Liva Miss Diva 2021: ಸಮಾನತೆ ಸಾರಲು ಮಿಸ್​ ದಿವಾ ಸ್ಪರ್ಧೆ; ಮಂಗಳಮುಖಿಯರಿಗೂ ಬ್ಯೂಟಿಕ್ವೀನ್ ಆಗುವ ಅವಕಾಶ

Miss Diva 2021: ಸೌಂದರ್ಯ ಸ್ಪರ್ಧಿಗಳ ವಲಯದಲ್ಲಿ ಇದೇ ಮೊದಲ ಬಾರಿಗೆ ಸಮಗ್ರತೆಯ ವಿಚಾರವನ್ನು ಪ್ರಸ್ತಾಪಿಸುತ್ತಿದ್ದು, ಸೌಂದರ್ಯದ ವ್ಯಾಖ್ಯಾನವನ್ನು ಮರುರೂಪಿಸುವುದಕ್ಕಾಗಿ ಮಂಗಳಮುಖಿಯರನ್ನು ಆಹ್ವಾನಿಸಲಾಗಿದೆ. ಈ ಬಾರಿ, ಸುಂದರಿಯರಿಗಾಗಿ ಎತ್ತರದ ಮಿತಿಯನ್ನು 5 ಅಡಿ 4 ಇಂಚಿಗೆ ಇಳಿಕೆ ಮಾಡಲಾಗಿದೆ.

Nithu RS

Nithu RS

 • Share this:
  ಫ್ಯಾಷನ್ ಸಾಮಗ್ರಿ ಬ್ರಾಂಡ್ ಲಿವಾ ಸಹಭಾಗಿತ್ವದಲ್ಲಿ 9ನೇ ಆವೃತ್ತಿಯ ಮಿಸ್​ ಲಿವಾವನ್ನು ಹಮ್ಮಿಕೊಳ್ಳಲಾಗಿದೆ.  ಪ್ರತಿವರ್ಷದಂತೆಯೇ, ಈ ವರ್ಷವೂ ಅಪರೂಪದ ಅವಕಾಶ ಒದಗಿಸುವ ಮೂಲಕ ಪ್ರತಿಭೆಗಳನ್ನು ಗುರುತಿಸು ಪ್ರಯತ್ನ ನಡೆಯುತ್ತಿದೆ.

  ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಎಲ್ಲವೂ ಬದಲಾಗಿದೆ. ಆದರೆ, ಎಂಎಕ್ಸ್ ಟಕಾಟಕ್ ಸಹ ಪ್ರಾಯೋಜಿತ ಲಿವಾ ಮಿಸ್ ದಿವಾ 2021 ಅದೇ ಉತ್ಸಾಹವನ್ನುಮತ್ತು ಹುಮ್ಮಸ್ಸನ್ನುಹೊಂದಿರಲಿದ್ದು, ಹೊಸ ವಿಧಾನದಲ್ಲಿ ಮುಂದಿನ ಬ್ಯೂಟಿಕ್ವೀನ್ ಯಾರಾಗಲಿದ್ದಾರೆ ಎಂದು ಹೇಳಲಿದೆ.

  ಇದಕ್ಕಾಗಿ ಡಿಜಿಟಲ್ ಮಾಧ್ಯಮವನ್ನು ಬಳಸಿಕೊಳ್ಳಲಿದೆ. ಮಿಸ್ ಯೂನಿವರ್ಸ್ ಕಿರೀಟವನ್ನು ಭಾರತವು ಒಂದಕ್ಕಿಂತ ಹೆಚ್ಚು ಬಾರಿಗಳಿಸಿದೆ. ಇತ್ತೀಚೆಗೆ 2020 ರಲ್ಲಿ ಲಿವಾ ಮಿಸ್ ದಿವಾ ಶೀರ್ಷಿಕೆಯನ್ನು ಅಡ್ಲಿನ್ಕಾಸ್ಟೆಲಿನೋಗೆದ್ದಿದ್ದು, 3ನೇ ರನ್ನ ಅಪ್ ಆಗುವ ಮೂಲಕ ಜಾಗತಿಕಮಟ್ಟದಲ್ಲಿ ಮಿಸ್ ಯುನಿವರ್ಸ್ 2020 ಅನ್ನುಮತ್ತೊಮ್ಮೆಮುನ್ನೆಲೆಗೆ ತಂದಿದ್ದಾರೆ.

  2013 ರಲ್ಲೇ Miss Liva ಪ್ರಾರಂಬವಾಯಿತು. ಇದು ಪ್ರತಿಷ್ಠಿತ ಪುರಸ್ಕಾರದಿಂದ ಯುವಭಾರತೀಯರ ಪ್ರತಿಭೆಯನ್ನು ಅನಾವರಣಗೊಳಿಸುತ್ತಿದೆ. ಈ ಪುರಸ್ಕಾರವು ಯುವತಿಯರಿಗೆ ಅತ್ಯಂತ ಪ್ರತಿಷ್ಠಿತವಾಗಿದೆ. ಅಷ್ಟೇಅಲ್ಲ, ಭವಿಷ್ಯದ ನಿಜವಾದ ಐಕಾನ್ ಆಗಿ ತಮ್ಮನ್ನುಗುರುತಿಸಿಕೊಳ್ಳಲು ಮತ್ತು ವಿಶ್ವದ ಎದುರು ಭಾರತವನ್ನು ಪ್ರತಿನಿಧಿಸುವ ಕನಸನ್ನುನನಸಾಗಿಸಿಕೊಳ್ಳಲು ಮಹಿಳೆಯರಿಗೆ ಇದು ವೇದಿಕೆಯಾಗಿದೆ.

  ಮಂಗಳಮುಖಿಯರಿಗೆ ಅವಕಾಶ

  ಸೌಂದರ್ಯ ಸ್ಪರ್ಧಿಗಳ ವಲಯದಲ್ಲಿ ಇದೇ ಮೊದಲ ಬಾರಿಗೆ ಸಮಗ್ರತೆಯ ವಿಚಾರವನ್ನು ಪ್ರಸ್ತಾಪಿಸುತ್ತಿದ್ದು, ಸೌಂದರ್ಯದ ವ್ಯಾಖ್ಯಾನವನ್ನು ಮರುರೂಪಿಸುವುದಕ್ಕಾಗಿ ಮಂಗಳಮುಖಿಯರನ್ನು ಆಹ್ವಾನಿಸಲಾಗಿದೆ. ಈ ಬಾರಿ, ಸುಂದರಿಯರಿಗಾಗಿ ಎತ್ತರದ ಮಿತಿಯನ್ನು 5 ಅಡಿ 4 ಇಂಚಿಗೆ ಇಳಿಕೆ ಮಾಡಲಾಗಿದೆ.

  ಆಡಿಷನ್​ನಲ್ಲಿ ಭಾಗವಹಿಸುವ ಅವಕಾಶ!

  ಮಿಸ್ ದಿವಾ 9ನೇ ಆವೃತ್ತಿಯಲ್ಲಿ ಮಹಿಳೆಯರಿಗೆ ಮನೆಯಿಂದಲೇ ಅಡಿಶನ್​ಗೆ ಅರ್ಜಿಸಲ್ಲಿಸುವ ಅವಕಾಶವನ್ನುನಿಮಗೆ ಒದಗಿಸುತ್ತಿದೆ. ಅತ್ಯಂತ ಹೊಸ ವಿಧಾನದಲ್ಲಿ ಲಿವಾ ಮಿಸ್ ದಿವಾ 2021 ನಡೆಯಲಿದ್ದು, ಭವಿಷ್ಯದಲ್ಲಿ ದೇಶವನ್ನು ಮುನ್ನಡೆಸುವ ಮತ್ತು ಪ್ರತಿನಿಧಿಸುವ ಅವಕಾಶ ಮಾಡಿಕಡುತ್ತಿದೆ.

  ಜೂನ್ 11 ರಿಂದ ಆರಂಭವಾಗಿರುವ ಪ್ರತಿಭಾಶೋಧದಲ್ಲಿ, ದೇಶದ ವಿವಿಧ ಭಾಗಗಳ ಪ್ರತಿಭೆಗಳ ಹುಡುಕಾಟ ನಡೆಸಲಾಗುತ್ತಿದೆ. ಈ ಪ್ರತಿಭಾವಂತರ ಆಯ್ಕೆ ಪ್ರಕ್ರಿಯೆಯಲ್ಲಿ, ಭಾರತದ ಪ್ರಮುಖ ಶಾರ್ಟ್ ವೀಡಿಯೋ ಪ್ಲಾಟ್​ಫಾರಂ ಎಮ್ಎಕ್ಸ್ ಟಕಾಟಕ್​ನಲ್ಲಿ ನಿರ್ದಿಷ್ಟ ಆಡಿಶನ್ ಟಾಸ್ಕ್​ಗಳನ್ನು ಎದುರಿಸಬೇಕಿದೆ.

  ನಂತರ, ಶಾರ್ಟ್​ಲೀಸ್ಟ್ ಮಾಡಿದ 20 ಫೈನಲಿಸ್ಟ್​ಗಳಿಗೆ ಮುಂಬೈನಲ್ಲಿ ಕಠಿಣ ತರಬೇತಿನೀಡಿ, ಅಕ್ಟೋಬರ್​ನಲ್ಲಿ  ನಡೆಯಲಿರುವ ಗ್ರ್ಯಾಂಡ್ ಫಿನಾಲೆಯಲ್ಲಿ ಸ್ಫರ್ಧಿಸಲು ಸಿದ್ಧಗೊಳಿಸಲಾಗುತ್ತದೆ.

  ಅರ್ಜಿದಾರರಿಗೆ ಭಾಗವಹಿಸುವಿಕೆ ಮಾನದಂಡಗಳು:

  ಎತ್ತರ- 5’4" ಮತ್ತುಹೆಚ್ಚು

  ವಯಸ್ಸು- 18 -27 ವರ್ಷಗಳ ಮಧ್ಯೆ (27 ರಿಂದ31ಡಿಸೆಂಬರ್ 2021ವರೆಗೆ)

  ವೈವಾಹಿಕಸ್ಥಿತಿ- ಅವಿವಾಹಿತ, ಬ್ರಹ್ಮಚಾರಿ ಮತ್ತು ಎಂಗೇಜ್ ಆಗಿಲ್ಲದ ಭಾರತೀಯರಾಗಿತಬೇಕು. ಜತೆಗೆ ಪಾಸ್​ಪೋರ್ಟ್ ಹೊಂದಿರಬೇಕು.

  ಒಸಿಐ ಕಾರ್ಡ್ ಹೊಂದಿರುವವರು ಮತ್ತು ಎನ್ಆರ್​ಐಗಳು ರನ್ನರ್​ಅಪ್ ಪೊಸಿಶನ್​ಗೆ ಸ್ಫರ್ಧಿಸಬಹುದು.

  ಭಾಗವಹಿಸಲು ಮಂಗಳಮುಖಿಯರಿಗೆ ಅವಕಾಶವನ್ನು ನೀಡಲಾಗಿದೆ. ಗ್ರ್ಯಾಂಡ್ ಫಿನಾಲೆಯು ಭಾರತದ ಅತ್ಯಂತ ಜನಪ್ರಿಯ ಯುವ ಚಾನೆಲ್ ಎಂಟಿವಿಯಲ್ಲಿ ಪ್ರಸಾರವಾಗಲಿದೆ.


  View this post on Instagram


  A post shared by Miss Diva (@missdivaorg)


  ಸೌಂದರ್ಯ ಉತ್ಪನ್ನಗಳ ರಾಯಭಾರಿಯಾಗಲು ಮತ್ತು ಬ್ಯುಟಿ ಐಕಾನ್​ ಆಗಿ ಗುರುತಿಸಲು ಮಂಗಳಮುಖಿಯರಿಗೂ ಸಮಾನ ಅವಕಾಶ ನೀಡುತ್ತಿದೆ. ಸ್ಪೇನ್​, ಕೆನಡಾ, ನೇಪಾಳ, ದಕ್ಷಿಣ ಆಫ್ರಿಕಾ ಮಂಗಳಮುಖಿಯನ್ನು ಅವಕಾಶ ನೀಡುವ ಮೂಲಕ ಇಂತಹ ಅನೇಕ ಕಾರ್ಯಕ್ರಮ ನಡೆಸುತ್ತಿದೆ.
  Published by:Harshith AS
  First published: