Viral Video: ತಾಯಿ ಮಾಡಿಕೊಟ್ಟ ತಿಂಡಿಗೆ ಪುಟ್ಟ ಹುಡುಗಿಯ ಅದ್ಭುತ ರಿಯಾಕ್ಷನ್, ತಿನ್ನೋದಷ್ಟೇ ಅಲ್ಲ, ಕಾಂಪ್ಲಿಮೆಂಟ್ಸ್ ಕೊಡಿ

ಸಿಕ್ಕಾಪಟ್ಟೆ ವೈರಲ್ ಆದ ಈ ಚಿಕ್ಕ ವಿಡಿಯೋ ಕ್ಲಿಪ್‌ನಲ್ಲಿ ತಾಯಿ ತಿಂಡಿಯನ್ನು ಮಾಡಿ ಕೊಟ್ಟಾಗ ಆ ಮುದ್ದಾದ ಹುಡುಗಿಯ ಪ್ರತಿಕ್ರಿಯೆಯನ್ನು ನೀವು ನೋಡಬಹುದು. ಇದು ನಿಮ್ಮ ಮನಸು ಕರಗಿಸುತ್ತೆ

ವೈರಲ್ ವಿಡಿಯೋ

ವೈರಲ್ ವಿಡಿಯೋ

  • Share this:
ಸಾಮಾನ್ಯವಾಗಿ ಮಕ್ಕಳು ಶಾಲೆಯಿಂದ ಬಂದ ನಂತರ ‘ಅಮ್ಮಾ ಏನಾದರೂ ತಿನ್ನಲು ತಿಂಡಿ (Snacks) ಮಾಡಿ ಕೊಡು, ಹಸಿವಾಗ್ತಿದೆ ನನಗೆ’ ಎಂದು ಬೆಳಗ್ಗೆಯಿಂದ ಮನೆ ಕೆಲಸ ಮಾಡಿ ಸುಸ್ತಾಗಿ ವಿಶ್ರಾಂತಿ (Rest) ಪಡೆಯುತ್ತಿದ್ದ ತಾಯಂದಿರನ್ನು ಸಂಜೆ ಶಾಲೆಯಿಂದ ಬಂದ ತಕ್ಷಣ ಕೇಳುವುದುಂಟು. ಹೀಗೆ ಮಕ್ಕಳು ಮುದ್ದಾಗಿ ಕೇಳಿಕೊಂಡಾಗ ಆ ತಾಯಿ ತನ್ನ ದಣಿವಾಗಿದ್ದನ್ನು ಮರೆತು ತನ್ನ ಮಕ್ಕಳಿಗೆ ಏನಾದರೊಂದು ತಿಂಡಿಯನ್ನು ಮಾಡಿ ಕೊಡುತ್ತಾರೆ. ನಂತರ ಮಕ್ಕಳು ಅದನ್ನು ತಿಂದು ಸಂಜೆ ಹೊತ್ತಿನಲ್ಲಿ ಸ್ವಲ್ಪ ಹೊರಗಡೆ ಆಟವಾಡಲು ಹತ್ತಿರದ ಪಾರ್ಕ್‌ಗಳಿಗೆ (Park) ಹೋಗುತ್ತಾರೆ. ಕೆಲವು ಮಕ್ಕಳು ತಾಯಿ ಮಾಡಿಕೊಟ್ಟ ತಿಂಡಿಯನ್ನು ಮೆಚ್ಚಿ ‘ಅಮ್ಮಾ ತುಂಬಾನೇ ಚೆನ್ನಾಗಿತ್ತು, ಥ್ಯಾಂಕ್ಸ್’ ಅಂತ ಹೇಳ್ತಾರೆ ಕೂಡ. ಆದರೆ ಕೆಲವರು ಹಾಗೆ ತಿಂದು ಏನೂ ಹೇಳದೆಯೇ ಆಟವಾಡಲು ಹೋಗುವುದುಂಟು.

ಮನೆಯಲ್ಲಿ ಚಿಕ್ಕ ಚಿಕ್ಕ ಮಕ್ಕಳು ಇರುವುದೇ ಜೀವನದ ಅತಿದೊಡ್ಡ ಸಂತೋಷಗಳಲ್ಲಿ ಒಂದಾಗಿದೆ, ಏಕೆಂದರೆ ಅವರು ತುಂಬಾನೇ ಮುದ್ದಾಗಿ ಮಾತಾಡುತ್ತಾ, ಮನೆ ತುಂಬಾ ಅಡ್ಡಾಡಿಕೊಂಡು ಇರುತ್ತಾರೆ. ಮಕ್ಕಳು ನಿಮ್ಮ ಮೇಲೆ ಪ್ರೀತಿ ಮತ್ತು ಕೃತಜ್ಞತೆಯಯಿಂದ ನಿಮಗೆ ಏನಾದರೂ ಹೇಳಿದರೆ ಮತ್ತು ಪ್ರತಿಕ್ರಿಯಿಸಿದರೆ ಪೋಷಕರಾದ ನಿಮಗೆ ಎಷ್ಟು ಸಂತೋಷವಾಗುತ್ತದೆ ಮತ್ತು ನೋಡಲು ಸಹ ಇದು ತುಂಬಾನೇ ಹೃದಯ ಸ್ಪರ್ಶಿಯಾಗಿರುತ್ತದೆ ಎಂದು ತೋರಿಸುತ್ತದೆ.

ಆಹಾ ಅಮ್ಮ ಮಾಡ್ಕೊಂಡ ತಿಂಡಿಗೆಂಥಾ ರುಚಿ

ಈಗ ಸಹ ಅಂತಹದೇ ಒಂದು ವಿಡಿಯೋ ಸಾಮಾಜಿಕ ಮಾಧ್ಯಮವಾದ ಇನ್‌ಸ್ಟಾಗ್ರಾಮ್‌ನಲ್ಲಿ ಹರಿದಾಡುತ್ತಿದ್ದು, ಸಿಕ್ಕಾಪಟ್ಟೆ ವೈರಲ್ ಆದ ಈ ಚಿಕ್ಕ ವಿಡಿಯೋ ಕ್ಲಿಪ್‌ನಲ್ಲಿ ಆ ಪುಟ್ಟ ಹುಡುಗಿಗೆ ಅವರ ತಾಯಿ ತಿಂಡಿಯನ್ನು ಮಾಡಿ ಕೊಟ್ಟಾಗ ಆ ಮುದ್ದಾದ ಹುಡುಗಿಯ ಪ್ರತಿಕ್ರಿಯೆಯನ್ನು ನೀವು ನೋಡಬಹುದು. ಇಲ್ಲಿ ನೀವು ವಿಡಿಯೋ ವೀಕ್ಷಿಸಬಹುದು.

ಮನಸು ಕರಗಿಸುತ್ತೆ ಪುಟ್ಟ ಹುಡುಗಿಯ ಪ್ರತಿಕ್ರಿಯೆ

ಈ ಪುಟ್ಟ ಹುಡುಗಿಯ ಮುದ್ದಾದ ಪ್ರತಿಕ್ರಿಯೆ ನಿಮ್ಮ ಹೃದಯವನ್ನು ಕರಗಿಸದೇ ಬಿಡದು. ಈ ಹುಡುಗಿ ಆ ತಿಂಡಿಯನ್ನು ನೋಡಿ ತನ್ನೆರಡು ಕೈಗಳನ್ನು ಕಣ್ಣುಗಳ ಬಳಿ ತೆಗೆದುಕೊಂಡು ಹೋಗಿ ತುಂಬಾನೇ ಮುದ್ದಾಗಿ ಪ್ರತಿಕ್ರಿಯೆ ನೀಡಿದೆ.

ನಾಲ್ಕೂವರೆ ಲಕ್ಷ ವೀಕ್ಷಣೆ ಪಡೆದ ವಿಡಿಯೋ

ಮಾರ್ಚ್ 19 ರಂದು ಈ ವಿಡಿಯೋವನ್ನು ‘ನಟಾಲಿಯಾಆಂಡ್‌ಬ್ರುನಾ’ ಎಂಬ ಹೆಸರಿನ ಖಾತೆಯ ಪುಟದಿಂದ ಪೋಸ್ಟ್ ಮಾಡಿದೆ. ನಟಾಲಿ ಎಂಬುದು ಮಗಳ ಹೆಸರಾಗಿದ್ದರೆ, ಆ ತಾಯಿಯ ಹೆಸರು ಬ್ರುನಾ ಫಾವಾ ಎಂದು ಹೇಳಲಾಗುತ್ತಿದೆ. ಅವರು ಇನ್‌ಸ್ಟಾಗ್ರಾಮ್‌ನಲ್ಲಿ 2.61 ಲಕ್ಷ ಫಾಲೋವರ್‌ಗಳನ್ನು ಹೊಂದಿದ್ದಾರೆ. ಈ ವಿಡಿಯೋವನ್ನು ಇದುವರೆಗೆ 4.49 ಲಕ್ಷ ಬಾರಿ ವೀಕ್ಷಿಸಲಾಗಿದೆ ಎಂದು ಹೇಳಲಾಗುತ್ತಿದೆ.

ತಿನ್ನೊ ಮೊದಲು ಚುಂಬಿಸೋ ಹುಡುಗಿ

"ನಾನು ಅವಳಿಗೆ ಏನಾದರೂ ಸ್ವಾದಿಷ್ಟಕರವಾದ ತಿಂಡಿಯನ್ನು ಮಾಡಿ ಕೊಟ್ಟಾಗ, ನನ್ನ ಮಗಳ ಪ್ರತಿಕ್ರಿಯೆ ಹೀಗಿರುತ್ತೆ" ಎಂದು ವಿಡಿಯೋದಲ್ಲಿನ ಕ್ಯಾಪ್ಶನ್ ಹೇಳುತ್ತದೆ. ಆ ತಾಯಿಯಾದವಳು ತನ್ನ ಮಗಳಿಗೆ ಸಿಹಿಯಾದ ತಿಂಡಿಯನ್ನು ಮಾಡಿ ಬಡಿಸಿದಳು.

ಇದನ್ನೂ ಓದಿ: Viral Dance: ಬಾದ್ ಶಾ ಜಗ್ನು ಬೀಟ್​ಗೆ ಪುಟ್ಟ ಪೋರಿಯ ಸಖತ್ ಡ್ಯಾನ್ಸ್

ಆ ತಿಂಡಿಯ ಆಕಾರ ನೋಡಿ ಆ ಪುಟ್ಟ ಹುಡುಗಿ ಅದನ್ನು ಎಷ್ಟು ಇಷ್ಟಪಟ್ಟಳೆಂದರೆ ಅದನ್ನು ಈ ವಿಡಿಯೋದಲ್ಲಿ ನೋಡುವುದೇ ಒಂದು ಕಣ್ಣಿಗೆ ಹಬ್ಬವಿದ್ದಂತೆ ಎಂದು ಹೇಳಬಹುದು. ಅವಳು ಆ ತಿಂಡಿಯನ್ನು ತಿನ್ನುವ ಮೊದಲು ಅದನ್ನು ಒಮ್ಮೆ ಚುಂಬಿಸುತ್ತಾಳೆ. ಇದನ್ನು ನೋಡುವುದು ತುಂಬಾನೇ ಖುಷಿ ನೀಡುತ್ತದೆ.

ಫುಲ್ ಖುಷಿಯಾದ್ರು ಅಮ್ಮ

"ಅವಳಿಗಾಗಿ ನಾನು ಮಾಡುವ ಎಲ್ಲಾ ಕೆಲಸಗಳನ್ನು ಅವಳು ಮೆಚ್ಚಿಕೊಳ್ಳುವ ರೀತಿ ಇದೆಯಲ್ಲಾ, ಅದು ನನಗೆ ಯಾವಾಗಲೂ ಖುಷಿ ನೀಡುತ್ತದೆ" ಎಂದು ನಗುಮೊಗದ ಎಮೋಜಿಯೊಂದಿಗೆ ವಿಡಿಯೋದ ಶೀರ್ಷಿಕೆಯಲ್ಲಿ ತಾಯಿ ಬರೆದಿದ್ದಾರೆ.

ಇದನ್ನೂ ಓದಿ: Viral News; ಕೆಲವೇ ನಿಮಿಷಗಳಲ್ಲಿ 5 ಕೋಟಿ ಗಳಿಸಿದ ವ್ಯಕ್ತಿ: ಹೇಗೆ ಗೊತ್ತಾ?

"ಅತ್ಯಂತ ಮುದ್ದಾದ ಮಗು" ಎಂದು ಇನ್‌ಸ್ಟಾಗ್ರಾಮ್ ಬಳಕೆದಾರರೊಬ್ಬರು ಹೃದಯದ ಎಮೋಜಿಗಳನ್ನು ಹಾಕಿ ಕಾಮೆಂಟ್ ಮಾಡಿದ್ದಾರೆ. "ಅವಳು ಆ ತಿಂಡಿಯನ್ನು ಚುಂಬಿಸಿದಾಗ" ಎಂದು ಇನ್ನೊಬ್ಬರು ಪೋಸ್ಟ್ ಮಾಡಿದ್ದಾರೆ. ಮತ್ತೊಬ್ಬರು ಬಳಕೆದಾರರು "ಅಯ್ಯೋ.. ಅವಳು ತುಂಬಾ ಮುದ್ದಾಗಿ ಪ್ರತಿಕ್ರಿಯೆ ನೀಡಿ ತನ್ನ ತಾಯಿಗೆ ಕೃತಜ್ಞತೆ ಹೇಳಿದ್ದಾಳೆ, ನೀವು ಒಳ್ಳೆಯ ತಾಯಿ" ಎಂದು ಬರೆದಿದ್ದಾರೆ.
Published by:Divya D
First published: