Viral Video: ಉಡುಪಿಯಲ್ಲಿ ಹುಲಿವೇಷಧಾರಿಯೊಂದಿಗೆ ಹೆಜ್ಜೆ ಹಾಕಿದ ಪುಟ್ಟ ಬಾಲಕಿ! ವೈರಲ್​ ವಿಡಿಯೋ ಇಲ್ಲಿದೆ ನೋಡಿ

ಪುಟಾಣಿ ಬಾಲಕಿ ಹುಲಿವೇಷಧಾರಿಯೊಂದಿಗೆ ಹೆಜ್ಜೆ ಹಾಕಿದ್ದಾಳೆ. ಯಾವುದೇ ವೇಷಭೂಷಣವಿಲ್ಲದೆ ಆಕೆ ನೃತ್ಯ ಮಾಡಿರುವುದನ್ನು ನೆರೆದಿದ್ದ ಜನರು ವಿಡಿಯೋ ಮಾಡಿದ್ದಾರೆ. ಅದರಲ್ಲೊಬ್ಬ ವ್ಯಕ್ತಿ ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್​ ಮಾಡಿದ್ದಾರೆ. ಸದ್ಯ ಈ ವಿಡಿಯೋ ವೈರಲ್​ ಆಗುತ್ತಿದ್ದು, ಬಾಲಕಿಯ ನೃತ್ಯ ನೋಡಿ ಜನರು ಬಗೆ ಬಗೆಯ ಕಾಮೆಂಟ್​ ಬರೆಯುತ್ತಿದ್ದಾರೆ.

ಹುಲಿವೇಷದಾರಿಯೊಂದಿಗೆ ನೃತ್ಯ ಮಾಡುತ್ತಿರುವ ಬಾಲಕಿ

ಹುಲಿವೇಷದಾರಿಯೊಂದಿಗೆ ನೃತ್ಯ ಮಾಡುತ್ತಿರುವ ಬಾಲಕಿ

  • Share this:
    ಪಿಲಿ ನಲಿಕೆ ಎಂದರೆ ಕರಾವಳಿ ಭಾಗದಲ್ಲಿ ಭಾರೀ ಫೇಮಸ್​​. ನಟ ರಕ್ಷಿತ್​ ಶೆಟ್ಟಿ ಅಭಿನಯದ ‘‘ಉಳಿದವರು ಕಂಡತೆ ’’ ಸಿನಿಮಾ ವೀಕ್ಷಿಸಿದವರಿಗೆ ಈ ಹುಲಿವೇಷದ ಬಗ್ಗೆ ತಿಳಿದಿರುತ್ತದೆ. ಅಂದಹಾಗೆಯೇ ಈ ಸಮಯದಲ್ಲಿ ದಕ್ಷಿಣ ಕನ್ನಡ (Dakshina Kannada), ಉಡುಪಿ (Udupi) ಭಾಗದಲ್ಲಿ ಹುಲಿವೇಷವನ್ನು (tiger disguise) ಹೆಚ್ಚಾಗಿ ಕಾಣಬಹುದಾಗಿದೆ. ಕೃಷ್ಣ ಜನ್ಮಾಷ್ಟಮಿಯ ಸಮಯದಲ್ಲಿ ಉಡುಪಿಯ ಕೃಷ್ಣ ದೇವಸ್ಥಾನದಲ್ಲಿ ಅದ್ಧೂರಿಯಾಗಿ ಕಾರ್ಯಕ್ರಮ ಜರುಗುತ್ತದೆ. ಈ ಸಮಯದಲ್ಲಿ ಹುಲಿವೇಷಧಾರಿಗಳನ್ನು ಆ ಭಾಗದಲ್ಲಿ ಕಣ್ತುಂಬಿಕೊಳ್ಳಬಹುದು. ಟಾಸೆಯ ಪೆಟ್ಟಿಗೆ ಹುಲಿವೇಷಧಾರಿಗಳು ಹೆಜ್ಜೆ ಹಾಕುತ್ತಾ ನೃತ್ಯ ಮಾಡುತ್ತಾರೆ. ಒಂದೊಂದೇ ಹೆಜ್ಜೆ ಹಾಕುತ್ತಾ ನಲಿಯುತ್ತಾರೆ. ಹುಲಿವೇಷಧಾರಿಗಳು ನೃತ್ಯ ಮಾಡುವಾಗ ಮತ್ತು ಟಾಸೆ ಸೌಂಡಿಗೆ ಹತ್ತಿರವಿದ್ದ ಜನರು ಕೂಡ ನಲಿಯುವುದುಂಟು. ಅದರಂತೆಯೇ ಪುಟ್ಟ ಬಾಲಕಿ ಹುಲಿವೇಷಧಾರಿಯೊಂದಿಗೆ ನೃತ್ಯ (Dance) ಮಾಡಿದ ದೃಶ್ಯವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral)​ ಆಗಿದೆ.

    ಪುಟಾಣಿ ಬಾಲಕಿ ಹುಲಿವೇಷಧಾರಿಯೊಂದಿಗೆ ಹೆಜ್ಜೆ ಹಾಕಿದ್ದಾಳೆ. ಯಾವುದೇ ವೇಷಭೂಷಣವಿಲ್ಲದೆ ಆಕೆ ನೃತ್ಯ ಮಾಡಿರುವುದನ್ನು ನೆರೆದಿದ್ದ ಜನರು ವಿಡಿಯೋ ಮಾಡಿದ್ದಾರೆ. ಅದರಲ್ಲೊಬ್ಬ ವ್ಯಕ್ತಿ ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್​ ಮಾಡಿದ್ದಾರೆ. ಸದ್ಯ ಈ ವಿಡಿಯೋ ವೈರಲ್​ ಆಗುತ್ತಿದ್ದು, ಬಾಲಕಿಯ ನೃತ್ಯ ನೋಡಿ ಜನರು ಬಗೆ ಬಗೆಯ ಕಾಮೆಂಟ್​ ಬರೆಯುತ್ತಿದ್ದಾರೆ.

    ಮೊದಲೇ ಹೇಳಿದಂತೆ ದಕ್ಷಿಣ ಕನ್ನಡ, ಉಡುಪಿ ಭಾಗದಲ್ಲಿ ಹುಲಿವೇಷವನ್ನು ಹೆಚ್ಚಾಗಿ ಕಾಣಬಹುದು. ಆದರೆ ಈ ವೈರಲ್​ ಆದ ವಿಡಿಯೋ ಮಾತ್ರ ಉಡುಪಿ ಭಾಗದ್ದು, ವಿಸಿಟ್​ ಉಡುಪಿ ಎಂಬ ಟ್ವಿಟ್ಟರ್​ ಖಾತೆಯಲ್ಲಿ ಈ ವಿಡಿಯೋವನ್ನು ಹಾಕಲಾಗಿದೆ. ಓಹ್​ ನನ್ನ ದೇವರೇ, ಇದಂತೂ ಸೂಪರ್​ ಕೂಟ್​ ಎಂದು ವಿಡಿಯೋಗೆ ಶೀರ್ಷಿಕೆ ನೀಡಿದ್ದಾರೆ.

    ಇದನ್ನೂ ಓದಿ: Train Stations: ವಿಶ್ವದ ಅತ್ಯಂತ ಸುಂದರ ರೈಲು ನಿಲ್ದಾಣಗಳು, ಸಾಧ್ಯವಾದರೆ ಒಮ್ಮೆ ಭೇಟಿ ನೀಡಿ





    ಏನಿದು ಘಟನೆ:

    ಹುಲಿ ವೇಷದಾರಿಗಳು ನೆರೆದಿದ್ದ ಸಮಯದಲ್ಲಿ. ಒಬ್ಬ ಹುಲಿವೇಷವನ್ನು ಹಾಕಿದ್ದ ವ್ಯಕ್ತಿ ನೃತ್ಯ ಮಾಡಲು ತಯಾರಾಗುತ್ತಾನೆ. ಈ ವೇಳೆ ಆತನಿಗೆ ಹಣದ ಮಾಲೆ ಅಥವಾ ಹೂವಿನ ಮಾಲೆ ಹಾಕಿ ಗೌರವಿಸುದುಂಟು. ಅದರಂತೆ ತಾಯಿಯೊಬ್ಬಳು ತನ್ನ ಮಗಳೊಂದಿಗೆ ಹುಲಿವೇಷದ ವ್ಯಕ್ತಿಗೆ ಗೌರವ ಸೂಚಕವಾಗಿ ಮಾಲೆ ಹಾಕುತ್ತಾರೆ. ಈ ವೇಳೆ ಆತ ತಾಯಿಗೆ ಧನ್ಯವಾದ ತಿಳಿಸುತ್ತಾನೆ. ನಂತರ ತಾಯಿಯ ಜೊತೆಗೆ ಬಂದ ಪುಟ್ಟ ಬಾಲಕಿಯ ಕೈ ಹಿಡಿದುಕೊಂಡು ಹುಲಿವೇಷಧಾರಿ ನೃತ್ಯ ಮಾಡುತ್ತಾನೆ. ಬಾಲಕಿ ಕೂಡ ಆತನೊಂದಿಗೆ ಒಂದೊಂದೇ ಹೆಜ್ಜೆ ಹಾಕುತ್ತಾ ಹುಲಿಕುಣಿತ ಹಾಕುತ್ತಾಳೆ. ಬಳಿಕ ಬಾಲಕಿ ನೃತ್ಯ ಮಾಡುವುದನ್ನು ಕಂಡು ಮತ್ತೋರ್ವ ಬಾಲಕನು ದೃಶ್ಯದಲ್ಲಿ ಎಂಟ್ರಿ ನೀಡುತ್ತಾನೆ. ಸದ್ಯ ಈ ವಿಡಿಯೋ ಭಾರೀ ವೈರಲ್ ಆಗುತ್ತಿದ್ದು, ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಇದನ್ನೂ ಓದಿ: Terrace Gardening: ಪ್ಲಾಸ್ಟಿಕ್ ಬಾಟಲಿಗಳಲ್ಲಿ ಕ್ಯಾಪ್ಸಿಕಂ ಬೆಳೆಯಬಹುದು! ಅದಕ್ಕಾಗಿ ಈ ವಿಧಾನ ಫಾಲೋ ಮಾಡಿ

    ಕೃಷ್ಣ ಜನ್ಮಾಷ್ಟಮಿ

    ಪವಿತ್ರ ಹಬ್ಬವಾದ ಜನ್ಮಾಷ್ಟಮಿಯನ್ನು ಪ್ರಪಂಚದಾದ್ಯಂತ ಹಿಂದೂಗಳು ಅತ್ಯಂತ ವೈಭವದಿಂದ ಆಚರಿಸುತ್ತಾರೆ. ಕೃಷ್ಣನ ಭಕ್ತರು ಭಗವಂತನ ಜನ್ಮವನ್ನು ಆಚರಿಸಲು ಉಪವಾಸಗಳನ್ನು ಮಾಡುತ್ತಾರೆ. ಈ ದಿನ ಕೃಷ್ಣ ದೇವಾಲಯಗಳನ್ನು ಸಿಂಗರಿಸಲಾಗುತ್ತದೆ. ಅನೇಕ ಮನೆಗಳಲ್ಲಿ, ಚಿಕ್ಕ ಮಂಚದ ಮೇಲೆ ಅಥವಾ ತೊಟ್ಟಿಲಿನಲ್ಲಿ ಕೃಷ್ಣನ ಮೂರ್ತಿ ಇರಿಸಿ ಕೃಷ್ಣನ ಜನ್ಮದಿವನ್ನು ಆಚರಿಸಲಾಗುತ್ತದೆ.

    ಕೃಷ್ಣನ ಅವತಾರದ ಬಗ್ಗೆ ಹಾಗೂ ಲೀಲೆಗಳ ಬಗ್ಗೆ ನಾವು ಹೆಚ್ಚು ಹೇಳುವ ಅವಶ್ಯಕತೆ ಇಲ್ಲ. ದುಷ್ಟರನ್ನು ಶಿಕ್ಷಿಸಿ, ಶಿಷ್ಟರನ್ನು ರಕ್ಷಿಸುವ ಸಲುವಾಗಿ ಧರೆಗಿಳಿದು ಬಂದ ಕೃಷ್ಣ ಹಲವಾರು ರಾಕ್ಷಸರನ್ನು ವಧಿಸಿದ್ದಾನೆ.  ಕೃಷ್ಣನಿಗೆ ಹಲವಾರು ಹೆಸರುಗಳಿವೆ.
    Published by:Harshith AS
    First published: