ಊಟ ಬೇಡ ಏನು ಬೇಡ.. ಬರ್ಗರ್ ಕೊಡದ್ದಕ್ಕೆ ಸಿಟ್ಟಾದ ತಿಂಡಿಪೋತನ ಕ್ಯೂಟ್ ವಿಡಿಯೋ ವೈರಲ್

ಬರ್ಗರ್ ತಿನ್ನಲು ಕೊಡದಿದ್ದರಿಂದ ಕೋಪಗೊಂಡು ನನಗೆ ಏನು ಬೇಡ, ಊಟ ಬೇಡ ಬರ್ಗರ್ ಬೇಡ ಎನ್ನುವ ಬಾಲಕನ ಮುಗ್ದ ವರ್ತನೆಗೆ ನೆಟ್ಟಿಗರು ಮನಸೋತಿದ್ದಾರೆ.

ವೈರಲ್​ ವಿಡಿಯೋದಲ್ಲಿನ ಬಾಲಕ

ವೈರಲ್​ ವಿಡಿಯೋದಲ್ಲಿನ ಬಾಲಕ

 • Share this:
  ಮಕ್ಕಳು ಏನು ಮಾಡಿದರೂ ಚೆನ್ನಾಗಿಯೇ ಕಾಣಿಸುತ್ತದೆ. ಸಾಮಾನ್ಯವಾಗಿ ಮನೆಯಲ್ಲಿ ತಂದೆ-ತಾಯಿ ಅಥವಾ ಯಾರಾದರೂ ಮನೆಗೆ ಬಂದರೆ ಮಕ್ಕಳಿಗಾಗಿ ಏನಾದರೂ ತಿನ್ನಲು ತರುವುದುಂಟು, ಆ ಮಕ್ಕಳು ಅವರು ತಂದಂತಹ ತಿನಿಸುಗಳು ಯಾವಾಗ ತಿಂದು ಮುಗಿಸಲಿ ಎಂದು ಕಾಯುತ್ತಿರುತ್ತವೆ. ಅದರ ಮಧ್ಯೆ ಯಾರಾದರೂ ಅವರ ಪಾಲಿನ ತಿನಿಸುಗಳನ್ನು ಕಸಿದುಕೊಂಡರೆ ಮುಗಿದೇ ಹೋಯ್ತು. ಕೋಪದಿಂದ ಮಾತಾಡುತ್ತವೆ, ರಂಪ ಮಾಡ್ತಾವೆ. ಅದನ್ನು ನೋಡುವುದಕ್ಕೆ ತುಂಬಾನೇ ಕ್ಯೂಟ್ ಆಗಿರುತ್ತದೆ. ಈ ವೈರಲ್ ಆದ ವಿಡಿಯೋದಲ್ಲಿ ಒಬ್ಬ ಬಾಲಕನಿಗೆ ಬರ್ಗರ್ ತಿನ್ನಲು ಕೊಡದಿದ್ದರಿಂದ ಕೋಪಗೊಂಡು ನನಗೆ ಏನು ಬೇಡ, ಊಟ ಬೇಡ ಬರ್ಗರ್ ಬೇಡ ಎಂದು ಅವನ ಮುಗ್ದವಾದ ವರ್ತನೆಗೆ ನೆಟ್ಟಿಗರು ಮನಸೋತು ಆ ಬಾಲಕನ ಮೇಲೆ ಕರುಣೆ ಭಾವನೆಯಿಂದ ನೋಡಿದ್ದಾರೆ.


  ವಿಡಿಯೋದಲ್ಲಿ ಬಾಲಕನು ತಿಳಿ ನೀಲಿ ಬಣ್ಣದ ಕುರ್ತಾ ಪೈಜಾಮವನ್ನು ಹಾಕಿದ್ದು ತುಂಬಾ ದೊಡ್ಡವರಂತೆ ಕಾಣುತ್ತಿದ್ದು ಕೋಪಗೊಂಡು ಒಂದೆಡೆ ಕೂತಿರುತ್ತಾನೆ. ಇನ್ನೊಂದೆಡೆ ಆತನ ಅಕ್ಕ ತನಗಾಗಿ ಬರ್ಗರ್ ಅನ್ನು ತರಿಸಿಕೊಂಡಿರುತ್ತಾಳೆ ಮತ್ತು ಈ ಬಾಲಕನಿಗೆ ಅದನ್ನು ತೋರಿಸಿ ಪದೇ ಪದೇ ಮಾತಾಡಿಸುತ್ತಿರುತ್ತಾಳೆ. ನೀನು ತಂದೆಯ ಹತ್ತಿರ ಹಣ ಕೇಳಿ ನಿನಗಾಗಿ ಒಂದು ಬರ್ಗರ್ ತರಿಸಿಕೊಂಡು ತಿನ್ನು ಎಂದು ಆ ಪುಟ್ಟ ಬಾಲಕನಿಗೆ ಅವನ ಅಕ್ಕ ಹೇಳಿದಾಗ ಕೋಪ ಇನ್ನಷ್ಟು ಹೆಚ್ಚಾಗಿ " ನನ್ನನ್ನು ಮಾತಾಡಿಸಬೇಡ, ನನಗೆ ಏನು ಬೇಡ" ಅಂತಾ ಮುಖವನ್ನು ದಪ್ಪ ಮಾಡಿಕೊಂಡು ಮುನಿಸಿಕೊಂಡು ಕೂತಿರುತ್ತಾನೆ.


  ಬಾಲಕನು ಅವನ ಅಕ್ಕನಿಗೆ "ನೀನು ನಿನ್ನ ಬರ್ಗರ್ ಬೇಗನೆ ತಿಂದು ಬಿಡು, ನನಗೆ ಬೇಡ ನಾನು ಏನು ತಿನ್ನುವುದಿಲ್ಲ ಹಾಗೆಯೆ ಇರುತ್ತೇನೆ ಮತ್ತು ನೀನು ನನಗಾಗಿ ಏನು ತರಿಸಬೇಡ" ಎಂದು ಹೇಳಿ ದೂರ ಹೋಗಿ ಬಾಲ್ಕನಿಯಲ್ಲಿ ನಿಂತುಕೊಳ್ಳುತ್ತಾನೆ. ಇದನ್ನು ನೋಡಿದ ಅವನ ಅಕ್ಕ ನಗುವುದು ಸಹ ವಿಡಿಯೋದಲ್ಲಿ ಇದೆ.

  ಈ ವಿಡಿಯೋ ನೋಡಿ ನೆಟ್ಟಿಗರ ಮನಸ್ಸು ಕರಗಿದೆ ಮತ್ತು ಕೆಲವರು ನಿನಗಾಗಿ ಬರ್ಗರ್ ತರಿಸಲು ನಾನು ಇಷ್ಟ ಪಡುತ್ತೇನೆ ಎಂದು ಹೇಳಿದ್ದಾರೆ. ಇನ್ನು ಕೆಲವರು ಈ ವಿಡಿಯೋ ನೋಡಿ ತಮ್ಮ ಬಾಲ್ಯದ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ಪಾಪ ಈ ಪುಟ್ಟ ಬಾಲಕನಿಗೆ ಬರ್ಗರ್ ಯಾರಾದರೂ ತರಿಸಿಕೊಡಿ, ನಾವು ಈಗಲೂ ಒಮ್ಮೊಮ್ಮೆ ಹೀಗೆ ಮಾಡುತ್ತಿರುತ್ತೇವೆ.


  ನಮಗೆ ಇಷ್ಟವಾದ ವಸ್ತು ಅಥವಾ ತಿನಿಸು ನಮ್ಮಿಂದ ನಮ್ಮ ಅಕ್ಕ ತಮ್ಮ ಅಣ್ಣ ಯಾರಾದರೂ ಕಸಿದುಕೊಂಡರೆ ತುಂಬಾ ಕೋಪ ಬರುತ್ತದೆ, ಎಂದು ನೆಟ್ಟಿಗರು ಈ ವಿಡಿಯೋ ನೋಡಿ ಪ್ರತಿಕ್ರಿಯಿಸಿದ್ದಾರೆ. ಬರ್ಗರ್ ಸಲುವಾಗಿ ಇಷ್ಟೊಂದು ಕೋಪ ಮುನಿಸು ಒಳ್ಳೆಯದಲ್ಲ ಮಗು ಎಂದು ಒಬ್ಬರು ಪ್ರತಿಕ್ರಿಯಿಸಿದ್ದಾರೆ. ಇನ್ನೊಬ್ಬರು ಅರೆ ನಾನು ಇದೆ ತರಹ ಕೋಪ ಮಾಡಿಕೊಂಡು ಕೂತಿರುತ್ತಿದ್ದೆ ಬಾಲ್ಯದಲ್ಲಿ ಅಂತ ನೆನೆಪಿಸಿಕೊಂಡಿದ್ದಾರೆ. ಹೀಗೆ ಮಕ್ಕಳು ಮುನಿಸಿಕೊಂಡರೂ ಕ್ಯೂಟ್ ಆಗಿಯೇ ಕಾಣುತ್ತಾರೆ ಅದನ್ನು ನೋಡುವುದೇ ಕಣ್ಣಿಗೆ ಆನಂದ.
  First published: