗ್ರಹವನ್ನು ರೂಪಿಸಿದ ಅಂಶಗಳ ಮೇಲೆ ಬೆಳಕು ಚೆಲ್ಲುವ ಪ್ರಮುಖ ಆವಿಷ್ಕಾರ ಎಂದೆನಿಸಿದೆ.




ವಿಶ್ವದ ಚಿಕ್ಕ ಖಂಡ


ಪ್ರಪಂಚದ ವಿಶ್ವಕೋಶಗಳು, ನಕ್ಷೆಗಳು ಮತ್ತು ಸರ್ಚ್ ಇಂಜಿನ್‌ಗಳು ಕೆಲವು ಸಮಯದಿಂದ ಕೇವಲ ಏಳು ಖಂಡಗಳು ಎಂದು ದೃಢವಾಗಿ ಹೇಳುತ್ತಿದ್ದರೂ, ಈ ತಂಡದ ಆವಿಷ್ಕಾರವು ಅವರ ಹೇಳಿಕೆಗಳನ್ನು ಸುಳ್ಳಾಗಿಸಿದೆ ಎಂಬುದನ್ನು ವಿಶ್ವಕ್ಕೆ ಖಾತ್ರಿಯಿಂದ ತಿಳಿಸಿದೆ.

top videos


    ಏಳು ಖಂಡಗಳು ಎಂಬ ಹೇಳಿಕೆಯನ್ನು ಹೊಸ ಖಂಡ ಮುರಿದಿದ್ದು, ವಿಶ್ವದ ಅತ್ಯಂತ ಕಿರಿಯ ಖಂಡ ಎಂಬ ಹೆಗ್ಗಳಿಕೆಗೆ ಝೀಲ್ಯಾಂಡಿಯಾವು ಪಾತ್ರವಾಗಿದೆ.

    First published: