ಸಾಮಾನ್ಯವಾಗಿ ಚಿಕ್ಕ ಮಕ್ಕಳು ಅಥವಾ ನಾವೆಲ್ಲರೂ ನಮ್ಮ ಬಾಲ್ಯದಲ್ಲಿ ನಾವು ಬೇಸಿಗೆ ರಜೆಗೆ ಅಂತ ನಮ್ಮ ಅಜ್ಜಿ- ತಾತನ ಮನೆಗೆ ಹಳ್ಳಿಗೆ ಹೋಗಿದ್ದರೆ, ಅಲ್ಲಿಂದ ಬೇಸಿಗೆ ರಜೆ (Summer Holidays) ಮುಗಿದ ನಂತರ ನಮಗೆ ಹಿಂತಿರುಗಿ ನಮ್ಮ ತಂದೆ ತಾಯಿಯ ಮನೆಗೆ ಬರಲು ಇಷ್ಟವಾಗುತ್ತಿರಲಿಲ್ಲ. ಇದಕ್ಕೆ ಕಾರಣ ಎಂದರೆ ನಮಗೆ ಅಜ್ಜಿ - ತಾತನ ಮನೆಯಲ್ಲಿ ಸಿಗುವ ಪ್ರೀತಿ (Love) ಮತ್ತು ಅತಿಯಾದ ಸಲುಗೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಮೊಮ್ಮಕ್ಕಳು ಮತ್ತು ಅವರ ಅಜ್ಜ - ಅಜ್ಜಿಯರ ನಡುವಿನ ಆ ಬಂಧವನ್ನು ಪದಗಳಲ್ಲಿ ವರ್ಣಿಸಲು ಸಾಧ್ಯವೇ ಇಲ್ಲ, ಏಕೆಂದರೆ ಮಕ್ಕಳು ಅವರನ್ನು ಭೇಟಿ ಮಾಡಿದಾಗಲೆಲ್ಲಾ ಅವರ ಅಜ್ಜ - ಅಜ್ಜಿಯರು (Grand Father Grand Mother) ಅವರನ್ನು ತುಂಬಾನೇ ಮುದ್ದು ಮಾಡುತ್ತಾರೆ ಮತ್ತು ಅವರು ಕೇಳಿದ್ದೆಲ್ಲವನ್ನು ಕೊಡಿಸುತ್ತಾರೆ.
ಬಾಲ್ಯದಲ್ಲಿ ಬೇಸಿಗೆ ರಜೆಯಲ್ಲಿ ಅಜ್ಜ ಅಜ್ಜಿಯರ ಮನೆಗೆ ಹೋಗುವುದೇ ಸಂತೋಷವಾದರೆ, ಅಲ್ಲಿ ಹೋಗಿ ಮಜಾ ಮಾಡುವುದು ಇನ್ನೂ ಸಂತೋಷ ನೀಡುವ ವಿಚಾರವಾಗಿತ್ತು ಎಂದು ಹೇಳಬಹುದು. ಮಕ್ಕಳು ತಮ್ಮ ಅಜ್ಜ ಅಜ್ಜಿಯರ ಮನೆಗಳನ್ನು ತೊರೆಯುವುದು ಎಂದರೆ ನಿಜವಾಗಿಯೂ ಕಷ್ಟಕರವಾದ ಕೆಲಸ ಎಂದು ಹೇಳಬಹುದು.
ಮೊಮ್ಮಗಳ ಅಜ್ಜಿ ಮನೆ ಪ್ರೀತಿ
ಏಕೆಂದರೆ ಅವರು ಅಜ್ಜಿ ಅಜ್ಜನನ್ನು ತುಂಬಾನೇ ಹಚ್ಚಿಕೊಂಡು ಬಿಟ್ಟಿರುತ್ತಾರೆ. ಇಂತಹದೇ ಒಂದು ವಿಡಿಯೋ ಈಗ ಸಾಮಾಜಿಕ ಮಾಧ್ಯಮವಾದ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಲಾಗಿದೆ. ಈ ವಿಡಿಯೋದಲ್ಲಿ ಪುಟ್ಟ ಮೊಮ್ಮಗಳು ತನ್ನ ಅಜ್ಜನ ಮನೆಯನ್ನು ತೊರೆಯುತ್ತಿರುವುದಕ್ಕೆ ತುಂಬಾನೇ ನೋವು ಅನುಭವಿಸುತ್ತಿರುವುದನ್ನು ನಾವು ನೋಡಬಹುದು.
ಅಜ್ಜನ ಬಿಟ್ಟು ಹೋಗುವಾಗ ಬೇಜಾರು
ಈ ವಿಡಿಯೋದಲ್ಲಿ ಈ ಪುಟ್ಟ ಬಾಲಕಿ ತನ್ನ ಅಜ್ಜನನ್ನು ಬಿಟ್ಟು ಹೋಗುವಾಗ ಮನಸ್ಸಿಗೆ ಎಷ್ಟು ನೋವಾಗುತ್ತಿದೆ ಎನ್ನುವುದನ್ನು ನೀವು ನೋಡಬಹುದು. ಇದು ನಿಮ್ಮನ್ನು ಭಾವುಕರನ್ನಾಗಿ ಮಾಡುತ್ತದೆ.
9,500 ಕ್ಕೂ ಹೆಚ್ಚು ಲೈಕ್
ಈ ವಿಡಿಯೋವನ್ನು ಆರು ದಿನಗಳ ಹಿಂದೆ ಆ ಪುಟ್ಟ ಮಗುವಿನ ಖಾತೆಯಾದ ಮಾಯಾಖಾನ್ 20 ಎಂಬ ಖಾತೆಯಿಂದ ಪೋಸ್ಟ್ ಮಾಡಲಾಗಿದ್ದು, ಇದುವರೆಗೆ 9,500 ಕ್ಕೂ ಹೆಚ್ಚು ಲೈಕ್ ಗಳು ಬಂದಿವೆ. "ಅಜ್ಜನ ಮನೆಯಿಂದ ಹೊರ ಹೋಗುವಾಗ ಆ ಪುಟ್ಟ ಬಾಲಕಿಯ ಮನಸ್ಸಿನ ಮೇಲೆ ಯಾವ ರೀತಿಯ ಪರಿಣಾಮ ಬಿರುತ್ತಿದೆ" ಎಂದು ವಿಡಿಯೋದಲ್ಲಿರುವ ಪಠ್ಯವು ಹೇಳುತ್ತದೆ. ವಿಡಿಯೋ ಆರಂಭದಲ್ಲಿ, ಪುಟ್ಟ ಹುಡುಗಿ ತನ್ನ ಅಜ್ಜನೊಂದಿಗೆ ಎಲ್ಲೋ ಹೋಗುತ್ತಿದ್ದೇನೆ ಎಂದು ಭಾವಿಸಿ ಮನೆಯಿಂದ ಖುಷಿ ಖುಷಿಯಾಗಿ ಹೊರ ಬರುತ್ತಾಳೆ.
ಇದನ್ನೂ ಓದಿ: Summer Trip: ಬೇಸಿಗೆಯಲ್ಲಿ ಪ್ರವಾಸ ಮೋಜು ಅನುಭವಿಸಬೇಕು ಎಂದ್ರೆ ಈ ವಸ್ತುಗಳನ್ನು ಮರೆಯಬೇಡಿ
ನಂತರ ಅವಳು ತನ್ನ ತಾಯಿಯ ಕಾರಿನ ಬಾಗಿಲನ್ನು ತೆರೆಯುವುದನ್ನು ನೋಡುತ್ತಾಳೆ ಮತ್ತು ಅವಳು ಹೋಗಲು ಬಯಸದ ಕಾರಣ ಅವಳು ಮುಂದೆ ನಡೆದುಕೊಂಡು ಬಂದು ನಿಲ್ಲುತ್ತಾಳೆ. ನಂತರ ಅವಳ ಆ ಪುಟ್ಟ ಕಣ್ಣುಗಳಲ್ಲಿ ನೀರು ತುಂಬಿಕೊಂಡಿರುವುದನ್ನು ನಾವು ನೋಡಬಹುದು. ಕಾರಿನೊಳಗೆ ತನ್ನ ಮುಖವನ್ನು ಮುಚ್ಚಿಕೊಂಡು ಕುಳಿತು ಕೊಳ್ಳುತ್ತಾಳೆ.
ಟಾಟಾ ಹೇಳೋದನ್ನು ನೋಡಿದ ಮೊಮ್ಮಗಳು
ಆದರೆ ವಿಡಿಯೋ ಕೊನೆಯಲ್ಲಿ, ಅವಳ ಅಜ್ಜ ಇನ್ನೂ ಅವಳಿಗೆ ಟಾಟಾ ಹೇಳುತ್ತಿರುವುದನ್ನು ನೋಡಬಹುದೆಂದು ಸಂತೋಷವಾಗಿರುತ್ತಾಳೆ. "ಕನಿಷ್ಠ ಈ ಬಾರಿಯಾದರೂ ಅವಳು ರಾತ್ರಿ ನಮ್ಮ ಮನೆಯಲ್ಲಿಯೇ ನಮ್ಮೊಂದಿಗೆ ಉಳಿದುಕೊಂಡಳು" ಎಂದು ವಿಡಿಯೋದ ಶೀರ್ಷಿಕೆಯಲ್ಲಿ ಹೇಳಲಾಗಿದೆ.
ಇದನ್ನೂ ಓದಿ: Learning Cycling: ಇದಪ್ಪಾ ಫ್ರೆಂಡ್ಶಿಪ್ ಅಂದ್ರೆ! ಸೈಕಲ್ ಕಲಿಯುತ್ತಿರೋ ಗೆಳೆಯನಿಗೆ ಈ ಪುಟ್ಟ ಬಾಲಕರು ನೆರವಾಗಿದ್ದು ಹೀಗೆ
ಈ ವಿಡಿಯೋ ನೋಡಿದ ನೆಟ್ಟಿಗರಲ್ಲಿ ಒಬ್ಬರು "ಓಹ್, ನೀವು ಹಿಂತಿರುಗಿ ಹೋಗುತ್ತಿದ್ದೀರಿ, ತುಂಬಾ ನೋವಾಗಿದೆ" ಎಂದು ಕಾಮೆಂಟ್ ಮಾಡಿದ್ದಾರೆ. ಇನೊಬ್ಬ ಇನ್ಸ್ಟಾಗ್ರಾಮ್ ಬಳಕೆದಾರರು "ಇದು ನಿಜವಾದ ಕೆಮಿಸ್ಟ್ರಿಯಾಗಿದ್ದು, ಮಕ್ಕಳು ತಮ್ಮ ಹೆತ್ತವರಿಗಿಂತ ಹೆಚ್ಚಾಗಿ ತಮ್ಮ ಅಜ್ಜ-ಅಜ್ಜಿಯರನ್ನು ಪ್ರೀತಿಸುತ್ತಾರೆ ಎಂಬ ವಿಷಯ ಎಂದಿಗೂ ಬದಲಾಗುವುದಿಲ್ಲ” ಎಂದು ಕಾಮೆಂಟ್ ಮಾಡಿದರು. "ಅಯ್ಯೋ, ಅವಳು ತನ್ನ ಅಜ್ಜನನ್ನು ತುಂಬಾನೇ ಪ್ರೀತಿಸುತ್ತಾಳೆ" ಎಂದು ಮೂರನೆಯವನು ಕಾಮೆಂಟ್ ಮಾಡಿದರು. ಮಾಯಾ ಎಂಬ ಹೆಸರಿನ ಹುಡುಗಿ ಇನ್ಸ್ಟಾಗ್ರಾಮ್ನಲ್ಲಿ 5,000ಕ್ಕೂ ಹೆಚ್ಚು ಫಾಲೋವರ್ಗಳನ್ನು ಹೊಂದಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ