ಬೆಸ್ಕಾಂ ಕಚೇರಿಯಲ್ಲಿ ಯಾರೂ ಇಲ್ಲ, ಇದು ದಾನಿಷ್​ ರಿಯಾಲಿಟಿ ಚೆಕ್​ [Video]


Updated:April 25, 2018, 2:10 PM IST
ಬೆಸ್ಕಾಂ ಕಚೇರಿಯಲ್ಲಿ ಯಾರೂ ಇಲ್ಲ, ಇದು ದಾನಿಷ್​ ರಿಯಾಲಿಟಿ ಚೆಕ್​ [Video]

Updated: April 25, 2018, 2:10 PM IST
ಬೆಂಗಳೂರು: ನಗರದಲ್ಲಿ ಇತ್ತೀಚೆಗೆ ಸುರಿಯುತ್ತಿರುವ ಗಾಳಿ, ಗುಡುಗು, ಮಿಂಚು ಸಹಿತ ಧಾರಾಕಾರ ಮಳೆಯಿಂದ ಅನೇಕ ಕಡೆಗಳಲ್ಲಿ ಮರ, ಕೊಂಬೆಗಳು ಧರೆಗುರುಳುತ್ತಿವೆ, ಇದರೊಂದಿಗೆ ವಿದ್ಯುತ್​ ಸಂಪರ್ಕ ಕೂಡಾ ಕಡಿತಗೊಂಡಿದೆ. ಆದರೆ ಬೆಸ್ಕಾಂ, ಬಿಡಬ್ಲ್ಯುಎಸ್ಎಸ್​ಬಿ ಗಳ ಸಹಾಯವಾಣಿಗಳಿಗೆ ದೂರನ್ನು ಹೊತ್ತು ಕರೆ ಮಾಡಿದರೆ ಕರೆಗಳನ್ನು ಸ್ವೀಕರಿಸಲು ಇಲಾಖೆಯಲ್ಲಿ ಯಾರೊಬ್ಬರೂ ಇರುವುದಿಲ್ಲ ಇದು ನಟ ದಾನಿಷ್​ ಸೇಠ್​​ ನಡೆಸಿದ ಲೈವ್​ ವೀಡಿಯೋದಲ್ಲಿ ಕಂಡು ಬಂದ ದೃಶ್ಯ.

ಹೌದು! ಮಂಗಳವಾರದಂದು ಸುರಿದ ಭಾರೀ ಮಳೆಗೆ ಮರಗಳು ಉದುರಿ ಹಲವು ಕಡೆ ವಿದ್ಯುತ್​ ಸಂಪರ್ಕ ಕಡಿತಗೊಂಡಿತ್ತು, ಆದರೆ ರಾತ್ರಿಯಾದರು ಕರೆಂಟ್​ ಬಾರದೇ ಇರುವುದನ್ನು ಕಂಡು ಬೇಸತ್ತ ಇದು ನಟ ದಾನಿಷ್​ ಸೇಠ್​ ಸಮೀಪದ ಬೆಸ್ಕಾಂ ಕಚೇರಿಗೆ ಹೋಗಿ ದೂರು ಕೊಡಲು ನಿರ್ಧರಿಸಿದ್ದಾರೆ.

ಈ ವೇಳೆ ಕಚೇರಿಯಲ್ಲಿ ಯಾರೊಬ್ಬರೂ ಇರಲಿಲ್ಲ, ಕಚೇರಿ ಬಾಗಿಲು ಕೂಡಾ ತೆರೆದು ಸಿಬ್ಬಂದಿಗಳಳು ಎಲ್ಲೋ ಹೋಗಿದ್ದರು, ಈ ಮಧ್ಯೆ ಹಲಾವರು ಮಂದಿ ದೂರು ನೀಡಲು ಮುಂದಾಗಿದ್ದಾರೆ. ಈ ವೇಳೆ ಸ್ವತಃ ದಾನಿಷ್​ ಈ ಕರೆಗಳು ಸ್ವೀಕರಿಸಿ ಕಚೇರಿಯಲ್ಲಿಯಾರೂ ಇಲ್ಲ ಎಂದು ಹೇಳಿ ನೀವು ಬೆಸ್ಕಾಂ ಕಚೇರಿಗೆ ಬರುವಂತೆ ಹೇಳಿದ್ದಾರೆ. ಈ ಎಲ್ಲದರ ವೀಡಿಯೋ ಇಲ್ಲಿದೆ ನೋಡಿ.‘

First published:April 25, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ