• ಹೋಂ
 • »
 • ನ್ಯೂಸ್
 • »
 • ಟ್ರೆಂಡ್
 • »
 • Viral News: ಈ ಚೀನಿ ವ್ಯಕ್ತಿ ಬುದ್ಧನ ಪ್ರತಿಮೆ ಬಳಿ ಹೋಗಿ ಕೇಳಿದ್ದೇನು ನೋಡಿ! ವೈರಲ್ ಆಗಿದೆ ಈ ಪೋಸ್ಟ್

Viral News: ಈ ಚೀನಿ ವ್ಯಕ್ತಿ ಬುದ್ಧನ ಪ್ರತಿಮೆ ಬಳಿ ಹೋಗಿ ಕೇಳಿದ್ದೇನು ನೋಡಿ! ವೈರಲ್ ಆಗಿದೆ ಈ ಪೋಸ್ಟ್

ಗೌತಮ ಬುದ್ಧ

ಗೌತಮ ಬುದ್ಧ

ಚೀನೀ ವ್ಯಕ್ತಿಯೊಬ್ಬ ಲೆಶನ್ ಜೈಂಟ್ ಬುದ್ಧನ ಬಳಿಗೆ 2,000 ಕಿಲೋಮೀಟರ್ ಪ್ರಯಾಣಿಸಿದನು ಮತ್ತು ಪ್ರತಿಮೆ ಜೊತೆಗೆ ತನ್ನ ಇಚ್ಛೆಯನ್ನು ಹೇಳಲು ದೊಡ್ಡ ಇಯರ್​​ಬಡ್ಸ್​ ಅನ್ನು ಹಿಡಿದಿದ್ದಾನೆ.

 • Share this:

ಸಾಮಾನ್ಯವಾಗಿ ನಾವು ನಮಗೆ ಜೀವನದಲ್ಲಿ (Life) ಏನಾದರೂ ಬೇಕಾದರೆ ಅದನ್ನು ಹೋಗಿ ನಮ್ಮ ಇಷ್ಟವಾದ ದೇವರ ಮುಂದೆ ನಿಂತುಕೊಂಡು ತುಂಬಾನೇ ಭಕ್ತಿ ಭಾವದೊಂದಿಗೆ ‘ದೇವರೇ ನಮಗೆ ಇದನ್ನ ಕೊಡಪ್ಪಾ’ ಅಂತ ಕೇಳಿಕೊಳ್ಳುತ್ತೇವೆ. ಹೆಚ್ಚಾಗಿ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಒಳ್ಳೆಯ ಅಂಕಗಳು ಬರಲಿ ಅಂತ ದೇವರಲ್ಲಿ (God) ಬೇಡಿಕೊಂಡರೆ, ಯುವಕ-ಯುವತಿಯರು ಓದು ಮುಗಿಸಿದ ನಂತರ ಒಂದೊಳ್ಳೆ ಕೆಲಸ ಸಿಗಲಿ ಅಂತ ದೇವರಲ್ಲಿ ಬೇಡಿಕೊಳ್ಳುತ್ತಾರೆ. ಕೆಲವರು ತಮ್ಮ ಬಳಿ ಹಣವಿಲ್ಲ, ದಯವಿಟ್ಟು ಮನೆಗೆ ಸಂಪತ್ತು ಬರಲಿ ಅಂತ ದೇವರಲ್ಲಿ ಕೇಳಿದರೆ, ಇನ್ನೂ ಕೆಲವರು ನಮಗೆ ಸಂಪತ್ತೆಲ್ಲಾ ಬೇಡ, ಒಳ್ಳೆಯ ಆರೋಗ್ಯ ಕೊಡು ಸಾಕು ಅಂತ ದೇವರಲ್ಲಿ ಬೇಡಿಕೊಳ್ಳುತ್ತಾರೆ.


ಎಷ್ಟೋ ಜನರು ತಮ್ಮ ಇಷ್ಟಾರ್ಥಗಳನ್ನು ದೇವರು ಈಡೇರಿಸಲಿ ಅಂತ ಅವರಿಗೆ ಬೇಕಾದ್ದನ್ನು ಆ ದೇವರಲ್ಲಿ ಬೇಡಿಕೊಂಡು ಅಲ್ಲಿಗೆ ನಡೆದುಕೊಂಡು ಆ ದೇವಸ್ಥಾನಕ್ಕೆ ಹೋಗಿ ದೇವರ ದರ್ಶನ ಮಾಡಿ ಬರುತ್ತಾರೆ.


ಬುದ್ದನ ಪ್ರತಿಮೆ ಬಳಿ ಹೋಗಲು 2000 ಕಿಲೋ ಮೀಟರ್ ಪ್ರಯಾಣಿಸಿದ ವ್ಯಕ್ತಿ


ಅರೇ, ಇದನ್ನೆಲ್ಲಾ ಈಗೇಕೆ ಹೇಳುತ್ತಿದ್ದೇವೆ ಅಂತ ನಿಮಗೆ ಒಂದು ಕ್ಷಣ ಅನ್ನಿಸಬಹುದು, ಆದರೆ ಇಲ್ಲೊಂದು ವಿಷಯ ಇದೆ ನೋಡಿ. ಚೀನಾದ ವ್ಯಕ್ತಿಯೊಬ್ಬ ಸುಮಾರು 2,000 ಕಿಲೋ ಮೀಟರ್ ದೂರ ಪ್ರಯಾಣಿಸಿ ಲೆಶಾನ್ ದೈತ್ಯ ಬುದ್ಧನ ಪ್ರತಿಮೆಯ ಬಳಿಗೆ ಹೋಗಿ ದೊಡ್ಡ ಏರ್‌ಪಾಡ್ ಆಕಾರದ ಸ್ಪೀಕರ್ ಅನ್ನು ಕೈಯಲ್ಲಿ ಹಿಡಿದುಕೊಂಡು ಪ್ರತಿಮೆಯ ಬಳಿ ನಿಂತಿರುವ ಒಂದು ಪೋಸ್ಟ್ ಅನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ ನೋಡಿ.


ಇದನ್ನೂ ಓದಿ: ಚರಂಡಿಯಲ್ಲಿ ಕುಳಿತು ಕಿಸ್​ ಕೊಡ್ತಾ ಪ್ರೀ ವೆಡ್ಡಿಂಗ್​ ಫೋಟೋಶೂಟ್​ ಮಾಡಿದ ಜೋಡಿ


ಜಾಂಗ್ ಎಂಬ ವ್ಯಕ್ತಿ ದೊಡ್ಡ ಏರ್‌ಪಾಡ್ ಗಾತ್ರದ ಸ್ಪೀಕರ್ ಅನ್ನು ಸುಮಾರು 71 ಮೀಟರ್ ಎತ್ತರದ ಬುದ್ಧನ ಪ್ರತಿಮೆಯ ಕಿವಿಯ ಬಳಿ ಹಿಡಿದನು ಮತ್ತು ಆ ದೇವರಿಗೆ ತನ್ನ ಇಷ್ಟಾರ್ಥಗಳು ಚೆನ್ನಾಗಿ ಕೇಳಿಸಿಕೊಳ್ಳಲು ತನ್ನ ಮೊಬೈಲ್ ಫೋನ್ ನಲ್ಲಿರುವ ವಾಲ್ಯೂಮ್ ಅನ್ನು ಹೆಚ್ಚಿಸಿದನು.


ವೈರಲ್ ಆದ ವಿಡಿಯೋದಲ್ಲಿ ಚೀನಾದ ವ್ಯಕ್ತಿ ಮಾಡಿದ್ದೇನು ನೋಡಿ..


ಚೀನಾದ ಸಾಮಾಜಿಕ ಮಾಧ್ಯಮವಾದ ಡೌಯಿನ್ ನಲ್ಲಿ ವೈರಲ್ ಆಗುತ್ತಿರುವ ಒಂದು ವಿಡಿಯೋದಲ್ಲಿ ಆ ವ್ಯಕ್ತಿ ಬುದ್ದನ ಬೃಹತ್ ಪ್ರತಿಮೆಯ ಬಳಿ ನಿಂತುಕೊಂಡು "ನಿಮಗೆ ತಿಳಿದಿದೆಯೇ ನನಗೆ 27 ವರ್ಷ ವಯಸ್ಸು, ಆದರೆ ಇನ್ನೂ ನನ್ನ ಬಳಿ ಕಾರು, ಮನೆ ಅಥವಾ ಗೆಳತಿ ಸಹ ಇಲ್ಲ" ಎಂದು ಜಾಂಗ್ ಹೇಳುತ್ತಿರುವುದನ್ನು ನಾವು ಕೇಳಬಹುದು.


ಗೌತಮ ಬುದ್ಧ


ನಂತರ ಆ ವ್ಯಕ್ತಿ ಬುದ್ಧನ ಪ್ರತಿಮೆಯ ಮುಂದೆ ತನ್ನ ಬಯಕೆಗಳನ್ನು ಒಂದೊಂದಾಗಿ ಹೇಳಿಕೊಳ್ಳಲು ಶುರು ಮಾಡುತ್ತಾನೆ. ಅವನು ಮೊದಲು ಬುದ್ದನಲ್ಲಿ ಹಣ ಮತ್ತು ಅವನನ್ನು ಪ್ರೀತಿಸುವ ಗೆಳತಿಯನ್ನು ಕರುಣಿಸು ಅಂತ ಕೇಳುತ್ತಾನೆ, ಎಂದು ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ವರದಿ ಮಾಡಿದೆ.


ವೈರಲ್ ಆದ ಫೋಟೋ


ಬುದ್ದನ ಪ್ರತಿಮೆ ಬಳಿ ನಿಂತು ಏನೆಲ್ಲಾ ಬೇಡಿಕೊಂಡರು ನೋಡಿ ಜಾಂಗ್


"ಮೊದಲನೆಯದಾಗಿ, ನಾನು ಶ್ರೀಮಂತನಾಗಲು ಬಯಸುತ್ತೇನೆ. ನನಗೆ ಹೆಚ್ಚು ಹಣ ಅಗತ್ಯವಿಲ್ಲ. 10 ಮಿಲಿಯನ್ ಯುವಾನ್ (ಭಾರತೀಯ ಮೌಲ್ಯದಲ್ಲಿ 11.81 ಕೋಟಿ ರೂಪಾಯಿ) ಸಾಕು. ಎಲ್ಲಕ್ಕಿಂತ ಮುಖ್ಯವಾಗಿ ನನಗೆ ಜೀವನದಲ್ಲಿ ಒಬ್ಬ ಗೆಳತಿ ಬೇಕು, ಅವಳು ಸ್ವಲ್ಪ ಸುಂದರವಾಗಿರಬೇಕು ಮತ್ತು ಕೋಮಲ ಸ್ವಭಾವದವಳಾಗಿರಬೇಕು. ಎಲ್ಲಕ್ಕಿಂತಲೂ ಹೆಚ್ಚಾಗಿ ಆಕೆ ನನ್ನ 10 ಮಿಲಿಯನ್ ಗಿಂತ ನನ್ನನ್ನು ಹೆಚ್ಚು ಪ್ರೀತಿಸುವವಳಾಗಿರಬೇಕು” ಎಂದು ಜಾಂಗ್ ಕೇಳಿಕೊಳ್ಳುತ್ತಾನೆ.
ಈ ಬುದ್ದನ ಪ್ರತಿಮೆ ಬಳಿ ಹೋಗಲು ಜಾಂಗ್ ಚೀನಾದ ಪೂರ್ವ ಝೆಜಿಯಾಂಗ್ ಪ್ರಾಂತ್ಯದಿಂದ ನೈಋತ್ಯ ಸಿಚುವಾನ್ ಗೆ ಎಂದರೆ ಸುಮಾರು 12 ಗಂಟೆಗಳ ಕಾಲ ಪ್ರಯಾಣಿಸಲು ಅವರು ನಿರ್ಧರಿಸಿದ್ದ.


ಈ ವಿಡಿಯೋ ನೋಡಿ ಏನಂದ್ರು ನೆಟ್ಟಿಗರು?


ವಿಡಿಯೋ ನೋಡಿದ ನೆಟ್ಟಿಗರೊಬ್ಬರು "ಜಾಂಗ್ ಈ ಸ್ಪೀಕರ್ ಗಳನ್ನು ಆನ್ಲೈನ್ ನಲ್ಲಿ ಖರೀದಿಸಿರಬೇಕು, ಅದಕ್ಕೆ ಬುದ್ದನ ಪ್ರತಿಮೆಗೆ ಸರಿಯಾಗಿ ಹೊಂದಿಕೆಯಾಗುತ್ತದೆ” ಅಂತ ಕಾಮೆಂಟ್ ಮಾಡಿದ್ದಾರೆ.

top videos


  "ಇತರರನ್ನು ಅವಲಂಬಿಸುವ ಬದಲು ಅವರು ಬುದ್ಧನನ್ನು ಅವಲಂಬಿಸಲು ಆಯ್ಕೆ ಮಾಡಿಕೊಂಡ" ಎಂದು ಇನ್ನೊಬ್ಬ ನೆಟ್ಟಿಗರು ಹೇಳಿದ್ದಾರೆ.

  First published: