HOME » NEWS » Trend » LONDON NAKED WOMEN KERRI BARNESIS RAISING DFUND FOR MENTAL HEALTH BY CYCLING AROUND LONDON HG

ಆ ಒಂದು ದುರಂತದಿಂದ ನಗ್ನವಾಗಿ ಸುತ್ತುತ್ತಿದ್ದಾಳೆ ಈಕೆ; ಇದರ ಹಿಂದಿದೆ ಒಂದೊಳ್ಳೆ ಉದ್ದೇಶ

ಅರೆನಗ್ನವಾಗಿ ಸುತ್ತಾಡುತ್ತಿರುವ ಈಕೆಯ ಹೆಸರು ಕೆರ್ರಿ ಬರ್ನೆಸ್​​. ಮೈ ಮೇಲೆ ಬಟ್ಟೆಯಿಲ್ಲದೆ ಲಂಡನ್ ಬೀದಿಗಳಲ್ಲಿ ಸೈಕ್ಲಿಂಗ್ ಮಾಡುತ್ತಿದ್ದಾಳೆ.

news18-kannada
Updated:December 4, 2020, 7:17 PM IST
ಆ ಒಂದು ದುರಂತದಿಂದ ನಗ್ನವಾಗಿ ಸುತ್ತುತ್ತಿದ್ದಾಳೆ ಈಕೆ; ಇದರ ಹಿಂದಿದೆ ಒಂದೊಳ್ಳೆ ಉದ್ದೇಶ
ಕೆರ್ರಿ ಬರ್ನೆಸ್
  • Share this:
ನಗ್ನವಾಗಿ ಯಾರಾದರು ರಸ್ತೆ ಮೇಲೆ ಓಡಾಡುವರನ್ನು ಕಂಡರೆ ಅವರನ್ನು ಮಾನಸಿಕ ಅಸ್ವಸ್ಥ ಇರಬೇಕು ಎಂದು ಹೇಳುತ್ತಾರೆ. ಆದರೆ ಇಲ್ಲೊಬ್ಬಳು ಹುಡುಗಿ ಬೆತ್ತಲಾಗಿ ಸೈಕಲ್ ಓಡಿಸುತ್ತಿದ್ದಾಳೆ. ಆದರೆ ಆಕೆ ಮಾನಸಿಕ ಅಸ್ವಸ್ಥೆಯಂತು ಅಲ್ಲವೇ ಅಲ್ಲ. ನಿರ್ದಿಷ್ಟ ಕಾರಣವೊಂದನ್ನು ಇಟ್ಟುಕೊಂಡು ಆಕೆ ಬೆತ್ತಲಾಗಿ ಸುತ್ತಾಡುತ್ತಿದ್ದಾಳೆ. ಜೊತೆಗೆ ಜಾಗೃತಿಯನ್ನು ಮೂಡಿಸುತ್ತಿದ್ದಾಳೆ. ಹಾಗಿದ್ದರೆ, ಹುಡುಗಿಯ ಬೆತ್ತಲೆ ಸುತ್ತಾಟದ ಹಿಂದಿರುವ ಉದ್ದೇಶವೇನು?. ಯಾಕಾಗಿ ಆಕೆ ನಗ್ನವಾಗಿ ಪರ್ಯಟನೆ ಮಾಡುತ್ತಿದ್ದಾಳೆ? ಈ ಕುರಿತು ಮಾಹಿತಿ ಇಲ್ಲಿದೆ.

ಅರೆನಗ್ನವಾಗಿ ಸುತ್ತಾಡುತ್ತಿರುವ ಈಕೆಯ ಹೆಸರು ಕೆರ್ರಿ ಬರ್ನೆಸ್​​. ಮೈ ಮೇಲೆ ಬಟ್ಟೆಯಿಲ್ಲದೆ ಲಂಡನ್ ಬೀದಿಗಳಲ್ಲಿ ಸೈಕ್ಲಿಂಗ್ ಮಾಡುತ್ತಿದ್ದಾಳೆ. ಆದರೆ ಆಕೆ ಒಂದು ಉದ್ದೇಶವನ್ನಿಟ್ಟುಕೊಂಡು ಹೀಗೆ ಜಾಗೃತಿ ಮೂಡಿಸುತ್ತಿದ್ದಾಳೆ.

ಲಾಕ್​ಡೌನ್ ಒತ್ತಡದಿಂದಾಗಿ ಕೆರ್ರಿಯ ಪ್ರೀತಿ ಪಾತ್ರರೊಬ್ಬರು ಆತ್ಮಹತ್ಯೆ ಮಾಡಿಕೊಂಡರು. ಆದರೆ ಲಾಕ್​ಡೌನ್ ಸಮಯದಲ್ಲಿ ಕೆರ್ರಿ ಬೇರೆ ಕಡೆಯಲ್ಲಿದ್ದರು. ಹಾಗಾಗಿ ಅವರಿಗೆ ಸಹಾಯ ಮಾಡಲಾಗಲಿಲ್ಲವಂತೆ. ಇದರಿಂದಾಗಿ ಕೆರ್ರಿ ಬರ್ನೆಸ್​ ಪಶ್ಚಾತಾಪ ಪಡುತ್ತಾಳೆ.

ಕೆರ್ರಿ ಬರ್ನೆಸ್


ಹೀಗಿರುವಾಗ ಕೆರ್ರಿಗೆ ಮಾನಸಿಕ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವ ಆಲೋಚನೆ ಬರುತ್ತದೆ. ಹಾಗಾಗಿ ಸೈಕ್ಲಿಂಗ್ ಮಾಡಲು ಮುಂದಾಗುತ್ತಾಳೆ. ಸಿಕ್ಕ ಜನರೊಂದಿಗೆ ಮಾತನಾಡುತ್ತಾ, ಮಾನಸಿಕ ಆರೋಗ್ಯ ಸಮಸ್ಯೆ ಬಗ್ಗೆ ಚರ್ಚಿಸುತ್ತಿದ್ದಾಳೆ. ಅಷ್ಟು ಮಾತ್ರವಲ್ಲದೆ, ಕೆರ್ರಿ ಮಾನಸಿಕವಾಗಿ ಧೈರ್ಯಗುಂದಿದವರಿಗೆ ಸಾಂತ್ವನ ಹೇಳುತ್ತಿದ್ದಾರೆ.

ಕೆರ್ರಿ ಕೆಲಸ ಕಳೆದುಕೊಂಡವರಿಗೆ ನೆರವು ನೀಡುವ ಉದ್ದೇಶವನ್ನು ಹೊಂದಿದ್ದಾರೆ. ಸೈಕ್ಲಿಂಗ್ ಮಾಡುವ ಮೂಲಕ ನೆರವು ಸಂಗ್ರಹಿಸುತ್ತಿದ್ದಾಳೆ. ಆಕೆ ಪ್ರಾರಂಭದಲ್ಲಿ 99 ಸಾವಿರ ರೂಗಳನ್ನು ಸಂಗ್ರಹಿಸುವ ಯೋಜನೆ ಹಾಕಿಕೊಂಡಿದ್ದಳಂತೆ. ಆದರೆ 3.97 ಲಕ್ಷಕ್ಕೂ ಅಧಿಕ ಸಂಗ್ರಹಿಸಿದ್ದಾಳೆ ಎನ್ನುತ್ತಾಳೆ ಕೆರ್ರಿ.
Youtube Video
ಅನೇಕರು ಕೆರ್ರಿಯ ಒಂದೊಳ್ಳೆ ಉದ್ದೇಶವನ್ನು ಗಮನಿಸಿ ಸಾಮಾಜಿಕ ಜಾಲತಾಣದಲ್ಲಿ ಬರೆದುಹಾಕುತ್ತಿದ್ದಾರೆ. ಆಕೆಗೆ ಬೆಂಬಲ ನೀಡುತ್ತಿದ್ದಾರೆ. ಮಾತ್ರವಲ್ಲದೆ, ಪ್ರಶಂಸೆ ಗಿಟ್ಟಿಸಿಕೊಂಡಿದ್ದಾಳೆ ಕೆರ್ರಿ.
First published: December 4, 2020, 6:58 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories