Liquor Price: ಈ ‘ಲಿಕ್ಕರ್’ ಬೆಲೆ ನೋಡಿದ್ರೆ ಬೆಚ್ಚಿ ಬೀಳೋದು ಪಕ್ಕಾ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಅದಕ್ಕಾಗಿಯೇ ಮಿಲಿಟರಿ ಕ್ಯಾಂಟೀನ್​ಗಳಲ್ಲಿ ಮದ್ಯ ಮತ್ತು ದಿನಸಿ ವಸ್ತುಗಳು ಕನಿಷ್ಠ 10 ರಿಂದ 15 ಪ್ರತಿಶತದಷ್ಟು ಅಗ್ಗವಾಗಿರುತ್ತವೆ.

  • Share this:

    ಸಾಮಾನ್ಯವಾಗಿ ನಾವು ಯಾವುದೇ ರೆಸ್ಟೋರೆಂಟ್ ಅಥವಾ ಹೊಟೇಲ್ ಗೆ ಭೇಟಿ ನೀಡಿದಾಗ ಮೊದಲು ಮಾಡುವ ಕೆಲಸವೆ ಅಲ್ಲೇ ಡೈನಿಂಗ್ ಟೇಬಲ್ ಮೇಲೆ ಇರುವ ಮೆನುವನ್ನು ಒಮ್ಮೆ ಬೇಗನೆ ತೆರೆದು ಅಲ್ಲಿ ಸಿಗುವ ಆಹಾರ ಪದಾರ್ಥಗಳ ಬೆಲೆಗಳು (Food Price) ಹೇಗಿವೆ ಅಂತ ನೋಡುವುದು. ಆ ಬೆಲೆಗಳನ್ನು (Price) ನೋಡಿದ ನಂತರವೇ ನಾವು ಆ ಹೋಟೆಲ್​ನಲ್ಲಿ ಊಟ ಮಾಡಬಹುದು ಅಥವಾ ಇಲ್ಲವೇ ಅಂತ ನಿರ್ಧರಿಸುತ್ತೇವೆ.


    ತಮ್ಮ ಬಜೆಟ್​ನಲ್ಲಿ ಉತ್ತಮವಾದದ್ದನ್ನು ಆಯ್ಕೆ ಮಾಡಬೇಕೆಂಬ ಮನುಷ್ಯನ ಹಂಬಲ ಅವನ ಕಣ್ಣುಗಳನ್ನು ಆ ಮೆನು ಕಾರ್ಡ್ ಬಲ ಬದಿಯ ಮೇಲೆ ಹರಿಸುವಂತೆ ಮಾಡುತ್ತದೆ ಅಂತ ಹೇಳಬಹುದು.


    ಅಗ್ಗದ ದರದಲ್ಲಿ ಲಭ್ಯ
    ಅದು ಸ್ಟಾರ್ಟರ್ ಆಗಿರಲಿ ಅಥವಾ ಪಾನೀಯವಾಗಿರಲಿ, ಹೆಚ್ಚಿನ ಬೆಲೆಯ ವಸ್ತುಗಳು ಐಷಾರಾಮಿ ಸೆಟ್ಟಿಂಗ್ ಹೊರಗೆ ಅಗ್ಗದ ದರದಲ್ಲಿ ಲಭ್ಯವಿರುತ್ತವೆ ಎಂದು ಪರಿಗಣಿಸಲಾಗುತ್ತದೆ. ಹೆಚ್ಚಿನ ಬೆಲೆಯ ವಸ್ತುಗಳು ಯಾವಾಗಲೂ ಜೇಬಿನಲ್ಲಿರುವ ಹಣಕ್ಕೆ ತೊಂದರೆ ನೀಡುತ್ತದೆ. ಆದರೆ ಈ ಮಾತು ಸೇನೆಯ ಅಧಿಕಾರಿಗಳ ಮೆಸ್ ಮೆನುವಿಗೆ ಅನ್ವಯಿಸುವುದಿಲ್ಲ ಅಂತ ಹೇಳಬಹುದು ನೋಡಿ. ಏಕೆಂದರೆ ನೌಕಾಪಡೆಯ ಅಧಿಕಾರಿಗಳ ಮೆಸ್ ನ ಈ ಮೆನುವಿನಲ್ಲಿ 'ದಾರು' ಎಂದರೆ ಮದ್ಯ ಅತ್ಯಂತ ಕಡಿಮೆ ಬೆಲೆಗೆ ಮಾರಾಟವಾಗುತ್ತಿರುವುದನ್ನು ಇಲ್ಲೊಂದು ಪೋಸ್ಟ್ ತೋರಿಸುತ್ತದೆ.


    ಇದು ಸ್ಥಳೀಯ ಮಾರುಕಟ್ಟೆಯಲ್ಲಿಯೂ ಹೆಚ್ಚಿನ ಬೆಲೆಗೆ ಇದೇ ರೀತಿಯ ಪಾನೀಯಗಳನ್ನು ಖರೀದಿಸುವ ಸಾಮಾನ್ಯ ಜನರ ಮೇಲೆ ಒತ್ತಡ ಹೇರುವುದು ಖಚಿತ.


    ಟ್ವಿಟರ್ ಬಳಕೆದಾರರಾರು ಹಂಚಿಕೊಂಡ ಪೋಸ್ಟ್​ನಲ್ಲಿ ಏನಿದೆ?
    ಟ್ವಿಟರ್ ಬಳಕೆದಾರರಾದ ಅನಂತ್ ಅವರು ನೇವಿ ಆಫೀಸರ್ಸ್ ಮೆಸ್​ನಲ್ಲಿ ಹಲವಾರು ಬ್ರ್ಯಾಂಡ್​ಗಳ ವಿಸ್ಕಿ ಮತ್ತು ಬಿಯರ್ ಅನ್ನು ಬಜೆಟ್ ದರದಲ್ಲಿ ಮಾರಾಟ ಮಾಡುತ್ತಿರುವ ಮೆನುವಿನ ಒಂದು ಫೋಟೋವನ್ನು ಅಂತರ್ಜಾಲದಲ್ಲಿ ಹಂಚಿಕೊಂಡಿದ್ದಾರೆ. "ನನ್ನಂತಹ ಬೆಂಗಳೂರಿನ ಮೆದುಳಿಗೆ ಈ ಬೆಲೆಗಳನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ" ಎಂದು ಅವರು ಮೈಕ್ರೋ ಬ್ಲಾಗಿಂಗ್ ಸೈಟ್​ನಲ್ಲಿ ಶೀರ್ಷಿಕೆಯೊಂದನ್ನು ಫೋಟೋ ಪೋಸ್ಟ್ ಮಾಡುವಾಗ ಬರೆದಿದ್ದಾರೆ.



    ಸೇನಾ ಸಿಬ್ಬಂದಿ ಕೇಂದ್ರ ಸರ್ಕಾರದ ಅಧಿಕಾರಿಗಳಾಗಿದ್ದು, ಈ ಕಾರಣದಿಂದಾಗಿ ಅವರಿಗೆ ಕೇಂದ್ರ ಅಬಕಾರಿ ಸುಂಕದಿಂದ ವಿನಾಯಿತಿ ನೀಡಲಾಗಿದೆ. ಅದಕ್ಕಾಗಿಯೇ ಮಿಲಿಟರಿ ಕ್ಯಾಂಟೀನ್​ಗಳಲ್ಲಿ ಮದ್ಯ ಮತ್ತು ದಿನಸಿ ವಸ್ತುಗಳು ಕನಿಷ್ಠ 10 ರಿಂದ 15 ಪ್ರತಿಶತದಷ್ಟು ಅಗ್ಗವಾಗಿರುತ್ತವೆ.




    ಇದನ್ನೂ ಓದಿ: Mangaluru Special Talent: ಮಂಗಳೂರಿನ ವಿಶೇಷ ಪ್ರತಿಭೆ! ಕಣ್ಣಿಗೆ ಬಟ್ಟೆ ಕಟ್ಟಿ ಎರಡೂ ಕೈಯಲ್ಲಿ ಬರೆಯುವ ಬಾಲಕಿ


    ಬೆಲೆ ನೋಡಿ ಬೆಚ್ಚಿ ಬಿದ್ದ ನೆಟ್ಟಿಗರು
    ಆದರೂ ಅನೇಕ ಜನರಿಗೆ ಇದನ್ನು ನೋಡಲು ಸಾಧ್ಯವಾಗಲಿಲ್ಲ, ಇದರಿಂದಾಗಿ ಈ ಬೆಲೆಗಳನ್ನು ಜೀರ್ಣಿಸಿಕೊಳ್ಳಲು ಅವರಿಗೆ ಕಷ್ಟವಾಯಿತು. "ಈ ಬೆಲೆಗಳನ್ನು ನೀವು ಎಲ್ಲಿ ಮತ್ತು ಯಾವಾಗ ನೋಡಿದ್ದೀರಿ ಬ್ರೋ?" ಎಂದು ಸಾಮಾಜಿಕ ಮಾಧ್ಯಮ ಬಳಕೆದಾರರೊಬ್ಬರು ಕೇಳಿದರೆ, ಇನ್ನೊಬ್ಬರು " ಹಾ ಹಾ ಹಾ ಡಿಎಸ್ಒಐ ಮೆನುವಿನಂತೆ ಕಾಣುತ್ತದೆ. ನನಗೆ ತುಂಬಾನೇ ಇಷ್ಟವಾಯಿತು!!! ನಾವು ಬೆಂಗಳೂರಿನಲ್ಲಿ 500 ರೂಪಾಯಿಗೆ ಕಿಂಗ್ ಫಿಶರ್ ಖರೀದಿಸುತ್ತೇನೆ" ಎಂದು ಹೇಳಿದರು.


    ಇದನ್ನೂ ಓದಿ: iPhone: ಜಸ್ಟ್​ 24 ಸಾವಿರಕ್ಕೆ ಐಫೋನ್​ 11 ನಿಮ್ಮದಾಗಿಸಿಕೊಳ್ಳಿ, ಈಗ ಬಿಟ್ರೆ ಮುಂದೆ ಇಂಥ ಆಫರ್​ ಸಿಗಲ್ಲ!


    ಬಳಕೆದಾರರೊಬ್ಬರು ತಮ್ಮ ಸ್ವಂತ ಅನುಭವವನ್ನು ಹಂಚಿಕೊಂಡು "ಒಮ್ಮೆ ನಾನು ನನ್ನ ಫೌಜಿ ಎಫ್ಐಎಲ್ ಅನ್ನು ಮುಂಬೈನ ಸಾಮಾನ್ಯ ಬಾರ್ ಮತ್ತು ರೆಸ್ಟೋರೆಂಟ್​ಗೆ ಕುಡಿಯಲು ತೆಗೆದುಕೊಂಡು ಹೋಗಿದ್ದನ್ನು ನೆನಪಿಸುತ್ತದೆ.  ಅವರು ಆ ಮೆನುವನ್ನು ನೋಡಿ ಈ ಮೌಲ್ಯಗಳು ಮಿಲಿ ಲೀಟರ್ ಮತ್ತು ರೂಪಾಯಿಯಲ್ಲಿ ಯಾವುದು ಆಗಿವೆ?” ಅಂತ ಕೇಳಿದರಂತೆ.

    Published by:ಗುರುಗಣೇಶ ಡಬ್ಗುಳಿ
    First published: