• Home
  • »
  • News
  • »
  • trend
  • »
  • Notice To Hanuman: ಜಾಗ ಒತ್ತುವರಿ ಮಾಡ್ಕೊಂಡಿದ್ದಾನಂತೆ ಆಂಜನೇಯ! 10 ದಿನಗಳೊಳಗೆ ಖಾಲಿ ಮಾಡುವಂತೆ ನೋಟಿಸ್!

Notice To Hanuman: ಜಾಗ ಒತ್ತುವರಿ ಮಾಡ್ಕೊಂಡಿದ್ದಾನಂತೆ ಆಂಜನೇಯ! 10 ದಿನಗಳೊಳಗೆ ಖಾಲಿ ಮಾಡುವಂತೆ ನೋಟಿಸ್!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ನೀವು 2012ರಲ್ಲಿ ಬಾಲಿವುಡ್‌ನಲ್ಲಿ ತೆರೆ ಕಂಡ ‘ಓಹ್ ಮೈ ಗಾಡ್’ ಎನ್ನುವ ಸಿನಿಮಾವನ್ನು ನೋಡಿರಬಹುದು. ಪರೇಶ್ ರಾವಲ್ ಮತ್ತು ಅಕ್ಷಯ್ ಕುಮಾರ್ ನಟಿಸಿದ ಹಾಸ್ಯ ಮಿಶ್ರಿತ ಸಿನಿಮಾದಲ್ಲಿ ದೇವರನ್ನೂ ಕೋರ್ಟ್‌ಗೆ ಎಳೆತರಲಾಗುತ್ತದೆ! ಇಂಥದ್ದೇ ಘಟನೆ ನಿಜ ಜೀವನದಲ್ಲೂ ನಡೆದಿದೆ. ಇಲ್ಲಿ ದೇವರನ್ನು ಇನ್ನೂ ಕೋರ್ಟ್‌ಗೆ ಎಳೆದು ತಂದಿಲ್ಲ, ಬದಲಾಗಿ ದೇವರಿಗೇ ನೋಟಿಸ್ ನೀಡಲಾಗಿದೆ!

ಮುಂದೆ ಓದಿ ...
  • Share this:

ರಾಂಚಿ, ಜಾರ್ಖಂಡ್: ಹನುಮಂತನಿಗೆ (Hanuman) ಹಿಂದೂ ಧರ್ಮದಲ್ಲಿ (Hindu Religion) ಪ್ರಮುಖವಾದ ಸ್ಥಾನವಿದೆ. ರಾಮಾಯಣದ ನಾಯಕ (Hero of Ramayan) ರಾಮನಾದರೂ (Sri Rama), ರಾವಣನ ಸೋಲಿಗೆ, ಸೀತೆ (Sitha) ಮರಳಿ ರಾಮನನ್ನು ಸೇರುವುದಕ್ಕೆ ರಾಮನ ಭಂಟ ಹನುಮಂತನೂ ಪ್ರಮುಖ ಕಾರಣ. ಹನುಮಂತ ನಂಬಿದ ಭಕ್ತರ (Devotees) ಕೈಬಿಡುವುದಿಲ್ಲ, ಸಂಕಷ್ಟದ ಸಮಯದಲ್ಲಿ ಭಕ್ತರನ್ನು ಕಾಪಾಡುತ್ತಾನೆ ಎನ್ನುವುದು ನಂಬಿಕೆ. ಆದರೀಗ ಭಕ್ತವತ್ಸಲ ಆಂಜನೇಯನಿಗೇ ಸಂಕಷ್ಟ ಎದುರಾಗಿದೆ! ನೀವು 2012ರಲ್ಲಿ ಬಾಲಿವುಡ್‌ನಲ್ಲಿ ತೆರೆ ಕಂಡ ‘ಓಹ್ ಮೈ ಗಾಡ್’ (OMG: Oh My God) ಎನ್ನುವ ಸಿನಿಮಾವನ್ನು (Cinema) ನೋಡಿರಬಹುದು. ಪರೇಶ್ ರಾವಲ್ (Paresh Rawal) ಮತ್ತು ಅಕ್ಷಯ್ ಕುಮಾರ್ (Akshay Kumar) ನಟಿಸಿದ ಹಾಸ್ಯ ಮಿಶ್ರಿತ ಸಿನಿಮಾದಲ್ಲಿ ದೇವರನ್ನೂ ಕೋರ್ಟ್‌ಗೆ (Court) ಎಳೆತರಲಾಗುತ್ತದೆ! ಇಂಥದ್ದೇ ಘಟನೆ ನಿಜ ಜೀವನದಲ್ಲೂ (Real Life) ನಡೆದಿದೆ. ಇಲ್ಲಿ ದೇವರನ್ನು ಇನ್ನೂ ಕೋರ್ಟ್‌ಗೆ ಎಳೆದು ತಂದಿಲ್ಲ, ಬದಲಾಗಿ ದೇವರಿಗೇ ನೋಟಿಸ್ ನೀಡಲಾಗಿದೆ!


ಹನುಮಂತನಿಗೆ ನೋಟಿಸ್!


ಜಾರ್ಖಂಡ್ ರಾಜ್ಯದ ರಾಂಚಿಯಲ್ಲಿ ಹನುಮಂತ ದೇವರಿಗೆ ನೋಟಿಸ್ ನೀಡಿದ್ದು, ಮೊಕದ್ದಮೆಯನ್ನೂ ಹೂಡಲಾಗಿದೆ. ಧನ್‌ಬಾದ್ ರೈಲು ವಿಭಾಗದ ಸಹಾಯಕ ಇಂಜಿನಿಯರ್ ಆನಂದ್ ಕುಮಾರ್ ಪಾಂಡೆ ಅವರು ಹನುಮಂತ ದೇವರಿಗೆ ನೋಟಿಸ್ ನೀಡಿದ್ದಾರೆ.


ರೈಲ್ವೆ ಇಲಾಖೆ ಜಾಗ ಒತ್ತುವರಿ ಮಾಡಿಕೊಂಡಿದ್ದಾನಂತೆ ಆಂಜನೇಯ!


ರೈಲ್ವೆ ಇಲಾಖೆಗೆ ಸೇರಿರುವ ಬೇಕರ್ ಬಂದ್ ಜಾಗದಲ್ಲಿ ಹನುಮಂತ ಠಿಕಾಣಿ ಹೂಡಿದ್ದಾನಂತೆ! ಹೀಗಾಗಿ ಆ ಜಾಗವನ್ನು ವಾಪಸ್ ರೈಲ್ವೆ ಇಲಾಖೆಗೆ ಬಿಟ್ಟು ಕೊಡುವಂತೆ ಹನುಮಂತನಿಗೆ ಸೂಚಿಸಲಾಗಿದೆ.


ಇದನ್ನೂ ಓದಿ: Weirdest Law: ಹಸು ಸೆಗಣಿ ಹಾಕಿದ್ರೂ ಕೊಡಬೇಕು ಟ್ಯಾಕ್ಸ್! ವಿಚಿತ್ರ ಕಾನೂನಿನಿಂದ ರೈತರು ಕಂಗಾಲು


10 ದಿನಗಳ ಒಳಗೆ ಜಾಗ ಖಾಲಿ ಮಾಡುವಂತೆ ಸೂಚನೆ!


10 ದಿನಗಳಲ್ಲಿ ರೈಲ್ವೆ ಇಲಾಖೆಗೆ ಸೇರಿದ ಜಾಗವನ್ನು ಆಂಜನೇಯ ಖಾಲಿ ಮಾಡಬೇಕಂತೆ. ಅಂದರೆ ಆಂಜನೇಯನ ದೇವಾಲಯವನ್ನು ತೆಗೆದುಹಾಕದಿದ್ದರೆ ಅಧಿಕೃತ ಚಲನೆಯ ಎಚ್ಚರಿಕೆ ನೀಡಲಾಗಿದೆ. ದೇಗುಲದ ಗೋಡೆಗಳ ಮೇಲೆ ನೋಟಿಸ್ ಅಂಟಿಸಲಾಗಿದ್ದು, ಖಡಕ್ ಸೂಚನೆ ನೀಡಲಾಗಿದೆ.


ಆಂಜನೇಯನಿಗೆ ನೀಡಿದ ನೋಟಿಸ್‌ನಲ್ಲಿ ಏನಿದೆ?


ರೈಲ್ವೆ ಹೊರಡಿಸಿರುವ ನೋಟಿಸ್‌ನಲ್ಲಿ ‘ಹನುಮಾನ್ ಜೀ’ ಎಂದು ಸ್ಪಷ್ಟವಾಗಿ ಬರೆದಿರುವುದನ್ನು ಕಾಣಬಹುದು. 'ರೈಲ್ವೆ ಜಮೀನಿನಲ್ಲಿ ನಿಮ್ಮ ದೇವಸ್ಥಾನ ಕಟ್ಟಿದ್ದೀರಿ. ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿರುವುದರಿಂದ ತೆರವು ಮಾಡಬೇಕು’ ಎಂದು ನೋಟಿಸ್ ನಲ್ಲಿ ತಿಳಿಸಲಾಗಿದೆ. ಈ ನೋಟಿಸ್ ಬಂದ 10 ದಿನದೊಳಗೆ ಆಂಜನೇಯಸ್ವಾಮಿ ದೇವಸ್ಥಾನವನ್ನು ತೆರವು ಮಾಡಿ ಹಿರಿಯ ಸೆಕ್ಷನ್ ಇಂಜಿನಿಯರ್ ಗೆ ಒಪ್ಪಿಸಿ ಇಲ್ಲವಾದಲ್ಲಿ ನಿಮ್ಮ ವಿರುದ್ಧ ಕಾನೂನು ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದರು. ಈ ದೇವಾಲಯವನ್ನು 1931 ರಲ್ಲಿ ನಿರ್ಮಿಸಲಾಗಿದೆ ಎಂದು ಸ್ಥಳೀಯರು ಹೇಳುತ್ತಾರೆ.


ಸ್ಥಳೀಯರಿಂದ ಪ್ರತಿಭಟನೆ


ರೈಲ್ವೆ ಇಲಾಖೆ ಅದಿಕಾರಿ ಪಾಂಡೆ ಅವರು ದೇವಾಲಯದಾದ್ಯಂತ ತಾತ್ಕಾಲಿಕ ವಸತಿಗೃಹದಲ್ಲಿ ವಾಸಿಸುವ 27 ವಿವಿಧ ಕುಟುಂಬಗಳಿಗೆ ಒತ್ತುವರಿ ತೆರವು ನೋಟಿಸ್ ಜಾರಿಗೊಳಿಸಿದ್ದಾರೆ. ಆದರೆ ಹನುಮಂತನಿಗೂ ನೋಟಿಸ್ ಕೊಟ್ಟಿರೋದಕ್ಕೆ ಸ್ಥಳೀಯರು ವಿರೋಧಿಸಿ, ಪ್ರತಿಭಟನೆ ನಡೆಸಿದ್ದಾರೆ.


ಇದನ್ನೂ ಓದಿ: Karva Chauth Viral Video: ಪ್ರೇಯಸಿ ಜೊತೆ ಕರ್ವಾ ಚೌತ್ ಶಾಪಿಂಗ್, ಬೀದಿಯಲ್ಲೇ ಗಂಡನ ಗ್ರಹಚಾರ ಬಿಡಿಸಿದ ಪತ್ನಿ! ವೈರಲ್ ವಿಡಿಯೋ ಇಲ್ಲಿದೆ ನೋಡಿ


ಇದು ಉದ್ದೇಶಪೂರ್ವಕವಾಗಿ ಆಗಿದ್ದಲ್ಲ ಎಂದ ಅಧಿಕಾರಿಗಳು


"ಇದು ತಪ್ಪಿನಿಂದಾಗಿ ಆಗಿದೆ ಅಂತ ರೈಲ್ವೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ರೈಲ್ವೆ ಇಲಾಖೆಗೆ ಜನರ ಭಾವನೆಗಳಿಗೆ ಧಕ್ಕೆ ತರುವ ಉದ್ದೇಶ ಇರಲಿಲ್ಲ. ನಾವು ಭೂಮಿಯನ್ನು ಅತಿಕ್ರಮಣದಾರರಿಂದ ತೆರವು ಮಾಡಲು ಮಾತ್ರ ಪ್ರಯತ್ನಿಸುತ್ತಿದ್ದೇವೆ. ಈ ವೇಳೆ ದೇವಸ್ಥಾನಕ್ಕೂ ಸಿಬ್ಬಂದಿ ನೋಟಿಸ್ ಅಂಟಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Published by:Annappa Achari
First published: