ನೀವು ಒಂಟಿಯಾಗಿರುತ್ತೀರಾ? ಹಾಗಿದ್ದರೆ ನಿಮಗೆ ಸಿಗರೇಟ್​ ಘೀಳು ಹತ್ತಬಹುದು ಎಚ್ಚರ!

ಇಂಗ್ಲೆಂಡ್​ನ ಅಧ್ಯಯನ ತಂಡವೊಂದು ಸರ್ವೆ ನಡೆಸಿದೆ. ಅವರು ಹೇಳುವ ಪ್ರಕಾರ, ಒಂಟಿಯಾಗಿದ್ದ ಸಂದರ್ಭದಲ್ಲಿ ಸಾಕಷ್ಟು ಆಲೋಚನೆಗಳು ಬರುತ್ತವೆಯಂತೆ. ಈ ವೇಳೆ ಒಂಟಿತನ ದೂರ ಮಾಡಿಕೊಳ್ಳಲು ಅನೇಕರು ಸಿಗರೇಟ್​ ಸೇದುವ ಪ್ರಯತ್ನಕ್ಕೆ ಮುಂದಾಗುತ್ತಾರೆ.

news18-kannada
Updated:June 24, 2020, 9:58 AM IST
ನೀವು ಒಂಟಿಯಾಗಿರುತ್ತೀರಾ? ಹಾಗಿದ್ದರೆ ನಿಮಗೆ ಸಿಗರೇಟ್​ ಘೀಳು ಹತ್ತಬಹುದು ಎಚ್ಚರ!
ಧೂಮಪಾನ
  • Share this:
ಲಾಕ್​ಡೌನ್​ನಿಂದಾಗಿ ಅನೇಕರು ಒಂಟಿಯಾಗಿ ಇರಬೇಕಾದ ಪರಿಸ್ಥಿತಿ ಬಂದೊದಗಿದೆ. ಲಾಕ್​ಡೌನ್​ ಅವಧಿಯಲ್ಲಿ ಅನೇಕರು ಖಿನ್ನತೆಗೆ ತುತ್ತಾದ ಬಗ್ಗೆಯೂ ಹೇಳಿಕೊಂಡಿದ್ದಾರೆ. ಈ ಮಧ್ಯೆ ವೈದ್ಯರು ಆತಂಕಕಾರಿ ಮಾಹಿತಿಯೊಂದು ಬಿಚ್ಚಿಟ್ಟಿದ್ದಾರೆ. ಅದೇನೆಂದರೆ, ಒಂಟಿಯಾಗಿರುವುದರಿಂದ ನಿಮಗೆ ಸಿಗರೇಟು ಘೀಳು ಹತ್ತುವ ಸಾಧ್ಯತೆ ಹೆಚ್ಚಿರುತ್ತದೆಯಂತೆ.

ಈ ಬಗ್ಗೆ ಇಂಗ್ಲೆಂಡ್​ನ ಅಧ್ಯಯನ ತಂಡವೊಂದು ಸರ್ವೆ ನಡೆಸಿದೆ. ಅವರು ಹೇಳುವ ಪ್ರಕಾರ, ಒಂಟಿಯಾಗಿದ್ದ ಸಂದರ್ಭದಲ್ಲಿ ಸಾಕಷ್ಟು ಆಲೋಚನೆಗಳು ಬರುತ್ತವೆಯಂತೆ. ಈ ವೇಳೆ ಒಂಟಿತನ ದೂರ ಮಾಡಿಕೊಳ್ಳಲು ಅನೇಕರು ಸಿಗರೇಟ್​ ಸೇದುವ ಪ್ರಯತ್ನಕ್ಕೆ ಮುಂದಾಗುತ್ತಾರೆ. ಸಿಗರೇಟ್​ ಘೀಳು ಹತ್ತಿದ ಮೇಲೆ ಇದನ್ನು ಬಿಡುವ ಸಾಧ್ಯತೆ ತುಂಬಾನೇ ಕಡಿಮೆ ಎನ್ನುತ್ತಾರೆ ತಜ್ಞರು.

ಈ ಲಾಕ್​ಡೌನ್​ ಅವಧಿಯಲ್ಲಿ ಇಂಗ್ಲೆಂಡ್​ ಒಂದರಲ್ಲೇ ಸುಮಾರು 22 ಲಕ್ಷ ಜನರು ಸಾಮಾನ್ಯಕ್ಕಿಂತಲೂ ಹೆಚ್ಚು ಸಿಗರೇಟ್​ ಸೇದುತ್ತಾರಂತೆ. ಇದಕ್ಕೆಲ್ಲವೂ ಕಾರಣ ಒಂಟಿಯಾಗಿರುವುದೇ ಕಾರಣ ಎನ್ನುತ್ತದೆ ಅಧ್ಯಯನ.

ಒಂಟಿಯಾಗಿರುವವರು ಸಿಗರೇಟ್​ಗೆ ಅಡಿಕ್ಟ್​ ಆಗುವ ಸಾಧ್ಯತೆ ಹೆಚ್ಚು. ಒಮ್ಮೆ ಅಡಿಕ್ಟ್​ ಆದ ನಂತರ ಸಿಗರೇಟ್​ ಬಿಡೋ ಸಾಧ್ಯತೆ ತುಂಬಾನೇ ಕಡಿಮೆ. ಸಿಗರೇಟ್​ ಹೆಚ್ಚಾಗಿ ಸೇದುವುದರಿಂದ ಕ್ಯಾನ್ಸರ್​ ಸಂಬಂಧಿತ ಕಾಯಿಲೆ ಕಾಣಿಸಿಕೊಳ್ಳುತ್ತದೆ ಎನ್ನುತ್ತಾರೆ ತಜ್ಞರು.

ಕೊರೋನಾ ವೈರಸ್​ ನಿಯಂತ್ರಣಕ್ಕೆ ಲಾಕ್​ಡೌನ್​ ಘೋಷಣೆ ಮಾಡಲಾಗಿತ್ತು. ಈ ವೇಳೆ ಅನೇಕರು ಮನೆಗೆ ತೆರಳಲಾರದೆ ನಗರದಲ್ಲಿ ಸಿಕ್ಕಿ ಬಿದ್ದಿದರು. ಈ ವೇಳೆ ಲಕ್ಷಾಂತರ ಮಂದಿ ಸಿಗರೇಟ್​ ಅಡಿಕ್ಷನ್​ಗೆ ಒಳಗಾಗಿದ್ದರು. ಇದರಿಂದ ಮುಂದಿನ ದಿನಗಳಲ್ಲಿ ಮತ್ತಷ್ಟು ತೊಂದರೆ ಉಂಟಾಗುವ ಸಾಧ್ಯತೆ ಇದೆ ಎನ್ನುತ್ತಾರೆ ವೈದ್ಯರು.
First published:June 24, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading