World Record: ಅಬ್ಬಬ್ಬಾ ಈ ಮಹಿಳೆಯ ಉಗುರು ಸ್ಕೂಲ್ ಬಸ್​​ಗಿಂತ ಉದ್ದವಂತೆ! 10 ಮಹಿಳೆಯರ ಈ ವಿಶ್ವದಾಖಲೆಗಳನ್ನೊಮ್ಮೆ ನೋಡಿ

ಆರ್ಮ್‌ಸ್ಟ್ರಾಂಗ್ ನಂತೆಯೇ, ಪ್ರಪಂಚದಾದ್ಯಂತದ ಅನೇಕ ಮಹಿಳೆಯರು ಕೆಲವು ಅಸಾಮಾನ್ಯ ವಿಭಾಗಗಳಲ್ಲಿ ದಾಖಲೆಗಳನ್ನು ಸ್ಥಾಪಿಸುವ ಮೂಲಕ ತಮ್ಮದೇ ಆದ ಹೆಸರನ್ನು ಗಳಿಸಿದ್ದಾರೆ. ಅವುಗಳಲ್ಲಿ ಕೆಲವು ಇಲ್ಲಿವೆ ನೋಡಿ. ಈ 10 ಮಹಿಳೆಯರು ನಂಬಲಸಾಧ್ಯವಾದ ಜಾಗತಿಕ ದಾಖಲೆಗಳನ್ನು ಹೊಂದಿದ್ದಾರೆ, ಇದರಲ್ಲಿ ಮಾನವ ಇತಿಹಾಸದಲ್ಲೇ ಅತಿ ಹೆಚ್ಚು ಜೀವಿತಾವಧಿ ಮತ್ತು ತೊಡೆಗಳ ನಡುವೆ ಪುಡಿ ಮಾಡಿದ ಅತಿ ಹೆಚ್ಚು ಕಲ್ಲಂಗಡಿ ಹಣ್ಣುಗಳ ದಾಖಲೆಗಳು ಸಹ ಸೇರಿವೆ.

ಮಹಿಳೆಯ ಉದ್ದನೆಯ ಉಗುರುಗಳು

ಮಹಿಳೆಯ ಉದ್ದನೆಯ ಉಗುರುಗಳು

  • Share this:
ಸಾಮಾನ್ಯವಾಗಿ ಜನರು ಈ ಗಿನ್ನಿಸ್​ ವರ್ಲ್ಡ್ ರೆಕಾರ್ಡ್​ (ಜಿಡಬ್ಲ್ಯುಆರ್) ನಲ್ಲಿ (Guinness World Records) ತಮ್ಮ ಹೆಸರನ್ನು (Name) ದಾಖಲಿಸಿಕೊಳ್ಳಬೇಕು ಅಂತ ಕೆಲವೊಮ್ಮೆ ಸಾಮಾನ್ಯವಲ್ಲದ ಕೆಲಸಗಳಿಗೆ ಕೈ ಹಾಕುವುದನ್ನು ನಾವೆಲ್ಲಾ ನೋಡಿಯೇ ಇರುತ್ತೇವೆ. ಹೀಗೆ ಡಯಾನಾ ಆರ್ಮ್‌ಸ್ಟ್ರಾಂಗ್ ಎಂಬ ಮಹಿಳೆ ಅತಿ ಉದ್ದದ ಉಗುರುಗಳನ್ನು (Longest nails) ಬೆಳೆಸುವುದರೊಂದಿಗೆ ಈ ವಿಭಾಗದಲ್ಲಿದ್ದ ಹಳೆಯ ವಿಶ್ವ ದಾಖಲೆಯನ್ನು (World Record) ಮುರಿದಿದ್ದಾರೆ (Break). ಸ್ವತಃ ಜಿಡಬ್ಲ್ಯುಆರ್ ಈ ವಿಷಯವನ್ನು ಘೋಷಿಸಿದ್ದು, ಇದರ ಪ್ರಕಾರ ಅಮೆರಿಕದ (America) ಮಿನ್ನೆಸೋಟದ 63 ವರ್ಷದ ಮಹಿಳೆ ತನ್ನ ಎರಡೂ ಕೈಗಳಲ್ಲಿ ಅತಿ ಉದ್ದದ ಉಗುರುಗಳನ್ನು ಹೊಂದಿರುವ ದಾಖಲೆಯನ್ನು ಸೃಷ್ಟಿಸಿದ್ದಾರೆ ಎಂದು ಹೇಳಬಹುದು.

42 ಅಡಿ ಉದ್ದದ ಉಗುರುಗಳು 
ಆರ್ಮ್‌ಸ್ಟ್ರಾಂಗ್ ಅವರ ಕೈಗಳ ಸಂಯೋಜಿತ ಉಗುರು ಉದ್ದ 42 ಅಡಿಗಳು, ಇದು ಸಾಮಾನ್ಯವಾಗಿ ಒಂದು ಹಳದಿ ಬಣ್ಣದ ಶಾಲಾ ಬಸ್ ಗಿಂತ ಉದ್ದವಾಗಿದೆ ಎಂದು ವಿಶ್ವ ದಾಖಲೆಗಳ ಟ್ರ್ಯಾಕ್ ಅನ್ನು ನಿರ್ವಹಿಸುವ ಸಂಸ್ಥೆ ವರದಿ ಮಾಡಿದೆ. ಆರ್ಮ್‌ಸ್ಟ್ರಾಂಗ್ ಅವರು ಸುಮಾರು 25 ವರ್ಷಗಳಿಂದ ತನ್ನ ಉಗುರುಗಳನ್ನು ಬೆಳೆಸುತ್ತಿದ್ದಾರೆ ಎಂದು ಜಿಡಬ್ಲ್ಯುಆರ್ ವರದಿ ಮಾಡಿದೆ.

ಆರ್ಮ್‌ಸ್ಟ್ರಾಂಗ್ ನಂತೆಯೇ, ಪ್ರಪಂಚದಾದ್ಯಂತದ ಅನೇಕ ಮಹಿಳೆಯರು ಕೆಲವು ಅಸಾಮಾನ್ಯ ವಿಭಾಗಗಳಲ್ಲಿ ದಾಖಲೆಗಳನ್ನು ಸ್ಥಾಪಿಸುವ ಮೂಲಕ ತಮ್ಮದೇ ಆದ ಹೆಸರನ್ನು ಗಳಿಸಿದ್ದಾರೆ. ಅವುಗಳಲ್ಲಿ ಕೆಲವು ಇಲ್ಲಿವೆ ನೋಡಿ. ಈ 10 ಮಹಿಳೆಯರು ನಂಬಲಸಾಧ್ಯವಾದ ಜಾಗತಿಕ ದಾಖಲೆಗಳನ್ನು ಹೊಂದಿದ್ದಾರೆ. ಇದರಲ್ಲಿ ಮಾನವ ಇತಿಹಾಸದಲ್ಲೇ ಅತಿ ಹೆಚ್ಚು ಜೀವಿತಾವಧಿ ಮತ್ತು ತೊಡೆಗಳ ನಡುವೆ ಪುಡಿ ಮಾಡಿದ ಅತಿ ಹೆಚ್ಚು ಕಲ್ಲಂಗಡಿ ಹಣ್ಣುಗಳ ದಾಖಲೆಗಳು ಸಹ ಸೇರಿವೆ.

1. 25 ಮೀಟರ್ ಲಿಂಬೋ ಸ್ಕೇಟಿಂಗ್ ಮಾಡಿ ವಿಶ್ವ ದಾಖಲೆ
ನೆಲದಿಂದ ಕೇವಲ 6.69 ಇಂಚುಗಳಷ್ಟು ಮೇಲೆ ಇರುವ ಬಾರ್ ಗಳ ಅಡಿಯಲ್ಲಿ 25 ಮೀಟರ್ ದೂರಕ್ಕೆ ಲಿಂಬೋ ಸ್ಕೇಟಿಂಗ್ ಮಾಡುವ ಮೂಲಕ, 11 ವರ್ಷದ ಸೃಷ್ಟಿ ಶರ್ಮಾ ಅವರು ಈ ಹೊಸ ವಿಶ್ವ ದಾಖಲೆಯನ್ನು ಸೃಷ್ಟಿಸಿದ್ದರು.

ಇದನ್ನೂ ಓದಿ:   Emilia Clarke: ಅಯ್ಯೋ, ಈ ನಟಿ ಜೊತೆ ಸೆಲ್ಫಿ ತೆಗೆಸಿಕೊಳ್ಳಲು ಅಭಿಮಾನಿಗಳು 14 ಸಾವಿರ ರೂಪಾಯಿ ಪಾವತಿಸಬೇಕಂತೆ!

2. ವೇಗವಾಗಿ ತೊಡೆಗಳ ನಡುವೆ ಮೂರು ಕಲ್ಲಂಗಡಿ ಹಣ್ಣುಗಳನ್ನು ಪುಡಿ ಮಾಡಿ ದಾಖಲೆ
14.65 ಸೆಕೆಂಡುಗಳಲ್ಲಿ ಗುರಿ ಮುಟ್ಟಿದ ಉಕ್ರೇನ್ ನ ಓಲ್ಗಾ ಲಿಶ್ಚುಕ್ ತನ್ನ ತೊಡೆಗಳ ನಡುವೆ ಮೂರು ಕಲ್ಲಂಗಡಿ ಹಣ್ಣುಗಳನ್ನು ನುಜ್ಜುಗುಜ್ಜಾಗಿಸಿದರು. ಮುಂದೊಂದು ದಿನ ವಿಶ್ವದ ಅತ್ಯಂತ ಬಲಿಷ್ಠ ಮಹಿಳೆಯಾಗಲು ಇವರು ಬಯಸುತ್ತಾರೆ ಎಂದು ಹೇಳಿಕೊಂಡಿದ್ದಾರೆ.

3. ವಿಶ್ವದ ಅತ್ಯಂತ ಹಿರಿಯ ಜಿಮ್ನಾಸ್ಟ್
ಜಿಮ್ನಾಸ್ಟ್ ಗಳ ಮಟ್ಟಿಗೆ ಹೇಳುವುದಾದರೆ, ಜೊಹಾನ್ನಾ ಕ್ವಾಸ್ ಅತ್ಯಂತ ಹಿರಿಯಳು ಎಂದು ಹೇಳಬಹುದು. ಅವರು 2012 ರಲ್ಲಿ, 86ನೇ ವಯಸ್ಸಿನಲ್ಲಿ ಸ್ಪರ್ಧೆಗೆ ಪ್ರವೇಶಿಸಿದರು. ಅಲ್ಲಿ ಜಯ ಗಳಿಸುವುದರ ಮೂಲಕ ಇತಿಹಾಸವನ್ನೇ ನಿರ್ಮಿಸಿದರು.

4. ಒಂದು ನಿಮಿಷದಲ್ಲಿ 59 ಫುಟ್ಬಾಲ್ ಗಳನ್ನು ಜನರ ತಲೆಯ ಮೇಲಿಂದ ಹೊಡೆದ ದಾಖಲೆ
ಜೂನ್ 1, 2016 ರಂದು, ಸಿಲ್ವಾನಾ ಶಾಮುವಾನ್ ಕೆನಡಾದ ವಾಟರ್ಲೂದಲ್ಲಿ ವಿದ್ಯಾರ್ಥಿಗಳ ತಲೆಗಳ ಮೇಲಿನಿಂದ 59 ಫುಟ್ಬಾಲ್ ಗಳನ್ನು ಒದ್ದರು. ಈ ಪ್ರಯತ್ನವನ್ನು ಕ್ಯಾಥೊಲಿಕ್ ಶಾಲೆಯ ಜಿಮ್ನಾಷಿಯಂನಲ್ಲಿ ಒಂದು ದೊಡ್ಡ ಜನಸಮೂಹವು ನೋಡಿತು. ಇದು ತಮಾಷೆಯಾಗಿ ಕಂಡರೂ, ಇವರು ಒಂದು ನಿಮಿಷದಲ್ಲಿ ಇಷ್ಟೊಂದು ಫುಟ್‌ಬಾಲ್ ಗಳನ್ನು ಒದೆಯಲು ಎಷ್ಟು ದಣಿದಿರಬೇಕು ಎಂಬುದನ್ನು ನೀವೇ ಊಹೆ ಮಾಡಿ.

5. ಟೆನಿಸ್ ಇತಿಹಾಸದಲ್ಲಿಯೇ ಅತಿ ಹೆಚ್ಚು ಗ್ರ್ಯಾಂಡ್ಸ್ಲ್ಯಾಮ್ ಗಳು ಗೆದ್ದಿರುವ ದಾಖಲೆ
ಮಾರ್ಗರೆಟ್ ಕೋರ್ಟ್ ಅವರು 24 ಪ್ರಶಸ್ತಿಗಳನ್ನು ಪಡೆದಿದ್ದು, ಅಗ್ರ ಪುರುಷ ದಾಖಲೆ ಹೊಂದಿರುವ ರೋಜರ್ ಫೆಡರರ್ ಗಿಂತ ಏಳು ಪ್ರಶಸ್ತಿಗಳು ಹೆಚ್ಚು ಎಂದು ಹೇಳಬಹುದು. ಫೆಡರರ್ ಗಿಂತಲೂ ಹೆಚ್ಚು ಪ್ರಶಸ್ತಿ ಪಡೆದಿರುವ ಆಟಗಾರರ ಪಟ್ಟಿಯಲ್ಲಿ ಸ್ಟೆಫಿ ಗ್ರಾಫ್, ಸೆರೆನಾ ವಿಲಿಯಮ್ಸ್, ಹೆಲೆನ್ ವಿಲ್ಸ್ ಮೂಡಿ, ಕ್ರಿಸ್ ಎವರ್ಟ್ ಮತ್ತು ಮಾರ್ಟಿನಾ ನವ್ರಾಟಿಲೋವಾ ಇದ್ದಾರೆ.

ಇದನ್ನೂ ಓದಿ:  Video: ಬುಲೆಟ್​ ಬೈಕ್​ ಏರಿ ಮಂಟಪಕ್ಕೆ ಹೊರಟ ವಧು! ಕಾಲ ಬದಲಾಗಿದೆ ಕಣ್ರೀ

6. ಒಲಿಂಪಿಕ್ ಬ್ಯಾಸ್ಕೆಟ್ ಬಾಲ್ ಗೆ ಅತಿ ಹೆಚ್ಚು ಚಿನ್ನದ ಪದಕಗಳು
ಬಾಸ್ಕೆಟ್ ಬಾಲ್ ಆಟಗಾರ ತೆರೇಸಾ ಎಡ್ವರ್ಡ್ಸ್ ನಾಲ್ಕು ಚಿನ್ನದ ಒಲಿಂಪಿಕ್ ಪದಕಗಳು ಮತ್ತು ಒಂದು ಕಂಚಿನ ಪದಕವನ್ನು ಹೊಂದಿದ್ದು, ಅಗ್ರ ಪುರುಷ ಅಥ್ಲೀಟ್ ಕಾರ್ಮೆಲೊ ಆಂಥೋನಿ ಅವರ ಮೂರು ಚಿನ್ನ ಮತ್ತು ಒಂದು ಕಂಚು ಹೊಂದಿದ್ದಾರೆ.

7. ಇವರು ಅತ್ಯಂತ ಹಿರಿಯ ಜೀವಂತ ವ್ಯಕ್ತಿ
ಹತ್ತೊಂಬತ್ತನೇ ಶತಮಾನದಲ್ಲಿ ಜನಿಸಿದ ಮತ್ತು ಇನ್ನೂ ಜೀವಂತವಾಗಿರುವ ಕೊನೆಯ ವ್ಯಕ್ತಿ ಎಮ್ಮಾ ಮಾರ್ಟಿನಾ ಲುಗಿಯಾ ಮೊರಾನೊ ಎಂದು ಭಾವಿಸಲಾಗಿದೆ. ಅವರು ನವೆಂಬರ್ 29, 1899 ರಂದು ಜನಿಸಿದರು ಮತ್ತು ಇತ್ತೀಚೆಗೆ ಇಟಲಿಯ ವರ್ಸೆಲ್ಲಿಯಲ್ಲಿ, ಅವರು ತಮ್ಮ 117ನೇ ಹುಟ್ಟುಹಬ್ಬವನ್ನು ಸಹ ಆಚರಿಸಿಕೊಂಡರು.

8. ಅತ್ಯಂತ ಹಿರಿಯ ವ್ಯಕ್ತಿ
ಐತಿಹಾಸಿಕ ದಾಖಲೆಗಳ ಪ್ರಕಾರ, ವರದಿಯಾದ ಅತ್ಯಂತ ಹಿರಿಯರ ವಯಸ್ಸು 122 ವರ್ಷ 164 ದಿನಗಳು. ಫೆಬ್ರವರಿ 21, 1875 ರಂದು ಜೀನ್ ಲೂಯಿಸ್ ಕ್ಯಾಲ್ಮೆಂಟ್ ಅವರ ಜನನವನ್ನು ಗುರುತಿಸಲಾಯಿತು, ಮತ್ತು ಅವರು ಆಗಸ್ಟ್ 4, 1997 ರಂದು ನಿಧನರಾದರು.

9. ಅತಿ ಕಿರಿಯ ಒಲಿಂಪಿಕ್ ಚಿನ್ನದ ಪದಕ ವಿಜೇತ
14 ವರ್ಷ ವಯಸ್ಸಿನವರಾಗಿದ್ದಾಗ ಮಾರ್ಜೋರಿ ಗೆಸ್ಟ್ರಿಂಗ್ 1936 ರಲ್ಲಿ ಸ್ಪ್ರಿಂಗ್ ಬೋರ್ಡ್ ಡೈವಿಂಗ್ ಗಾಗಿ ಒಲಿಂಪಿಕ್ ಚಿನ್ನದ ಪದಕವನ್ನು ಗೆದ್ದರು. ಅವಳು ಇನ್ನೂ ಸಹ ಆ ದಾಖಲೆಯನ್ನು ಹೊಂದಿದ್ದಾಳೆ.

ಇದನ್ನೂ ಓದಿ:  Viral News: ತನ್ನನ್ನು ಕಚ್ಚಿದ ಹಾವಿಗೆ ಕಚ್ಚಿ ಸೇಡು ತೀರಿಸಿದ 2 ವರ್ಷದ ಕಂದ, ಸತ್ತ ಉರಗ!

10. ವಿಶ್ವಕಪ್ ಇತಿಹಾಸದಲ್ಲಿ ಮೂರು ಗೋಲುಗಳನ್ನು ಗಳಿಸಲು ಅತ್ಯಂತ ಕಡಿಮೆ ಸಮಯ
2015 ರ ಮಹಿಳಾ ವಿಶ್ವಕಪ್ ಪಂದ್ಯದಲ್ಲಿ ಕಾರ್ಲಿ ಲಾಯ್ಡ್ ಕೇವಲ 16 ನಿಮಿಷಗಳಲ್ಲಿ ಮೂರು ಗೋಲುಗಳನ್ನು ಗಳಿಸಿದರು.  ವೃತ್ತಿಪರ ಮಟ್ಟದಲ್ಲಿ ಮೂರು ಗೋಲುಗಳನ್ನು ಗಳಿಸಲು 16 ನಿಮಿಷಗಳು ಆಶ್ಚರ್ಯಕರವಾಗಿದೆ.
Published by:Ashwini Prabhu
First published: