HOME » NEWS » Trend » LOOKING TO CREATE AN EMERGENCY FUND HERE IS SOME GREATEST TIPS VB

ಎಮರ್ಜೆನ್ಸಿ ಫಂಡ್​ಗಾಗಿ ಮಾರ್ಗ ಹುಡುಕುತ್ತಿದ್ದೀರಾ? ಇಲ್ಲಿವೆ ನೋಡಿ ಟಿಪ್ಸ್​

ಮೊದಲು ಯಾವ ತುರ್ತು ಪರಿಸ್ಥಿತಿ ಎದುರಾಗಬಹುದು ಮತ್ತು ಅದಕ್ಕೆ ಅಗತ್ಯವಿರುವ ಹಣದ ಅಗತ್ಯತೆ ಎಷ್ಟು ಎಂಬುದನ್ನು ಮೊದಲೇ ಲೆಕ್ಕಾಚಾರ ಹಾಕಿಕೊಳ್ಳಬೇಕು. ಅದರ ಆಧಾರದ ಮೇಲೆ ನೀವು ಎಮರ್ಜೆನ್ಸಿ ಫಂಡ್​ ಎಷ್ಟು ಕೂಡಿಡಬೇಕು ಎಂಬುದನ್ನು ನಿರ್ಧರಿಸಬಹುದು.

news18-kannada
Updated:December 25, 2020, 3:21 PM IST
ಎಮರ್ಜೆನ್ಸಿ ಫಂಡ್​ಗಾಗಿ ಮಾರ್ಗ ಹುಡುಕುತ್ತಿದ್ದೀರಾ? ಇಲ್ಲಿವೆ ನೋಡಿ ಟಿಪ್ಸ್​
ಸಾಂದರ್ಭಿಕ ಚಿತ್ರ.
  • Share this:
ಎಮರ್ಜೆನ್ಸಿ ಫಂಡ್​ ಎಂದರೆ ತುರ್ತು ಕೆಲಸಗಳಿಗೆ ನೀವು ಪ್ರತ್ಯೇಕವಾಗಿ ತೆಗೆದಿಟ್ಟಿರುವ ಹಣ.  ನಿಮಗೆ ಏಕಾಏಕಿ ಅನಾರೋಗ್ಯ ಕಾಡಬಹುದು. ಇಲ್ಲವೇ, ನೀವು ಕೆಲಸ ಕಳೆದುಕೊಳ್ಳಬಹುದು. ಇಲ್ಲವೇ, ಮನೆಯಲ್ಲಿ ಯಾರಿಗೋ ತೊಂದರೆ ಉಂಟಾಗಬಹುದು ಅಥವಾ ನಿಮ್ಮ ವಾಹನ ಅಪಘಾತಕ್ಕೆ ಒಳಗಾಗಬಹುದು. ಇದಕ್ಕಾಗಿ ನೀವು ಒಂದಷ್ಟು ಹಣ ಕೂಡಿಟ್ಟಿರಬೇಕು. 8-9 ತಿಂಗಳು ಸಾಮಾನ್ಯ ಜೀವನ ನಡೆಸಲು ಸಾಕಾಗುವಷ್ಟು ಹಣ ನಿಮ್ಮಲ್ಲಿ ಇರಬೇಕು. ಹಾಗಾದರೆ, ಈ ಹಣವನ್ನು ಕೂಡಿಡೋದು ಹೇಗೆ? ಯಾವುದರ ಮೇಲೆ ಈ ಹಣವನ್ನು ಹೂಡಿಕೆ ಮಾಡಬೇಕು? ಎನ್ನುವ ಬಗ್ಗೆ ಇಲ್ಲಿದೆ ಮಾಹಿತಿ.

ಮೊದಲು ಯಾವ ತುರ್ತು ಪರಿಸ್ಥಿತಿ ಎದುರಾಗಬಹುದು ಮತ್ತು ಅದಕ್ಕೆ ಅಗತ್ಯವಿರುವ ಹಣದ ಅಗತ್ಯತೆ ಎಷ್ಟು ಎಂಬುದನ್ನು ಮೊದಲೇ ಲೆಕ್ಕಾಚಾರ ಹಾಕಿಕೊಳ್ಳಬೇಕು. ಅದರ ಆಧಾರದ ಮೇಲೆ ನೀವು ಎಮರ್ಜೆನ್ಸಿ ಫಂಡ್​ ಎಷ್ಟು ಕೂಡಿಡಬೇಕು ಎಂಬುದನ್ನು ನಿರ್ಧರಿಸಬಹುದು.

ಹೀಗೆ ಕೂಡಿಟ್ಟ ಹಣವನ್ನು ನೀವು ಹೂಡಿಕೆ ಮಾಡಬೇಕು. ಅದನ್ನು ಹೂಡಿಕೆ ಮಾಡಿದ ಹೊರತಾಗಿಯೂ ಆ ಹಣ ನಿಮಗೆ ತಕ್ಷಣಕ್ಕೆ ದೊರೆಯುವಂತೆ ಇರಬೇಕು.

ನೀವು ಷೇರು ಮಾರುಕಟ್ಟೆಯ ಮೇಲೆ ಈ ಹಣವನ್ನು ಹೂಡಿಕೆ ಮಾಡಲು ಹೋಗಲೇ ಬಾರದು. ಏಕೆಂದರೆ, ನೀವು ಈ ಹಣವನ್ನು ಷೇರು ಮಾರುಕಟ್ಟೆ ಮೇಲೆ ಹೂಡಿಕೆ ಮಾಡಿದರೆ ನಿಮಗೆ ಎಮರ್ಜೆನ್ಸಿ ಎದುರಾದಾಗ ಷೇರಿನ ಮೌಲ್ಯ ಹೆಚ್ಚೂ ಆಗಿರಬಹುದು ಅಥವಾ ಇಳಿಕೆಯೂ ಆಗಿರಬಹುದು.

ಸೇವಿಂಗ್ಸ್​ ಖಾತೆಯಲ್ಲಿ ಕೂಡಿಡಿ

ಈ ಹಣವನ್ನು ನೀವು ಸೇವಿಂಗ್ಸ್​ ಖಾತೆಯಲ್ಲಿ ಕೂಡಿಡಿ. ಹೀಗೆ ಮಾಡುವುದರಿಂದ ನಿಮಗೆ ಬಡ್ಡಿ ಸಿಗುತ್ತದೆ. ಜೊತೆಗೆ ನಿಮಗೆ ಬೇಕಾದ ಸಂದರ್ಭದಲ್ಲಿ ಹಣ ಕೂಡ ಸಿಗುತ್ತದೆ. ಹೀಗಾಗಿ ಎಮರ್ಜೆನ್ಸಿ ಫಂಡ್​ಅನ್ನು ಸೇವಿಂಗ್ಸ್​ ಖಾತೆಯಲ್ಲಿ ಇಡಬಹುದು.
ಎಫ್​ಡಿ:

ನಿಮ್ಮ ಹಣವನ್ನು ಎಫ್​ಡಿ ಮಾಡಿಟ್ಟರೂ ಅದು ತುರ್ತು ಪರಿಸ್ಥಿತಿ ಸಂದರ್ಭದಲ್ಲಿ  ಸಹಾಯಕ್ಕೆ ಬರುತ್ತದೆ. ಎಫ್​ಡಿ ಹಣವೇ ನಿಮಗೆ ಸಿಗದಿದ್ದರೂ, ಎಫ್​ಡಿ ಹಣವನ್ನು ಆಧರಿಸಿ ನೀವು ಕ್ಯಾಶ್​ ಪಡೆಯಬಹುದು.
Published by: Vinay Bhat
First published: December 25, 2020, 3:21 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories