• Home
  • »
  • News
  • »
  • trend
  • »
  • Swiggy: ತಂದೆಗೆ ಸ್ವಿಗ್ಗಿಯಲ್ಲಿ ಕೆಲಸ ಸಿಕ್ಕಿದ್ದಕ್ಕೆ ಖುಷಿಯಿಂದ ಕುಣಿದಾಡಿದ ಮಗಳು: ವೀಡಿಯೋ ನೋಡಿ

Swiggy: ತಂದೆಗೆ ಸ್ವಿಗ್ಗಿಯಲ್ಲಿ ಕೆಲಸ ಸಿಕ್ಕಿದ್ದಕ್ಕೆ ಖುಷಿಯಿಂದ ಕುಣಿದಾಡಿದ ಮಗಳು: ವೀಡಿಯೋ ನೋಡಿ

ತಂದೆಗೆ ಸ್ವಿಗ್ಗಿಯಲ್ಲಿ ಕೆಲಸ ಸಿಕ್ಕಿದ್ದಕ್ಕೆ ಖುಷಿಯಿಂದ ಕುಣಿದಾಡಿದ ಮಗಳು

ತಂದೆಗೆ ಸ್ವಿಗ್ಗಿಯಲ್ಲಿ ಕೆಲಸ ಸಿಕ್ಕಿದ್ದಕ್ಕೆ ಖುಷಿಯಿಂದ ಕುಣಿದಾಡಿದ ಮಗಳು

ಸ್ವಿಗ್ಗಿಯಲ್ಲಿ ತನ್ನ ತಂದೆಗೆ ಸಿಕ್ಕ ಹೊಸ ಕೆಲಸದ ಬಗ್ಗೆ ವಿಷಯ ತಿಳಿದು ಪುಟ್ಟ ಮಗಳು ಎಷ್ಟು ಖುಷಿ ಪಟ್ಟಿದ್ದಾಳೆ ನೋಡಿ. ಈ ಪುಟ್ಟ ಮಗಳ ಖುಷಿ ನೋಡಿ ನಿಮಗೆ ಸಂತೋಷದ ಕಣ್ಣೀರು ನಿಮ್ಮ ಕಣ್ಣಲ್ಲಿ ಬರದೇ ಇರುವುದಕ್ಕೆ ಸಾಧ್ಯವೇ ಇಲ್ಲ.

  • Share this:

ತಂದೆ ಮತ್ತು ಮಗಳ ನಡುವಿನ ಬಂಧವು ಪದಗಳಲ್ಲಿ ಹೇಳಲು ಸಾಧ್ಯವೇ ಇಲ್ಲ. ಹೌದು.. ತಂದೆಗೆ ಮಗಳು ಮತ್ತು ಮಗಳಿಗೆ ತಂದೆ ಭಾವನಾತ್ಮಕವಾಗಿ ತುಂಬಾನೇ ಹತ್ತಿರವಿರುತ್ತಾರೆ. ಎಷ್ಟೋ ಹೆಣ್ಣು ಮಕ್ಕಳಿಗೆ ತಮ್ಮ ತಂದೆಯೇ ಅವರ ಮೊದಲ ಹೀರೋ ಆಗಿರುತ್ತಾರೆ. ಎಲ್ಲರೂ ಸಾಮಾನ್ಯವಾಗಿ ತಂದೆಗೆ ಮಗಳು ತುಂಬಾನೇ ಹತ್ತಿರವಾಗಿದ್ದರೆ, ಮಗ ತಾಯಿಗೆ ಹತ್ತಿರವಾಗಿರುತ್ತಾನೆ ಅಂತ ಹೇಳುವುದನ್ನು ನಾವು ಕೇಳಿರುತ್ತೇವೆ. ಕೆಲವೊಬ್ಬರ ವಿಷಯದಲ್ಲಿ ಇದು ಉಲ್ಟಾ ಸಹ ಆಗಿರಬಹುದು. ತಂದೆ ಮತ್ತು ಮಗಳ ಆ ಬಂಧ ಹೇಗಿರುತ್ತದೆ ಎಂದರೆ ಮಗಳ ಒಂದು ನಗು ಮತ್ತು ಪ್ರೀತಿಯ ಅಪ್ಪುಗೆ ಅಪ್ಪನ ಇಡೀ ದಿನದ ದಣಿವು, ಆಯಾಸ ಮತ್ತು ಒತ್ತಡವನ್ನು ನಿಮಿಷದಲ್ಲಿ ಮಾಯ ಮಾಡಿಸುತ್ತೆ ಮತ್ತು ಮಗಳಿಗೂ ಸಹ ಎಷ್ಟೇ ಚಿಕ್ಕ ವಿಷಯವಿದ್ದರೂ ಸಹ ಅದನ್ನು ಮೊದಲು ತನ್ನ ತಂದೆಗೆ ಹೇಳುವ ತನಕ ಮನಸ್ಸಿಗೆ ಸಮಾಧಾನವೇ ಆಗುವುದಿಲ್ಲ.


ತಂದೆ-ಮಗಳ ಬಂಧವನ್ನು ತೋರಿಸುವ ವಿಡಿಯೋ


ಸಾಮಾಜಿಕ ಮಾಧ್ಯಮಗಳಲ್ಲಿ ಕೂಡ ತಂದೆ ತನ್ನ ಮಗಳ ಹುಟ್ಟುಹಬ್ಬಕ್ಕೆ ಏನೋ ಒಂದು ಮಗಳಿಗೆ ಇಷ್ಟವಾಗುವ ಸರ್‌ಪ್ರೈಸ್ ಉಡುಗೊರೆಯಾಗಿ ನೀಡುವುದು, ಅಪ್ಪನ ಸಾಧನೆ, ಯಶಸ್ಸನ್ನು ನೋಡಿ ಮಗಳು ತಾನೇ ಗೆದ್ದಷ್ಟು ಖುಷಿಪಟ್ಟಿರುವ ಮತ್ತು ಮದುವೆಯಾಗಿ ತನ್ನ ಗಂಡನ ಮನೆಗೆ ಹೋಗುವಾಗ ಆ ಭಾವನಾತ್ಮಕ ವಿದಾಯದ ವಿಡಿಯೋಗಳನ್ನು ನಾವು ನೋಡಿರುತ್ತೇವೆ. ಹೀಗೆ ಅನೇಕ ವಿಡಿಯೋಗಳನ್ನು ನೋಡಿ ನಾವು ಖುಷಿ ಪಟ್ಟಿರುವುದು ಮತ್ತು ಭಾವುಕರಾಗಿದ್ದೂ ಇರುತ್ತದೆ.


ಇಲ್ಲೊಂದು ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದ್ದು, ಇದನ್ನು ನೋಡಿದರೆ ನೀವು ಭಾವುಕರಾಗುವುದು ಗ್ಯಾರೆಂಟಿ. ಈ ವಿಡಿಯೋ ಈಗ ಸಾಮಾಜಿಕ ಮಾಧ್ಯಮದಲ್ಲಿ ಸಿಕ್ಕಾಪಟ್ಟೆ ವೈರಲ್ ಸಹ ಆಗಿದೆ. ನಾವು ಇದ್ದಕ್ಕಿದ್ದಂತೆ ಇದರ ಬಗ್ಗೆ ಏಕೆ ಮಾತನಾಡುತ್ತಿದ್ದೇವೆ ಎಂದು ನೀವು ಯೋಚಿಸುತ್ತಿರಬಹುದು? ವಿಡಿಯೋ ನೋಡಿ ನಿಮಗೆ ಅರ್ಥವಾಗುತ್ತದೆ.


ವೈರಲ್ ವಿಡಿಯೋದಲ್ಲಿ ಏನಿದೆ?
ಸ್ವಿಗ್ಗಿಯಲ್ಲಿ ತನ್ನ ತಂದೆಗೆ ಸಿಕ್ಕ ಹೊಸ ಕೆಲಸದ ಬಗ್ಗೆ ವಿಷಯ ತಿಳಿದು ಪುಟ್ಟ ಮಗಳು ಎಷ್ಟು ಖುಷಿ ಪಟ್ಟಿದ್ದಾಳೆ ನೋಡಿ. ಈ ಪುಟ್ಟ ಮಗಳ ಖುಷಿ ನೋಡಿ ನಿಮಗೆ ಸಂತೋಷದ ಕಣ್ಣೀರು ನಿಮ್ಮ ಕಣ್ಣಲ್ಲಿ ಬರದೇ ಇರುವುದಕ್ಕೆ ಸಾಧ್ಯವೇ ಇಲ್ಲ.


ಇದನ್ನೂ ಓದಿ: Kamal Kishor Mandal: ಅಂದು ಜವಾನ, ಇಂದು ಕಾಲೇಜ್ ಸಹಾಯಕ ಪ್ರಾಧ್ಯಾಪಕ! ಇವರ ಕಥೆ ಎಲ್ಲರಿಗೂ ಸ್ಫೂರ್ತಿ


ಈ ವೈರಲ್ ಆಗಿರುವ ವಿಡಿಯೋವನ್ನು ಪೂಜಾ ಅವಂತಿಕಾ ಎಂಬ ಸಾಮಾಜಿಕ ಮಾಧ್ಯಮ ಬಳಕೆದಾರರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯ ಪುಟದಲ್ಲಿ ಹಂಚಿಕೊಂಡಿದ್ದಾರೆ. ಈ ಹೃದಯಸ್ಪರ್ಶಿ ಕ್ಲಿಪ್ ನಲ್ಲಿ ಪುಟ್ಟ ಹುಡುಗಿಯೊಬ್ಬಳು ತನ್ನ ಕಣ್ಣುಗಳನ್ನು ಮುಚ್ಚಿಕೊಂಡು ತನ್ನ ತಂದೆಯ ಬಳಿ ನಿಂತಿರುತ್ತಾಳೆ ಮತ್ತು ಸ್ವಲ್ಪ ಸಮಯದ ನಂತರ ತಂದೆ ಮಗಳಿಗೆ ಕಣ್ಣುಗಳನ್ನು ತೆರೆಯಲು ಹೇಳುತ್ತಾರೆ. ಅವಳ ತಂದೆ ತನ್ನ ಕೈಯಲ್ಲಿ ಸ್ವಿಗ್ಗಿ ಟಿ-ಶರ್ಟ್ ಅನ್ನು ಹಿಡಿದುಕೊಂಡು ನಿಂತಿರುತ್ತಾರೆ. ಹುಡುಗಿ ತನ್ನ ಕಣ್ಣುಗಳನ್ನು ತೆರೆದಳು ಮತ್ತು ತನ್ನ ತಂದೆಗೆ ಸ್ವಿಗ್ಗಿಯಲ್ಲಿ ಹೊಸ ಕೆಲಸ ಸಿಕ್ಕಿದೆ ಎಂದು ತಿಳಿದು ಸಂತೋಷದಿಂದ ಜಿಗಿದಾಡಲು ಪ್ರಾರಂಭಿಸಿದಳು ಮತ್ತು ತನ್ನ ತಂದೆಗೆ ಸಿಹಿ ಅಪ್ಪುಗೆ ನೀಡಿದಳು.


ಮಿಲಿಯನ್ ವೀಕ್ಷಣೆಗಳನ್ನು ಪಡೆದ ವಿಡಿಯೋ
"ಅಪ್ಪನ ಹೊಸ ಕೆಲಸ" ಎಂದು ಪೋಸ್ಟ್ ನ ಶೀರ್ಷಿಕೆಯಲ್ಲಿ ಬರೆಯಲಾಗಿದೆ. ಈ ವಿಡಿಯೋವನ್ನು ಆನ್ಲೈನ್ ನಲ್ಲಿ ಹಂಚಿಕೊಂಡ ನಂತರ ಒಂದು ಮಿಲಿಯನ್ ವೀಕ್ಷಣೆಗಳನ್ನು ಗಳಿಸಿದೆ.


ಇದನ್ನೂ ಓದಿ: Business Idea: ಬೈಕ್​ನಲ್ಲೇ ಇಡ್ಲಿ ವ್ಯಾಪಾರ: ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಯ್ತು ಪದವೀಧರನ ಕಥೆ


ಹುಡುಗಿಯ ಪ್ರತಿಕ್ರಿಯೆಯನ್ನು ನೋಡಿದ ನಂತರ ನೆಟ್ಟಿಗರು ಭಾವಪರವಶರಾದರು ಮತ್ತು ಕಾಮೆಂಟ್ ವಿಭಾಗದಲ್ಲಿ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿದರು. "ಇದು ತುಂಬಾನೇ ಮುದ್ದಾಗಿದೆ" ಎಂದು ಬಳಕೆದಾರರೊಬ್ಬರು ಬರೆದಿದ್ದಾರೆ. ಇನ್ನೊಬ್ಬ ಬಳಕೆದಾರರು ಕಾಮೆಂಟ್ ಮಾಡಿ "ಸರ್, ನೀವು ಇಂತಹ ಮುದ್ದು ಹೆಣ್ಣು ಮಗುವನ್ನು ಪಡೆಯಲು ಅದೃಷ್ಟ ಮಾಡಿದ್ದೀರಿ" ಎಂದು ಬರೆದಿದ್ದಾರೆ.

Published by:Ashwini Prabhu
First published: