50 ವರ್ಷಗಳ ನಂತರ ಗ್ರಂಥಾಲಯಕ್ಕೆ ಮರಳಿದ ಪುಸ್ತಕ, ಜೊತೆಗಿತ್ತೊಂದು ಪತ್ರ..!

ಗ್ರಂಥಾಲಯ ಪುಸ್ತಕಗಳನ್ನು ಓದುವ ಅಭ್ಯಾಸ ಉಳ್ಳವರು ಆ ಗ್ರಂಥಾಲಯದ ಬಗ್ಗೆ, ಒಂದು ಪುಸ್ತಕ ಪಡೆದರೆ ಅದನ್ನು ಮರಳಿಸುವ ಬಗ್ಗೆ ಇರುವ ನಿಯಮಗಳ ಕುರಿತು ತಿಳಿದೇ ಇರುತ್ತಾರೆ. ಆದರೆ, ಕೆಲವೊಮ್ಮೆ ಪುಸ್ತಕ ಮರಳಿಸುವುದು ಸ್ವಲ್ಪ ಲೇಟ್ ಆಗಬಹುದು. ಆದರೆ 50 ವರ್ಷಗಳಷ್ಟು ಲೇಟ್ ಆದ ಬಗ್ಗೆ ನೀವು ಎಂದಾದರೂ ಕೇಳಿದ್ದೀರಾ?

ಮರಳಿ ಬಂದ ಪುಸ್ತಕ

ಮರಳಿ ಬಂದ ಪುಸ್ತಕ

  • Share this:
ನಮ್ಮ ಪ್ರಪಂಚದಲ್ಲಿ ಚಿತ್ರ-ವಿಚಿತ್ರ ಘಟನೆಗಳು ನಡೆಯುವುದೇನೂ ದೊಡ್ಡ ಮಾತಲ್ಲ ಬಿಡಿ. ಒಮ್ಮೊಮ್ಮೆ ಊಹಿಸಲು ಸಾಧ್ಯವಾಗದಂತಹ ಅಚ್ಚರಿಯ ಪ್ರಸಂಗಗಳು ನಡೆದು ಹೋಗುತ್ತವೆ. ಹಿಂದೆಯೂ ಬಹುಶಃ ಇಂತಹ ಘಟನೆಗಳು ನಡೆಯುತ್ತಿತ್ತೇನೋ. ಆದರೆ ಅವುಗಳು ನಮ್ಮ ಗಮನಕ್ಕೆ ಬರುತ್ತಿರಲಿಲ್ಲವೇನೋ. ಆದರೆ, ಇಂದು ತಂತ್ರಜ್ಞಾನ (Technology) ಬಹಳಷ್ಟು ಮುಂದುವರೆದಿದೆ. ಜಗತ್ತಿನ ಯಾವ ಭಾಗದಲ್ಲೇ ಆಗಲಿ, ಏನೇ ಒಂದು ಕೌತುಕಮಯ ಘಟನೆ ನಡೆದರೂ ಸಾಕು. ಸಾಮಾಜಿಕ ಮಾಧ್ಯಮಗಳ (Social Media) ಮೂಲಕ ನಮಗಿಂದು ಅವು ತಲುಪುತ್ತವೆ.

ಇಂತಹದ್ದೇ ಕುತೂಹಲ ಭರಿತ ಘಟನೆಯೊಂದು ಲಂಡನ್ನಿನಲ್ಲಿ (London) ನಡೆದಿದ್ದು, ಆ ಕುರಿತು ಸಾಮಾಜಿಕ ಮಾಧ್ಯಮದಲ್ಲಿ (Social Media) ಹಂಚಿಕೊಳ್ಳಲಾದ ಪೋಸ್ಟ್ ಒಂದು ಈಗ ವೈರಲ್ ಆಗಿದೆ. ಸಾಮಾನ್ಯವಾಗಿ ನಮಗೆ ಓದಲು ಎಲ್ಲ ರೀತಿಯ ಪುಸ್ತಕಗಳು ಸಿಗುವ ಏಕೈಕ ಸ್ಥಳವೆಂದರೆ ಅದು ಗ್ರಂಥಾಲಯ. ಪುಸ್ತಕ ಪ್ರೇಮಿಗಳು (Book Lovers) ಗ್ರಂಥಾಲಯಕ್ಕೆ ಆಗಾಗ ಹೋಗುವುದುಂಟು.

50 ವರ್ಷ ಲೇಟ್ ಮಾಡ್ತಾರಾ?

ಅಷ್ಟೇ ಅಲ್ಲ, ಗ್ರಂಥಾಲಯ ಪುಸ್ತಕಗಳನ್ನು ಓದುವ ಅಭ್ಯಾಸ ಉಳ್ಳವರು ಆ ಗ್ರಂಥಾಲಯದ ಬಗ್ಗೆ, ಒಂದು ಪುಸ್ತಕ ಪಡೆದರೆ ಅದನ್ನು ಮರಳಿಸುವ ಬಗ್ಗೆ ಇರುವ ನಿಯಮಗಳ ಕುರಿತು ತಿಳಿದೇ ಇರುತ್ತಾರೆ. ಆದರೆ, ಕೆಲವೊಮ್ಮೆ ಪುಸ್ತಕ ಮರಳಿಸುವುದು ಸ್ವಲ್ಪ ಲೇಟ್ ಆಗಬಹುದು. ಆದರೆ 50 ವರ್ಷಗಳಷ್ಟು ಲೇಟ್ ಆದ ಬಗ್ಗೆ ನೀವು ಎಂದಾದರೂ ಕೇಳಿದ್ದೀರಾ?

50 ವರ್ಷದ ನಂತರ ಗೂಡು ಸೇರಿದ ಪುಸ್ತಕ

ಕೇಳಿಲ್ಲವೆಂದರೆ ನಾವು ಅಂತಹ ಘಟನೆ ಹೇಳುತ್ತೇವೆ ಕೇಳಿ. ಅಸಲಿಗೆ ವಿಷಯ ಏನಪ್ಪಾ ಅಂದರೆ ಲಂಡನ್ನಿನ ಗ್ರಂಥಾಲಯವೊಂದರಿಂದ ಓದಲೆಂದು ಪುಸ್ತಕವೊಂದನ್ನು ಎರವಲು ಪಡೆಯಲಾಗಿತ್ತು. ಅದನ್ನು ಪುನಃ ಗ್ರಂಥಾಲಯಕ್ಕೆ ಮರಳಿಸಬೇಕಾದ ವರ್ಷ 1974 ಆಗಿತ್ತು. ಆದರೂ ಅದನ್ನು ಮರಳಿಸಲಾಗಿರಲಿಲ್ಲ. ಆದರೆ, ಆ ಪುಸ್ತಕ ಪಡೆದಿದ್ದ ಮಹಾನುಭಾವರಿಗೆ ಅದೇನು ಸಾಕ್ಷಾತ್ಕಾರವಾಯಿತೋ ಗೊತ್ತಿಲ್ಲ, ತಮ್ಮ ಬಳಿ ಇದ್ದ ಆ ಪುಸ್ತಕವನ್ನು ಗ್ರಂಥಾಲಯಕ್ಕೆ ಮರಳಿಸಲು ನಿರ್ಧರಿಸಿ ಹಾಗೆಯೇ ಮಾಡಿದ್ದಾರೆ. ಅಂದರೆ ಆ ಲಂಡನ್ನಿನ ಯುನಿವರ್ಸಿಟಿ ಕಾಲೇಜಿನ ಗ್ರಂಥಾಲಯಕ್ಕೆ 50 ವರ್ಷಗಳ ಸುದೀರ್ಘ ಅಗಲಿಕೆ ಸಹಿಸಿ ಮತ್ತೆ ಬಂದು ತನ್ನ ಗೂಡು ಸೇರಿದೆ.

ಪುಸ್ತಕದೊಂದಿಗೆ ಒಂದು ಚಿಕ್ಕ ಬರಹ

ಅಷ್ಟೆ ಅಲ್ಲ, ಆ ಪುಸ್ತಕದೊಂದಿಗೆ ಒಂದು ಚಿಕ್ಕ ಬರಹವನ್ನು ಬರೆಯಲಾಗಿತ್ತು. ಆ ಬರಹದ ಒಂದು ತುಣುಕಿನಲ್ಲಿ ಈ ರೀತಿ ಬರೆಯಲಾಗಿದೆ, "ಪ್ರೀಯ ಗ್ರಂಥಪಾಲಕರೆ, ಈ ಪುಸ್ತಕ ಮರಳಿಸುವ ಅವಧಿ ಮೀರಿ ಈಗ 50 ವರ್ಷಗಳೇ ಕಳೆದಿವೆ. ಈಗ ನಾನು ಆ ಪುಸ್ತಕವನ್ನು ಮರಳಿಸುವ ಬಗ್ಗೆ ನಿರ್ಧರಿಸಿ ಕಷ್ಟಪಟ್ಟು ಪುಸ್ತಕ ಮರಳಿಸಿರುವುದರಿಂದ, ಆ ಪುಸ್ತಕವನ್ನು ಹಾಗೆ ಎಸೆಯಬೇಡಿ. ಈಗಾಗಲೇ ಇದು ಸಾಕಷ್ಟು ಪುರಾತನ ವಸ್ತು ಆಗಿದ್ದು ಮೌಲ್ಯಯುತವೂ ಆಗಿದೆ" ಎಂದು ಬರೆದಿರುವುದನ್ನು ಕಾಣಬಹುದು.

1875ರ ಮುದ್ರಣ

ಇವನಿಂಗ್ ಸ್ಟ್ಯಾಂಡರ್ಡ್ ಎಂಬ ಮಾಧ್ಯಮದ ಪ್ರಕಾರ, ಈ ಪುಸ್ತಕವು 1875ರ ಮುದ್ರಣವಾಗಿದ್ದು ಈ ಪುಸ್ತಕವು ವಾಸ್ತವದಲ್ಲಿ ಕ್ವೆರೋಲಸ್ ಎಂಬ ನಾಟಕದ ಪುಸ್ತಕವಾಗಿದೆ. ಇದನ್ನು 1974ರಲ್ಲೇ ಗ್ರಂಥಾಲಯಕ್ಕೆ ಮರಳಿಸಬೇಕಾಗಿತ್ತು. ಈ ಪುಸ್ತಕವನ್ನು ಸ್ವೀಕರಿಸಿದ ಸಿಸೇನ್ ಅವರು ಒಂದು ಕ್ಷಣ ಆವಾಕ್ಕಾಗಿದ್ದಾರೆ. ಈ ಬಗ್ಗೆ ಅವರು "ಈ ಪುಸ್ತಕ ಹಾಗೂ ಅದರೊಂದಿಗೆ ಲಗತ್ತಿಸಲಾದ ಬರಹವನ್ನು ಓದಿದ ಮೇಲೆ ನನಗೆ ಒಂದು ಕ್ಷಣ ಇದನ್ನು ನೋಡಿದ ಮೇಲೆ ದಿಗ್ಭ್ರಾಂತಿಯಾಯಿತು" ಎಂದು ನುಡಿದಿದ್ದಾರೆ.

ಪಾವತಿಸಬೇಕಾದ ಶುಲ್ಕ 1254 ಪೌಂಡ್‌

ಇದನ್ನು ಅನಾಮಧೇಯವಾಗಿ ಗ್ರಂಥಾಲಯಕ್ಕೆ ಅಂಚೆ ಮೂಲಕ ಕಳುಹಿಸಲಾಗಿದ್ದು ಸುಸೇನ್ ಅವರು ಕೋವಿಡ್ ಕಾರಣಗಳಿಂದಾಗಿ 18 ತಿಂಗಳು ಮನೆಯಿಂದಲೇ ಕೆಲಸ ಮಾಡಿ ಈಗ ಕೆಲಸಕ್ಕೆಂದು ಕಚೇರಿಗೆ ಆಗಮಿಸಿದಾಗ ಅವರಿಗೆ ಈ ಪುಸ್ತಕ ದೊರೆತಿದೆ. ಈವನಿಂಗ್ ಸ್ಟ್ಯಾಂಡರ್ಡ್ ಹೇಳಿರುವಂತೆ ಈ ಪುಸ್ತಕದ ಶುಲ್ಕವನ್ನು ದಿನಕ್ಕೆ 10ಪಿ ಅಂತ ಹಿಡಿದರೂ ಇಲ್ಲಿಯವರೆಗೆ ಅದಕ್ಕೆ ಪಾವತಿಸಬೇಕಾದ ಶುಲ್ಕ 1254 ಪೌಂಡ್‌ಗಳಾಗುತ್ತದೆ.

ಇದನ್ನೂ ಓದಿ: Viral News: ಪ್ರೇಮಿಗಳಿಬ್ಬರ ಸಾಹಸ, ದೊಡ್ಡ ಮೀನು ಹಿಡಿದು ಪೋಸ್ ಕೊಟ್ಟ ಜೋಡಿ

ವಿಚಿತ್ರ ಏನೆಂದರೆ, ವಾಸ್ತವದಲ್ಲಿ ಆ ಅನಾಮಧೇಯ ವ್ಯಕ್ತಿಯಿಂದ ಗ್ರಂಥಾಲಯ ತನ್ನ ಶುಲ್ಕ ಗಳಿಸುವುದೋ ಇಲ್ಲವೋ ಗೊತ್ತಿಲ್ಲ. ಆದರೆ ಈ ಬಗ್ಗೆ ಗ್ರಂಥಾಲಯ ತನ್ನ ಅಧಿಕೃತ ಖಾತೆಯಿಂದ ಮಾಡಿದ ಟ್ವೀಟ್‌ ಮಾತ್ರ ಅಪಾರ ಪ್ರತಿಕ್ರಿಯೆ ಗಳಿಸುತ್ತಿದೆ ಎನ್ನುವುದರಲ್ಲಿ ಸಂಶಯವೇ ಇಲ್ಲ.

ವೈವಿಧ್ಯಮಯ ಕಮೆಂಟ್ಸ್

ಹೌದು, ಗ್ರಂಥಾಲಯವು ತನ್ನ ಅಧಿಕೃತ UCL News ಖಾತೆಯಿಂದ ಈ ಪುಸ್ತಕದ ಚಿತ್ರ ಹಾಗೂ ಅದಕ್ಕೆ ಲಗತ್ತಿಸಲಾಗಿರುವ ಬರಹವನ್ನು ಟ್ವಿಟ್ ಮಾಡಿದ್ದು, ಅದಕ್ಕೆ ವೈವಿಧ್ಯಮಯ ಕಾಮೆಂಟ್‍ಗಳು ಸಿಗುತ್ತಿವೆ. ಒಬ್ಬ ಬಳಕೆದಾರ "ನಾನು ಸಹ ಹೀಗೆ ಅನಾಮಿಕನಾಗಿ ಈ ಪುಸ್ತಕವನ್ನು ಮರಳಿಸುತ್ತಿದ್ದೆ, ಏಕೆಂದರೆ ಈಗ ಜೀವನ ನಡೆಸುವುದು ಬಹಳ ದುಬಾರಿಯಾಗಿದೆ.

ಇದನ್ನೂ ಓದಿ: Viral Video: ಬಾಯಾರಿದ ಕೋತಿಗೆ ನೀರುಣಿಸಿದ ಟ್ರಾಫಿಕ್ ಪೊಲೀಸ್..!

ಒಂದು ವೇಳೆ ನಾನು ಇಷ್ಟು ವಿಳಂಬವಾಗಿ ಪುಸ್ತಕ ಮರಳಿಸುತ್ತಿರುವುದಕ್ಕೆ ಗ್ರಂಥಾಲಯ ನನಗೆ 1200 ಪೌಂಡ್ಸ್ ದಂಡ ವಿಧಿಸುತ್ತಿದ್ದರೆ, ಖಂಡಿತ ನಾನು ಆ ಪುಸ್ತಕವನ್ನು ನನ್ನ ಬಳಿಯೇ ಇಟ್ಟುಕೊಳ್ಳುತ್ತಿದ್ದೆ. ದಯವಿಟ್ಟು ಕ್ಷಮಿಸಿ, ಏಕೆಂದರೆ, ನಾನು ಕೇವಲ ಪುಸ್ತಕ ಮರಳಲು ಬಯಸುತ್ತಿದ್ದೆ ಹೊರತು ಗ್ರಂಥಾಲಯ ಕೊಳ್ಳುವ ಉದ್ದೇಶ ನನಗಿಲ್ಲ" ಎಂದು ಈ ಬಗ್ಗೆ ವಿನೋದಮಯವಾಗಿ ಪ್ರತಿಕ್ರಿಸಿದ್ದಾರೆ.
Published by:Divya D
First published: