ಸಾಮಾನ್ಯವಾಗಿ ಈಗಂತೂ ಸಾಮಾಜಿಕ ಮಾಧ್ಯಮಗಳಲ್ಲಿ (Social Media) ಅನೇಕ ರೀತಿಯ ವೀಡಿಯೋಗಳು (Video) ನಮಗೆ ನೋಡಲು ಸಿಗುತ್ತವೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಹೆಚ್ಚಿನವು ಈ ಸಾಕುಪ್ರಾಣಿಗಳಾದ (Pet Animals) ನಾಯಿ ಮತ್ತು ಬೆಕ್ಕುಗಳದ್ದಾಗಿದ್ದರೆ, ಇನ್ನೂ ಉಳಿದಂತಹ ವೀಡಿಯೋಗಳು ಬೇರೆ ಬೇರೆ ರೀತಿಯದ್ದು ಎಂದು ಹೇಳಬಹುದು. ಇದರಲ್ಲಿ ಕೆಲವು ವೀಡಿಯೋಗಳನ್ನು ನಾವು ಗಮನಿಸಿದರೆ ನಮಗೆ ಈ ಜನರು ಕೆಲವು ವಿಚಿತ್ರ ವಸ್ತುಗಳನ್ನು ನೋಡಿ ಭಯವಾಗುವಂತಹ (Scary) ಮತ್ತು ಯಾರಾದರೂ ಅವರಿಗೆ ಗೊತ್ತಿರಲಾರದೇ ಏನಾದರೂ ಸರ್‌ಪ್ರೈಸ್ ನೀಡಿದರೆ ಅವರ ಮುಖದ (Face) ಮೇಲೆ ಆಗುವ ಆ ಸಂತೋಷದ ಪ್ರತಿಕ್ರಿಯೆದ್ದಾಗಿರುತ್ತವೆ ಎಂದು ಹೇಳಿದರೆ ಅತಿಶಯೋಕ್ತಿಯಲ್ಲ.
ಹೌದು..ಇತ್ತೀಚೆಗೆ ನಾವು ಒಬ್ಬ ಪುಟ್ಟ ಹುಡುಗ ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದು, ಆಸ್ಪತ್ರೆಗೆ ಬಂದಾಗ ಅವನಿಗೆ ಗೊತ್ತಿರಲಾರದೆಯೇ ಅವನ ಹುಟ್ಟುಹಬ್ಬಕ್ಕೆ ಕೇಕ್ ವೊಂದನ್ನು ತಂದು ಅವನ ಕೈಯಿಂದ ಕತ್ತರಿಸಿದ ಆಸ್ಪತ್ರೆಯ ಸಿಬ್ಬಂದಿ ಮತ್ತು ವೈದ್ಯರನ್ನು ನೋಡಿ ತುಂಬಾನೇ ಖುಷಿ ಪಟ್ಟಿದ್ದ ವೀಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಹೀಗೆ ಅನೇಕರು ತಮಗೆ ಇಷ್ಟವಾದವರಿಗೆ ಏನಾದರೊಂದು ಸರ್‌ಪ್ರೈಸ್ ನೀಡುವುದನ್ನು ಮತ್ತು ಅದನ್ನು ನೋಡಿದ ಅವರ ಮುಖದ ಭಾವವನ್ನು ನೋಡುವುದೇ ಒಂದು ಚೆಂದ. ಅದರಲ್ಲೂ ಇಂತಹ ಒಂದು ಮುದ್ದಾದ ಪ್ರತಿಕ್ರಿಯೆಯನ್ನು ವೀಡಿಯೋ ಮಾಡಿದರೆ ಅದು ಇನ್ನೂ ಸಂತೋಷವನ್ನು ನೀಡುತ್ತದೆ.
ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿದ ವೈರಲ್ ವಿಡಿಯೋ
ಹಾಗೆಯೇ ಈ ಚಿಕ್ಕ ಮಕ್ಕಳು ತೋರಿಸುವ ಪ್ರತಿಕ್ರಿಯೆಗಳು ತುಂಬಾನೇ ಕ್ಯೂಟ್ ಆಗಿರುತ್ತವೆ. ಇಲ್ಲಿಯೂ ಸಹ ಒಂದು ಚಿಕ್ಕ ಹುಡುಗಿಯ ಮುದ್ದಾದ ಪ್ರತಿಕ್ರಿಯೆಯನ್ನು ತೋರಿಸುವ ಒಂದು ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ ನೋಡಿ.
ಇದನ್ನೂ ಓದಿ: Viral Video: ಸೆಕೆಂಡ್ ಹ್ಯಾಂಡ್ ಸೈಕಲ್ ತಗೊಂಡ ಅಪ್ಪ-ಮಗನ ಖುಷಿ ನೋಡಿ!
ಮಕ್ಕಳು ಈ ಭಯಾನಕವಾಗಿ ಕಾಣುವ ಬೊಂಬೆಗಳಿಗೆ ಹೆದರುತ್ತಾರೆ ಎನ್ನುವುದು ನಮಗೆಲ್ಲಾ ಗೊತ್ತಿರುವ ವಿಚಾರವೇ ಆಗಿದೆ. ಅವುಗಳನ್ನು ಕೇವಲ ನೋಡುವುದು ಸಹ ಅವರನ್ನು ಭಯಭೀತರನ್ನಾಗಿಸಬಹುದು. ಆದಾಗ್ಯೂ, ಈ ಪುಟ್ಟ ಹುಡುಗಿಯು ತನ್ನ ತಾಯಿ ಅವಳಿಗೆ ವಿಲಕ್ಷಣ ಗೊಂಬೆಯನ್ನು ಉಡುಗೊರೆಯಾಗಿ ನೀಡಿದ ಬಗ್ಗೆ ನೀಡಿದ ಪ್ರತಿಕ್ರಿಯೆಯು ಎಲ್ಲರನ್ನೂ ಆಶ್ಚರ್ಯಚಕಿತರನ್ನಾಗಿಸಿತು.
ಭಯಾನಕ ಗೊಂಬೆಯನ್ನು ಉಡುಗೊರೆಯಾಗಿ ಕೊಟ್ಟ ತಾಯಿ
ಮೂರು ವರ್ಷದ ಲಿಲಿ ತನ್ನ ತಾಯಿ ಭಯಾನಕ ಗೊಂಬೆಯನ್ನು ಉಡುಗೊರೆಯಾಗಿ ನೀಡಿದಾಗ ಸ್ವಲ್ಪವೂ ಭಯ ಬೀಳದೆ ಸಂಪೂರ್ಣವಾಗಿ ಸಂತೋಷಪಟ್ಟಳು. ಬದಲಾಗಿ ಅವಳು ಅದನ್ನು ಕೈಯಲ್ಲಿ ಹಿಡಿದುಕೊಂಡು ಅದರ ಕಣ್ಣುಗಳ ಬಗ್ಗೆ ಮಾತನಾಡಿದಳು. ಅವರು ಆ ಭಯಾನಕ ಗೊಂಬೆಯನ್ನು ನೋಡಿ ಅಳಲಿಲ್ಲ ಅಥವಾ ಹೆದರಲಿಲ್ಲ.
View this post on Instagram
ಈ ವೀಡಿಯೋವನ್ನು ಅವರ ತಾಯಿ ಮೇ 15 ರಂದು ಸಾಮಾಜಿಕ ಮಾಧ್ಯಮವಾದ ಇನ್‌ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದು ಇವರೆಗೂ 1.5 ಮಿಲಿಯನ್ ವೀಕ್ಷಣೆಗಳನ್ನು ಪಡೆದಿದೆ ಮತ್ತು ಒಂದು ಲಕ್ಷಕ್ಕಿಂತಲೂ ಹೆಚ್ಚು ಲೈಕ್ ಗಳನ್ನು ಈ ವೀಡಿಯೋ ಪಡೆದಿದೆ.
ದೆವ್ವದ ಬೊಂಬೆ ನೋಡಿದ ಲಿಲಿ ಹೇಳಿದ್ದು ಹೀಗೆ
ಸಾಮಾಜಿಕ ಮಾಧ್ಯಮದಲ್ಲಿ ಈಗ ವೈರಲ್ ಆಗಿರುವ ವೀಡಿಯೋದಲ್ಲಿ, ಲಿಲಿಯ ತಾಯಿ ಬ್ರಿಟಾನಿ ಅವಳಿಗೆ ಒಂದು 'ದೆವ್ವದ ಬೊಂಬೆ'ಯನ್ನು ಉಡುಗೊರೆಯಾಗಿ ನೀಡಿದ್ದಾರೆ ಮತ್ತು ಅವರ ಪ್ರತಿಕ್ರಿಯೆಯನ್ನು ನೋಡಲು ತಾಯಿ ಬಯಸಿದ್ದಾರೆ. ಅದನ್ನು ನೋಡಿದ ನಂತರ, ಲಿಲಿ ಸ್ವಲ್ಪವೂ ಭಯ ಬೀಳದೆ "ಅವಳಿಗೆ ಸುಂದರವಾದ ಕಣ್ಣುಗಳಿವೆ" ಎಂದು ಕಾಮೆಂಟ್ ಮಾಡಿದ್ದಾಳೆ ಮತ್ತು ಅಷ್ಟಕ್ಕೇ ಸುಮ್ಮನಿರದೆ ಲಿಲಿ ಅದರೊಂದಿಗೆ ಕೂಡಲೇ ಆಟ ಆಡಲು ಪ್ರಾರಂಭಿಸಿದಳು ಮತ್ತು ಆ ಸಮಯವನ್ನು ತುಂಬಾನೇ ಸಂತೋಷದಿಂದ ಕಳೆದಳು ಎಂದು ಹೇಳಬಹುದು.
ಇದನ್ನೂ ಓದಿ: Viral Video: ಫೊಟೋ ತೆಗೆದುಕೊಳ್ತಿದ್ದ ಬಾಲಕಿಯ ಮುಖಕ್ಕೆ ಸೊಂಡಿಲಿನಿಂದ ಹೊಡೆದ ಆನೆ! ವಿಡಿಯೋ ವೈರಲ್
ನೆಟ್ಟಿಗರು ಈ ವೈರಲ್ ವೀಡಿಯೋವನ್ನು ನೋಡಿ ಸಂಪೂರ್ಣವಾಗಿ ಇಷ್ಟಪಟ್ಟಿದ್ದಾರೆ. "ಅವಳು ಆ ಗೊಂಬೆಯನ್ನು ಇಷ್ಟ ಪಟ್ಟಿದ್ದಾಳೆಯೇ ಅಥವಾ ಇಲ್ಲವೇ ಎನ್ನುವುದರ ಬಗ್ಗೆ ಯಾವುದು ಉತ್ತರ ನೀಡಲಿಲ್ಲ" ಎಂದು ಬಳಕೆದಾರರೊಬ್ಬರು ಬರೆದಿದ್ದಾರೆ. ಇನ್ನೊಬ್ಬರು “ಲಿಲಿ ಆಕೆಯ ಬೊಂಬೆಗೆ ಮಿಸ್ಟ್ರೆಸ್ ಪೆನ್ನಿವಾಯ್ಸ್ ಎಂದು ಹೆಸರಿಟ್ಟಿದ್ದಾಳೆ” ಎಂದು ಬರೆದಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ