Learning Cycling: ಇದಪ್ಪಾ ಫ್ರೆಂಡ್​ಶಿಪ್ ಅಂದ್ರೆ! ಸೈಕಲ್ ಕಲಿಯುತ್ತಿರೋ ಗೆಳೆಯನಿಗೆ ಈ ಪುಟ್ಟ ಬಾಲಕರು ನೆರವಾಗಿದ್ದು ಹೀಗೆ

ಈ ವಿಡಿಯೋದಲ್ಲಿ ನಾವು ಒಬ್ಬ ಚಿಕ್ಕ ಹುಡುಗ ಸೈಕಲ್ ಓಡಿಸುವುದನ್ನು ಕಲಿಯುತ್ತಾ ಇರಬೇಕಾದರೆ, ಅವನ ಮನೆಯ ನೆರೆಹೊರೆಯಲ್ಲಿರುವ ಆತನ ಸ್ನೇಹಿತರು ಬಂದು ಆತನ ಸೈಕಲ್ ಅನ್ನು ಹಿಡಿದುಕೊಂಡು ಆತನಿಗೆ ಸೈಕಲ್ ಓಡಿಸುವುದನ್ನು ಕಲಿಯಲು ಸಹಾಯ ಮಾಡುತ್ತಿರುವುದನ್ನು ನಾವು ನೋಡಬಹುದಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ನಾವು ಚಿಕ್ಕವರಾಗಿದ್ದಾಗ ಮೊದಲ ಬಾರಿಗೆ ಯಾರ ಸಹಾಯವು ಇಲ್ಲದೆ, ಸೈಕಲ್ (Cycle) ಓಡಿಸುವುದನ್ನು ಹೇಗೆ ಕಲಿತಿದ್ದೆವು ಅಂತ ಈಗ ನೆನಪಿಸಿಕೊಂಡರೆ ನಗು ಬರುವುದು ಗ್ಯಾರಂಟಿ. ಏಕೆಂದರೆ ಅದೆಷ್ಟು ಬಾರಿ ನಾವು ಸೈಕಲ್ ಕಲಿಯಲು ಹೋಗಿ ಕೆಳಗೆ ಬಿದ್ದು, ಮಂಡಿ ಗಾಯ ಮಾಡಿಕೊಂಡಿರುತ್ತೇವೆ ಎನ್ನುವುದನ್ನು ಲೆಕ್ಕ ಇಡುವುದು ಸಾಧ್ಯವೇ ಇಲ್ಲ ಬಿಡಿ. ಹಾಗೆಯೇ ಸೈಕಲ್ ಅನ್ನು ನಾವೇ ಸ್ವತಃ ಕಲಿತಿದ್ದು ಅಂತ ಯಾರಾದರೂ ನಮಗೆ ಹೇಳಿದರೆ, ನಾವು ಅವರನ್ನು ಸಂದೇಹದ ದೃಷ್ಟಿಯಿಂದಲೇ ನೋಡುತ್ತೇವೆ. ಏಕೆಂದರೆ ಸೈಕಲ್ ಕಲಿಯುವಾಗ ಹಿಂದೆ ಯಾರಾದರೂ ಹಿಡಿದುಕೊಂಡು ನಮಗೆ ಸೈಕಲ್ ಬ್ಯಾಲೆನ್ಸ್ (Balance) ಮಾಡುವುದನ್ನು ಹೇಳಿಕೊಟ್ಟಿರುತ್ತಾರೆ ಅಥವಾ ಪಕ್ಕದಲ್ಲಿ ನಿಂತುಕೊಂಡು ಸೈಕಲ್ ಹಿಡಿದುಕೊಂಡು ನಮಗೆ ಸೈಕಲ್ ಓಡಿಸುವುದನ್ನು ಹೇಳಿಕೊಟ್ಟಿರುತ್ತಾರೆ.

ಕೆಲವೊಮ್ಮೆ ನಮ್ಮ ನೆರೆಹೊರೆಯ ಮನೆಯಲ್ಲಿರುವ ನಮ್ಮ ಸ್ನೇಹಿತರು ನಮ್ಮ ಸೈಕಲ್ ಅನ್ನು ಹಿಡಿದುಕೊಂಡು ನಮಗೆ ಕಲಿಯಲು ಸಹಾಯ ಮಾಡಿರುತ್ತಾರೆ. ಎಷ್ಟೋ ಬಾರಿ ಮೂರು ಚಕ್ರದ ಪುಟ್ಟ ಸೈಕಲ್ ಕಲಿತ ಮೇಲೆ, ಎಷ್ಟೋ ದಿನಗಳ ನಂತರ ನಾವು ಎರಡು ಚಕ್ರಗಳಿರುವ ಸೈಕಲ್ ಅನ್ನು ಅದು ಸಹ ಹಿಂದಿನ ಚಕ್ರಕ್ಕೆ ಎರಡು ಬೆಂಬಲವಾಗಿರುವ ಚಿಕ್ಕ ಚಿಕ್ಕ ಚಕ್ರಗಳಿರುವ ಸಪೋರ್ಟ್ ಇರುವುದನ್ನು ಬಳಸಿಕೊಂಡು ಸೈಕಲ್ ಕಲಿತಿರುತ್ತೇವೆ.

ನೆರೆ ಹೊರೆಯ ಮಕ್ಕಳು ಹೆಲ್ತ್ ಮಾಡೋದು ನೋಡಿ

ಇಂತಹದೇ ಒಂದು ಘಟನೆಯನ್ನು ತೋರಿಸುವ ಮುದ್ದಾದ ವಿಡಿಯೋವೊಂದು ಸಾಮಾಜಿಕ ಮಾಧ್ಯಮವಾದ ಇನ್‌ಸ್ಟಾಗ್ರಾಮ್‌ನಲ್ಲಿ ‘ಗುಡ್ ನ್ಯೂಸ್ ಕರೆಸ್ಪಾಂಡೆಂಟ್’ ಎಂಬ ಖಾತೆಯಿಂದ ಪೋಸ್ಟ್ ಮಾಡಲಾಗಿದೆ. ಈ ವಿಡಿಯೋದಲ್ಲಿ ನಾವು ಒಬ್ಬ ಚಿಕ್ಕ ಹುಡುಗ ಸೈಕಲ್ ಓಡಿಸುವುದನ್ನು ಕಲಿಯುತ್ತಾ ಇರಬೇಕಾದರೆ, ಅವನ ಮನೆಯ ನೆರೆಹೊರೆಯಲ್ಲಿರುವ ಆತನ ಸ್ನೇಹಿತರು ಬಂದು ಆತನ ಸೈಕಲ್ ಅನ್ನು ಹಿಡಿದುಕೊಂಡು ಆತನಿಗೆ ಸೈಕಲ್ ಓಡಿಸುವುದನ್ನು ಕಲಿಯಲು ಸಹಾಯ ಮಾಡುತ್ತಿರುವುದನ್ನು ನಾವು ನೋಡಬಹುದಾಗಿದೆ.

ಇದನ್ನೂ ಓದಿ: Summer Trip: ಬೇಸಿಗೆಯಲ್ಲಿ ಪ್ರವಾಸ ಮೋಜು ಅನುಭವಿಸಬೇಕು ಎಂದ್ರೆ ಈ ವಸ್ತುಗಳನ್ನು ಮರೆಯಬೇಡಿ

ಫ್ರೆಂಡ್ಸ್ ಫುಲ್ ಖುಷ್

ದೂರದಲ್ಲಿ ನಿಂತುಕೊಂಡು ಯಾರೋ ಒಬ್ಬರು ಅಲ್ಲೇ ಆಟವಾಡುತ್ತಿರುವ ಮಕ್ಕಳ ಮೇಲೆ ಗಮನ ಕೇಂದ್ರೀಕರಿಸಿ ವಿಡಿಯೋ ರೆಕಾರ್ಡ್ ಮಾಡುತ್ತಿದ್ದರು ಎಂದು ಈ ವಿಡಿಯೋ ನೋಡಿದರೆ ನಮಗೆ ಅರ್ಥವಾಗುತ್ತದೆ. ಈ ವಿಡಿಯೋ ಮಾಡುತ್ತಾ ಅವರು ತುಂಬಾನೇ ಆನಂದದಿಂದ ಇರುವುದನ್ನು ಅವರ ಸಂಭಾಷಣೆಯಿಂದ ಅರ್ಥವಾಗುತ್ತದೆ. ಅಲ್ಲೇ ದೂರದಲ್ಲಿ ಕೆಲವು ಮಕ್ಕಳು ತಮ್ಮ ಸ್ನೇಹಿತನಿಗೆ ಸೈಕಲ್ ಓಡಿಸುವುದನ್ನು ಕಲಿಯುತ್ತಿದ್ದರೆ, ಆತನಿಗೆ ಸಹಾಯ ಮಾಡುತ್ತಿರುವುದನ್ನು ನಾವು ನೋಡಬಹುದು.






ಸ್ನೇಹಿತ ಬೀಳಬಾರದು ಎಂಬ ಕಾಳಜಿ

ಅದರಲ್ಲೂ ವಿಶೇಷವಾಗಿ ತನ್ನ ಸ್ನೇಹಿತನು ಸೈಕಲ್ ಕಲಿಯುವಾಗ ಕೆಳಕ್ಕೆ ಬೀಳಬಾರದು ಎಂದು ಕಾಳಜಿ ವಹಿಸಿ ಇಬ್ಬರು ಮಕ್ಕಳು ತಮ್ಮ ಸ್ನೇಹಿತನನ್ನು ಜಾಗರೂಕತೆಯಿಂದ ಹಿಡಿದಿರುವುದನ್ನು ಸಹ ಕಾಣಬಹುದು.

ಇದನ್ನೂ ಓದಿ: Viral News: 18 ರಿಂದ 25 ವರ್ಷದೊಳಗಿನ ಮಹಿಳಾ ರೂಮ್ ಮೇಟ್ ಬೇಕಾಗಿದ್ದಾರೆ: 44ರ ಅಂಕಲ್ ಕೊಟ್ರು ಜಾಹೀರಾತು

ಈ ವಿಡಿಯೋದಲ್ಲಿ ನಿಖರವಾಗಿ ಏನಾಗುತ್ತಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಲು ವೀಕ್ಷಕರಿಗೆ ಸಹಾಯ ಮಾಡುವ ಶೀರ್ಷಿಕೆಯೊಂದಿಗೆ ಸಾಮಾಜಿಕ ಮಾಧ್ಯಮವಾದ ಇನ್‌ಸ್ಟಾಗ್ರಾಮ್‌ನಲ್ಲಿ ಅಪ್ಲೋಡ್ ಮಾಡಲಾಗಿದೆ. ಅದರಲ್ಲಿ "ನೆರೆಹೊರೆಯ ಮಕ್ಕಳು ತಮ್ಮ ಸ್ನೇಹಿತನಿಗೆ ಬೈಸಿಕಲ್ ಓಡಿಸುವುದನ್ನು ಕಲಿಯಲು ಸಹಾಯ ಮಾಡುತ್ತಿದ್ದಾರೆ" ಎಂದು ಬರೆಯಲಾಗಿದೆ. ಈ ವಿಡಿಯೋ ಒಮ್ಮೆ ನೋಡಿದರೆ ನಿಮಗೂ ನಿಮ್ಮ ಬಾಲ್ಯದಲ್ಲಿ ಸೈಕಲ್ ಕಲಿತ ನೆನಪು ಮತ್ತೆ ಬರುವುದು ಗ್ಯಾರಂಟಿ.

21,000 ಕ್ಕೂ ಹೆಚ್ಚು ವೀಕ್ಷಣೆ

ಈ ವಿಡಿಯೋವನ್ನು 13 ಗಂಟೆಗಳ ಹಿಂದೆ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಲಾಗಿದೆ ಮತ್ತು ಅಂದಿನಿಂದ, ಈ ವೀಡಿಯೋ ನೋಡಿದ ನೆಟ್ಟಿಗರು ಅನೇಕ ರೀತಿಯ ಕಾಮೆಂಟ್‌ಗಳನ್ನು ಹಾಕಿದ್ದಾರೆ. ಈ ವೀಡಿಯೋ ಇಲ್ಲಿಯವರೆಗೆ 21,000 ಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದಿದೆ ಮತ್ತು 1,900ಕ್ಕೂ ಹೆಚ್ಚು ಲೈಕ್‌ಗಳು ಸಹ ಇದಕ್ಕೆ ಬಂದಿವೆ.

ನೆಟ್ಟಿಗರ ಮನಸು ಸೆಳೆದ ವಿಡಿಯೋ

ಇದನ್ನು ನೋಡಿದ ಒಬ್ಬ ಇನ್‌ಸ್ಟಾಗ್ರಾಮ್ ಬಳಕೆದಾರರೊಬ್ಬರು "ಓಹ್! ಇದು ನಿಜವಾಗಿಯೂ ತುಂಬಾನೇ ಅದ್ಭುತವಾಗಿದೆ ಮತ್ತು ಆ ಸ್ನೇಹಿತನಿಗೆ ನೆರೆಹೊರೆಯವರೂ ಸಹ ಸಹಾಯ ಮಾಡುತ್ತಿದ್ದಾರೆ" ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರು "ದೀರ್ಘ ಕಾಲದ ಅತ್ಯುತ್ತಮ ವಿಡಿಯೋ ಇದು, ಬದುಕಲು ಎಂತಹ ಒಳ್ಳೆಯ ಸ್ಥಳವಿದು ಮತ್ತು ಎಂತಹ ಅದ್ಭುತ ಸ್ನೇಹಿತರಿದ್ದಾರೆ” ಎಂದು ಕಾಮೆಂಟ್ ಮಾಡಿದ್ದಾರೆ.
Published by:Divya D
First published: