ಸ್ವಚ್ಛ ಮನಸ್ಸಿನ ಪುಟ್ಟ ಮಕ್ಕಳು (Children) ಏನು ಮಾಡಿದರೂ ಚೆಂದವೇ. ಒಂಚೂರು ಮೋಸ (Cheating), ಕಪಟ, ಸುಳ್ಳಿನ ಅರಿವಿಲ್ಲದೇ ಅವರು ಮಾಡುವ ಆಟಗಳು, ಚೇಷ್ಟೆಗಳು, ತೋರುವ ಪ್ರೀತಿ ಎಲ್ಲವೂ ಮನಸ್ಸಿಗೆ (Mind) ಮುದ ನೀಡುವಂತದ್ದು. ಅದರಲ್ಲೂ ಈಗಿನ ಮಕ್ಕಳು ಎಲ್ಲದರಲ್ಲೂ ಜೋರು. ಬೆರಳು ತೋರಿಸಿದರೆ ಹಸ್ತ ನುಂಗುವಷ್ಟು ಚುರುಕು. ಪೋಷಕರು (Parents) ಕೂಡ ಮಕ್ಕಳಿಗೆ ಎಲ್ಲದರಲ್ಲಿ ಭಾಗವಹಿಸಲು, ತಮ್ಮನ್ನು ತಾವು ತೊಡಗಿಸಿಕೊಳ್ಳಲು ಪ್ರೋತ್ಸಾಹ (Encouragement) ನೀಡುತ್ತಲೆ ಇರುತ್ತಾರೆ.
ಈಗಂತೂ ಮಕ್ಕಳಿಗೆ ಸಂಬಂಧಿಸಿದ ಅವರ ಆಟ, ಪಾಠ, ಚೇಷ್ಟೆ, ಮುದ್ದುತನ, ಮುಗ್ಧತೆಯ ಹಲವು ವಿಡಿಯೋಗಳು ಇಂಟರ್‌ನೆಟ್‌ನಲ್ಲಿ ವೈರಲ್ ಆಗುತ್ತವೆ. ಅದರಲ್ಲಿ ಇತ್ತೀಚೆಗೆ ವೈರಲ್ ಆಗಿರುವ ವಿಡಿಯೋ ಅಂತೂ ತುಂಬಾ ಕ್ಯೂಟ್ ಆಗಿದೆ ನೋಡಿ. ಮಕ್ಕಳಿಗೆ ಪೊಲೀಸರೆಂದರೆ ಭಯವೂ ಹೌದು, ಅಲ್ಪಸ್ವಲ್ಪ ಪ್ರೀತಿಯೂ ಹೌದು. ಪೊಲೀಸರು ಧರಿಸುವ ಟೋಪಿ ಅವರ ಬಟ್ಟೆ ಅಂದರೆ ಮಕ್ಕಳಿಗೆ ಇಷ್ಟ.
ಇದನ್ನೂ ಓದಿ: Viral Video: ಎಂತ ಕಾಲ ಬಂತಪ್ಪಾ! ಅಜ್ಜನ ಅಂತ್ಯಕ್ರಿಯೆ ವಿಡಿಯೋ ಪೋಸ್ಟ್ ಮಾಡಿದ ಯೂಟ್ಯೂಬರ್
ಆದರೆ ಪೊಲೀಸರನ್ನು ಕಂಡರೆ ಅಮ್ಮನ ಸೆರಗು ಹಿಡಿದು ಬಚ್ಚಿಟ್ಟು ಕೊಳ್ತಾರೆ. ಕೆಲ ವಯಸ್ಕರರಿಗೂ ಸಹ ಇನ್ನೂ ಪೊಲೀಸರನ್ನು ಕಂಡರೆ ಇಂತದ್ದೇ ಭಯ ಇದೆ ಎನ್ನಬಹುದು. ಇಲ್ಲೊಂದು ಪುಟಾಣಿ ಪೊಲೀಸರನ್ನು ಕಂಡು ಆಕೆ ಮಾಡಿದ ಕೆಲಸ ನೋಡಿದರೆ ಅಯ್ಯೋ ಎಷ್ಟು ಮುದ್ದು ಈ ಮಗು ಅಂತೀರಾ.
ಪೊಲೀಸರಿಗೆ ಸೆಲ್ಯೂಟ್ ಮಾಡಿದ ಪುಟಾಣಿ
ಹೌದು, ಕೆಲ ಮಕ್ಕಳು ಪೊಲೀಸರನ್ನು ಕಂಡು ಹೆದರಿದರೆ ಈ ಪುಟ್ಟ ಪೋರಿ ಮಾತ್ರ ಖಾಕಿಯನ್ನು ನೋಡುತ್ತಿದ್ದ ಹಾಗೆ ಕೈ ಎತ್ತಿ ಸೆಲ್ಯೂಟ್ ಮಾಡಿದ್ದಾಳೆ.
ವೈರಲ್ ವಿಡಿಯೋದಲ್ಲಿ ಏನಿದೆ?
ಸುಂದರವಾದ ಫ್ರಾಕ್ ಹಾಕಿಕೊಂಡ ಒಂದೆರೆಡು ವರ್ಷದ ಒಂದು ಪುಟ್ಟ ಪೋರಿ ಪೊಲೀಸ್ ಜೀಪ್ ಸುತ್ತ ನಡೆದುಕೊಂಡು ಬಂದು ಅಲ್ಲಿದ್ದ ಪೊಲೀಸರ ಬಳಿ ಹೋಗುತ್ತಾಳೆ.
ಕೇರಳ ಪೊಲೀಸರು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿರುವ ವಿಡಿಯೋ ಕ್ಲಿಪ್‌ನಲ್ಲಿ ಕಿತ್ತಳೆ ಬಣ್ಣದ ಉಡುಗೆಯನ್ನು ಧರಿಸಿರುವ ಪುಟ್ಟ ಹುಡುಗಿ ಕ್ಯಾಮೆರಾವನ್ನು ನೋಡಿ ನಗುತ್ತಿರುವುದನ್ನು ಮತ್ತು ಪೊಲೀಸ್ ಜೀಪಿನ ಸುತ್ತಲೂ ನಡೆಯುವುದನ್ನು ನೋಡಬಹುದು.
ಅವಳು ಇನ್ನೊಬ್ಬ ವ್ಯಕ್ತಿಯೊಂದಿಗೆ ಮಾತನಾಡುತ್ತಿರುವ ಪೋಲೀಸ್ ಕಡೆಗೆ ಓಡುತ್ತಾಳೆ. ಪೋಲೀಸ್ ಅಧಿಕಾರಿ ಕೂಡ ಆಕೆಯನ್ನು ನೋಡಿ ನಗು ಬಿರುತ್ತಾರೆ. ಆ ಬಾಲಕಿ ಕೂಡ ನಗುತ್ತಾ ಪೊಲೀಸ್ ಅಧಿಕಾರಿಗೆ ತನ್ನ ಪುಟ್ಟ ಕೈಗಳಿಂದ ಸೆಲ್ಯೂಟ್ ಮಾಡುತ್ತಾಳೆ.
ಕೇರಳ ಪೊಲೀಸ್ ಇಲಾಖೆ ಹಂಚಿಕೊಂಡ ವಿಡಿಯೋ ವೈರಲ್
ಈ ವಿಡಿಯೋವನ್ನು ಕೇರಳ ಪೊಲೀಸ್ ಇಲಾಖೆ ತಮ್ಮ ಇನ್‌ಸ್ಟಾಗ್ರಾಮ್ ಪುಟದಲ್ಲಿ ಹಂಚಿಕೊಂಡಿದ್ದು, ಪುಟ್ಟ ಕಂದಮ್ಮನ ಪ್ರೀತಿಯ ವಂದನೆಗಳು ಅಂತಾ ಶೀರ್ಷಿಕೆ ನೀಡಿ ವಿಡಿಯೋ ಹಂಚಿಕೊಂಡಿದ್ದಾರೆ.
ಸೋಮವಾರ ಈ ವಿಡಿಯೋ ಕ್ಲಿಪ್ ಹಂಚಿಕೊಂಡಾಗಿನಿಂದ, ಕ್ಲಿಪ್ ಟ್ವಿಟರ್‌ನಲ್ಲಿ 2,900 ಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದು ಕೊಂಡಿದೆ. ಸದ್ಯ ಈ ವಿಡಿಯೋ ನೆಟ್ಟಿಗರ ಹೃದಯ ಗೆದ್ದಿದ್ದು ಮನಸ್ಸಿಗೆ ಮುದ ನೀಡಿದೆ.
View this post on Instagram
ಇನ್ನೂ ವಿಡಿಯೋ ಪೋಸ್ಟ್‌ನ ಕಾಮೆಂಟ್ ಬಾಕ್ಸ್ ಅಂತೂ ನೆಟ್ಟಿಗರ ಪ್ರೀತಿಯಿಂದ ತುಂಬಿ ಹೋಗಿದೆ. ಬಳಕೆದಾರರು ಮುದ್ದಾದ ಸೆಲ್ಯೂಟ್, ಅದ್ಭುತವಾಗಿದೆ ಅತಾ ಹೇಳಿದ್ದಾರೆ.
ವಿಶೇಷ ಅಂದರೆ ಕಾಮೆಂಟ್ ಭಾಗದಲ್ಲಿ ಆ ಮಗುವಿನ ಹೆಸರನ್ನು ಆಕೆಯ ಬಾಲಕರು ಬಹಿರಂಗಪಡಿಸಿದ್ದಾರೆ. ಇದು ನನ್ನ ಮಗು ನೇಹಾಕುಟ್ಟಿ. ಅವರು ಪೂವರ್ ಕರಾವಳಿ ಪೊಲೀಸ್ ಠಾಣೆಯ ಸರ್ಕಲ್ ಇನ್ಸ್‌ಪೆಕ್ಟರ್ ಬಿಜು ಸರ್ ಅವರಿಗೆ ಸೆಲ್ಯೂಟ್ ಮಾಡಿದ್ದಾರೆ ಎಂದು ವೈರಲ್ ವಿಡಿಯೋ ಬಗ್ಗೆ ಮಾಹಿತಿ ಒದಗಿಸಿದ್ದಾರೆ.
ಕಳೆದ ವರ್ಷ, ಮುಂಬೈನಲ್ಲಿ ಮಹಿಳಾ ಪೊಲೀಸ್ ಅಧಿಕಾರಿ ಜೊತೆ ಮಾತುಕತೆ ನಡೆಸಿದ ಮಗುವಿನ ವಿಡಿಯೋವೊಂದು ವೈರಲ್ ಆಗಿತ್ತು. ಮಗು ರಾತ್ರಿಯಲ್ಲಿ ರಸ್ತೆಯಲ್ಲಿ ಹೋಗುವಾಗ ಮತ್ತು ಪೊಲೀಸರ ಲಾಠಿ ಕೇಳುವುದನ್ನು ವೀಡಿಯೊ ತೋರಿಸಿದೆ. ಈ ವಿಡಿಯೋ ಕೂಡ ಕಳೆದ ವರ್ಷ ವೈರಲ್ ಆಗಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ