Lok Sabha Election Result 2019: ಮಾತಿನ ಬರದಲ್ಲಿ ನಾಲಗೆ ಜಾರಿದ ಸುದ್ದಿ ನಿರೂಪಕ: ಸನ್ನಿ ದೇವುಲ್​ ಬದಲು ಸನ್ನಿ ಲಿಯೋನ್​ ಎಂದ ಆ್ಯಂಕರ್​

Lok Sabha Election Result 2019: ರಾಷ್ಟ್ರೀಯ ಸುದ್ದಿ ವಾಹಿನಿಯೊಂದರ ನಿರೂಪಕ ಮಾತನಾಡುವ ಬರದಲ್ಲಿ ನಾಲಗೆ ಜಾರಿದ್ದಾರೆ. ಪಂಜಾಬಿನ ಗುರುದಾಸ್​ಪುರ್​ನಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಸನ್ನಿ ದೇವುಲ್​ ಅವರು ಮುನ್ನಡೆ ಸಾಧಿಸಿದ ವಿಷಯವಾಗಿ ಅಪ್​ಡೇಟ್​ ಕೊಡುವಾಗ ಸುದ್ದಿ ನಿರೂಪಕ ಸನ್ನಿ ಲಿಯೋನ್​ ಎಂದು ತಪ್ಪಾಗಿ ಹೇಳಿದ್ದು, ಅದಕ್ಕೆ ಸನ್ನಿ ಲಿಯೋನ್​ ಸಹ ಪ್ರತಿಕ್ರಿಯಿಸಿದ್ದಾರೆ. ಇದು ಈಗ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್​ ಆಗುತ್ತಿದೆ.

ಮಾಜಿ ನೀಲಿ ತಾರೆ ಸನ್ನಿ ಲಿಯೋನ್​

ಮಾಜಿ ನೀಲಿ ತಾರೆ ಸನ್ನಿ ಲಿಯೋನ್​

  • News18
  • Last Updated :
  • Share this:
ಇನ್ನೇನು ದೇಶದ ಲೋಕಸಭಾ ಚುನಾವಣೆ ಫಲಿತಾಂಶ ಪ್ರಕಟವಾಗಲಿದೆ. ಎಲ್ಲಿ ನೋಡಿದರೂ ಚುನಾವಣಾ ಫಲಿತಾಂಶದ ಜೋಶ್​ ಕಾಣುತ್ತಿದೆ. ಆದರೆ ಇದೇ ಜೋಶ್​ನಲ್ಲಿದ್ದ ಸುದ್ದಿ ವಾಹಿನಿಯ ನಿರೂಪಕನ ಒಂದು ಸಣ್ಣ ತಪ್ಪು ಈಗ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್​ ಆಗುತ್ತಿದೆ.

ಹೌದು, ರಾಷ್ಟ್ರೀಯ ಸುದ್ದಿ ವಾಹಿನಿಯೊಂದರ ನಿರೂಪಕ ಮಾತನಾಡುವ ಬರದಲ್ಲಿ ನಾಲಗೆ ಜಾರಿದ್ದಾರೆ. ಪಂಜಾಬಿನ ಗುರುದಾಸ್​ಪುರ್​ನಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಸನ್ನಿ ದೇವುಲ್​ ಅವರು ಮುನ್ನಡೆ ಸಾಧಿಸಿದ ವಿಷಯವಾಗಿ ಅಪ್​ಡೇಟ್​ ಕೊಡುವಾಗ ಸುದ್ದಿ ನಿರೂಪಕ ಸನ್ನಿ ಲಿಯೋನ್​ ಎಂದು ತಪ್ಪಾಗಿ ಹೇಳಿದ್ದಾರೆ.

ಇದಾದ ಸ್ವಲ್ಪ ಸಮಯದಲ್ಲೇ ಈ ವಿಷಯ ಸಾಮಾಜಿಕ ಜಾಲತಾಣದ ಮೂಲಕ ಸನ್ನಿ ಲಿಯೋನ್​ರನ್ನು ತಲುಪಿಯೇ ಬಿಟ್ಟಿತ್ತು. ನಿರೂಪಕನ ತಪ್ಪನ್ನು ತಮಾಷೆಯಾಗಿ ಸ್ವೀಕರಿಸಿದ ಸನ್ನಿ ಕೂಡಲೇ ಈ ಬಗ್ಗೆ ಟ್ವೀಟ್​ ಮಾಡಿದ್ದಾರೆ.

ಇದನ್ನೂ ಓದಿ: Lok Sabha Election Result 2019: ಫಲಿತಾಂಶದ ಬಗ್ಗೆ ನಟ ಅನುಪಮ್​ ಖೇರ್​ ಟ್ವೀಟ್​ ಮಾಡಿದ್ದು ಹೀಗೆ..!

ತಮ್ಮ ಟ್ವೀಟ್​ನಲ್ಲಿ ಎಷ್ಟು ಮತಗಳಿಂದ ಮುಂದಿದ್ದೇನೆ ಎಂದು ಸನ್ನಿ ನಿರೂಪಕನಿಗೆ ಪ್ರಶ್ನಿಸಿದ್ದಾರೆ. ಅದೂ ಸಹ ಕೇವಲ ತಮಾಷೆಗಾಗಿ ಎಂದು ಕಣ್ಣು ಹೊಡೆದು ನಗುವ ಇಮೋಜಿಯನ್ನು ಬಳಸಿದ್ದಾರೆ.ಸನ್ನಿ ಲಿಯೋನ್​ರ ಈ ಪೋಸ್ಟ್​ಗೆ ಅವರ ಅಭಿಮಾನಿಗಳು ಹಾಗೂ ಸಾಕಷ್ಟು ಮಂದಿ ಜಾಲತಾಣಿಗರು ನಾನಾ ರೀತಿಯಾಗಿ ಪ್ರತಿಕ್ರಿಯಿಸುತ್ತಿದ್ದಾರೆ. ಅದರಲ್ಲೂ ಓರ್ವ ಎಂಜಿನಿಯರ್​ ಎಂಬ ಹೆಸರಿನ ಜಾಲತಾಣಿಗ ಹೀಗೆ ಕಮೆಂಟ್​ ಮಾಡಿದ್ದಾರೆ. ನೀವು 135 ಕೋಟಿ ಭಾರತೀಯರ ಹೃದಯಲ್ಲಿ ಮುಂದಿದ್ದೀರಿ ಎಂದು ಬರೆದರೆ, ಮತ್ತೆ ಕೆಲವರು ಸನ್ನಿ ಲಿಯೋನ್​ರ ಹಾಸ್ಯ ಪ್ರಜ್ಞೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

 ಮಾಜಿ ನೀಲಿ ತಾರೆ ಸನ್ನಿ ಲಿಯೋನ್​ ಸದ್ಯ 'ಕೋಕಾ ಕೋಲ' ಹೆಸರಿನಿಂದ ಬರಲಿರುವ ಹಾಸ್ಯ ಕಥಾಹಂದರ ಹೊಂದಿರುವ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ.

 

First published: