Viral Video: ಬರೋಬ್ಬರಿ 14 ಸಿಂಹಗಳ ಬಾಯಿಯಿಂದ ತಪ್ಪಿಸಿಕೊಂಡ ಆನೆ! ಸಾವು ಗೆದ್ದ ಗಜರಾಜನ ವಿಡಿಯೋ ಇಲ್ಲಿದೆ ನೋಡಿ

ಅಚ್ಚರಿಯ ಸಂಗತಿ ಎಂದರೆ, ಆನೆ 14 ಸಿಂಹಗಳ ಗುಂಪನ್ನು ಜಯಿಸಿ ತನ್ನ ಪ್ರಾಣ ಉಳಿಸಿಕೊಂಡಿದೆ. ಅದರಲ್ಲೂ ಆನೆಯ ಧೈರ್ಯ ಎಷ್ಟಿತ್ತೆಂದರೆ ನೀರಿನಲ್ಲಿ ಚಲಿಸುವ ವೇಳೆ ಭೇಟೆಗಾಗಿ ಹಿಂಬದಿಯಿಂದ ಬರುತ್ತಿದ್ದ ಸಿಂಹಗಳನ್ನು ಮತ್ತೊಮ್ಮೆ ಅಟ್ಟಾಡಿಸಿಕೊಂಡು ಬಂದಿದೆ. ಈ ದೃಶ್ಯ ಕ್ಯಾಮೆರಾದಲ್ಲಿ ಚೆನ್ನಾಗಿ ಸೆರೆಯಾಗಿದೆ.

ಆನೆಗಳ ಮೇಲೆ ದಾಳಿ ಮಾಡುತ್ತಿರುವ ಸಿಂಹಗಳ ದೃಶ್ಯ

ಆನೆಗಳ ಮೇಲೆ ದಾಳಿ ಮಾಡುತ್ತಿರುವ ಸಿಂಹಗಳ ದೃಶ್ಯ

  • Share this:
    ಆನೆ ಬಂತು ಆನೆ..ಯಾವ ಊರ ಆನೆ?.. ಸಿದ್ಧಾಪುರದ ಆನೆ.. ಇಲ್ಲಿಗೆ ಎಕೆ ಬಂತು?..ನೀರು ಕುಡಿಯಲು ಬಂತು ಎಂಬ ಪ್ರೈಮರಿ ಶಾಲೆಯಲ್ಲಿ ಟೀಚರ್​ ಹೇಳಿಕೊಟ್ಟ ಹಾಡು ನೆನಪಾಗಬಹುದು. ಹಾಗಾಗಿ ಆನೆ ಶಕ್ತಿಶಾಲಿ ಪ್ರಾಣಿ ಎಂಬುದು ಎಲ್ಲರಿಗೂ ತಿಳಿದಿದೆ. ಆದರೆ ಆನೆ ನಮಗ್ಯಾವ ಲೆಕ್ಕ ಎಂಬಂತೆ ಸಿಂಹಗಳ ಸೈನ್ಯ ಆನೆಯೊಂದನ್ನು ಭೇಟೆಯಾಡುವ ದೃಶ್ಯವನ್ನು ನೋಡಿದ್ದೀರಾ?. ಒಂಟಿ ಸಲಗದ ಮೇಲೆ ಸಿಂಹಗಳ (Loins) ಹಿಂಡು ದಾಳಿ ಮಾಡುತ್ತವೆ. ಆನೆಯ ಬೆನ್ನ ಮೇಲೇರಿ ಕುಳಿತು ಅದನ್ನು ಹಿಡಿದು ತಿನ್ನಲು ಪ್ರಯತ್ನಿಸುತ್ತವೆ. ಆದರೆ ಒಂಟಿ ಆನೆ (Elephant) ಮಾತ್ರ ಸಿಂಹಗಳನ್ನು ಎದುರಿಸಿ ಅವುಗಳ ಬಾಯಿಯಿಂದ ತಪ್ಪಿಸಿಕೊಳ್ಳುತ್ತದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral)​ ಆಗಿದೆ. ಐಎಫ್​ಎಸ್ (IFS)​ ಅಧಿಕಾರಿಯೊಬ್ಬರು ಈ ವಿಡಿಯೋವನ್ನು (Video) ಶೇರ್​ ಮಾಡಿದ್ದಾರೆ.

    ಐಎಫ್​ಎಸ್​ ಅಧಿಕಾರಿ ಸುಸಾಂತ್​ ನಂದ ಅವರು ಸಿಂಹಗಳ ಸೈನ್ಯ ಒಂಟಿ ಆನೆಯ ಮೇಲೆ ದಾಳಿ ಮಾಡುವ ದೃಶ್ಯವನ್ನು ಟ್ವಿಟ್ಟರ್​ ಖಾತೆಯಲ್ಲಿ ಶೇರ್​ ಮಾಡಿದ್ದಾರೆ. ಬರೋಬ್ಬರಿ 14 ಸಿಂಹಗಳು ಆನೆಯ ಮೇಲೆ ದಾಳಿ ಮಾಡುತ್ತವೆ. ಅದರಲ್ಲಿ ಒಂದು ಆನೆಯ ಬೆನ್ನ ಮೇಲೆ ಕುಳಿತು ದಾಳಿ ಮಾಡಿದರೆ. ಮತ್ತೊಂದು ಸಿಂಹ ಆನೆಯ ಹಿಂಭಾಗದಿಂದ ದಾಳಿ ಮಾಡುತ್ತದೆ. ಆದರೆ ಆನೆ ಈ ಸಿಂಹಗಳಿಂದ ತಪ್ಪಿಸಿಕೊಳ್ಳಲು ಹತ್ತಿರದಲ್ಲಿದ್ದ ಹೊಳೆಯ ಬದಿ ಓಡುತ್ತದೆ. ಆದರೂ ಸಿಂಹಗಳು ಅದರ ಮೇಲೆ ದಾಳಿ ಮಾಡುವುದನ್ನು ಬಿಡುವುದಿಲ್ಲ. ಆನೆ ಎಷ್ಟು ಬಾರಿ ತಿರುಗಿ ಸಿಂಹಗಳನ್ನು ಹಿಮ್ಮೆಟ್ಟಲು ನೋಡಿದರು, ಅವುಗಳು ನಿರಂತರ ದಾಳಿ ಮಾಡುತ್ತಿರುತ್ತವೆ. ಆದರೆ ನೀರಿನಲ್ಲಿ ಮುಂದಕ್ಕೆ ಸಾಗುತ್ತಾ ಹೋದಂತೆ ಸಿಂಹಗಳಿಗೆ ಭಯವಾಗುತ್ತದೆ. ಬಳಿಕ ಆನೆಯ ಹಿಂಭಾಗದಿಂದ ದಾಳಿ ಮಾಡುತ್ತಿದ್ದ ಸಿಂಹ ಸುಮ್ಮನಾಗುತ್ತದೆ. ಮತ್ತೊಂದೆಡೆ ಬೆನ್ನ ಮೇಲೆ ಕುಳಿತ ಸಿಂಹ ಕೂಡ ನೀರಿಗೆ ಹಾರುತ್ತದೆ. ಈ ವೇಳೆ ಸಿಟ್ಟಿಗೆದ್ದ ಆನೆ ಮತ್ತೆ ಆ ಸಿಂಹವನ್ನು ಬೆನ್ನಟ್ಟಿ ದಡದ ಬಳಿ ಬರುತ್ತದೆ. ಈ ವೇಳೆ ಸಿಂಹವೊಂದು ಆನೆಗೆ ಹಿಂಭಾಗದಿಂದ ಮತ್ತೆ ದಾಳಿ ಮಾಡುತ್ತದೆ.  ಹೇಗಾದರು ತಪ್ಪಿಸಿಕೊಂಡ ಆನೆ ಅತ್ತ ದಡ ಸೇರಲು ನೀರಿನಲ್ಲಿ ಸಾಗುತ್ತದೆ.

    ಅಚ್ಚರಿಯ ಸಂಗತಿ ಎಂದರೆ, ಆನೆ 14 ಸಿಂಹಗಳ ಗುಂಪನ್ನು ಜಯಿಸಿ ತನ್ನ ಪ್ರಾಣ ಉಳಿಸಿಕೊಂಡಿದೆ. ಅದರಲ್ಲೂ ಆನೆಯ ಧೈರ್ಯ ಎಷ್ಟಿತ್ತೆಂದರೆ ನೀರಿನಲ್ಲಿ ಚಲಿಸುವ ವೇಳೆ ಭೇಟೆಗಾಗಿ ಹಿಂಬದಿಯಿಂದ ಬರುತ್ತಿದ್ದ ಸಿಂಹಗಳನ್ನು ಮತ್ತೊಮ್ಮೆ ಅಟ್ಟಾಡಿಸಿಕೊಂಡು ಬಂದಿದೆ. ಈ ದೃಶ್ಯ ಕ್ಯಾಮೆರಾದಲ್ಲಿ ಚೆನ್ನಾಗಿ ಸೆರೆಯಾಗಿದೆ.

    ಇದನ್ನೂ ಓದಿ: Wild Mango: ಕಾಡಲ್ಲಿ ಸಿಗೋ ಮಾವನ್ನೂ ಈಗ ಕೃಷಿ ಮಾಡ್ತಿದ್ದಾರೆ, ಹೊಸ ಪ್ರಯತ್ನವಿದು

    ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಅನೇಕರು ಈ ವಿಡಿಯೋವನ್ನು ರಿಟ್ವೀಟ್​ ಮಾಡಿದ್ದಾರೆ. ಇನ್ನು ಕೆಲವರು ಕಾಮೆಂಟ್​ ಬರೆದಿದ್ದಾರೆ. ಸುಸಾಂತ್​ ನಂದ ಅವರು ಟ್ವಿಟ್ಟರ್​ನಲ್ಲಿ ‘‘ಆನೆಯು 14 ಸಿಂಹಗಳ ದಾಳಿಯಿಂದ ಗೆಲ್ಲುತ್ತದೆ. ಕಾಡಿನ ರಾಜ ಯಾರಿರಬೇಕು?’’ ಎಂದು ವಿಡಿಯೋಗೆ ಶೀರ್ಷಿಕೆ ನೀಡಿದ್ದಾರೆ.





    ಇದನ್ನೂ ಓದಿ: Billionaire: 5 ಸಾವಿರದಿಂದ ಕೋಟ್ಯಧಿಪತಿಯಾದ ಯುವಕನ ಕಥೆ ಇದು! ಸೈನಿಕನಾಗಬೇಕಿದ್ದವ ಈಗ ಸೂಪರ್​ ಟ್ರೇಡರ್​

    ಸಿಂಹಗಳು ಆನೆಗಳ ಮೇಲೆ ದಾಳಿ ಮಾಡುವುದು ಇದೇ ಮೊದಲೇನಲ್ಲ. ಹಸಿವಾದಾಗ ಅಥವಾ ಆಹಾರಕ್ಕಾಗಿ ಸಿಂಹಗಳು ಆನೆ, ಜಿರಾಫೆ, ಜಿಂಕೆ, ಕೋಣ ಎಲ್ಲಾ ಪ್ರಾಣಿಗಳನ್ನು ಹಿಡಿದು ತಿನ್ನುತ್ತವೆ. ಅದರಲ್ಲೂ ಇತ್ತೀಚೆಗೆ ಅನಿಮಲ್​ ಪ್ಲಾನೆಟ್​ ಚಾನೆಲ್​ನಲ್ಲಿ ಹಸಿದ ಮುದಿ ಸಿಂಹವೊಂದು ಕಾಡುಕೋಣ ಮೇಲೆ ಅಟ್ಯಾಕ್​ ಮಾಡುತ್ತದೆ. ಆದರೆ ಕಾಡುಕೋಣವು ಸಿಂಹದ ಬಾಯಿಯಿಂದ ತಪ್ಪಿಸಿಕೊಳ್ಳಲು ಕೊಂಬಿನಿಂದ ಗುದ್ದುತ್ತದೆ. ಆದರೆ ಗುದ್ದಿದ ರಭಸಕ್ಕೆ ಸಿಂಹಕ್ಕೆ ಗಾಯವಾಗಿದ್ದರು ಭೇಟೆಯ ಹೋರಾಟವನ್ನು ನಿಲ್ಲಿಸುದಿಲ್ಲ. ಕೊನೆಗೆ ಕಾಡುಕೋಣ ತಪ್ಪಿಸಿಕೊಳ್ಳುತ್ತದೆ. ಸಿಂಹ ಗಾಯವಾಗಿ ಮಲಗುತ್ತದೆ. ಈ ದೃಶ್ಯ ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿತ್ತು.
    Published by:Harshith AS
    First published: