• Home
  • »
  • News
  • »
  • trend
  • »
  • Viral Photo: ಆಗಷ್ಟೇ ಪದವಿ ಪಡೆದ ತಂದೆಯ ಫೋಟೋವನ್ನು ಹೆಮ್ಮೆಯಿಂದ ಕ್ಲಿಕ್ಕಿಸಿದ ಪುಟಾಣಿ

Viral Photo: ಆಗಷ್ಟೇ ಪದವಿ ಪಡೆದ ತಂದೆಯ ಫೋಟೋವನ್ನು ಹೆಮ್ಮೆಯಿಂದ ಕ್ಲಿಕ್ಕಿಸಿದ ಪುಟಾಣಿ

ತಂದೆಯ ಫೋಟೋವನ್ನು ಹೆಮ್ಮೆಯಿಂದ ಕ್ಲಿಕ್ಕಿಸಿದ ಪುಟಾಣಿ

ತಂದೆಯ ಫೋಟೋವನ್ನು ಹೆಮ್ಮೆಯಿಂದ ಕ್ಲಿಕ್ಕಿಸಿದ ಪುಟಾಣಿ

ಸಾಮಾನ್ಯವಾಗಿ ಕಾಲೇಜು ಪದವಿ ಮುಗಿಸಿದವರು, ಪದವಿ ಸಮಾರಂಭಕ್ಕೆ ತಮ್ಮ ಆತ್ಮೀಯರು ಅಥವಾ ಸ್ನೇಹಿತರನ್ನು ಕರೆದಿರುತ್ತಾರೆ. ಆದರೆ ಈ ವ್ಯಕ್ತಿ ಪದವಿ ಸ್ವೀಕರಿಸುವುದನ್ನು ನೋಡಲು ಈತನ ಪರವಾಗಿ ಬಂದಿದ್ದು ಅದು ಆತನ ಪುಟ್ಟ ಮಗಳು!

  • Share this:

ಶಿಕ್ಷಣ (education) ಪಡೆಯುವುದಕ್ಕೆ ಯಾವುದೇ ವಯಸ್ಸಿನ ಮಿತಿಯಿಲ್ಲ. ಬಹಳಷ್ಟು ಮಂದಿ, ಕೆಲಸ (Job) ಪಡೆದು, ಮದುವೆಯಾಗಿ (Marriage), ಮಕ್ಕಳಾದ (Children) ಮೇಲೆ ಅಥವಾ ಮೊಮ್ಮಕ್ಕಳು ಹುಟ್ಟಿದ ನಂತರವೂ ಓದು ಮುಂದುವರಿಸುವುದುಂಟು.. ಅದೇ ರೀತಿ ಪದವಿ ಪಡೆದ ಮಧ್ಯ ವಯಸ್ಕನೊಬ್ಬನಿಗೆ ಸಂಬಂಧಿಸಿ ಸುದ್ದಿ ಇಲ್ಲಿದೆ. ಸಾಮಾನ್ಯವಾಗಿ ಕಾಲೇಜು ಪದವಿ (College graduation) ಮುಗಿಸಿದವರು, ಪದವಿ ಸಮಾರಂಭಕ್ಕೆ (Graduation Ceremony) ತಮ್ಮ ಆತ್ಮೀಯರು ಅಥವಾ ಸ್ನೇಹಿತರನ್ನು ಕರೆದಿರುತ್ತಾರೆ. ಆದರೆ ಈ ವ್ಯಕ್ತಿ ಪದವಿ ಸ್ವೀಕರಿಸುವುದನ್ನು ನೋಡಲು ಈತನ ಪರವಾಗಿ ಬಂದಿದ್ದು ಒಬ್ಬರೆ; ಅದು ಆತನ ಪುಟ್ಟ ಮಗಳು (Daughter)!


ತಂದೆ-ಮಗಳ ವೈರಲ್ ಫೋಟೋ
ಎಲೆನಾ ಎಂಬ ಹೆಸರಿನ ಟ್ವಿಟ್ಟರ್ ಬಳಕೆದಾರರೊಬ್ಬರು ತಮ್ಮ ಖಾತೆಯಲ್ಲಿ ಈ ತಂದೆ-ಮಗಳ ಚಿತ್ರವೊಂದನ್ನು ಹಂಚಿಕೊಂಡಿದ್ದು, ಸಾಮಾಜಿಕ ಮಾಧ್ಯಮದಲ್ಲಿ ಬಹಳ ಬೇಗ ವೈರಲ್ ಆಗಿದೆ. ಅದು ಆ ವ್ಯಕ್ತಿಯ ಪದವಿ ಸ್ವೀಕಾರ ಸಮಾರಂಭದ ಚಿತ್ರ. ವೈರಲ್ ಆಗುವಂತದ್ದು ಆ ಚಿತ್ರದಲ್ಲಿ ಏನಿದೇ ಅಂತೀರಾ? 5 ಅಥವಾ 6 ವರ್ಷದ ಮಗಳು, ಗ್ರಾಜುಯೇಶನ್ ಹ್ಯಾಟ್ ಧರಿಸಿ, ಕೈಯಲ್ಲಿ ಹೂಗುಚ್ಚ ಹಿಡಿದು ನಿಂತ ತಂದೆಯ ಫೋಟೋಗಳನ್ನು ಕ್ಲಿಕ್ಕಿಸುತ್ತಿರುವ ಚಿತ್ರವದು.


ಈ ಮುದ್ದಾದ ಚಿತ್ರವನ್ನು ಟ್ವಿಟ್ಟರ್‍ನಲ್ಲಿ ಹಂಚಿಕೊಳ್ಳುತ್ತಾ ಎಲೆನಾ,“ನನ್ನ ಸಹೋದರನ ಪದವಿ ಪ್ರದಾನ ಸಮಾರಂಭಕ್ಕೆ ಹೋಗಿದ್ದೆ ಮತ್ತು ಚಿಕ್ಕ ಹುಡುಗಿಯೊಬ್ಬಳು, ಆಗಷ್ಟೇ ಪದವಿ ಪಡೆದ ತನ್ನ ತಂದೆಯ ಚಿತ್ರಗಳನ್ನು ಕ್ಲಿಕ್ಕಿಸುತ್ತಿರುವುದನ್ನು ನೋಡಿದೆ. ಅಲ್ಲಿ ಅವರಿಬ್ಬರೇ ಇದ್ದರು. ಅವಳು ಅವನ ಬಗ್ಗೆ ತುಂಬಾ ಹೆಮ್ಮೆ ಪಡುತ್ತಿದ್ದಳು” ಎಂದು ಬರೆದಿದ್ದಾರೆ.


ಇವರ ಫೋಟೋಗೆ ಮೆಚ್ಚುಗೆಯ ಕಾಮೆಂಟ್ ಗಳು
ಎಲೆನಾ ಅವರ ಈ ಪೋಸ್ಟ್ ಸಾಕಷ್ಟು ಪ್ರತಿಕ್ರಿಯೆಗಳು ಹರಿದು ಬಂದಿವೆ. ಟ್ವಿಟ್ಟರ್ ಬಳಕೆದಾರರೊಬ್ಬರು, “ನಾನು ಶಾಲೆಯಲ್ಲಿ ಓದುತ್ತಿದ್ದಾಗ, ಪದವಿ ಪ್ರದಾನ ಸಮಾರಂಭದಲ್ಲಿ ಬಹಳಷ್ಟು ಬಾರಿ ಈ ರೀತಿಯ ವಿಷಯಗಳನ್ನು ನೋಡಿದ್ದೇನೆ, ಅಲ್ಲಿ ಒಬ್ಬ ವ್ಯಕ್ತಿ, ತನ್ನನ್ನು ಹುರಿದುಂಬಿಸುವವರು ಯಾರೂ ಇಲ್ಲದಿದ್ದರೂ, ತಾನೇ ತನ್ನ ಬಗ್ಗೆ ಹೆಮ್ಮೆ ಪಡುತ್ತಾ ನಿಂತಿರುವುದನ್ನು ನೀವು ಕಾಣುತ್ತೀರಿ. ಚಿಕ್ಕ ಹುಡುಗಿಗೆ ಅತ್ಯುತ್ತಮ ತಂದೆ ಸಿಕ್ಕಿದ್ದಾರೆ” ಎಂದು ಬರೆದುಕೊಂಡಿದ್ದರೆ, “ಶಿಕ್ಷಣವು ಐಶ್ವರ್ಯಕ್ಕಿಂತ ಮುಖ್ಯವಾಗಿದೆ ಮತ್ತು ಅದಕ್ಕೆ ವಯಸ್ಸಿನ ಮಿತಿ ಇಲ್ಲ.


ವಯಸ್ಸಾದವರು ತಮ್ಮ ಶಿಕ್ಷಣದ ಗುರಿಗಳನ್ನು ಪೂರ್ಣಗೊಳಿಸಲು ಆದ್ಯತೆ ನೀಡುವುದನ್ನು ನೋಡಲು ಥ್ರಿಲ್ಲಿಂಗ್ ಆಗಿರುತ್ತದೆ; ಈ ವ್ಯಕ್ತಿಯ ಬಗ್ಗೆ ಖುಷಿ ಎನಿಸುತ್ತದೆ, ಅವನು ಮಾಡಿರುವುದು ಕೇವಲ ಆತನ ಮಗಳಿಗೆ ಮಾತ್ರವಲ್ಲ, ಇಡೀ ಸಮಾಜಕ್ಕೆ ಅನುಕರಣೀಯವಾಗಿದೆ, ಜ್ಞಾನವು ಪರಿಪೂರ್ಣ ಶಕ್ತಿಯಾಗಿದೆ” ಎಂದು ಇನ್ನೊಬ್ಬ ನೆಟ್ಟಿಗ ಬರೆದುಕೊಂಡಿದ್ದಾರೆ.


ಇದನ್ನೂ ಓದಿ: Netflix ನಲ್ಲಿ ಕೆಲ್ಸ ಬೋರ್ ಅಂತೆ, ಹಾಗಂತ ರಾಜೀನಾಮೆ ಕೊಟ್ಟು ಹೊರಗೆ ಬಂದ್ಬಿಟ್ಟಿದ್ದಾನೆ ಭೂಪ!


ಮತ್ತೊಬ್ಬ ಟ್ವಿಟ್ಟರ್ ಬಳಕೆದಾರರು, “ಇದು ತುಂಬಾ ಹಿತವಾಗಿದೆ ಮತ್ತು ಅಡೋರೇಬಲ್ ಆಗಿದೆ” ಎಂದು ಹೊಗಳಿದ್ದರೆ, “ನಾನು ಇದನ್ನು ನೋಡಬೇಕಿತ್ತು, ಅಯ್ಯೋ” ಎಂದು ಇನ್ನೊಬ್ಬರು ಪ್ರತಿಕ್ರಿಯಿಸಿದ್ದಾರೆ. “ಇದನ್ನು ನೋಡಲು ನಾನು ಎಚ್ಚರವಾಗಿದ್ದೇನೆ, ಎಂಬುವುದೇ ಸಂತಸಕರವಾಗಿದೆ” ಎಂದು ಮತ್ತೊಬ್ಬ ಟ್ವಿಟ್ಟರ್ ಬಳಕೆದಾರ ಬರೆದುಕೊಂಡಿದ್ದರೆ, ಇನ್ನೊಬ್ಬರು, “ನನಗೆ ಅವರ ಪರಿಚಯವೇ ಇಲ್ಲ, ನಾನು ನಿಮ್ಮ ಬಗ್ಗೆ ಹೆಮ್ಮೆ ಪಡುತ್ತಿದ್ದೇನೆ ಅಪರಿಚಿತನೇ” ಎಂದು ಪ್ರತಿಕ್ರಿಯಿಸಿದ್ದಾರೆ.


gಒಂದೇ ದಿನದಲ್ಲಿ ಏಳು ಲಕ್ಷಕ್ಕೂ ಹೆಚ್ಚು ಲೈಕ್ಸ್ ಪಡೆದ ಫೋಟೋ
ಟ್ವಿಟ್ಟರ್‍ನಲ್ಲಿ ಹಂಚಿಕೊಂಡ ಬಳಿಕ, ಬಹಳ ಬೇಗ ವೈರಲ್ ಆದ ಟ್ವೀಟ್, ಒಂದೇ ದಿನದಲ್ಲಿ ಏಳು ಲಕ್ಷಕ್ಕೂ ಹೆಚ್ಚು ಮೆಚ್ಚುಗೆಗಳನ್ನು ಪಡೆದಿದೆ. ಈ ಟ್ವೀಟ್‍ನಲ್ಲಿರುವ ತಂದೆ ಮಗಳು, ಯಾರು ಮತ್ತು ಎಲ್ಲಿಯವರು ಎಂಬ ಸಂಗತಿ ತಿಳಿದು ಬಂದಿಲ್ಲ. ಟ್ವಿಟ್ಟರ್ ಬಳಕೆದಾರರು, ಆ ತಂದೆ ಮಗಳ ಜೊತೆ ಮಾತನಾಡಿದ್ದೀರಾ? ಎಂದು ಎಲೆನಾ ಅವರಲ್ಲಿ ಪ್ರಶ್ನಿಸಿದಾಗ, “ನಾವು ಅವರ ಜೊತೆ ಫೋಟೋ ತೆಗೆಸಿಕೊಂಡಿದ್ದೇವೆ.


ಇದನ್ನೂ ಓದಿ:  Viral Video: ಆಸ್ಪತ್ರೆ ಇಲ್ಲ ವೈದ್ಯರೂ ಇಲ್ಲ, ಸಮುದ್ರದಲ್ಲಿ ಅಲೆಗಳ ಮಧ್ಯೆ ಮಗುವಿಗೆ ಜನ್ಮ ನೀಡಿದ ಮಹಿಳೆ!


ಆದರೆ ಭಾಷೆಯ ಸಮಸ್ಯೆ ಅಡ್ಡಿಯಾದ್ದರಿಂದ ನಮಗೆ ಅವರ ಪೂರ್ಣ ಕಥೆಯನ್ನು ಕೇಳುವುದು ಸಾಧ್ಯವಾಗಲಿಲ್ಲ, ಅವರ ಜೊತೆ ಚಿತ್ರವನ್ನು ಪಡೆಯುವುದು ಸಾಧ್ಯವಾಯಿತು. ಅವರು ಯುಸಿಎಲ್‍ಎ ಯಿಂದ ಪದವಿ ಪಡೆದರು ಮತ್ತು ಕಾನೂನಿನಲ್ಲಿ ಮೇಜರ್ ಪದವಿ ಮಾಡಿದ್ದರು” ಎಂದು ಉತ್ತರಿಸಿದ್ದಾರೆ.

Published by:Ashwini Prabhu
First published: