ದೂರದ ಊರುಗಳಿಗೆ, ರಾಜ್ಯಗಳಿಗೆ ಸುಲಭವಾಗಿ, ಬಜೆಟ್ ಸ್ನೇಹಿಯಾಗಿ ಹೋಗಬಹುದಾದ ಒಂದು ಸಾರಿಗೆ ವ್ಯವಸ್ಥೆ ಅಂದರೆ ಅದು ರೈಲು. ರೈಲು (Rail) ಎಲ್ಲರಿಗೂ ಇಷ್ಟವಾಗುವ ಒಂದು ಪ್ರಯಾಣ. ರೈಲು ಯಾವಾಗಲೂ ಬೇಡಿಕೆಯಲ್ಲಿರುವಂತಹ ಸಾರಿಗೆ ವ್ಯವಸ್ಥೆ. ಇದೇ ದೃಷ್ಟಿಯಿಂದ ದೇಶದಲ್ಲಿ ರೈಲ್ವೇ ಇಲಾಖೆಯ ಸರ್ವತೋಮುಖ ಬೆಳವಣಿಗೆಗೆ ಇಲಾಖೆ ಸೇರಿ ಸರ್ಕಾರ ಟೊಂಕ ಕಟ್ಟಿ ನಿಂತಿದೆ. ಹೊಸ ಹೊಸ ಕಾರ್ಯಕ್ರಮಗಳು, ಸೌಲಭ್ಯಗಳು, ನವೀಕರಣ, ಹೈಟೆಕ್ ಪ್ರಯಾಣ ಒದಗಿಸುವ ನಿಟ್ಟಿನಲ್ಲಿ ರೈಲ್ವೆ ಇಲಾಖೆ ಕಳೆದೊಂದಿಷ್ಟು ವರ್ಷಗಳಿಂದ ಹೆಚ್ಚಿನ ರೀತಿಯಲ್ಲಿ ಅಭಿವೃದ್ಧಿ ಹೊಂದುತ್ತಿದೆ. ಭಾರತದ (India) ರೈಲ್ವೇ, ಪ್ರಪಚದಾದ್ಯಂತ ಒಂದು ವಿಶೇಷವಾಗಿರುವ ವಲಯ. ಕಣಿವೆ, ದಟ್ಟ ಅರಣ್ಯ, ನದಿಗಳ ಮೇಲೆ ಹೋಗುವ ರೈಲು ಹಳಿಯಿಂದ ಹಿಡಿದು ಅದ್ಭುತವಾಗಿರುವ ರೈಲು ನಿಲ್ದಾಣದವರೆಗೂ ಹಲವು ವಿಶೇಷತೆಗಳನ್ನು ಹೊಂದಿದೆ.
ಅದರಲ್ಲೂ ಕೆಲ ನಿಲ್ದಾಣಗಳು ಊಹೆಗೂ ಮೀರಿದಂತಿವೆ. ಕೆಲ ರೈಲುಗಳ ಸೀಟು ಇದು ಫ್ಲೈಟ್ ಪಕ್ಕದ ಆಸನವೋ ಅಥವಾ ರೈಲ್ವೇ ಆಸನವೋ ಎನ್ನವಷ್ಟು ಲಕ್ಸುರಿಯಾಗಿವೆ.
ಇಂತಹ ಹಲವು ರೈಲ್ವೆ ಸ್ಟೇಷನ್ ಆಗಿರಬಹುದು, ಮಾರ್ಗಗಳಾಗಿರಬಹುದು, ರೈಲುಗಳಾಗಿರಬಹುದು ಭಾರತದಲ್ಲಿವೆ. ಅಷ್ಟೇ ಅಲ್ಲದೇ ಕೆಲ ರೈಲ್ವೇ ನಿಲ್ದಾಣದ ಒಳಗೆ ಯಾರೂ ಊಹಿಸಲಾಗದ ಪ್ರಯಾಣಿಕರಿಗೆ ಅನುಕೂಲವಾಗುವ ವ್ಯವಸ್ಥೆ ಕೂಡ ಇದೆ.
ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಪೋಸ್ಟ್ ವೈರಲ್
ಇತ್ತೀಚೆಗೆ ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರು ಹಂಚಿಕೊಂಡಿರುವ ಕೆಲ ಫೋಟೋಗಳನ್ನು ನೋಡಿದರೆ ಖಂಡಿತ ನೀವು ಈ ಮಾತನ್ನು ಒಪ್ಕೋತೀರಾ.
ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಇತ್ತೀಚೆಗೆ ಟ್ವಿಟರ್‌ನಲ್ಲಿ ಒಂದು ಪೋಸ್ಟ್ ಹಂಚಿಕೊಂಡಿದ್ದರು. ಆ ಫೋಟೋ ನೋಡಿದರೆ ನಿಮಗೆ ಅದು ರೈಲ್ವೇ ನಿಲ್ದಾಣ ಅಂತಾ ಕೊಂಚವೂ ಅನ್ನಿಸೋದೇ ಇಲ್ಲ. ಏಕೆಂದರೆ ಈ ಮಾರ್ಡನ್ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಅನುಕೂಲವಾಗವ ಕೆಫೆ ಇದೆ.
Guess this place⁉️
Hint: At a railway station. pic.twitter.com/fpjKcskT0c
— Ashwini Vaishnaw (@AshwiniVaishnaw) March 1, 2023
ನಂತರ ಸಚಿವರು ತಮ್ಮ ಅನುಯಾಯಿಗಳಿಗೆ ಈ ಸ್ಥಳ ಯಾವುದು ಎಂದು ಕಂಡುಹಿಡಿಯಲು ಹೇಳಿದ್ದಲ್ಲದೇ ಇದು ರೈಲ್ವೆ ನಿಲ್ದಾಣದ ಒಳಗೆ ಇರುವ ಸ್ಥಳ ಅಂತಾ ಸುಳಿವು ಸಹ ನೀಡಿದ್ದಾರೆ.
ಇದನ್ನೂ ಓದಿ: ಸಾವಿನಲ್ಲೂ ಸಾರ್ಥಕತೆ ಮೆರೆದ ಮೈಸೂರಿನ ಹುಡುಗ, ಅಂಗಾಗ ದಾನದ ಮೂಲಕ ಐವರ ಬಾಳಿಗೆ ಬೆಳಕು!
ರೈಲ್ವೆ ಸಚಿವರು ಹಂಚಿಕೊಂಡ ಫೋಟೋದಲ್ಲಿ ಮೆಟ್ಟಿಲುಗಳು ಮತ್ತು ಕಾಫಿಗಳು, ಚಹಾಗಳು ಮತ್ತು ಮಾಕ್‌ಟೇಲ್‌ಗಳನ್ನು ನೀಡುವ ಮಾರಾಟ ಕೌಂಟರ್‌ಗಳನ್ನು ನೋಡಬಹುದು.
ಹಲವು ಟ್ವಿಟರ್ ಬಳಕೆದಾರರು ಅಶ್ವಿನಿ ವೈಷ್ಣವ್ ಅವರ ಪೋಸ್ಟ್‌ಗೆ ಕಾಮೆಂಟ್ ಮಾಡಿದ್ದು, ಇದು ಯಾವುದೋ ಕೆಫೆ ಅಂತಾ ಹಲವರು ಉತ್ತರಿಸಿದ್ದಾರೆ.
ಇನ್ನೋರ್ವ ಬಳಕೆದಾರ “ಇದು ಡಾರ್ಜಿಲಿಂಗ್ ಹಿಮಾಲಯನ್ ರೈಲ್ವೇಸ್‌ನ ಕುರ್ಸಿಯಾಂಗ್ ನಿಲ್ದಾಣದಲ್ಲಿ ಹೊಸದಾಗಿ ತೆರೆಯಲಾದ ಕೆಫೆಯಾಗಿದೆ. ಸಂಗೀತದೊಂದಿಗೆ ಇದು ಎಲ್ಲಾ ಪ್ರಯಾಣಿಕರಿಗೆ/ಪ್ರವಾಸಿಗರಿಗೆ ಉತ್ತಮ ಅನುಭವವನ್ನು ನೀಡುತ್ತದೆ” ಎಂದು ರಿಟ್ವೀಟ್ ಮಾಡಿದ್ದಾರೆ.
ಈ ಪೋಸ್ಟ್ ಈಗಾಗ್ಲೇ ಸಾವಿರಾರು ಲೈಕ್ಸ್, ಕಾಮೆಂಟ್ ಪಡೆದುಕೊಂಡು ನೆಟ್ಟಿಗರ ಗಮನ ಸೆಳೆದಿದೆ.
ರೈಲ್ವೇ ಅಭಿವೃದ್ಧಿಗೆ ಸಂಬಂಧಿಸಿದ ಪೋಸ್ಟ್‌ಗಳನ್ನು ಆಗಾಗ್ಗೆ ಹಂಚಿಕೊಳ್ಳುತ್ತಾರೆ ಅಶ್ವಿನಿ ವೈಷ್ಣವ್
ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರು ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಇಲಾಖೆಗೆ ಸಂಬಂಧಿಸಿದ ಇಂತಹ ಹಲವು ವಿಶೆಷ ಫೋಟೋಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ. ಈ ಫೋಟೋಗಳ ಮೂಲಕ ರೈಲ್ವೆ ಇಲಾಖೆ ಎಷ್ಟರ ಮಟ್ಟಿಗೆ ಅಭಿವೃದ್ಧಿಯಾಗುತ್ತಿದೆ ಎಂಬುದನ್ನು ತೋರಿಸುತ್ತಿದ್ದಾರೆ.
ಕಳೆದ ತಿಂಗಳು, ಅವರು ಹಾಸಿಗೆಯ ಮೇಲೆ ಆರಾಮವಾಗಿ ಮಲಗಿರುವ ಮತ್ತು ಕಿಟಕಿಯಿಂದ ಹೊರಗೆ ನೋಡುತ್ತಿರುವ ಮಗುವಿನ ಚಿತ್ರವನ್ನು ಪೋಸ್ಟ್ ಮಾಡಿದ್ದರು.
ಇದಕ್ಕೆ ಅವರು ಇದು ರೈಲು ಕೋಚ್ ಅಥವಾ ವಿಮಾನದ ಆಸನವೋ ಅಂತಾ ಶೀರ್ಷಿಕೆ ನೀಡಿದ್ದರು. ರೈಲಿನ ಕೋಚ್‌ಗಳು ಅಷ್ಟು ಲಕ್ಸುರಿಯಾಗಿವೆ ಎಂಬುದನ್ನು ತೋರಿಸಲು ಈ ಪೋಸ್ಟ್ ಮಾಡಿದ್ದರು.
ಹಾಗೆ ಜನವರಿಯಲ್ಲಿ, ಅವರು ರೈಲು ನಿಲ್ದಾಣದ ಒಂದೆರಡು ಸುಂದರವಾದ ಚಿತ್ರಗಳನ್ನು ಪೋಸ್ಟ್ ಮಾಡಿದರು ಮತ್ತು ಅದನ್ನು ಗುರುತಿಸಲು ನೆಟ್ಟಿಗರನ್ನು ಕೇಳಿದ್ದರು.
ಆ ಚಿತ್ರಗಳಲ್ಲಿ, ಹಿಮದಿಂದ ಆವೃತವಾದ ಭೂದೃಶ್ಯದ ಮೂಲಕ ಚಲಿಸುವ ರೈಲನ್ನು ನೀವು ನೋಡಬಹುದಾಗಿದೆ. ಈ ಚಿತ್ರ ನೋಡಿದರೆ ನಿಮಗೆ ಭಾರತದಲ್ಲಿ ಇರುವ ರೈಲ್ವೆ ಹಳಿಗಳ ವಿಶೇಷತೆ ತಿಳಿಯುತ್ತದೆ ಎನ್ನಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ