• ಹೋಂ
  • »
  • ನ್ಯೂಸ್
  • »
  • ಟ್ರೆಂಡ್
  • »
  • Viral Video: ಈ ಸಿಂಹಿಣಿ ವ್ಯಕ್ತಿಯನ್ನು ಹೇಗೆ ಬೆನ್ನಟ್ಟಿದೆ ನೋಡಿ! ಮತ್ತೆ ವೈರಲ್ ಆಯ್ತು ಹಳೆಯ ವಿಡಿಯೋ

Viral Video: ಈ ಸಿಂಹಿಣಿ ವ್ಯಕ್ತಿಯನ್ನು ಹೇಗೆ ಬೆನ್ನಟ್ಟಿದೆ ನೋಡಿ! ಮತ್ತೆ ವೈರಲ್ ಆಯ್ತು ಹಳೆಯ ವಿಡಿಯೋ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಕಾಡು ಪ್ರಾಣಿಗಳ ಬಗ್ಗೆ ಇಷ್ಟೊಂದು ಭಯವಿರುವ ನಮಗೆ ಕಾಡು ಪ್ರಾಣಿಯೊಂದು ಹಿಂಬಾಲಿಸಿಕೊಂಡು ಬಂದರೆ ಏನಾಗಬಹುದು? ಎಂಥವರಿಗಾದರೂ ಹೃದಯ ಭಯದಿಂದ ಜೋರಾಗಿ ಹೊಡೆದುಕೊಳ್ಳುತ್ತದೆ. ಇಲ್ಲೊಂದು ಹಳೆಯ ವಿಡಿಯೋ ಇದೆ ನೋಡಿ, ಅದು ಮತ್ತೊಮ್ಮೆ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಅದನ್ನು ನೋಡಿದರೆ ನಿಮಗೆ ಭಯವಾಗುವುದು ಖಂಡಿತ.

ಮುಂದೆ ಓದಿ ...
  • Share this:

ಸಾಮಾನ್ಯವಾಗಿ ನಮಗೆ ಈ ಕಾಡು ಪ್ರಾಣಿಗಳಾದ (Wild Animal) ಹುಲಿ, ಸಿಂಹ ಮತ್ತು ಚಿರತೆಯ ಭಯಂಕರವಾದ ಘರ್ಜನೆ ಕೇಳಿದರೆ ಮತ್ತು ಅದು ಬೇರೆ ಪ್ರಾಣಿಗಳನ್ನು ತನ್ನ ಆಹಾರಕ್ಕಾಗಿ ಬೇಟೆಯಾಡುವುದನ್ನು ವಿಡಿಯೋದಲ್ಲಿ ನೋಡುವಾಗ ತುಂಬಾನೇ ಭಯವಾಗುತ್ತದೆ. ಅದರಲ್ಲೂ ಕೆಲವೊಂದು ವಿಡಿಯೋಗಳಲ್ಲಿ (Video) ಈ ಕಾಡು ಪ್ರಾಣಿಗಳು ಬೇಟೆಯಾಡುವುದನ್ನು ನೋಡುವುದೇ ಅಷ್ಟೇ ಭಯಾನಕವಾಗಿರುತ್ತದೆ ಮತ್ತು ಏನಾಗಬಹುದು ಅಂತ ಕೊನೆಯ ಕ್ಷಣದವರೆಗೂ ಕುತೂಹಲ ಇದ್ದೇ ಇರುತ್ತದೆ. ಈ ಹುಲಿ ಮತ್ತು ಸಿಂಹಗಳು ಕೆಲವೊಮ್ಮೆ ಕಾಡಿನಿಂದ ಹೊರ ಬಂದು ಜಾನುವಾರುಗಳ (Cattle) ಮೇಲೆ ಮತ್ತು ಇತರೆ ಪ್ರಾಣಿಗಳ ಮೇಲೆ ದಾಳಿ ಮಾಡುವುದನ್ನು ಮತ್ತು ಜನರ ಮೇಲೆ ದಾಳಿ ಮಾಡುವ ಅನೇಕ ಘಟನೆಗಳನ್ನು ಸಹ ನಾವು ಸಾಮಾಜಿಕ ಮಾಧ್ಯಮಗಳಲ್ಲಿ (Social Media) ನೋಡಿರುತ್ತೇವೆ.


ಕಾಡು ಪ್ರಾಣಿಗಳ ಬಗ್ಗೆ ಇಷ್ಟೊಂದು ಭಯವಿರುವ ನಮಗೆ ಕಾಡು ಪ್ರಾಣಿಯೊಂದು ಹಿಂಬಾಲಿಸಿಕೊಂಡು ಬಂದರೆ ಏನಾಗಬಹುದು? ಎಂಥವರಿಗಾದರೂ ಹೃದಯ ಭಯದಿಂದ ಜೋರಾಗಿ ಹೊಡೆದುಕೊಳ್ಳುತ್ತದೆ. ಇಲ್ಲೊಂದು ಹಳೆಯ ವಿಡಿಯೋ ಇದೆ ನೋಡಿ, ಅದು ಮತ್ತೊಮ್ಮೆ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಅದನ್ನು ನೋಡಿದರೆ ನಿಮಗೆ ಭಯವಾಗುವುದು ಖಂಡಿತ.


ಯುವಕನನ್ನು ಬೆನ್ನಟ್ಟಿದ ಸಿಂಹಿಣಿ 
ಈ ವಿಡಿಯೋದಲ್ಲಿ ಒಂದು ಪಾರ್ಟಿ ನಡೀತಾ ಇರುತ್ತದೆ, ಅದರಲ್ಲಿ ಒಂದು ಹೆಣ್ಣು ಸಿಂಹ  ಅಲ್ಲಿಯೇ ಪಾರ್ಟಿಯ ಹತ್ತಿರ ಇರುವಂತಹ ಒಬ್ಬ ವ್ಯಕ್ತಿಯನ್ನು ಹಿಂಬಾಲಿಸಿಕೊಂಡು ಬರುತ್ತದೆ. ಆ ವ್ಯಕ್ತಿ ತನ್ನನ್ನು ಸಿಂಹಿಣಿಯೊಂದು ಹಿಂಬಾಲಿಸುತ್ತಿದೆ ಮತ್ತು ತನ್ನ ಕಡೆಗೆ ಜೋರಾಗಿ ಬರುತ್ತಿದೆ ಅಂತ ತಿಳಿದು ಅಲ್ಲೇ ಇರುವಂತಹ ಒಂದು ಮರವನ್ನು ಬೇಗನೆ ಹತ್ತುತ್ತಾನೆ. ಆಗ ಈ ಸಿಂಹಿಣಿ ಸಹ ತಾನೇನೂ ಕಡಿಮೆ ಇಲ್ಲ ಎಂಬಂತೆ ಆ ವ್ಯಕ್ತಿಯನ್ನ ಹಾಗೆ ಹಿಂಬಾಲಿಸಿಕೊಂಡು ಹೋಗೋದಕ್ಕೆ ಆ ವ್ಯಕ್ತಿ ಹತ್ತಿದ ಮರವನ್ನು ಸಹ ಹತ್ತುತ್ತದೆ. ಮೇಲೆ ಹತ್ತಿದ್ದ ಆ ವ್ಯಕ್ತಿ ತನ್ನ ಕಾಲಿನಿಂದ ಆ ಮರವನ್ನು ಹತ್ತುತ್ತಿರುವ ಸಿಂಹಿಣಿಯನ್ನು ಒದೆಯಲು ಮತ್ತು ಅಲ್ಲಿಂದ ಓಡಿಸಲು ಪ್ರಯತ್ನಿಸುತ್ತಿರುವುದನ್ನು ನಾವು ಈ ವಿಡಿಯೋದಲ್ಲಿ ನೋಡಬಹುದು.


ಇದನ್ನೂ ಓದಿ:  Mermaid: ಮತ್ಸ್ಯಕನ್ಯೆಯಾಗಿ ಗುರುತಿಸಿಕೊಂಡು ತಿಂಗಳಿಗೆ 6 ಲಕ್ಷ ರೂಪಾಯಿ ದುಡಿಯುತ್ತಿದ್ದಾಳೆ ಈಕೆ!


ನಂತರ ವಿಡಿಯೋದ ಕೊನೆಯಲ್ಲಿ ಆ ಸಿಂಹಿಣಿ ಆ ಮರದಿಂದ ಕೆಳಕ್ಕೆ ಬೀಳುತ್ತದೆ ಮತ್ತು ಅಷ್ಟಕ್ಕೇ ಆ ವಿಡಿಯೋ ಮುಕ್ತಾಯವಾಗಿದೆ. ಮುಂದೆ ಏನಾಗಿರಬಹುದು ಅಂತ ತಿಳಿದುಕೊಳ್ಳುವ ಕುತೂಹಲ ತುಂಬಾ ಜನ ನೆಟ್ಟಿಗರಿಗೆ ಇದ್ದೇ ಇರುತ್ತದೆ.ಇಂತಹ ಒಂದು ಭಯಾನಕ ವಿಡಿಯೋವನ್ನು ನೋಡಿದ ನಂತರ ಯಾರಿಗಾದರೂ ನಿಸ್ಸಂದೇಹವಾಗಿ ನಡುಕ ಬಂದೇ ಬರುತ್ತದೆ. ಇತ್ತೀಚೆಗೆ ವೈರಲ್ ಆಗಿರುವ ಹಳೆಯ ವಿಡಿಯೋದಲ್ಲಿ ಇದೇ ರೀತಿಯ ದೃಶ್ಯಗಳಿವೆ. ಈ ಕ್ಲಿಪ್ ಒಂದು ಸಿಂಹಿಣಿಯು ಅರಣ್ಯದಿಂದ ಹೊರ ಬರುವುದರೊಂದಿಗೆ ಆರಂಭವಾಗುತ್ತದೆ. ಇದರ ನಂತರ ಅಪರಿಚಿತ ಸ್ಥಳದಲ್ಲಿ ಸುಂದರವಾಗಿ ಅಲಂಕರಿಸಿದ ಒಂದು ಪಾರ್ಟಿಯ ಒಳಗೆ ಹೋಗುವುದನ್ನು ನಾವು ನಂತರದಲ್ಲಿ ನೋಡಬಹುದು.


ಸಿಕ್ಕಾಪಟ್ಟೆ ವೈರಲ್ ಆಗ್ತಿದೆ ಹಳೆ ವಿಡಿಯೋ 
ಈ ವಿಡಿಯೋವು ಇದ್ದಕ್ಕಿದ್ದಂತೆ ಕೊನೆಗೊಳ್ಳುತ್ತದೆ, ಅನೇಕ ಬಳಕೆದಾರರು ಮನುಷ್ಯನ ಭವಿಷ್ಯದ ಬಗ್ಗೆ ತುಂಬಾನೇ ಕಳವಳ ವ್ಯಕ್ತ ಪಡಿಸಿದ್ದಾರೆ. ಈ ವಿಡಿಯೋಗೆ ಸುಮಾರು 2,53,022 ಲೈಕ್ ಗಳು ಬಂದಿವೆ. ಈ ಪೋಸ್ಟ್ ಗೆ ಕಾಮೆಂಟ್ ಮಾಡಿದ ಅನೇಕ ಇನ್‌ಸ್ಟಾಗ್ರಾಮ್ ಬಳಕೆದಾರರು ತುಂಬಾನೇ ಕಳವಳವನ್ನು ವ್ಯಕ್ತಪಡಿಸಿದ್ದಾರೆ ಮತ್ತು ವ್ಯಕ್ತಿಯ ಸುರಕ್ಷತೆಯ ಬಗ್ಗೆ ವಿಚಾರಿಸಿದ್ದಾರೆ.


ಇದನ್ನೂ ಓದಿ:  Horse Viral News: ಈ ಕುದುರೆ ಮರಿಗೆ ಬಸ್ ಮೇಲಿನ ಚಿತ್ರವೇ ಅಮ್ಮ!


ವಿಡಿಯೋ ನೋಡಿದ ಸಾಮಾಜಿಕ ಮಾಧ್ಯಮ ಬಳಕೆದಾರರು ‘ಅಬ್ಬಬ್ಬಾ.. ಎಂತಹ ಭಯಾನಕ ವಿಡಿಯೋ ಇದು’ ಅಂತ ಕಾಮೆಂಟ್ ಮಾಡಿದ್ದಾರೆ. ಈ ವಿಡಿಯೋವನ್ನು ‘ಲಯನ್ಸ್ ಹ್ಯಾಬಿಟಾಟ್’ ಎಂಬ ಹೆಸರಿನ ಸಾಮಾಜಿಕ ಮಾಧ್ಯಮ ಖಾತೆಯ ಪುಟದಲ್ಲಿ ಜುಲೈ 5ನೇ ತಾರೀಖು ಇದನ್ನು ಹಂಚಿಕೊಳ್ಳಲಾಗಿದೆ.

top videos
    First published: