Cat Video: ಸರ್ಕಸ್ ಮಾಡಿ ಈ ಬೆಕ್ಕು ಹಾಯಾಗಿ ಮಲಗಿದ್ದೆಲ್ಲಿ ಗೊತ್ತಾ? ಮಮತೆ ಉಕ್ಕಿಸೋ ವಿಡಿಯೋ ವೈರಲ್

ಸಾಮಾನ್ಯವಾಗಿ ಮಕ್ಕಳಾದವರಿಗೆ ತಾಯಿಯ ತೊಡೆಗಳ ಮೇಲೆ ಜಾರಿಕೊಂಡು ಮಲಗುವುದು ತುಂಬಾನೆ ಇಷ್ಟವಾಗುತ್ತದೆ. ಹಾಗೆ ಮಲಗಿ ವಿಶ್ರಾಂತಿ ಪಡೇಯುವಾಗ ಸಿಗುವ ಆನಂದವೇ ಬೇರೆ ಅನಿಸುತ್ತದೆ. ಬಹುಶಃ ಇಲ್ಲಿರುವ ಬೆಕ್ಕಿಗೂ ಸಹ ಅಂತಹ ವಿಶ್ರಾಂತಿ ಬೇಕೆನಿಸಿರಬಹುದೇನೋ ಅದಕ್ಕಾಗಿ ಅದು ಈ ರೀತಿ ಮಲಗಿರುವುದು ಈಗ ಸಖತ್ ವೈರಲ್ ಆಗುತ್ತಿದೆ.

ಹಾಯಾಗಿ ಮಲಗಿದ ಬೆಕ್ಕು

ಹಾಯಾಗಿ ಮಲಗಿದ ಬೆಕ್ಕು

  • Share this:
ಈಗಿಗಂತೂ ಸಾಮಾಜಿಕ ಮಾಧ್ಯಮಗಳಲ್ಲಿ (Social Media) ತರಾವರಿ ವಿಡಿಯೋಗಳನ್ನು ಅಪ್ಲೋಡ್ (Video Upload) ಮಾಡಲಾಗುತ್ತಿದೆ. ಜನರ ಗಮನಸೆಳೆಯಲೆಂದು ಕೆಲವರು ನಗು ಬರಿಸುವಂತಹ, ತುಂಟಾಟತನಗಳಿರುವ ಅಥವಾ ಪ್ರಕೃತಿಯ ವಿಸ್ಮಯತೆಗಳಿರುವ ವಿಡಿಯೋಗಳನ್ನು ಅಪ್ಲೋಡ್ ಮಾಡಿದರೆ ಇನ್ನೂ ಕೆಲವರು ಕೋತಿ (Monkey), ಆನೆ (Elephant), ಇತ್ಯಾದಿ ಪಶು-ಪಕ್ಷಿಗಳು (Birds) ಇರುವ ವಿಡಿಯೋಗಳನ್ನು ಹೆಚ್ಚು ಹೆಚ್ಚು ಅಪ್ಲೋಡ್ ಮಾಡುತ್ತಿರುತ್ತಾರೆ. ಅದರಲ್ಲೂ ವಿಶೇಷವಾಗಿ ಈ ನಾಯಿ(Dog), ಬೆಕ್ಕುಗಳು (Cat) ತುಂಟತನ ಮಾಡುವ ಅಥವಾ ಪರಸ್ಪರ ಟಾಮ್ ಆಂಡ್ ಜೆರಿ (Tom and Jerry)  ರೀತಿ ಸ್ಪರ್ಧೆಗೆ ಬೀಳುವಂತಹ ವಿಡಿಯೋಗಳು ಸಾಕಷ್ಟು ವೈರಲ್ ಆಗುತ್ತಿರುತ್ತವೆ.

ಅದೇ ರೀತಿಯಲ್ಲಿ ಇಲ್ಲೊಂದು ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ ಅಂತ ಹೇಳಬಹುದು. ಅಸಲಿಗೆ ಈ ವಿಡಿಯೋದಲ್ಲಿ ಒಂದು ಬೆಕ್ಕು ಹಾಯಾಗಿ ಮಲಗಿ ವಿಶ್ರಾಂತಿ ಪಡೆಯುತ್ತಿರುವುದನ್ನು ಗಮನಿಸಬಹುದು. ಅರೇ...ಇದೇನು ದೊಡ್ಡ ಮಹಾ, ಬೆಕ್ಕುಗಳು ಮಲಗುವುದರಲ್ಲೇನಿದೆ ವಿಶೇಷ ಎಂದು ನಿಮಗನಿಸಬಹುದು. ಆದರೆ, ಸ್ವಲ್ಪ ತಾಳಿ, ವಿಡಿಯೋ ನೋಡಿ.

ಬೆಕ್ಕಿನ ವಿಡಿಯೋ ವೈರಲ್
ಸಾಮಾನ್ಯವಾಗಿ ಮಕ್ಕಳಾದವರಿಗೆ ತಾಯಿಯ ತೊಡೆಗಳ ಮೇಲೆ ಜಾರಿಕೊಂಡು ಮಲಗುವುದು ತುಂಬಾನೆ ಇಷ್ಟವಾಗುತ್ತದೆ. ಹಾಗೆ ಮಲಗಿ ವಿಶ್ರಾಂತಿ ಪಡೇಯುವಾಗ ಸಿಗುವ ಆನಂದವೇ ಬೇರೆ ಅನಿಸುತ್ತದೆ. ಬಹುಶಃ ಇಲ್ಲಿರುವ ಬೆಕ್ಕಿಗೂ ಸಹ ಅಂತಹ ವಿಶ್ರಾಂತಿ ಬೇಕೆನಿಸಿರಬಹುದೇನೋ ಅದಕ್ಕಾಗಿ ಅದು ಈ ರೀತಿ ಮಲಗಿರುವುದು ಈಗ ಸಖತ್ ವೈರಲ್ ಆಗುತ್ತಿದೆ.

ವಿಡಿಯೋದಲ್ಲಿ ಏನಿದೆ
Buitengebieden ಎಂಬ ಖಾತೆಯಿಂದ ಟ್ವಿಟರ್ ನಲ್ಲಿ ಈ ವಿಡಿಯೋ ಅನ್ನು ಹಂಚಿಕೊಳ್ಳಲಾಗಿದ್ದು ಅದರಲ್ಲಿ ಬೆಕ್ಕೊಂದು ಉದ್ಯಾನದಲ್ಲಿರುವ ಎರಡು ಪ್ರತಿಮೆಗಳ ಪೈಕಿ ಹೆಣ್ಣಿನ ಪ್ರತಿಮೆಯನ್ನು ತಾನು ಮಲಗಿ ವಿಶ್ರಾಂತಿ ಪಡೆಯಲು ಬಳಸಿಕೊಂಡಿರುವುದನ್ನು ಗಮನಿಸಬಹುದು. ಆ ಬೆಕ್ಕು ಹೇಗೆ ಮಲಗಿದೆ ಎಂದರೆ ಆ ಪ್ರತಿಮೆಯಲ್ಲಿರುವ ಹೆಣ್ಣು ಸ್ವತಃ ಆ ಬೆಕ್ಕನ್ನು ತನ್ನ ತೊಡೆಯ ಮೇಲೆ ಮಲಗಿಸಿಕೊಂಡಿದ್ದಾಳೇನೋ ಅನ್ನುವಂತಿದೆ. ಅಂದರೆ ಆ ಬೆಕ್ಕು ಹೆಣ್ಣಿನ ಪ್ರತಿಮೆಯ ಎರಡು ಕೈಗಳ ಮಧ್ಯೆ ಸರ್ಕಸ್ ಮಾಡಿ ತೂರಿಕೊಂಡು ತೊಡೆಗಳು ಆಸನವಾಗುವಂತೆ ಮಾಡಿಕೊಂಡು ಹಾಯಾಗಿ ಮಲಗಿದ್ದನ್ನು ನೋಡಿದರೆ ಯಾರಿಗೆ ಆಗಲಿ ಒಂದು ಕ್ಷಣ ಅಚ್ಚರಿಯಾಗುವುದು ಸಹಜ ಎನ್ನಬಹುದು.



ಆರು ದಶಲಕ್ಷಕ್ಕೂ ಹೆಚ್ಚಿನ ವೀಕ್ಷಣೆ ಪಡೆದ ವಿಡಿಯೋ
ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿರುವ ಈ ವಿಡಿಯೋ ಇಲ್ಲಿಯವರೆಗೂ ಆರು ದಶಲಕ್ಷಕ್ಕೂ ಹೆಚ್ಚಿನ ವೀಕ್ಷಣೆಗಳನ್ನು ಪಡೆದಿದ್ದು ಅಸಂಖ್ಯಾತ ಲೈಕುಗಳನ್ನು ಸಹ ಪಡೆದಿದೆ. ಇನ್ನು ಆನ್ಲೈನ್ ಬಳಕೆದಾರರಂತೂ ವಿಡಿಯೋ ನೋಡಿ ಪ್ರತಿಕ್ರಿಯೆಗಳ ಮಹಾಪೂರವನ್ನೇ ಹರಿಸಿದ್ದಾರೆಂದು ಹೇಳಬಹುದು. ಒಟ್ಟಿನಲ್ಲಿ ಈ ವಿಡಿಯೋಗೆ ಸದ್ಯ ಮಿಶ್ರಪ್ರತಿಕ್ರಿಯೆಗಳು ವ್ಯಕ್ತವಾಗಿವೆ.

ಇದನ್ನೂ ಓದಿ:  Viral Video: ನೀವು ನವಿಲು ಹಾರೋದು ನೋಡಿದ್ದೀರಾ? ಈ ಸ್ಲೋ ಮೋಷನ್ ವೀಡಿಯೋ ನೋಡಿ

ವಿಡಿಯೋ ನೋಡಿ ಪ್ರತಿಕ್ರಿಯೆಗಳ ಮಹಾಪೂರವನ್ನೇ ಹರಿಸಿದ ನೆಟ್ಟಿಗರು
ಕೆಲವರು ಈ ವಿಡಿಯೋ ನೋಡಿ ಇದು ಎಷ್ಟು ಮುದ್ದಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರೆ ಇನ್ನೂ ಕೆಲವರು ಆ ಬೆಕ್ಕಿನ ಸ್ಥಿತಿ ನೋಡಿ ಭಾವುಕರಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಒಬ್ಬರು ಇದನ್ನು ನೋಡಿ, "ಓಹ್ ಇದು ಸಾಕಷ್ಟು ಮುದ್ದಾಗಿದೆ, ಆದರೆ ಒಂದು ರೀತಿಯ ಬೇಸರ ಕೂಡ ಆಗುತ್ತಿದೆ, ಆ ಬೆಕ್ಕಿಗೆ ಬೇಕಾಗಿರುವ ನೈಜ ಪ್ರೀತಿ ತೋರಿಸಲು ತಬ್ಬಿಕೊಳ್ಳಲು ಯಾರೂ ಇಲ್ಲವೆ" ಎಂದು ಭಾವುಕರಾಗಿ ಪ್ರಶ್ನಿಸಿದ್ದಾರೆ.

ಮತ್ತೊಬ್ಬ ಬಳಕೆದಾರ, "ಬೆಕ್ಕುಗಳು ಎಷ್ಟೊಂದು ಅದ್ಭುತವಾಗಿರುತ್ತವೆ, ಎಂತಹ ಕ್ಲಿಷ್ಟಕರ ಪರಿಸ್ಥಿತಿಯಲ್ಲೂ ಅವು ತಮ್ಮನ್ನು ತಾವು ಕಂಫರ್ಟ್ ಆಗಿರುವಂತೆ ನೋಡಿಕೊಳ್ಳುತ್ತವೆ. ಇಲ್ಲಿರುವ ಕಲ್ಲು ಸಮತಟ್ಟಾಗಿಯೂ ಇಲ್ಲಿ, ಅಂಥದ್ದರಲ್ಲಿ ಅದು ಎಷ್ಟೊಂದು ಹಾಯಾದ ವಿಶ್ರಾಂತಿ ಪಡೆಯುತ್ತಿದೆ, ಇದು ಅದ್ಭುತವಾದ ಚಿತ್ರ" ಎಂದು ಪ್ರಶಂಸೆಯ ಮಾತನ್ನಾಡಿದ್ದಾರೆ.

ಇದನ್ನೂ ಓದಿ:  Simba: ಈ ಮೇಕೆ ಮರಿಯ ಕಿವಿ ಎಷ್ಟು ಉದ್ದಯಿದೆ ಅಂತಾ ಗೊತ್ತಾದ್ರೆ ನೀವು ಶಾಕ್ ಆಗೋದು ಗ್ಯಾರೆಂಟಿ

"ಪ್ರತಿಯೊಬ್ಬರಿಗೂ ಪ್ರೀತಿಯ ಅವಶ್ಯಕತೆಯಿದೆ, ಇದೊಂದು ಭಾವನೆ, ಎಲ್ಲ ಕಡೆಗಳಿಂದಲೂ ಇದನ್ನು ಸ್ವೀಕರಿಸಬೇಕಾಗುತ್ತದೆ" ಎಂದು ಒಬ್ಬರು ಬರೆದರೆ, ಮಗದೊಬ್ಬರು, "ನಾನು ಈ ವಿಡಿಯೋವನ್ನು ಪ್ರೀತಿಸುತ್ತೇನೆ, ನನಗೆ ಬೆಕ್ಕುಗಳೆಂದರೆ ಇಷ್ಟ" ಎಂದು ಹೇಳಿಕೊಂಡಿದ್ದಾರೆ.
Published by:Ashwini Prabhu
First published: