Viral News: ಲಿಕ್ಕರ್, ಪಿಜ್ಜಾ ಮತ್ತು ರೋಲ್, ಇದು 102 ವರ್ಷದ ಅಜ್ಜಿಯ ದೀರ್ಘಾಯುಷ್ಯದ ರಹಸ್ಯ!

102 ವರ್ಷದ ಅಜ್ಬಿಯೊಬ್ಬರ ಆಹಾರ ಪದ್ಧತಿ ಬಗ್ಗೆ ಓದಿದರೆ ನಿಜಕ್ಕೂ ಶಾಕ್ ಆಗುತ್ತೀರಿ. ಈ ಮಹಿಳೆ ತನ್ನ ದೀರ್ಘಾಯುಷ್ಯದ ಕೆಲವು ರಹಸ್ಯಗಳನ್ನು ಹಂಚಿಕೊಂಡಿದ್ದಾರೆ.

102 ವರ್ಷದ ಲಿಲ್ಲಿ ಬುಲೆನ್

102 ವರ್ಷದ ಲಿಲ್ಲಿ ಬುಲೆನ್

 • Share this:
  ದೀರ್ಘಾಯುಷ್ಯ (Long Life) ಮತ್ತು ಆರೋಗ್ಯವಂತ (Healthy) ಜೀವನ (Life) ನಡೆಸುವುದು ಪ್ರತಿಯೊಬ್ಬ ವ್ಯಕ್ತಿಯ (Person) ಕನಸು. ಈಗಂತೂ ಕಾಯಿಲೆಗಳಿಗೆ ಹೆಚ್ಚು ತುತ್ತಾಗುತ್ತಿರುವ ಮನುಷ್ಯ ಹೆಲ್ದೀ ಆಹಾರ, ಲೈಫ್ ಸ್ಟೈಲ್ ಬೇಕೆಂದು ಬಯಸುತ್ತಾನೆ. ಡಯಟ್ (Diet) ಪ್ಲಾನ್ ಮಾಡಿಕೊಂಡು ಸೊಪ್ಪು, ತರಕಾರಿ, ಕಾಳುಗಳನ್ನು ತಿನ್ನುತ್ತ ತಮ್ಮ ದಿನ ನಿತ್ಯದ ದಿನಚರಿಯನ್ನು ಕಾಪಾಡಿಕೊಳ್ಳುತ್ತಾನೆ. ಆದರೂ ಕೂಡ ಇತ್ತೀಚಿನ ದಿನಗಳಲ್ಲಿ ತಪ್ಪು ಆಹಾರ (Food) ಪದ್ಧತಿ ಮತ್ತು ಒತ್ತಡ ಇತ್ಯಾದಿಗಳಿಂದ ಇದು ಅಸಾಧ್ಯವಾಗಿದೆ. ಹಿಂದಿನ ಕಾಲದಲ್ಲಿ, ಜನರು ಉತ್ತಮ ಆಹಾರದಿಂದ 100 ವರ್ಷಗಳ ಕಾಲ ಆರಾಮವಾಗಿ ಬದುಕುತ್ತಿದ್ದರು. ಆದರೆ ಇಂದಿನ ದಿನಗಳಲ್ಲಿ 40ರ ಹರೆಯದಲ್ಲೇ ರಕ್ತದೊತ್ತಡ, ಹೃದಯಾಘಾತ, ಮಧುಮೇಹ, ಕ್ಯಾನ್ಸರ್ ನಂತಹ ಮಾರಣಾಂತಿಕ ಕಾಯಿಲೆಗಳನ್ನು ಎದುರಿಸುತ್ತಿದ್ದಾರೆ.

  102 ವರ್ಷ ವಯಸ್ಸಿನ ಮಹಿಳೆಯ ದೀರ್ಘಾಯುಷ್ಯದ ರಹಸ್ಯ

  ಇದರಿಂದಾಗಿ ಜನರ ವಯಸ್ಸು ತಾನಾಗಿಯೇ ಕಡಿಮೆಯಾಗುತ್ತ ಹೋಗುತ್ತಿದೆ. ಆದರೆ ಇಲ್ಲೊಬ್ಬ ಮಹಿಳೆ 102 ವರ್ಷ ವಯಸ್ಸಿನವರಾಗಿದ್ದಾರೆ. ಅವರ ಆಹಾರ ಪದ್ಧತಿ ಬಗ್ಗೆ ಓದಿದರೆ ನಿಜಕ್ಕೂ ಶಾಕ್ ಆಗುತ್ತೀರಿ.  102 ವಯಸ್ಸಿನ ಮಹಿಳೆಯ ಬಗ್ಗೆ ಇಲ್ಲಿ ಹೇಳಲಾಗಿದೆ. ಮತ್ತು ಅವರು ಇನ್ನೂ ಸಂಪೂರ್ಣವಾಗಿ ಆರೋಗ್ಯವಾಗಿದ್ದಾರೆ. ಈ ಮಹಿಳೆ ತನ್ನ ದೀರ್ಘಾಯುಷ್ಯದ ಕೆಲವು ರಹಸ್ಯಗಳನ್ನು ಹಂಚಿಕೊಂಡಿದ್ದಾರೆ. ಅವುಗಳ ಬಗ್ಗೆ ತಿಳಿಯೋಣ.

  102 ವರ್ಷದ ಲಿಲ್ಲಿ ಬುಲೆನ್ ಹುಟ್ಟು ಹಬ್ಬ

  ಇಂಗ್ಲೆಂಡ್‌ನ ಬ್ರೋಮ್ಸ್‌ಗ್ರೋವ್‌ನಲ್ಲಿ ವಾಸಿಸುತ್ತಿರುವ ಲಿಲ್ಲಿ ಬುಲೆನ್ ಇತ್ತೀಚೆಗೆ ತನ್ನ 102 ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಅವರ ಸ್ನೇಹಿತರು ಮತ್ತು ಕುಟುಂಬದವರು ಲಿಲ್ಲಿಯ ಹುಟ್ಟುಹಬ್ಬದ ಪಾರ್ಟಿಯಲ್ಲಿ ಭಾಗವಹಿಸಿದ್ದರು. ಪಾರ್ಟಿಯ ಸಮಯದಲ್ಲಿ ಲಿಲ್ಲಿ ಅಲ್ಲಿದ್ದ ಜನರಿಗೆ ಕೆಲವು ವಿಷಯಗಳನ್ನು ಹೇಳಿದರು.

  ಇದನ್ನೂ ಓದಿ: Russia-Ukraine War: ಈ ವೃದ್ಧ ದಂಪತಿಯ ಧೈರ್ಯಕ್ಕೆ ಸೆಲ್ಯೂಟ್ ಮಾಡ್ತಿದ್ದಾರೆ ನೆಟ್ಟಿಗರು

  ಅವರ ಮೂವರು ಮಕ್ಕಳು, ಐವರು ಮೊಮ್ಮಕ್ಕಳು ಮತ್ತು 4 ಮೊಮ್ಮಕ್ಕಳು ಕೂಡ ಈ ಪಾರ್ಟಿಯಲ್ಲಿ ಭಾಗಿಯಾಗಿದ್ದರು. ನಾಳಿನ ಭರವಸೆ ಯಾರಿಗೂ ಇರುವುದಿಲ್ಲ. ಹಾಗಾಗಿ ಜೀವನದ ಪ್ರತಿಯೊಂದು ಕ್ಷಣವನ್ನೂ ನಗುತ್ತ, ಉತ್ಸಾಹದಿಂದ ಬದುಕಬೇಕು ಎನ್ನುತ್ತಾರೆ 102ರ ಹರೆಯದ ಲಿಲ್ಲಿ. ಇಂತಹ ಪರಿಸ್ಥಿತಿಯಲ್ಲಿ ನಾವು ನಿನ್ನೆಯ ಬಗ್ಗೆ ಚಿಂತಿಸದೆ ಇಂದು ಸಂತೋಷವಾಗಿರುವುದು ಅವಶ್ಯಕ.

  ದೀರ್ಘಾಯುಷ್ಯದ ಗುಟ್ಟು ಬಹಿರಂಗಪಡಿಸಿದ ಲಿಲ್ಲಿ

  ಟಕಿಲಾ ಶಾಟ್ಸ್, ಜಾಗರ್ಬಾಂಬ್ಸ್, ಸಾಸೇಜ್ ರೋಲ್ಸ್ ಮತ್ತು ಡೊಮಿನೋಸ್ ಪಿಜ್ಜಾ ತನ್ನ ದೀರ್ಘಾಯುಷ್ಯದ ರಹಸ್ಯಗಳಾಗಿವೆ ಎಂದು ಲಿಲ್ಲಿ ಹೇಳಿಕೊಂಡಿದ್ದಾರೆ. ಅದೇ ಸಮಯದಲ್ಲಿ, ಲಿಲ್ಲಿ ತನ್ನ ಮೊಮ್ಮಕ್ಕಳು ಆಡುವುದನ್ನು ನೋಡುವುದು ಅವಳ ಅತ್ಯುತ್ತಮ ಟೈಮ್ ಪಾಸ್ ಎಂದು ಹೇಳಿದ್ದಾರೆ.

  99ನೇ ವಯಸ್ಸಿನಲ್ಲಿ ಐಸ್ ಸ್ಕೇಟಿಂಗ್ ಪ್ರಯತ್ನಿಸಿದ್ದ ಲಿಲ್ಲಿ

  ಲಿಲ್ಲಿಯ ಪತಿ ಫ್ರಾಂಕ್ ಡಟ್ಟನ್ 1988 ರಲ್ಲಿ 68 ನೇ ವಯಸ್ಸಿನಲ್ಲಿ ನಿಧನರಾದರು. ಈ ವಯಸ್ಸಿನಲ್ಲೂ ಹೊಸದನ್ನು ಪ್ರಯತ್ನಿಸಲು ಲಿಲ್ಲಿ ಹೆದರುವುದಿಲ್ಲ ಎಂದು ಹೇಳಿದ್ದಾರೆ. 99 ನೇ ವಯಸ್ಸಿನಲ್ಲಿ, ಲಿಲ್ಲಿ ಐಸ್ ಸ್ಕೇಟಿಂಗ್ ಅನ್ನು ಸಹ ಪ್ರಯತ್ನಿಸಿ್ದರು ಎಂದು ಮೊಮ್ಮಗ ಹಾಲಿ ಹೇಳಿದ್ದಾರೆ.

  ಅದೇ ಸಮಯದಲ್ಲಿ ತನ್ನ 100 ನೇ ಹುಟ್ಟುಹಬ್ಬದಂದು ಲಿಲ್ಲಿ, ಟಕಿಲಾ ಮತ್ತು ಜಾಗರ್ಬಾಂಬ್ ಸೇವಿಸಿದ್ದಾರೆ. ಹಾಲಿಯ ಮದುವೆಯಲ್ಲಿ ಅಂದರೆ 2013 ರಲ್ಲಿ ಲಿಲ್ಲಿ ಟಕಿಲಾ ಮತ್ತು ಜಾಗರ್‌ಬಾಂಬ್ ಸೇವಿಸಿದ್ದಾರೆ ಎಂದು ಬಹಿರಂಗಪಡಿಸಿದ್ದಾರೆ.

  ಇದನ್ನೂ ಓದಿ: Bengaluru: "ನಾವು ಬೆಂಗಳೂರಿಗೆ ಹೋಗುತ್ತಿದ್ದೇವೆ, ಮತ್ತೆ ನೀವು?" ಸೋಶಿಯಲ್ ಮೀಡಿಯಾಗಳಲ್ಲಿ ಈಗ ಇದೇ ಟ್ರೆಂಡ್‌!

  ಕರೋನಾ ಸಾಂಕ್ರಾಮಿಕ ಸಮಯದಲ್ಲಿ ನಾನು ಕೆಟ್ಟ ಸಮಯವನ್ನು ಸಹ ನೋಡಿದ್ದೇನೆ ಎಂದು ಹಾಲಿ ಹೇಳಿದ್ದಾರೆ. ಲಿಲ್ಲಿಗೆ ಟ್ರಿಸಿಯಾ, ದಯಾಲ್ ಮತ್ತು ಮಾರ್ಟಿನ್ ಎಂಬ ಮೂವರು ಮಕ್ಕಳಿದ್ದಾರೆ. ಜೊತೆಗೆ ಅಮಂಡಾ, ಜೋನ್, ಆಡಮ್, ಹಾಲಿ ಮತ್ತು ಫ್ರಾಂಕ್ ಎಂಬ ಐದು ಮೊಮ್ಮಕ್ಕಳಿದ್ದಾರೆ.
  Published by:renukadariyannavar
  First published: