ಪ್ರತಿಯೊಬ್ಬರ ಜೀವನದಲ್ಲಿ ಮೊದಲ ಸ್ನೇಹಿತರು (Friends) ಎಂದ್ರೆ ಅವರ ಒಡಹುಟ್ಟಿದವರು. ಒಡಹುಟ್ಟಿದವರ ಜೊತೆ ಆಟ ಆಡ್ತಾ, ಕಿತ್ತಾಡ್ತಾ, ಮತ್ತೆ ಮುದ್ದು ಮಾಡ್ತಾ ಬೆಳೆಯೋದು ಇದಿಯಲ್ಲ, ಅದು ಎಲ್ಲರಿಗೂ ಗ್ರೇಟ್ (Great) ಅನುಭವ. ನಮ್ಮ ಬಾಲ್ಯವೆಂದ ತಕ್ಷಣ ಮೊದಲಿಗೆ ನೆನಪು ಆಗೋದು ತಂದೆ ತಾಯಿ, ಆದಾದ ನಂತರ ನಮ್ಮ ಅಣ್ಣ, ಅಕ್ಕ, ತಮ್ಮ, ತಂಗಿ ಹೀಗೆ ಅಲ್ವಾ? ಅದಕ್ಕೆ ಪ್ರತಿಯೊಬ್ಬರ ಜೀವನದಲ್ಲಿ ಅವರವರ ಬಾಲ್ಯ (Childhood) ಮರೆಯಲಾಗದ ಮಾಣಿಕ್ಯದಂತಹ ಸಮಯ ಅಂತ ಕರಿತಾರೆ. ಆ ಕ್ಷಣಗಳೆಲ್ಲ ಈಗಿನ ತರಹ ಯಾವುದು ವೇಸ್ಟ್ ಆಗಿರೋದಿಲ್ಲ. ಎಲ್ಲವೂ ಸ್ಮರಣೀಯ ಕ್ಷಣಗಳಿಂದ ತುಂಬಿರುತ್ತವೆ. ಆ ಕ್ಷಣಗಳೆ ನಮ್ಮನ್ನು ಅದ್ಭುತ ವ್ಯಕ್ತಿಗಳಾಗಿ ರೂಪಿಸುತ್ತವೆ. ಈ ಒಡಹುಟ್ಟಿದವರ ಜೊತೆ ಇರೋ ಬಂಧ ಮತ್ಯಾರ ಜೊತೆನೂ ಬೆಳೆಯೋದಕ್ಕೆ ಸಾಧ್ಯವೇ ಇಲ್ಲ.
ಜೀವನ ನಿರಂತರವಾಗಿ ಎಷ್ಟೆ ಬದಲಾದ್ರೂ, ಈ ಸಂಬಂಧ ಮಾತ್ರ ಬದಲಾಗೋದೆ ಇಲ್ಲ. ನಾವು ನಮ್ಮ ಒಡಹುಟ್ಟಿದವರೊಂದಿಗೆ ಶೇರ್ ಮಾಡಿಕೊಳ್ಳುವ ಬಂಧವು ವಿಶೇಷವಾಗಿರುತ್ತದೆ. ಅದು ಪ್ರೀತಿ, ವಿಶ್ವಾಸ ಮತ್ತು ಅನೇಕ ಅನುಭವಗಳ ಒಂದು ದೊಡ್ಡ ಪುಸ್ತಕ ಆಗಿರುತ್ತದೆ ಎಂದೇ ಹೇಳಬಹುದು. ಏನಪ್ಪ ಇವ್ರು ಇವತ್ತು ಒಡಹುಟ್ಟಿದವರ ಬಗ್ಗೆ ಮಾತನಾಡ್ತಿದಾರೆ, ಸಿಬ್ಲಿಂಗ್ಸ್ ಡೇ ನಾ ಇವತ್ತು ಅಂತ ಗೂಗಲ್ ಚೆಕ್ ಮಾಡಿದೀರಿ ಮತ್ತೆ. ಹಾಗೆಲ್ಲ ಏನಿಲ್ಲ.
ಆದ್ರೂ ಈ ವಿಷಯ ಪ್ರಸ್ತಾಪಿಸಿದಿವಿ ಅಂದ ಮೇಲೆ ಏನೋ ಸ್ಪೆಷಲ್ ಅಂತ್ರೂ ಇದೆ. ಆ ಸ್ಪೆಷಲ್ ಬಗ್ಗೆ ನಿಮ್ಗೆ ಗೊತ್ತಾಗಬೇಕೆಂದ್ರೆ ನೀವು ಈ ಲೇಖನವನ್ನು ಪೂರ್ತಿಯಾಗಿ ಓದಲೇಬೇಕು. ಓದೇ ಒದ್ತಿರಿ ಅಂತನೂ ನಮಗೆ ಗೊತ್ತು. ಹಾಗಿದ್ರೆ ತಡ ಯಾಕೆ ನಡಿರಿ ಮುಂದೆ ಹೋಗೋಣ.
ಟ್ವಿಟರ್‌ನಲ್ಲಿ ವೈರಲ್ ಆಗ್ತಿರೋ ಒಡಹುಟ್ಟಿದವರ ಸ್ಪೆಷಲ್ ವಿಡಿಯೋ
ಹರ್ಷ್ ಮಾರಿವಾಲಾ ಅವರು ಟ್ವಿಟರ್‌ನಲ್ಲಿ ಶೇರ್ ಮಾಡಿದ ವೀಡಿಯೊದಲ್ಲಿ, “ಒಂದು ಪುಟ್ಟ ಹುಡುಗಿ ತನ್ನ ಸಹೋದರನ ಸಹಾಯದಿಂದ ಮ್ಯಾಜಿಕ್ ಮಾಡೋದನ್ನು ನಾವು ನೋಡಬಹುದು.
ಆ ವಿಡಿಯೋ ಕ್ಲಿಪ್ ಹಾಗೆಯೇ ಕಂಟಿನ್ಯೂ ಆಗ್ತಿದ್ದಂತೆ, ಹುಡುಗಿ ತನ್ನ ಸಹೋದರನ ಮುಂದೆ ಟವೆಲ್ ಅನ್ನು ಹಿಡಿದು ಮ್ಯಾಜಿಕ್ ಮಾಡುವಂತೆ ಮಾಡುತ್ತಾಳೆ.
ಇದನ್ನೂ ಓದಿ: ಕರೆಂಟ್ ಬಿಲ್ ಕಟ್ಟೋದಿಲ್ಲ, ಮೀಟರ್ ಬೋರ್ಡ್ಗೆ ಚೀಟಿ ಅಂಟಿಸಿದ ಉಡುಪಿಯ ವ್ಯಕ್ತಿ!
ತನ್ನ ತಮ್ಮ ಈಗ ಕಾಣಿಸೋದಿಲ್ಲ ಎಂಬ ಭಾವನೆಯೊಂದಿಗೆ ಆ ಟವೆಲ್ ಅನ್ನು ಸರಿಸುತ್ತಾಳೆ. ಆದರೆ ಅವಳ ತಮ್ಮ ಪಕ್ಕದಲ್ಲಿ ಮರೆಯಾಗಿ ಕುಳಿತಿದ್ದರೂ ಅವನ ಹಿಂಬದಿಯ ಭಾಗ ಹಾಗೆ ಕಾಣುತ್ತಿರುತ್ತದೆ.
ಆಗ ಆ ಪುಟ್ಟ ಹುಡುಗಿ ತನ್ನ ತಮ್ಮನಿಗೆ ಒಂದು ಒದೆ ಕೊಡೋದರ ಮೂಲಕ ಅವನನ್ನು ಮ್ಯಾಜಿಕ್ ಮಾಡಿ ಮಾಯ ಮಾಡಿದೆ ಎಂದು ಖುಷಿಯಿಂದ ಬೀಗುತ್ತಾಳೆ. ಈ ವಿಡಿಯೋದಲ್ಲಿ ಹೇಗೆ ಚಿಕ್ಕವರಿದ್ದಾಗ ನಾವೆಲ್ಲ ಆಟ ಆಡ್ತಿದ್ದೆವು ಎಂಬುದನ್ನು ನೆನಪಿಸಲು ಈ ಸ್ಮಾಲ್ ವಿಡಿಯೋ ಎಲ್ಲರಿಗೂ ಇಷ್ಟವಾಗುತ್ತೆ.
ಹರ್ಷ್ ಮಾರಿವಾಲಾ ಎಂಬುವವರು ಈ ಮುದ್ದಾದ ವಿಡಿಯೋ ಕ್ಲಿಪ್ ಒಂದನ್ನು ಟ್ವಿಟರ್‌ನಲ್ಲಿ ಶೇರ್ ಮಾಡಿದ್ದಾರೆ. ಅದರ ಮೂಲಕ ನೆಟ್ಟಿಗರ ಮನಸ್ಸಿನಲ್ಲಿ ತಮ್ಮ ಬಾಲ್ಯದ ನೆನಪನ್ನು ತೆರೆಯುವಂತೆ ಮಾಡಿದ್ದಾರೆ.
Best magic trick ever played in history. 😄pic.twitter.com/bzsPqfyZrC
— Harsh Mariwala (@hcmariwala) May 2, 2023
ಕಮೆಂಟ್‌ಗಳ ಸುರಿಮಳೆ ಆಗ್ತಿದೆ ಈ ಕ್ಯೂಟ್ ಅಕ್ಕ-ತಮ್ಮನ ಜೋಡಿಗೆ
ಸೋಷಿಯಲ್ ಮೀಡಿಯಾದಲ್ಲಿ ಈ ಕ್ಯೂಟ್ ವಿಡಿಯೋಗೆ ಸಾಕಷ್ಟು ಕಮೆಂಟ್‌ಗಳ ಸುರಿಮಳೆನೆ ಆಗ್ತಿದೆ. ಯಾಕ್ ಅಂದ್ರೆ ವಿಡಿಯೋ ಅಷ್ಟೊಂದು ಮುದ್ದಾಗಿ ಮೂಡಿ ಬಂದಿದೆ.
ಇದನ್ನೂ ಓದಿ: ಹಾರ ಬದಲಾಯಿಸಿಕೊಳ್ಳುವಾಗ ಮದುಮಕ್ಕಳ ಹೊಡೆದಾಟ! ವಧುವನ್ನೇ ಮಂಟಪದಿಂದ ತಳ್ಳಿದ ವರ!
ಒಬ್ಬ ಬಳಕೆದಾರರು “ವಾವ್, ದಟ್ಸ್ ಟೂ ಕ್ಯೂಟ್..ಈ ವಿಡಿಯೋವನ್ನು ಶೇರ್ ಮಾಡಿ, ನಮ್ಮ ಮುಖದಲ್ಲಿ ಮಂದಹಾಸ ಬರೋ ಹಾಗೆ ಮಾಡಿದ್ದಕ್ಕೆ ತುಂಬಾ ಥ್ಯಾಂಕ್ಸ್” ಎಂದು ವಿಡಿಯೋವನ್ನು ಮನದುಂಬಿ ಹೊಗಳಿ ಕಮೆಂಟ್ ಬರೆದಿದ್ದಾರೆ.
ಇನ್ನೊಬ್ಬ ಬಳಕೆದಾರರು “ಕ್ಯೂಟ್ ಮ್ಯಾಜಿಷಿಯನ್” ಎಂದು ಬರೆದಿದ್ದಾರೆ. ಮತ್ತೊಬ್ಬ ಬಲಕೆದಾರರು “ದ ಲಾಸ್ಟ್ ಪಾರ್ಟ್ ವಾಸ್ ಗ್ರೆಟ್" ಅಂದ್ರೆ ವಿಡಿಯೋದ ಲಾಸ್ಟ್ ನಲ್ಲಿ ಆ ಹುಡುಗಿ ತನ್ನ ತಮ್ಮನಿಗೆ ಒದೆ ನೀಡೋ ದೃಶ್ಯ ಸಕತ್ ಚೆನ್ನಾಗಿದೆ” ಎಂದು ಕಮೆಂಟ್ ಬರೆದುಕೊಂಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ