• Home
  • »
  • News
  • »
  • trend
  • »
  • Viral News: ವಿದೇಶಿಗನ ಕೈಯಲ್ಲಿ ಕರ್ನಾಟಕದ ಅಡುಗೆ -ಬಿಸಿಬೇಳೆ ಬಾತ್‌, ಗಿರ್ಮಿಟ್ ಎಲ್ಲಾ ಮಾಡ್ತಾರೆ ಈ ಲಂಡನ್‌ ಚೆಫ್

Viral News: ವಿದೇಶಿಗನ ಕೈಯಲ್ಲಿ ಕರ್ನಾಟಕದ ಅಡುಗೆ -ಬಿಸಿಬೇಳೆ ಬಾತ್‌, ಗಿರ್ಮಿಟ್ ಎಲ್ಲಾ ಮಾಡ್ತಾರೆ ಈ ಲಂಡನ್‌ ಚೆಫ್

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Karnatak's Bisibele Bath By London Chef: ಕೆಲವರು ಬಾಣಸಿಗರು ಭಾರತದಿಂದ ಹೋಗಿ ವಿದೇಶಗಳ ರೆಸ್ಟೋರೆಂಟ್ ಗಳಲ್ಲಿ ಕೆಲಸ ಮಾಡುತ್ತಿರುತ್ತಾರೆ, ಅಂತಹ ಸಂದರ್ಭಗಳಲ್ಲಿ ನಿಮಗೆ ಭಾರತದ ರುಚಿ ವಿದೇಶದಲ್ಲಿ ಸಿಗುತ್ತದೆ.

  • Share this:

ಸಾಮಾನ್ಯವಾಗಿ ನಾವು ಭಾರತೀಯರು (Indians) ಬೇರೆ ದೇಶಕ್ಕೆ ಹೋದಾಗ ಬೆಳಗ್ಗೆ ಒಳ್ಳೆಯ ಭಾರತೀಯ ಶೈಲಿಯಲ್ಲಿ (Indian Style Food) ಉಪಾಹಾರ ಮಾಡಬೇಕು ಅಂತ ಹುಡುಕಿದರೂ ಸಹ ನಮಗೆ ಅಂತಹ ಹೊಟೇಲ್ ಗಳು ಸಿಗುವುದು ತುಂಬಾನೇ ವಿರಳ ಅಂತ ಹೇಳಬಹುದು. ಹೌದು,  ನಮ್ಮ ಭಾರತೀಯ ಶೈಲಿಯ ಪಾಕವಿಧಾನಗಳು ಬೇರೆ ದೇಶಗಳಿಗೆ ಹೋದಾಗ ನಮಗೆ ಸಿಗುವುದು ತುಂಬಾನೇ ಕಷ್ಟಕರವಾಗಿರುತ್ತದೆ.  ಕೆಲವು ರೆಸ್ಟೋರೆಂಟ್ ಮತ್ತು ಹೊಟೇಲ್ ಗಳಲ್ಲಿ ಭಾರತೀಯ ಪಾಕವಿಧಾನಗಳಲ್ಲಿ ಅಡುಗೆಗಳು ಲಭ್ಯವಿದ್ದರೂ ಸಹ ಭಾರತದಲ್ಲಿ ಸಿಗುವ ಆ ರುಚಿ ಅಲ್ಲಿನ ಊಟ (Food) ಕೊಡುವುದಿಲ್ಲ ಅಂತ ತುಂಬಾ ಜನರು ಹೇಳುತ್ತಲೇ ಇರುವುದನ್ನು ನಾವು ನೋಡುತ್ತೇವೆ. ಕೆಲವರು ಬಾಣಸಿಗರು (Chef)  ಭಾರತದಿಂದ ಹೋಗಿ ವಿದೇಶಗಳ ರೆಸ್ಟೋರೆಂಟ್ ಗಳಲ್ಲಿ ಕೆಲಸ ಮಾಡುತ್ತಿರುತ್ತಾರೆ, ಅಂತಹ ಸಂದರ್ಭಗಳಲ್ಲಿ ನಿಮಗೆ ಭಾರತದ ರುಚಿ ಸಿಗಬಹುದು ಅಂತ ಹೇಳಿದರೆ ತಪ್ಪಾಗುವುದಿಲ್ಲ.


ಅದರಲ್ಲೂ ನಾವು ಕರ್ನಾಟಕದಿಂದ ಹೋದವರಾಗಿದ್ದರೆ, ನಮಗೆ ಬೆಂಗಳೂರಿನಲ್ಲಿ ಸಿಗುವ ಸ್ವಾದಿಷ್ಟಕರವಾದ ಬಿಸಿಬೇಳೆ ಬಾತ್, ಚಿತ್ರಾನ್ನ ಮತ್ತು ಪುಳಿಯೋಗರೆಯಂತಹ ತಿಂಡಿ ಅಲ್ಲಿ ಸಿಗೋದೇ ಇಲ್ಲ. ಇದರ ಬಗ್ಗೆ ಈಗೇಕೆ ಮಾತು ಅಂತ ನಿಮಗೆಲ್ಲಾ ಆಶ್ಚರ್ಯವಾಗುತ್ತಿರಬೇಕಲ್ಲವೇ? ಇಲ್ಲಿದೆ ನೋಡಿ ವಿಷಯ.


ಕರ್ನಾಟಕದ ತಿಂಡಿಗಳನ್ನ ಮಾಡ್ತಾರಂತೆ ಲಂಡನ್ನಿನ ಈ ಚೆಫ್


ಲಂಡನ್ ಮೂಲದ ಬಾಣಸಿಗರೊಬ್ಬರು ಪ್ರತಿ ವಾರ ಒಂದರಂತೆ ಭಾರತದ ವಿವಿಧ ರಾಜ್ಯಗಳ ಪಾಕಪದ್ಧತಿಗಳನ್ನು ಒಳಗೊಂಡ ಸರಣಿಯ ಭಾಗವಾಗಿ ಕರ್ನಾಟಕದ ವಿವಿಧ ಭಕ್ಷ್ಯಗಳನ್ನು ತಯಾರಿಸುವುದರೊಂದಿಗೆ ವ್ಯಾಪಕ ಗಮನ ಸೆಳೆದಿದ್ದಾರೆ ಅಂತಾನೆ ಹೇಳಬಹುದು. ಜೇಕ್ ಡ್ರೈಯಾನ್ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯ ಪುಟದಲ್ಲಿ ಫೋಟೋ ಮತ್ತು ವೀಡಿಯೋಗಳನ್ನು ಹಂಚಿಕೊಂಡಿದ್ದು ಅದಕ್ಕೆಲ್ಲಾ "ಪ್ರಸ್ತುತ ಪ್ರತಿ ಭಾರತೀಯ ರಾಜ್ಯದ ಆಹಾರವನ್ನು ತಯಾರಿಸುತ್ತಿದ್ದೇನೆ" ಎಂದು ಶೀರ್ಷಿಕೆಯಲ್ಲಿ ಹೇಳಿದ್ದಾರೆ.


ಈ ಬಾಣಸಿಗ ಆಗಸ್ಟ್ ನಲ್ಲಿ ಪ್ರತಿ ಭಾರತೀಯ ರಾಜ್ಯವನ್ನು ಒಳಗೊಂಡ ಸಾಪ್ತಾಹಿಕ ಸರಣಿಯನ್ನು ಪ್ರಾರಂಭಿಸಿದರು ಮತ್ತು ಐದು ದಿನಗಳ ಹಿಂದೆ ಕರ್ನಾಟಕದಿಂದ ಪ್ರಾರಂಭಿಸಿದರು. ಅವರು ಇಲ್ಲಿಯವರೆಗೆ ಗುಜರಾತಿ, ಪಂಜಾಬಿ, ರಾಜಸ್ಥಾನಿ, ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ ಮತ್ತು ಕೇರಳ ಆಹಾರಗಳನ್ನು ಮಾಡಿದ್ದಾರೆ. ಕರ್ನಾಟಕದ ಆಹಾರವನ್ನು ಅವರು ಬೇಳೆಕಾಳುಗಳಿಲ್ಲದ ರಸಂನಿಂದ ಪ್ರಾರಂಭಿಸಿದರು ಮತ್ತು "ಕರ್ನಾಟಕವು ಇಲ್ಲಿಯವರೆಗೆ ಹೆಚ್ಚು ಜನ ಕೇಳಿದ ರಾಜ್ಯವಾಗಿರಬಹುದು" ಎಂದು ಅವರು ಹೇಳಿದ್ದಾರೆ.


ಇದನ್ನೂ ಓದಿ: ಸಂಬಂಧಿಕರು, ಸ್ನೇಹಿತರಿಗಾಗಿ ವಿಮಾನವನ್ನೇ ಬುಕ್ ಮಾಡಿದ ವಧು, ವರ: ವಿಡಿಯೋ ನೋಡಿದವರು ಫುಲ್ ಶಾಕ್!


ಇನ್ನೂ ಯಾವೆಲ್ಲಾ ಭಕ್ಷ್ಯಗಳನ್ನ ಮಾಡ್ತಾರೆ ನೋಡಿ ಈ ಚೆಫ್?


ನಂತರ ಅವರು ಮಂಡ್ಯ ಜಿಲ್ಲೆಯ ಮದ್ದೂರಿನ ಪ್ರಸಿದ್ಧ ತಿಂಡಿಯಾದ ಮದ್ದೂರು ವಡೆ ಮತ್ತು ಉತ್ತರ ಕರ್ನಾಟಕದ ಹುಬ್ಬಳ್ಳಿಯಲ್ಲಿ ಮಂಡಕ್ಕಿಯನ್ನು ಬಳಸಿ ತಯಾರಿಸಿದ ಗಿರ್ಮಿಟ್ ತಿಂಡಿಯನ್ನು ತಯಾರಿಸಿದ್ದಾರೆ. ಇದು ಸಾಮಾಜಿಕ ಮಾಧ್ಯಮದಲ್ಲಿ ಮತ್ತಷ್ಟು ಖ್ಯಾತಿ ತಂದುಕೊಟ್ಟಿತು. 'ಹುಬ್ಬಳ್ಳಿ-ಧಾರವಾಡ ಇನ್ಫ್ರಾ' ಎಂಬ ಟ್ವಿಟ್ಟರ್ ಪೇಜ್ ನಲ್ಲಿ "ಹುಬ್ಬಳ್ಳಿಯ ಪ್ರಮುಖ ಆಹಾರ ಗಿರ್ಮಿಟ್ ಗೋಸ್ ಗ್ಲೋಬಲ್” ಲಂಡನ್ ಮೂಲದ ಬಾಣಸಿಗ ಜೇಕ್ ಡ್ರೈಯಾನ್ ಅವರು ಗಿರ್ಮಿಟ್ ಅನ್ನು ತಯಾರಿಸುವ ಮತ್ತು ಅದನ್ನು ಸವಿಯುವ ವೀಡಿಯೋವನ್ನು ಹಂಚಿಕೊಂಡಿದ್ದಾರೆ.

View this post on Instagram


A post shared by JAKE DRYAN (@plantfuture)

ಚಿತ್ರಾನ್ನ ಮತ್ತು ಮೈಸೂರು ಬೋಂಡಾವನ್ನು ಸಹ ತಯಾರಿಸಿರುವ ಇವರು ಬಿಸಿಬೇಳೆ ಬಾತ್ ಅನ್ನು ಕೂಡ ಟ್ರೈ ಮಾಡಿದ್ದಾರೆ. ಬಿಸಿಬೇಳೆ ಬಾತ್ ತಯಾರಿಸಿ ಪೋಸ್ಟ್‌ ಹಂಚಿಕೊಂಡ ಜೇಕ್ ಡ್ರೈಯಾನ್ " ಕರ್ನಾಟಕ ವೀಕ್‌ ಎಪಿಸೋಡ್‌ನಲ್ಲಿ ಹೆಚ್ಚು ಕೋರಿಕೆ ಬಂದ ತಿಂಡಿ ಇದು, ಇದು ತುಂಬಾನೆ ಅದ್ಭುತವಾಗಿದೆ. ಇದಕ್ಕೆ ಹಾಕಿದ ಗೋಡಂಬಿಗಳು ಅದನ್ನು ಇನ್ನಷ್ಟು ಹೆಚ್ಚು ವಿಶೇಷಗೊಳಿಸಿವೆ. ಖಂಡಿತ ಬಿಸಿಬೇಳೆ ಬಾತ್‌ ಮಾಡುವಾಗ ನಾನು ಒಂದೆರರೆಡು ತಪ್ಪು ಮಾಡಿದ್ದೇನೆ. ಬಹುಶಃ ಬದನೆಕಾಯಿ ಇದರಲ್ಲಿ ಹಾಕುವುದಿಲ್ಲ. ಆದರೆ ಇತರ ಅನೇಕ ಪಾಕವಿಧಾನಗಳಂತೆ ಇದನ್ನು ನಾನು ಮೊದಲ ಬಾರಿಗೆ ತಯಾರಿಸಿದ್ದೇನೆ, ಬಿಸಿಬೇಳೆ ಬಾತ್‌ ಜೊತೆ ನಿಮ್ಮ ವಾರಾಂತ್ಯವನ್ನು ಆನಂದಿಸಿ" ಎಂದು ಅವರು ಬರೆದಿದ್ದಾರೆ.


ಇದನ್ನೂ ಓದಿ: ಮಂಟಪದಲ್ಲಿ ವಧುವನ್ನು ನೋಡಿ ಕಣ್ಣೀರಿಟ್ಟ ವರ! ವೈರಲ್ ವೀಡಿಯೋ ನೋಡಿ ನೆಟ್ಟಿಗರು ಹೀಗಂದ್ರು


ಜೇಕ್ ಅವರು ತಮ್ಮ ಇನ್‌ಸ್ಟಾಗ್ರಾಮ್ ನಲ್ಲಿ ಸುಮಾರು 4,86,000 ಫಾಲೋವರ್ಸ್ ಗಳನ್ನು ಹೊಂದಿದ್ದಾರೆ ಮತ್ತು ಹೆಚ್ಚಾಗಿ ತಮ್ಮ ಪಾಕಶಾಲೆಯ ಕೆಲಸದಲ್ಲಿ ಸಸ್ಯ ಆಧಾರಿತ ಪದಾರ್ಥಗಳನ್ನು ಬಳಸುತ್ತಾರೆ.

Published by:Sandhya M
First published: