• Home
  • »
  • News
  • »
  • trend
  • »
  • Transgender: ತಮ್ಮ ನೆಚ್ಚಿನ ಅತ್ತೆ ಮಂಗಳಮುಖಿ ಅಂತ ಗೊತ್ತಾಗಿ ಭಾವುಕರಾದ ಪುಟ್ಟ ಮಕ್ಕಳು

Transgender: ತಮ್ಮ ನೆಚ್ಚಿನ ಅತ್ತೆ ಮಂಗಳಮುಖಿ ಅಂತ ಗೊತ್ತಾಗಿ ಭಾವುಕರಾದ ಪುಟ್ಟ ಮಕ್ಕಳು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ನಮ್ಮ ಸಮಾಜವು ಎಷ್ಟೇ ಮುಂದುವರೆದಿದ್ದರೂ ಸಹ, ಇನ್ನೂ ಕೆಲವು ವಿಷಯಗಳಲ್ಲಿ ಜನರು ಮುಕ್ತವಾದ ಮನಸ್ಸಿನಿಂದ ಯೋಚನೆ ಮಾಡುವಲ್ಲಿ ಮತ್ತು ಕೆಲವು ವಿಚಾರಗಳನ್ನು ಸ್ವೀಕರಿಸುವ ರೀತಿಯಲ್ಲಿ ತುಂಬಾನೇ ಎಡವುತ್ತಿದ್ದಾರೆ. ಆದರೆ ಇಲ್ಲಿ ಮಹಿಳೆಯೊಬ್ಬಳು ತಾನು ತೃತೀಯ ಲಿಂಗಿ ಎಂದು ಎರಡು ಮುದ್ದು ಮಕ್ಕಳಲ್ಲಿ ಹೇಳೋ ವಿಡಿಯೋ ಜನರನ್ನು ಭಾವುಕರಾಗುವಂತೆ ಮಾಡಿದೆ.

ಮುಂದೆ ಓದಿ ...
  • News18 Kannada
  • Last Updated :
  • New Delhi, India
  • Share this:

    ನಮ್ಮ ಸಮಾಜವು ( Social) ಎಷ್ಟೇ ಮುಂದುವರೆದಿದ್ದರೂ ಸಹ, ಇನ್ನೂ ಕೆಲವು ವಿಷಯಗಳಲ್ಲಿ ಜನರು ಮುಕ್ತವಾದ ಮನಸ್ಸಿನಿಂದ ಯೋಚನೆ (Thinking) ಮಾಡುವಲ್ಲಿ ಮತ್ತು ಕೆಲವು ವಿಚಾರಗಳನ್ನು ಸ್ವೀಕರಿಸುವ ರೀತಿಯಲ್ಲಿ ತುಂಬಾನೇ ಎಡವುತ್ತಿದ್ದಾರೆ ಅಂತಾನೆ ಹೇಳಬಹುದು. ಹೌದು. ಕೆಲವರು ತಾವು ತೃತೀಯ ಲಿಂಗಿ ಅಥವಾ ಮಂಗಳಮುಖಿಯರಾಗಿ (Transgender) ಬದಲಾದ ವಿಷಯ ಮನೆಯವರೆದುರು ಮತ್ತು ಸಮಾಜದಲ್ಲಿರುವ ಜನರ ಎದುರಿಗೆ ಮುಕ್ತವಾಗಿ ಹೇಳಿಕೊಳ್ಳಲು ಅನೇಕರಿಗೆ ಕಷ್ಟವಾಗಬಹುದು. ಇದಕ್ಕೆ ಮುಖ್ಯವಾದ ಕಾರಣವೆಂದರೆ ಅವರಿಗಿರುವ ಆ ತಿರಸ್ಕಾರದ (Contempt) ಭಯ (Fear) ಮತ್ತು ಎಲ್ಲಿ ಜನರು ಅವರ ಬಗ್ಗೆ ಒಂದು ತೀರ್ಮಾನಕ್ಕೆ (conclude)ಬಂದು ಬಿಡುತ್ತಾರೆ ಅನ್ನೋ ಒಂದು ಭಯ ಅವರಲ್ಲಿ ಕಾಡುತ್ತಿರುತ್ತದೆ ಅಂತ ಹೇಳಬಹುದು.


    ಇಂತಹ ಭಯವೇ ಆಗಾಗ್ಗೆ ತೃತೀಯ ಲಿಂಗಿ ವ್ಯಕ್ತಿಗಳ ಉತ್ಸಾಹವನ್ನು ಕುಗ್ಗಿಸುತ್ತವೆ. ಆದಾಗ್ಯೂ, ಕೆಲವೊಮ್ಮೆ ನಮ್ಮನ್ನು ತುಂಬಾನೇ ಪ್ರೀತಿಸುವವರೊಡನೆ ಮುಕ್ತವಾಗಿ ಮಾತಾಡಿದಾಗ ಅವರಿಂದ ಸಹಾನುಭೂತಿ ಸಹ ದೊರೆಯುವ ಅವಕಾಶ ಇರಬಹುದು. ಇಲ್ಲಿ ಇಬ್ಬರು ಪುಟ್ಟ ಹುಡುಗಿಯರು ತಮ್ಮ ನೆಚ್ಚಿನ ಅತ್ತೆ ತಮ್ಮ ಎದುರು ಅವರು ತೃತೀಯ ಲಿಂಗಿ ಎಂದು ಬಹಿರಂಗಪಡಿಸಿದ ನಂತರ ಅವರು ಭಾವುಕರಾಗಿದ್ದಾರೆ ನೋಡಿ.


    ಭಾವುಕರಾದ ಮಕ್ಕಳು


    ತಮ್ಮ ಇನ್‌ಸ್ಟಾಗ್ರಾಮ್ ಖಾತೆಯ ಪುಟದಲ್ಲಿ ತೃತೀಯ ಲಿಂಗಿ ಬ್ರಿಟ್ನಿ ಪಿ ನಿಯಾಂಗ್ ಹಂಚಿಕೊಂಡ ಹೃದಯಸ್ಪರ್ಶಿ ಕ್ಲಿಪ್ ವೊಂದರಲ್ಲಿ ಆಕೆಯ ಇಬ್ಬರು ಸೋದರ ಸೊಸೆಯಂದಿರು ಅವಳ ಎದುರು ಕುಳಿತುಕೊಂಡು ತುಂಬಾನೇ ಎಚ್ಚರಿಕೆಯಿಂದ ಆಕೆ ಹೇಳುವುದನ್ನು ಗಮನವಿಟ್ಟು ಕೇಳುತ್ತಿರುವುದನ್ನು ತೋರಿಸುತ್ತದೆ. ಅವಳು ತೃತೀಯ ಲಿಂಗಿ ಎಂದು ನೀಯಾಂಗ್ ಅವರಿಗೆ ವಿವರಿಸುತ್ತಿದ್ದಂತೆ, ಮಕ್ಕಳು ಭಾವುಕರಾಗಿ ಕಣ್ಣೀರು ಸುರಿಸುವುದನ್ನು ವೀಡಿಯೋದಲ್ಲಿ ನೋಡಬಹುದು. ಅವರಲ್ಲಿ ಒಬ್ಬಳು ತನ್ನ ಅತ್ತೆಯನ್ನ ಪ್ರೀತಿಯಿಂದ ತಬ್ಬಿಕೊಂಡು ಭಾವುಕತೆಯ ಅಪ್ಪುಗೆಯನ್ನು ನೀಡುತ್ತಾಳೆ. ಅವಳ ಮಾತುಗಳಿಂದ ಮಕ್ಕಳು ಗಾಢವಾಗಿ ಪ್ರಭಾವಿತರಾಗಿರುವುದನ್ನು ಈ ವೀಡಿಯೋದಲ್ಲಿ ನಾವು ನೋಡಬಹುದು.


    ಕ್ಲಿಪ್ ಜೊತೆಗೆ ಹೃದಯಸ್ಪರ್ಶಿ ಟಿಪ್ಪಣಿಯನ್ನು ಬರೆದಿರುವ ನಿಯಾಂಗ್


    ಈ ಕ್ಲಿಪ್ ಅನ್ನು ಇನ್‌ಸ್ಟಾಗ್ರಾಮ್ ನಲ್ಲಿ ಹಂಚಿಕೊಳ್ಳುವಾಗ ನಿಯಾಂಗ್ ಹೃದಯಸ್ಪರ್ಶಿ ಟಿಪ್ಪಣಿಯನ್ನು ಸಹ ಬರೆದಿದ್ದಾರೆ. ತನ್ನ ಸೊಸೆಯಂದಿರ ಬಗ್ಗೆ ಪ್ರೀತಿಯನ್ನು ತೋರಿಸುತ್ತಾ, ಅವಳು ತನ್ನ ಸೊಸೆಯಂದಿರೇ ತನಗೆ ಜಗತ್ತು ಎಂದು ಬರೆದಿದ್ದಾಳೆ ಮತ್ತು ಅವಳು ಅವರನ್ನು ತನ್ನಂತೆ ಬೆಳೆಸುತ್ತಿದ್ದಾಳೆ. ಅವಳು ಮನೆಯಿಂದ ಹೊರ ಹೋಗುವ ಮೊದಲು, ಅವಳು ತನ್ನ ಜೀವನದ ಅತಿದೊಡ್ಡ ರಹಸ್ಯವನ್ನು ಬಹಿರಂಗಪಡಿಸಲು ಬಯಸಿದಳು. ಅವಳು ಏನು ಹೇಳುತ್ತಾಳೆಂದು ಅರ್ಥಮಾಡಿಕೊಳ್ಳಲು ಮಕ್ಕಳು ಇನ್ನೂ ದೊಡ್ಡವರಾಗುವುದನ್ನು ಅವಳು ಕಾಯುತ್ತಿದ್ದಾಳೆ.


     Little children who are emotional knowing that their favorite mother-in-law is a Martian
    ಸಾಂದರ್ಭಿಕ ಚಿತ್ರ


    "ನನ್ನ ಸೋದರ ಸೊಸೆಯು 'ನಾನು ನಿನ್ನ ಬಗ್ಗೆ ಕೆಟ್ಟದಾಗಿ ಭಾವಿಸುತ್ತೇನೆ' ಎಂದು ಹೇಳಿದಾಗ ನನ್ನ ಸೊಸೆ ಮಾತು ಕೇಳಿ ನನ್ನ ಕಣ್ಣುಗಳಲ್ಲಿ ನೀರು ಬಂತು, ಆಗ ನಾನು ಅತ್ತೆಯ ಬಗ್ಗೆ ಕೆಟ್ಟದಾಗಿ ಭಾವಿಸಬೇಡ ಎಂದು ನಾನು ಅವಳಿಗೆ ಹೇಳಿದೆ. ಅವರ ಅತ್ತೆಯಾಗಿರುವುದಕ್ಕೆ ನನಗೆ ತುಂಬಾ ಸಂತೋಷವಿದೆ. ನಾನು ಮಂಗಳಮುಖಿಯಾಗಿರುವುದು ನಾನು ಯಾವಾಗಲೂ ಅವರ ಅತ್ತೆಯೇ ಎಂಬ ಸತ್ಯವನ್ನು ಬದಲಾಯಿಸುವುದಿಲ್ಲ ಮತ್ತು ನಾನು ಅವರನ್ನು ತುಂಬಾ ಪ್ರೀತಿಸುತ್ತೇನೆ. ಅವರು ಯಾವಾಗಲೂ ಫೇಸ್‌ಟೈಮ್ ನಲ್ಲಿ ನನಗೆ ಕರೆ ಮಾಡಬಹುದು ಮತ್ತು ಮಾತಾಡಬಹುದು” ಎಂದು ಬರೆದಿದ್ದಾರೆ.


    ಇದನ್ನೂ ಓದಿ: Trending Photos: ಹಾಳಾಗಿರುವ ಈ ಸೂಟ್ಕೇಸ್ ನೋಡಿದ್ರೆ ಭಯ ಹುಟ್ಟೋದಂತು ಗ್ಯಾರಂಟಿ, ಸೂಟ್ಕೇಸ್‌ನಲ್ಲಿ ಏನಿದೆ ಗೊತ್ತಾ?


    9 ಲಕ್ಷಕ್ಕಿಂತಲೂ ಹೆಚ್ಚು ವೀಕ್ಷಣೆ ಪಡೆದಿದೆ ಆ ಕ್ಲಿಪ್


    ನಿಯಾಂಗ್ ಅವರ ಇನ್‌ಸ್ಟಾಗ್ರಾಮ್ ಬಯೋ ಅವರು ಅಮೆರಿಕದ ನ್ಯೂಜೆರ್ಸಿಯ ತೃತೀಯ ಲಿಂಗಿ ಎಂದು ಹೇಳುತ್ತದೆ. ಒಂದು ವಾರದ ಹಿಂದೆ ಹಂಚಿಕೊಂಡ ನಂತರ, ಈ ಕ್ಲಿಪ್ 9,37,000 ಕ್ಕೂ ಹೆಚ್ಚು ವೀಕ್ಷಣೆಗಳನ್ನು ಮತ್ತು 37,000 ಕ್ಕೂ ಹೆಚ್ಚು ಲೈಕ್ ಗಳನ್ನು ಗಳಿಸಿದೆ.




    ಇಂಟರ್ನೆಟ್ ಬಳಕೆದಾರರು ಸಹ ಮಕ್ಕಳ ಪ್ರತಿಕ್ರಿಯೆಯಿಂದ ಪ್ರಭಾವಿತರಾಗಿದ್ದಾರೆ ಮತ್ತು ವಯಸ್ಕರಂತೆ ಬೇಗನೆ ತೀರ್ಪು ನೀಡದ ಕಾರಣ ಅವರಿಂದ ಕಲಿಯಬಹುದು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. "ಮಕ್ಕಳಿಗೆ ವಿಷಯಗಳ ಬಗ್ಗೆ ಕುತೂಹಲ ಮತ್ತು ಆಶ್ಚರ್ಯ ಇರುತ್ತವೆ, ಆದರೆ ಎಂದಿಗೂ ಅವರು ಒಬ್ಬರ ಬಗ್ಗೆ ಬೇಗನೆ ನಿರ್ಣಾಯಕ್ಕೆ ಬರುವುದಿಲ್ಲ. ಆದ್ದರಿಂದ ಅನೇಕ ವಯಸ್ಕರು ಈ ಮಕ್ಕಳಿಂದ ಆ ವಿಷಯಗಳನ್ನು ಕಲಿಯಬಹುದು" ಎಂದು ಕಾಮೆಂಟ್ ನಲ್ಲಿ ಬರೆಯಲಾಗಿದೆ.

    Published by:Gowtham K
    First published: