LinkedIn Profile ಶೇರ್​ ಮಾಡಿದ್ರೆ ಮಾತ್ರ ಮನೆ ಬಾಡಿಗೆ ಕೊಡ್ತಾರಂತೆ, ಅಯ್ಯೋ ಏನಿದು ವಿಷ್ಯ?

ವೈರಲ್​ ನ್ಯೂಸ್​

ವೈರಲ್​ ನ್ಯೂಸ್​

ಬೆಂಗಳೂರಿನಲ್ಲಿ ಮನೆ ಹುಡುಕೋದು ಸುಲಭದ ಮಾತಲ್ಲ. ಹೀಗೆ ಹುಡುಕುತ್ತಾ ಇದ್ದ ಒಬ್ಬ ವ್ಯಕ್ತಿಯ ವಿಷಯ ವೈರಲ್​ ಆಗಿದೆ.

  • News18 Kannada
  • 2-MIN READ
  • Last Updated :
  • Bangalore, India
  • Share this:
  • published by :

ಕೆಲಸ ಹುಡುಕಿಕೊಂಡು ಅನೇಕ ಜನರು ಬೆಂಗಳೂರಿಗೆ (Bengaluru) ಬರೋದು ಕಾಮನ್​. ಹಾಗೆಯೇ ಉಳಿಯಲೆಂದು ಅನೇಕರು ಪಿಜಿಗಳನ್ನು ಹುಡುಕುತ್ತಾರೆ. ಇನ್ನೂ ಕೆಲವರು ಬಾಡಿಗೆ ಮನೆಗಳನ್ನು ಹುಡುಕೋದು ಒಂಟು. ಬೆಂಗಳೂರಿನಲ್ಲಿ ಮನೆಯನ್ನು, ಪಿಜಿಗಳನ್ನು ಹುಡುಕೋದು ಅಂದ್ರೆ ಸುಲಭದ ಮಾತೇ ಅಲ್ಲ ಬಿಡಿ. ಯಾಕಂದ್ರೆ ಆಫೀಸ್ (Office)​ ಇರೋದು ಒಂದು ಕಡೆ ಮತ್ತು ಮನೆ, ಪಿಜಿ (PG) ಇರೋದು ಇನ್ನೊಂದು ಏರಿಯಾ. ಅದ್ರಲ್ಲೂ ಟ್ರಾಫಿಕ್​ ಹೀಗೆ ನೂರಾರು ಚಿಂತೆ, ತಲೆನೋವುಗಳ ನಡುವೆ. ಮನೆಗಳು ಸಿಗೋದು ಕಷ್ಟನೇ ಬಿಡಿ. ಅದಕ್ಕಾಗಿಯೇ ಮನೆ, ಪಿಜಿಗಳನ್ನು ಹುಡುಕೋಕೆ ಈಸಿಯಾಗಬೇಕು ಅಂತ ನೋಬ್ರೋಕರ್​ನಂತ (NoBroker) ಹಲವಾರು ಆ್ಯಪ್​ಗಳು (App) ಬಂದಿದೆ.


ಎಸ್​, ಆದರೆ ಯಾವ ರೀತಿಯ ಮನೆ, ಓನರ್​ ಅಂತ ತಿಳಿದುಕೊಂಡು ಆ ಮನೆ ಹುಡುಕೋದೆ ಒಂದು ದೊಡ್ಡ ಪಜೀತಿ ಬಿಡಿ. ಇದು ಮನೆಯನ್ನು ಹುಡುಕೋರ ಗೋಳಾದ್ರೆ, ಓನರ್​ಗಳಿಗೆ ಮನೆಗೆ ಯಾವ ರೀತಿಯಾಗಿರೋ ಜನರಿ ಬರ್ತಾರೋ? ಬ್ಯಾಚುಲರ್ಸ್​ಗಳಿಗೆ ಮನೆ ಕೊಡ್ಬೋದಾ? ತಿಂಗಳು ಬಂತು ಅಂದ್ರೆ ಬಾಡಿಗೆ ನೂರು ಸಲ ಕೇಳಬೇಕು ಹೀಗೆ ತಲೆ ಬಿಸಿ ಒಂದಾ ಎರಡಾ?


ಮುಖ್ಯವಾಗಿ ಓನರ್​ಗಳಿಗೆ ಬಾಡಿಗೆ ಮತ್ತು ನೀಟ್​ನೆಸ್​ ಬೇಕಾಗಿರುತ್ತದೆ. ಅದ್ರಲ್ಲೂ ಬಾಡಿಗೆ ಅನ್ನೋದು ಡೇಟ್​ಗೆ ಸರಿಯಾಗಿ ಕೊಡಬೇಕು ಎಂಬುದು ಮೊದಲನೆಯ ಮಾತಾಗಿರುತ್ತೆ. ಆದರೆ ಮನೆಗೆ ಅವರನ್ನು ಸೇರಿಸಿಕೊಳ್ಳುವ ಮೊದಲು ಇದೆಲ್ಲಾ ಹೇಗೆ ತಿಳಿಯೋದು ಅಂತ ಯೋಚನೆ ಮಾಡ್ತಾ ಇದ್ದವರಿಗೆ ಇಲ್ಲೊಂದು ಸಲಹೆ ಇದೆ ನೋಡಿ. ಅಂದ್ರೆ ಒಂದು ಪೋಸ್ಟ್​ ಸಖತ್​ ಎಲ್ಲಾ ಕಡೆ ವೈರಲ್​ ಆಗ್ತಾ ಇದೆ. ಬೆಂಗಳೂರಿನಲ್ಲಿ ಮನೆ ಕೇಳಲು ಬಂದಂತಹ ಯುವಕನಿಗೆ ಕಾದಿತ್ತು ಓನರ್​ನಿಂದ ಶಾಕ್​!


ಏನಿದು ವೈರಲ್​ ಸುದ್ಧಿ?
ಬ್ರೋಕರ್‌ಒಬ್ಬರು ಮನೆ ಬಾಡಿಗೆದಾರನಿಗೆ ಲಿಂಕ್ಡ್​ಇನ್​ ಪ್ರೊಫೈಲ್ ಕೇಳಿದ್ದಾರೆ. ಈ ಬಗ್ಗೆ ಗೌತಮ್ ಎನ್ನುವ ವ್ಯಕ್ತಿ ತಮ್ಮ ಲಿಂಕ್ಡ್​ಇನ್​ ಪ್ರೊಫೈಲ್ ಕೇಳಿದ ಬ್ರೋಕರ್‌ನೊಂದಿಗೆ ವಾಟ್ಸಾಪ್ ಚಾಟ್‌ನ ಸ್ಕ್ರೀನ್‌ಶಾಟ್ ಅನ್ನು ಇಂಟರ್​ ನೆಟ್​ನಲ್ಲಿ ಹಂಚಿಕೊಂಡಿದ್ದಾರೆ.
ಮಾರ್ಚ್ 16 ರಂದು ಇಬ್ಬರು ಬ್ರೋಕರ್‌ಗಳೊಂದಿಗಿನ ಎರಡು ವಾಟ್ಸಾಪ್‌ಚಾಟ್ ಸ್ಕ್ರೀನ್‌ಶಾಟ್‌ಗಳನ್ನು ಟ್ವಿಟ್ಟರ್​ನಲ್ಲಿ ಶೇರ್ ಮಾಡಿದ್ದಾರೆ. ​


ಇದನ್ನೂ ಓದಿ: 8 ಸಾವಿರ ಇದ್ರೆ ಸಾಕು, ಇಷ್ಟೆಲ್ಲಾ ಸ್ಥಳಗಳಿಗೆ ಫ್ಯಾಮಿಲಿ ಜೊತೆ ಟ್ರಿಪ್​ ಹೋಗ್ಬೋದು!


ಇಂದಿರಾ ನಗರದಲ್ಲಿ ಎರಡು ಬೆಡ್​ರೂಮ್​ (Two BHK) ಮನೆ ಹುಡುಕುತ್ತಿದ್ದ ಗೌತಮ್ ಬ್ರೋಕರ್​ನೊಂದಿಗೆ ಚಾಟ್ ಮಾಡಿದ್ದಾರೆ. ಚಾಟ್​ನಲ್ಲಿ ಬ್ರೋಕರ್​ ಲಿಂಕ್ಡ್‌ಇನ್ ಪ್ರೊಫೈಲ್ ಲಿಂಕ್​ ಕಳುಹಿಸುವಂತೆ ಹೇಳಿದ್ದಾನೆ. ಅದರಂತೆ ಗೌತಮ್​ ತಮ್ಮ ಲಿಂಕ್ಡ್‌ಇನ್ ಪ್ರೊಫೈಲ್ ಶೇರ್ ಮಾಡಿದ್ದಾರೆ. ಅಲ್ಲದೇ ಮತ್ತೊಂದು ಮನೆ ಮಾಲೀಕರೊಬ್ಬರು ನಿಮ್ಮ ಬಗ್ಗೆ ಸ್ವಲ್ಪ ಬರೆದು ಕಳುಹಿಸಿ ಎಂದು ಗೌತಮ್​ಗೆ ಹೇಳಿದ್ದಾರೆ.



ಅದನ್ನು ಗೌತಮ್​ ಟ್ವಿಟ್ಟರ್​ನಲ್ಲಿ ಶೇರ್​ ಮಾಡಿಕೊಂಡಿದ್ದಾರೆ. ಈ ಪೋಸ್ಟ್​ ಸಖತ್​ ವೈರಲ್​ ಆಗ್ತಾ ಇದೆ. ಇದಕ್ಕೆ 900 ಲೈಕ್ಸ್, 50 ರೀಟ್ವೀಟ್‌ಆಗಿದ್ದು, 49 ಕಮೆಂಟ್​ಗಳು ಬಂದಿವೆ. ಇನ್ನು ಕೆಲವು ನೆಟ್ಟಿಗರು ತಮಗೆ ಆದ ಇಂತಹ ಅನುಭವಗಳನ್ನು ಸಹ ಹಂಚಿಕೊಂಡಿದ್ದಾರೆ. ಅನೇಕ ಟೆಕ್ಕಿಗಳು ಮತ್ತು ವೃತ್ತಿಪರರು ಅಂತಹ ಸಂದರ್ಭಗಳನ್ನು ಎದುರಿಸಿದ್ದರೆ ಎಂದು ಹಂಚಿಕೊಂಡಿದ್ದಾರೆ. ಬಾಡಿಗೆದಾರರು ಪ್ರೊಫೈಲ್ ಕಳುಹಿಸಬೇಕು.




ಒಳ್ಳೆ ಸಂಬಳ, ಉದ್ಯೋಗಿಯಲ್ಲದಿದ್ದರೆ ಮನೆ ಸಿಗುವುದಿಲ್ಲ. ಸ್ಟಾರ್ಟ್ಅಪ್ ಉದ್ಯೋಗಿಗಳಿಗೂ ಮನೆಗಳು ಸಿಗುವುದಿಲ್ಲ ಎಂದು ಮತ್ತೊಬ್ಬರು ಟ್ವಿಟ್ ಮಾಡಿದ್ದಾರೆ.


ಇದನ್ನೂ ಓದಿ: ಮಗನ ನೆನಪುಳಿಸಲು ವಿಭಿನ್ನ ಕೆಲಸ ಮಾಡಿದ ಕುಟುಂಬ, ಡಿಜಿಟಲ್​ ರೂಪದಲ್ಲಿ ಅಚ್ಚಾಗಿ ಉಳಿಯಿತು ಮೆಮೋರಿಸ್​!


ಐಐಟಿ, ಐಐಎಂ, ಐಎಸ್‌ಬಿಯಲ್ಲಿ ಪದವಿ ಪಡೆದಿಲ್ಲ ಅಥವಾ ಸಿಎ ವೃತ್ತಿಯಲ್ಲಿಲ್ಲ ಎಂದು ಮನೆ ಮಾಲೀಕರೊಬ್ಬರು ವೆಲ್ಲೂರಿನ ಇನ್‌ಸ್ಟಿಟ್ಯೂಟ್‌ಆಫ್‌ಟೆಕ್ನಾಲಜಿಯ ಪದವೀಧರರೊಬ್ಬರಿಗೆ ಮನೆ ಬಾಡಿಗೆ ನೀಡಲು ನಿರಾಕರಿಸಿದ್ದರು. ಈ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡಿತ್ತು, ಇದರ ಬೆನ್ನಲ್ಲೇ ಇದೀಗ ಮನೆ ಮಾಲೀಕರೊಬ್ಬರು ಬಾಡಿಗೆದಾರರಿಗೆ ಲಿಂಕ್​ ಡಿನ್​ ಪ್ರೊಫೈಲ್​ ಕೇಳಿದ್ದಾರೆ.


top videos



    ಮುಂದಿನ ದಿನದಲ್ಲಿ ಅವರು ಬಾಡಿಗೆ ಸರಿಯಾಗಿ ಕೊಡ್ತಾರೋ ಇಲ್ವೋ ಅಥವಾ ಅವರ ವಿವರವನ್ನೆಲ್ಲಾ ತಿಳಿಯುವುದಾಗಿ ಈ ರೀತಿಯಾಗಿ ಹೊಸದಾಗಿ ಹೀಗೆ ಲಿಂಕ್​ ಡಿನ್​ ಪ್ರೊಫೈಲ್ ಕೇಳಿದ್ದಾರೆ.

    First published: