ಪ್ರಪಂಚದಲ್ಲಿ ಕೆಲವರಿಗೆ ತಿಂಡಿ (Breakfast) ಅಥವಾ ಇನ್ನಿತರ ಆಹಾರಗಳಂದ್ರೆ (Food) ತುಂಬಾ ಇಷ್ಟ. ಅವರು ಅದಕ್ಕಾಗಿ ಎಲ್ಲಿ ಬೇಕಾದರೂ ಹೋಗಲು ಸಿದ್ಧರಾಗಿರುತ್ತಾರೆ. ಇನ್ನು ಆಹಾರದ ವಿಷಯದಲ್ಲಿ ಪ್ರತಿಯೊಬ್ಬರಿಗೂ ಅವರದೇ ಆದ ಆಯ್ಕೆಯನ್ನು ಹೊಂದಿರುತ್ತಾರೆ. ಯಾವ ಫುಡ್ ತಿನ್ಬೇಕು, ಯಾವುದು ತಿನ್ನಬಾರದು ಇವೆಲ್ಲವನ್ನೂ ನಿರ್ಧರಿಸುವುದು ಅವರವರ ವೈಯಕ್ತಿಕವಾಗಿರುತ್ತದೆ. ಇನ್ನು ನಾವು ದಿನಬೆಳಗಾದ್ರೆ ಸಾಕು ಟಿವಿ, ಮೊಬೈಲ್ಗಳಲ್ಲಿ (Mobile) ಅಡುಗೆ ಮಾಡುವ ವಿಡಿಯೋ, ತಿನ್ನೋ ವಿಡಿಯೋಗಳನ್ನು (Viral Video) ನೋಡುತ್ತಿರುತ್ತೇವೆ. ಇದರಲ್ಲಿ ಜನರು ಹೊಸ ಭಕ್ಷ್ಯಗಳನ್ನು ಸವಿಯುವುದನ್ನು ಸಹ ಕಾಣಬಹುದು. ಇನ್ನು ಕೆಲವರ ಆಹಾರದ ಸಂಪ್ರದಾಯಗಳೇ ಬೇರೆಯಾಗಿರುತ್ತದೆ.
ಸಾಮಾನ್ಯವಾಗಿ ಯಾರೇ ಆಗಲಿ ಏನಾದರೊಂದು ತಿನ್ನೋ ವಿಡಿಯೋ ನೋಡುವಾಗ ಆಸೆಯಾಗುತ್ತದೆ, ಬಾಯಲ್ಲಿ ನೀರೂ ಬರುತ್ತದೆ. ಅದೇ ರೀತಿ ಇಲ್ಲೊಬ್ಬ ನೂಡಲ್ಸ್ ತಿನ್ನೋವಾಗ ಮಧ್ಯದಲ್ಲಿ ಏನು ಸಿಕ್ಕಿದೆ ನೋಡಿ.
ನೂಡಲ್ಸ್ ತಿನ್ನೋ ವಿಡಿಯೋ ವೈರಲ್
ಹೆಚ್ಚಿನವರು ಎಲ್ಲಿಯಾದ್ರೂ ಹೊರಗೆ ಹೋದಾಗ ಹೋಟೆಲ್, ರೆಸ್ಟೋರೆಂಟ್ ಅಂತಾ ಹೋಗ್ತಾರೆ. ಅದೇ ರೀತಿ ಇಲ್ಲೊಬ್ಬ ವ್ಯಕ್ತಿಯು ರೆಸ್ಟೋರೆಂಟ್‌ನಲ್ಲಿ ನೂಡಲ್ಸ್ ತಿನ್ನುತ್ತಿದ್ದನು, ಆದರೆ ಆ ನೂಡಲ್ಸ್‌ನಲ್ಲಿ ವಿಚಿತ್ರವಾದ ಪ್ರಾಣಿಯಿದೆ ಎಂದು ಅವನಿಗೆ ತಿಳಿದಿರಲಿಲ್ಲ.
ಆದರೆ ಅವನು ಅಲ್ಲಿ ನೂಡಲ್ಸ್ ಬಹುತೇಕ ತಿಂದ ನಂತರ ಅದರಲ್ಲೊಂದು ಕಪ್ಪೆಯನ್ನು ನೋಡಿದ್ದಾನೆ. ಇದನ್ನು ನೋಡಿ ಬೆಚ್ಚಿಬಿದ್ದ ಆತ ತಕ್ಷಣ ಮೊಬೈಲ್ ತೆಗೆದು ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಮಾಡಿದ್ದಾನೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗಿದೆ.
#シェイクうどん
自分が出張中に気に立っていたうどんを食べたら
何にカエル🐸
振った後に食べて最後の方まで気づかなかった
お店は3時間の営業停止の後にその日の夜から営業再開、今もサラダや同じ商品を販売中
食べる前には気をつけて pic.twitter.com/pjbxuLy9F6
— 魁斗 (@kaito09061) May 22, 2023
ವಿಡಿಯೋದಲ್ಲಿ, ಒಂದು ಕಪ್ ನೂಡಲ್ಸ್‌ನಲ್ಲಿ ಸಣ್ಣ ಕಪ್ಪೆಯೊಂದು ಜಿಗಿಯುವುದನ್ನು ನೀವು ನೋಡಬಹುದು. ಈ ವ್ಯಕ್ತಿಯು @kaito09061 ಎಂಬ ಖಾತೆಯಿಂದ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಆಗಿರುವ ಟ್ವಿಟರ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಅಲ್ಲಾದ ಸಂಪೂರ್ಣ ಘಟನೆಯನ್ನು ವಿವರಿಸಿದ್ದಾನೆ.
ಏನೆಂದು ಬರೆದಿದ್ದಾರೆ?
ಇನ್ನು ಈ ವಿಡಿಯೋದಲ್ಲಿ ಅವರು ವ್ಯಾಪಾರ ಪ್ರವಾಸದಲ್ಲಿದ್ದರಂತೆ. ಈ ಮಧ್ಯೆ, ಅವರು ರೆಸ್ಟೋರೆಂಟ್‌ನಿಂದ ಒಂದು ಕಪ್ ನೂಡಲ್ಸ್ ಅನ್ನು ಆರ್ಡರ್ ಮಾಡಿದರು, ಆದರೆ ಅದರಲ್ಲಿ ಕಪ್ಪೆ ಬಿದ್ದಿತ್ತು. ಈ ಬಗ್ಗೆ ಅವನಿಗೆ ಯಾವುದೇ ಕಲ್ಪನೆ ಇರಲಿಲ್ಲ. ನಂತರ ಅವನು ನೂಡಲ್ಸ್ ಅನ್ನು ಸಂಪೂರ್ಣವಾಗಿ ತಿನ್ನುತ್ತಾನೆ. ಮುಗಿದ ಬಳಿಕ ಕಪ್ ಕೊನೆಯಲ್ಲಿ ಕಪ್ಪೆಯೊಂದು ಕಾಣಸಿಗುತ್ತದೆ. ಇದನ್ನು ರೆಸ್ಟೋರೆಂಟ್‌ನಲ್ಲಿ ಹೇಳಲಾಯಿತು. ಹಾಗೆಯೇ ಯಾವುದೇ ಆಹಾರಗಳನ್ನು ತಿನ್ನುವ ಮೊದಲು ಎಚ್ಚರವಹಿಸಿ ಎಂದು ಜನರಿಗೆ ಎಚ್ಚರಿಕೆಯನ್ನೂ ನೀಡಿದ್ದಾರೆ.
ಅದೇ ರೀತಿ ಇನ್ನೊಂದು ರೆಸ್ಟೋರೆಂಟ್‌ನಲ್ಲಿ ಒಬ್ಬ ಯುವಕ ಮಾಸ್ಕ್ ಹಾಕಿಕೊಂಡು ನೂಡಲ್ಸ್ ತಿಂದಿದ್ದ. ಆ ವಿಡಿಯೋ ಸಹ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿತ್ತು.
ಮಾಸ್ಕ್ ಹಾಕಿಕೊಂಡು ನೂಡಲ್ಸ್ ತಿಂದ ಯುವಕ
ಇನ್ನು ಈ ವಿಡಿಯೋ 6 ಸೆಕೆಂಡ್ಗಳಾಗಿದ್ದು, ಇದರಲ್ಲಿ ಚಾಪ್ಸ್ಟಿಕ್ಗಳೊಂದಿಗೆ ಮಾಸ್ಕ್ ಹಾಕಿಕೊಂಡು ನೂಡಲ್ಸ್ ತಿನ್ನುವುದನ್ನು ನಾವು ನೋಡಬಹುದಾಗಿದೆ. ಮೊದಲಿಗೆ ಚಾಪ್ಸ್ಟಿಕ್ಗಳೊಂದಿಗೆ ತಕ್ಷಣ ನೂಡಲ್ಸ್ ತೆಗೆದು ಬಾಯಿಗೆ ಹಾಕಲು ಮುಂದಾಗುತ್ತಾನೆ. ಆದರೆ ಮಾಸ್ಕ್ ಇರೋ ಕಾರಣ ನೂಡಲ್ಸ್ ತಿನ್ನಲು ಸಾಧ್ಯವಾಗುವುದಿಲ್ಲ. ತಕ್ಷಣ ಅರಿತ ಆತ ನಂತರ ಮಾಸ್ಕ್ ತೆಗೆಯುತ್ತಾನೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
Mobile addicts 🤣🤣 pic.twitter.com/BfDWZhYgek
— 100 Reason to smile (@100reason2smile) May 28, 2023
ಇನ್ನು ಈ ವಿಡಿಯೋವನ್ನು ಮೇ 29ರಂದು ಶೇರ್ ಮಾಡಲಾಗಿದೆ. ಆದ್ರೆ ಶೇರ್ ಮಾಡಿದ ಕೆಲವೇ ದಿನಗಳಲ್ಲಿ ಈ ವಿಡಿಯೋ 10 ಮಿಲಿಯನ್ಗೂ ಹೆಚ್ಚು ವೀಕ್ಷಣೆಯನ್ನು ಪಡೆದಿದೆ. 32 ಸಾವಿರಕ್ಕೂ ಹೆಚ್ಚು ಲೈಕ್ಗಳನ್ನು ಪಡೆದಿದೆ. ಇಂತಹದೇ ಒಂದು ವಿಡಿಯೋ ಇತ್ತೀಚೆಗೆ ಬೆಂಗಳೂರಿನಲ್ಲೊಂದು ವೈರಲ್ ಆಗಿದ್ದು, ಇದರಲ್ಲಿ ಬಸ್ ಡ್ರೈವರ್ ಟ್ರಾಫಿಕ್ ಮಧ್ಯೆ ಊಟ ಮಾಡುವುದನ್ನು ನೋಡಬಹುದಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ