ದೇವರ ವಾಸಸ್ಥಾನ ದೇವಸ್ಥಾನ. ಬಹುತೇಕ ಭಾರತೀಯರು ದೇವರನ್ನು ನಂಬುತ್ತಾರೆ. ತಮ್ಮ ಕಷ್ಟಗಳನ್ನು ದೇವರೊಂದಿಗೆ ಹೇಳುತ್ತಾರೆ ಮತ್ತು ತಮ್ಮಿಷ್ಟವನ್ನು ಕೇಳುತ್ತಾರೆ. ಕೊನೆಗೆ ಕಷ್ಟ ಪರಿಹಾರವಾದರೆ ಅಥವಾ ಇಷ್ಟ ಸಿದ್ಧಿಯಾದರೆ ದೇವರಿಗೆ ಏನಾದರು ಕಾಣಿ ನೀಡುತ್ತಾರೆ.
ದೇವರಿಗೆ ಕಾಣಿಕೆ ರೂಪದಲ್ಲಿ ಏನನ್ನಾದರು ನೀಡುತ್ತೇವೆ. ಅದರಲ್ಲೂ ಕೆಲವು ದೇವಸ್ಥಾನಗಳು ವಿಭಿನ್ನವಾಗಿದ್ದು, ಅಲ್ಲಿನ ದೇವರುಗಳು ವಿವಿಧ ವಸ್ತುಗಳ ಮೂಲಕ ಕಾಣಿಕೆ ನೀಡುವುದನ್ನು ನೋಡುತ್ತೇವೆ. ಭಾರತದಲ್ಲಿ ಹಲವಾರು ದೇವಾಲಯಗಳಿವೆ ಕೆಲವು ದೇವರಿಗೆ ಹಣದ ಮೂಲಕ ಕಾಣಿಕೆ ನೀಡಿದರೆ. ಇನ್ನು ಕೆಲವು ದೇವರಿಗೆ ಹಣ್ಣು, ಹಂಪಲು, ಪ್ರಾಣಿಬಲಿ, ಮದ್ಯ, ಸಿಹಿ, ವೀಲ್ಯದ ಎಳೆ,ಅಕ್ಕಿ, ತೆಂಗಿನಕಾಯಿಯ ಮೂಲಕ ಕಾಣಿಕೆ ಸಮರ್ಪಿಸುತ್ತಾರೆ. ಅದರಂತೆ ಇಲ್ಲಿ ಕೆಲವು ವಿಚಿತ್ರವಾದ ಕಾಣಿಕೆ ಮತ್ತು ಪ್ರಸಾದವನ್ನು ನೀಡುವ ದೇವಸ್ಥಾಗಳ ಕುರಿತ ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ.
ಕಾಲ ಭೈರವ ದೇವಸ್ಥಾನ ಮಧ್ಯ ಪ್ರದೇಶ
ಮಧ್ಯ ಪ್ರದೇಶದಲ್ಲಿ ಕಾಲ ಭೈರವ ದೇವಸ್ಥಾನದಲ್ಲಿ ದೇವರಿಗೆ ಮದ್ಯವನ್ನು ನೀಡುವ ಮೂಲಕ ಕಾಣಿಗೆ ನೀಡುತ್ತಾರೆ. ಹಾಗಾಗಿ ಈ ವಿಚಿತ್ರ ಕಾಣಿಗೆಯಿಂದಾಗಿ ದೇವಸ್ಥಾನವು ಜನಪ್ರಿಯತೆಯನ್ನು ಪಡೆದಿದೆ. ಮಾತ್ರವಲ್ಲದೆ ಸಾಕಷ್ಟು ಜನರು ಈ ದೇವಸ್ಥಾನಕ್ಕೆ ಬಂದು ಹರಕೆಕಟ್ಟಿಕೊಂಡು ಈಡೇರಿದ ನಂತರ ಮದ್ಯವನ್ನು ಕಾಣಿಕೆ ರೂಪದಲ್ಲಿ ನೀಡುತ್ತಾರೆ.
ಇನ್ನು ಈ ದೇವಸ್ಥಾನ ಹೊರಗೆ ಮದ್ಯವನ್ನು ಮಾರುವ ಅನೇಕ ಅಂಗಡಿಳಿವೆ. ಇಲ್ಲಿ ವಿದೇಶಿ ಮತ್ತು ಭಾರತದಲ್ಲಿ ತಯಾರಿಸಲಾದ ಮದ್ಯ ಮಾರಾಟ ಮಾಡಲಾಗುತ್ತದೆ.
ಮಂಚ್ ಮುರುಗನ್ ದೇವಸ್ಥಾನ
ಚಾಕೋಲೇಟ್ಗಳಂದರೆ ಯಾರಿಗೆ ಇಷ್ಟವಿಲ್ಲ ಹೇಳಿ. ಮಕ್ಕಳಿಂದ ದೊಡ್ಡವರು ಕೂಡ ಚಾಕೊಲೇಟ್ ಅನ್ನು ಇಷ್ಟ ಪಡುತ್ತಾರೆ. ಅದರಂತೆ ಕೇರಳದಲ್ಲೊಂದು ಮಂಚ್ ಮುರುಗನ್ ಹೆಸರಿನ ದೇವಸ್ಥಾನವಿದೆ. ಇಲ್ಲಿ ಮಂಚ್ ಚಾಕೋಲೆಟ್ ಅನ್ನು ದೇವರಿಗೆ ಸಮರ್ಪಿಸುತ್ತಾರೆ.
View this post on Instagram
ಕಾಳಿ ದೇವಸ್ಥಾನ -ಕೊಲ್ಕತ್ತಾ
ಕೊಲ್ಕತ್ತಾ ಆಕರ್ಷಣೀಯ ದೇವಸ್ಥಾನಗಳಲ್ಲಿ ಚೀನಿ ಕಾಳಿ ದೇವಸ್ಥಾನವು ಒಂದು. ಇದು ಟಾಂಗ್ರಾ ಪ್ರದೇಶದಲ್ಲಿದೆ. ಹಾಗಾಗಿ ಟ್ರಾಂಗ್ರಾವನ್ನು ಚೀನಾ ಟೌನ್ ಎಂದು ಕರೆಯುತ್ತಾರೆ. ಅಂದಹಾಗೆಯೇ ಈ ಕಾಳಿ ದೇವಸ್ಥಾನದ ವಿಶೇಷವೆಂದರೆ ಇಲ್ಲಿ ದೇವರಿಗೆ ನೈವೇದ್ಯ ರೂಪದಲ್ಲಿ ನೂಡಲ್ಸ್, ಚಾಪ್ ಸ್ಯೂ, ಅಕ್ಕಿ ಮತ್ತು ತರಕಾರಿಗಳಿಂದ ತಯಾರಿಸಿದ ನೈವೇದ್ಯವನ್ನು ನೀಡಲಾಗುತ್ತದೆ.
ಅಜಗರ್ ದೇವಸ್ಥಾನ -ತಮಿಳು ನಾಡು
ತಮಿಳುನಾಡಿನ ಮಧುರೈನಲ್ಲಿರುವ ಅಜಗರ್ ದೇವಸ್ಥಾನದಲ್ಲಿ ವಿಷ್ಣು ದೇವರನ್ನು ಮೂಲ ದೇವರನ್ನಾಗಿ ಪೂಜಿಸುತ್ತಾರೆ. ಇಲ್ಲಿ ದೇವರಿಗೆ ದೋಸೆಯನ್ನು ನೀಡಲಾಗುತ್ತದೆ. ದೇವಾಲಯದ ಆವರಣದಲ್ಲಿರುವ ಅಡುಗೆ ಮನೆಯಲ್ಲಿ ದೋಸೆಯನ್ನು ತಯಾರಿಸುತ್ತಾರೆ. ನಂತರ ದೇವರಿಗೆ ಅರ್ಪಿಸಲಾಗುತ್ತದೆ ಆ ಬಳಿಕ ಭಕ್ತರಿಗೆ ವಿತರಿಸಲಾಗುತ್ತದೆ.
ಮಹಾದೇವ ದೇವಸ್ಥಾನ ಕೇರಳ
ವಿಚಿತ್ರ ಕಾಣಿಕೆಗಳನ್ನು ನೀಡುವ ದೇವಸ್ಥಾಗಳ ಪಟ್ಟಿಯಲ್ಲಿ ಕೇರಳದ ಮಹಾದೇವ ದೇವಸ್ಥಾನ ಕೊಂಚ ಭಿನ್ನವಾಗಿದೆ. ಏಕೆಂದರೆ ಇಲ್ಲಿ ಭಕ್ತರಿಗೆ ಸಿಡಿ, ಡಿವಿಡಿ ಮತ್ತು ಪುಸ್ತಕವನ್ನು ಪ್ರಸಾದ ರೂಪದಲ್ಲಿ ನೀಡಲಾಗುತ್ತದೆ. ಅಂದಹಾಗೆಯೇ ಜ್ನಾನವು ದೇವರ ಅತ್ಯತ್ತಮ ಕೊಡುಗೆ ಹಾಗಾಗಿ ಭಕ್ತಾದಿಗಳಿಗೆ ಸಿಟಿ, ಪುಸ್ತಕವನ್ನು ಪ್ರಸಾದ ರೂಪದಲ್ಲಿ ನೀಡುತ್ತಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ