Puppy Love Story: ಪ್ರೀತಿ ಇದ್ದ ಕಡೆ ಕೋಪ ಇರೋದು ನಿಜಾ ಅನ್ಸುತ್ತೆ! ಈ ಹುಡುಗಿ ಮತ್ತು ಪುಟ್ಟ ನಾಯಿಮರಿ ವಿಡಿಯೋ ನೋಡಿದ್ರೆ ನಿಮಗೇ ತಿಳಿಯುತ್ತೆ

ಮುದ್ದಾದ ನಾಯಿಗಳು ಮತ್ತು ನಾಯಿಮರಿಗಳ ವೀಡಿಯೋಗಳನ್ನು ನೋಡುವುದು ನಿಮ್ಮ ಚಿಂತೆಗಳನ್ನು ಮರೆಯುವಂತೆ ಮಾಡುತ್ತದೆ. ನೀವು ಮನೆಯಲ್ಲಿ ಅಥವಾ ಕಚೇರಿಯಲ್ಲಿ ಯಾರ ಜೊತೆಯಾದರೂ ಜಗಳವಾಡಿ, ನಿಮ್ಮ ಮನಸ್ಸಿಗೆ ತುಂಬಾನೇ ನೋವಾಗಿದ್ದರೆ, ಇಂತಹ ವೀಡಿಯೋಗಳು ನಿಮ್ಮ ಬೇಸರವನ್ನು ಮರೆಸುತ್ತವೆ ಎಂದು ಹೇಳಬಹುದು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಈ ಹಿಂದೆ ನಾವು 2 ತಿಂಗಳಿನ ನಾಯಿ ಮರಿ (puppy) ಹೇಗೆ ಸ್ಕೇಟ್ ಬೋರ್ಡ್ ಆಡುವುದನ್ನು ಕಲಿಯಿತು ಮತ್ತು ಹೇಗೆ ಆರಾಮಾಗಿ ಸ್ಕೇಟ್ ಬೋರ್ಡ್ (Skate board) ಮೇಲೆ ಕುಳಿತು ಸವಾರಿ ಮಾಡಿತು ಎನ್ನುವ ವೀಡಿಯೋ (Video) ಮತ್ತು ಇನ್ನೊಂದು ವೀಡಿಯೋದಲ್ಲಿ ನಾಯಿಯೊಂದು ಪ್ಯಾಡಲ್ ಬೋರ್ಡ್ (Paddle board) ಮೇಲೆ ಸವಾರಿ ಮಾಡಿ ಸರ್ಫಿಂಗ್ ಮಾಡಿದ್ದನ್ನು ನೋಡಿದ್ದೆವು. ಈ ಮುದ್ದಾದ ವೀಡಿಯೋಗಳು ಇನ್ನೇನು ನಮ್ಮ ನೆನಪಿನಿಂದ ಮಾಸುತ್ತವೆ ಎನ್ನುವಷ್ಟರಲ್ಲಿಯೇ ಇನ್ನೊಂದು ನಾಯಿ ಮರಿಗಳ ಮುದ್ದಾದ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ (Social Media) ಹರಿದಾಡುತ್ತಿದ್ದು, ಈಗ ವೈರಲ್ ಸಹ ಆಗುತ್ತಿದೆ.

ಈ ಮುದ್ದಾದ ನಾಯಿಗಳು ಮತ್ತು ನಾಯಿಮರಿಗಳ ವೀಡಿಯೋಗಳನ್ನು ನೋಡುವುದು ನಿಮ್ಮ ಚಿಂತೆಗಳನ್ನು ಮರೆಯುವಂತೆ ಮಾಡುತ್ತದೆ. ನೀವು ಮನೆಯಲ್ಲಿ ಅಥವಾ ಕಚೇರಿಯಲ್ಲಿ ಯಾರ ಜೊತೆಯಾದರೂ ಜಗಳವಾಡಿ, ನಿಮ್ಮ ಮನಸ್ಸಿಗೆ ತುಂಬಾನೇ ನೋವಾಗಿದ್ದರೆ, ಇಂತಹ ವೀಡಿಯೋಗಳು ನಿಮ್ಮ ಬೇಸರವನ್ನು ಮರೆಸುತ್ತವೆ ಎಂದು ಹೇಳಬಹುದು.

ಸಿಕ್ಕಾಪಟ್ಟೆ ವೈರಲ್ ಆಗಿದೆ ನಾಯಿಯ ವಿಡಿಯೋ
ಹೀಗೆ ಈ ರೀತಿಯ ಮುದ್ದಾದ ವೀಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ತುಂಬಾನೇ ಹರಿದಾಡುತ್ತಿರುತ್ತವೆ. ಇಲ್ಲಿಯೂ ಸಹ ಅಂತಹದೇ ಒಂದು ಮುದ್ದಾದ ನಾಯಿಮರಿಗಳ ವೀಡಿಯೋವೊಂದು ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ ನೋಡಿ. ನಾವು ಸಾಮಾನ್ಯವಾಗಿ ‘ಯಾರ ಮೇಲೆ ಜಾಸ್ತಿ ಪ್ರೀತಿ ಇರುತ್ತದೆಯೋ, ಅವರೊಡನೆ ಜಾಸ್ತಿ ಜಗಳವಾಡುತ್ತೇವೆ’ ಅಂತ ಹೇಳುತ್ತೇವೆ. ಈ ವೀಡಿಯೋದಲ್ಲಿಯೂ ಅದೇ ಆಗಿರಬಹುದೆಂದು ನಮ್ಮ ಊಹೆ.

ನಾಯಿಮರಿಗೆ ಒಂದು ಹೆಣ್ಣು ನಾಯಿ ಮರಿಯ ಮೇಲೆ ಪ್ರೀತಿ
ಫಿನ್ ಎಂಬ ಮುದ್ದಾದ ಪುಟ್ಟ ನಾಯಿಮರಿಗೆ ಒಂದು ಹೆಣ್ಣು ನಾಯಿ ಮರಿಯ ಮೇಲೆ ಪ್ರೀತಿ ಆಗಿತ್ತಂತೆ, ಆದರೆ ಅದು ತನ್ನ ಪ್ರೀತಿಯನ್ನು ಹೇಗೆ ವ್ಯಕ್ತಪಡಿಸಿವುದು ಎಂದು ಗೊತ್ತಾಗದೆ ತುಂಬಾ ವಿಚಿತ್ರವಾಗಿ ಪ್ರತಿಕ್ರಿಯಿಸಿದೆ. ಇದನ್ನು ನೋಡಲು ನಿಜವಾಗಿಯೂ ತುಂಬಾನೇ ಮುದ್ದಾಗಿದೆ ಎಂದು ಹೇಳಬಹುದು ಮತ್ತು ಈ ವೀಡಿಯೋವು ನಿಮ್ಮನ್ನು ಆಶ್ಚರ್ಯಚಕಿತರನ್ನಾಗಿ ಮಾಡುವುದಂತೂ ಖಂಡಿತ.

ಇದನ್ನೂ ಓದಿ: Viral Video: ಫೊಟೋ ತೆಗೆದುಕೊಳ್ತಿದ್ದ ಬಾಲಕಿಯ ಮುಖಕ್ಕೆ ಸೊಂಡಿಲಿನಿಂದ ಹೊಡೆದ ಆನೆ! ವಿಡಿಯೋ ವೈರಲ್

" ಫಿನ್ ಗೆ ಪಪ್ಪಿ ಕ್ಲಾಸ್ ಎಂಬ ಹೆಣ್ಣು ನಾಯಿಮರಿಯ ಮೇಲೆ ಪ್ರೀತಿಯಾಗಿತ್ತು, ಆದರೆ ಅವನು ಅದನ್ನು ಹೇಗೆ ವ್ಯಕ್ತಪಡಿಸಬೇಕೆಂದು ತಿಳಿಯದೆ ಆ ಹೆಣ್ಣು ನಾಯಿಮರಿಯ ಮೂಗಿನ ಮೇಲೆ ಹಾಗೆ ರಪಾ ರಪಾ ಅಂತ ಹೊಡೆಯಲು ಶುರು ಮಾಡುತ್ತದೆ" ಎಂದು ವೀಡಿಯೋದಲ್ಲಿರುವ ಪಠ್ಯವು ಹೇಳುತ್ತದೆ. ಒಂದು ನಾಯಿಮರಿ ಕಾರಿನಲ್ಲಿ ಕುಳಿತು ಕೊಂಡಿರುವುದರೊಂದಿಗೆ ಈ ವೀಡಿಯೋ ಪ್ರಾರಂಭವಾಗುತ್ತದೆ.

ಗೋಲ್ಡನ್ ರಿಟ್ರೀವರ್ ನಾಯಿ ಮರಿಗೆ ‘ಪಪ್ಪಿ ಕ್ಲಾಸ್’ ಎಂಬ ನಾಯಿ ಮರಿ ಮೇಲೆ ಪ್ರೀತಿ ಆಗುತ್ತದೆ. ಅದನ್ನು ಹೇಗೆ ಪ್ರತಿಕ್ರಿಯಿಸಬೇಕು ಎಂಬುವುದು ಇಳಿಯದೇ ಅದನ್ನು ಹೊಡೆಯುವ ರೀತಿಯಲ್ಲಿ ತನ್ನ ಭಾವನೆಯನ್ನು ವ್ಯಕ್ತಪಡಿಸುತ್ತದೆ. ನಾಯಿಮರಿ ತನ್ನ ಕ್ರಶ್ ಅನ್ನು ಭೇಟಿಯಾದಾಗ, ಅವನು ವಿಚಿತ್ರವಾಗಿ ಪ್ರತಿಕ್ರಿಯಿಸಿದ್ದಾನೆ ಮತ್ತು ಆ ಹೆಣ್ಣು ನಾಯಿಮರಿಯ ಮೂಗಿನ ಮೇಲೆ ಹೊಡೆಯುವುದನ್ನು ನಿಲ್ಲಿಸಲೇ ಇಲ್ಲ.

ಲವ್ ಅಟ್ ಫಸ್ಟ್ ಬೂಪ್
ಮಾರ್ಚ್ 15ರಂದು ಗೋಲ್ಡನ್ ಗರ್ಲ್_ಕ್ಸೆನಾ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವೀಡಿಯೋವನ್ನು ಪೋಸ್ಟ್ ಮಾಡಲಾಗಿದೆ. ಇದುವರೆಗೂ ಈ ವೀಡಿಯೋ 5.7 ದಶಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದಿದೆ ಮತ್ತು 4,50,000ಕ್ಕಿಂತಲೂ ಹೆಚ್ಚು ಲೈಕ್ ಗಳನ್ನು ಸಹ ಇದು ಪಡೆದಿದೆ. ಇದು ನಿಜವಾಗಿಯೂ ಸಿಕ್ಕಾಪಟ್ಟೆ ವೈರಲ್ ಆಗಿದೆ. "ಲವ್ ಅಟ್ ಫಸ್ಟ್ ಬೂಪ್" ಎಂದು ವೀಡಿಯೋದ ಶೀರ್ಷಿಕೆಯಲ್ಲಿ ಬರೆಯಲಾಗಿದೆ.




"ತುಂಬಾನೇ ಮುದ್ದಾಗಿದೆ” ಎಂದು ಇನ್ಸ್ಟಾಗ್ರಾಮ್ ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರು "ಹೃದಯವು ಈಗಷ್ಟೇ ಕರಗಿತು" ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು "ನಾಯಿಮರಿಯು ತನ್ನ ಕ್ರಶ್ ಗೆ ಹೊಡೆದಾಗ ನೋಡಲು ತುಂಬಾನೇ ಮುದ್ದಾಗಿದೆ" ಎಂದು ಕಾಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ: Dogsಗಳು ಕಂಡ ಕಂಡಲ್ಲಿ ಮೂತ್ರ ಮಾಡೊದೇಕೆ? ನಾಯಿ ಬುದ್ಧಿ ಬಗ್ಗೆ ತಜ್ಞರು ಹೇಳುವುದೇನು?

ಈ ಸಾಮಾಜಿಕ ಮಾಧ್ಯಮದ ಖಾತೆಯು ಕ್ಸೆನಾ ಮತ್ತು ಫಿನ್ ಎಂಬ ಎರಡು ಗೋಲ್ಡನ್ ರಿಟ್ರಿವರ್ ನಾಯಿಗಳಿಗೆ ಸೇರಿದೆ ಎಂದು ಹೇಳಲಾಗುತ್ತಿದ್ದು, ಈ ನಾಯಿಗಳು ಒಡಹುಟ್ಟಿದವರಾಗಿದ್ದು, ಫಿನ್ ಸಹೋದರನಾಗಿದ್ದಾನೆ. ಈ ಖಾತೆಯಲ್ಲಿ 2.26 ಲಕ್ಷಕ್ಕೂ ಹೆಚ್ಚು ಜನರು ಫಾಲೋವರ್ಸ್ ಇದ್ದಾರೆ.
Published by:Ashwini Prabhu
First published: