Animal Fight: ಜಿರಾಫೆ ಮೇಲೆ ದಾಳಿ ಮಾಡಲು ಸಿಂಹಗಳ ಶತ ಪ್ರಯತ್ನ! ಜಿರಾಫೆ ಬಚಾವಾಯ್ತಾ?

ಸಾಮಾಜಿಕ ಮಾಧ್ಯಮವಾದ ಇನ್‌ಸ್ಟಾಗ್ರಾಮ್ ಖಾತೆಯ ಪುಟದಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ ವಯಸ್ಕ ಜಿರಾಫೆ ಸಿಂಹಗಳ ದಾಳಿಯಿಂದ ತಪ್ಪಿಸಿಕೊಳ್ಳಲು ಹೇಗೆ ಪ್ರಯತ್ನಿಸಿದೆ ಎನ್ನುವುದನ್ನು ನೋಡಬಹುದು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಇತ್ತೀಚೆಗೆ ನಾವು ಪ್ರಾಣಿಗಳಿಗೆ (Animals) ಸಂಬಂಧಪಟ್ಟಂತಹ ವಿಡಿಯೋಗಳನ್ನು (Video) ಮತ್ತು ಫೋಟೋಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಕೆಲವು ವಿಡಿಯೋಗಳಲ್ಲಿ ಈ ಪ್ರಾಣಿಗಳ ತುಂಟಾಟಗಳನ್ನು ನಾವು ನೋಡಿದರೆ, ಇನ್ನೂ ಕೆಲವು ವಿಡಿಯೋಗಳಲ್ಲಿ ಒಂದು ಪ್ರಾಣಿ ಇನ್ನೊಂದು ಚಿಕ್ಕ ಪ್ರಾಣಿಯ ಮೇಲೆ ದಾಳಿ ಮಾಡುವಂತದ್ದನ್ನು ನಾವು ನೋಡಬಹುದು. ಇನ್ನು ಕೆಲವು ವಿಡಿಯೋಗಳಲ್ಲಿ ಕಾಡು ಪ್ರಾಣಿಗಳು (Wild Animals) ತಮ್ಮ ಆಹಾರ ಹುಡುಕಿಕೊಂಡು ಹೋಗಿ ಚಿಕ್ಕ ಪ್ರಾಣಿಗಳ ಮೇಲೆ ದಾಳಿ ಮಾಡಿ ಅವುಗಳನ್ನು ಕೊಂದು ಹಾಕಿರುವುದನ್ನು ಸಹ ನೋಡಬಹುದಾಗಿದೆ.

ಒಟ್ಟಿನಲ್ಲಿ ಹೇಳುವುದಾದರೆ ಈ ಪ್ರಾಣಿಗಳ ಜಗತ್ತು ಒಂದು ಆಕರ್ಷಕ ಪರಿಸರ ವ್ಯವಸ್ಥೆಯಾಗಿದೆ. ಪರಭಕ್ಷಕಗಳು ತಮ್ಮ ಬೇಟೆಯನ್ನು ಹಿಡಿಯಲು ಹೇಗೆ ಪ್ರಯತ್ನಿಸುತ್ತವೆ ಎಂದು ತೋರಿಸುವ ಹಲವಾರು ವಿಡಿಯೋಗಳು ನೋಡುಗರನ್ನು ತುಂಬಾನೇ ಬೆರಗುಗೊಳಿಸುತ್ತವೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.

ದಾಳಿಗಳ ವಿಡಿಯೋ

ಸಾಮಾನ್ಯವಾಗಿ, ಹುಲಿಗಳು, ಸಿಂಹಗಳು ಮತ್ತು ಚಿರತೆಯಂತಹ ದೊಡ್ಡ ಪ್ರಾಣಿಗಳು ತಮ್ಮ ಬೇಟೆಯನ್ನು ಸುಲಭವಾಗಿ ಹಿಡಿಯುವಲ್ಲಿ ಯಶಸ್ವಿಯಾಗುತ್ತವೆ, ಆದರೆ ಕೆಲವೊಮ್ಮೆ ಈ ಕಾಡಿನ ಪರಭಕ್ಷಕಗಳು ತಮ್ಮ ಬೇಟೆಯನ್ನು ಹಿಡಿಯುವಲ್ಲಿ ತುಂಬಾನೇ ಕಠಿಣವಾದ ಸಮಯವನ್ನು ಎದುರಿಸುವ ಹಲವಾರು ವಿಡಿಯೋಗಳು ಸಹ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುತ್ತವೆ.

ಜಿರಾಫೆಯ ಧೈರ್ಯ ನೋಡಿ

ಇಲ್ಲೊಂದು ಇಂತಹದೇ ವಿಡಿಯೋದಲ್ಲಿ ಜಿರಾಫೆಯ ಧೈರ್ಯವನ್ನು ನೀವು ನೋಡಬಹುದು. ಸಾಮಾಜಿಕ ಮಾಧ್ಯಮವಾದ ಇನ್‌ಸ್ಟಾಗ್ರಾಮ್ ಖಾತೆಯ ಪುಟದಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ ವಯಸ್ಕ ಜಿರಾಫೆ ಸಿಂಹಗಳ ದಾಳಿಯಿಂದ ತಪ್ಪಿಸಿಕೊಳ್ಳಲು ಹೇಗೆ ಪ್ರಯತ್ನಿಸಿದೆ ಎನ್ನುವುದನ್ನು ನೋಡಬಹುದು.






3 - 4 ಸಿಂಹಗಳಿಂದ ಒಟ್ಟಿಗೇ ದಾಳಿ

ವಿಡಿಯೋ ಆರಂಭವಾದಾಗ ಒಂದು ಜಿರಾಫೆ ಸುಮ್ಮನೆ ನಿಂತಿದ್ದು, ಹಿಂದೆಯಿಂದ 3 - 4 ಸಿಂಹಗಳು ಬಂದು ನಿಂತುಕೊಂಡು, ಅದರಲ್ಲಿ ಒಂದೊಂದರಂತೆ ಅದರ ಮೇಲೆ ದಾಳಿ ಮಾಡಲು ಶುರು ಮಾಡಿದ್ದನ್ನು ನೋಡಬಹುದು.

ಇದನ್ನೂ ಓದಿ: ರಾಕ್ಷಸ ಮುಖದ ಟ್ಯಾಟೂ ಪ್ರೇಮಿಯ ಪ್ರೇಮಪಾಶದಲ್ಲಿ ಬಂಧಿಯಾದ ಯುವತಿ; ಮದ್ವೆ ಫೋಟೋ ವೈರಲ್

ಈ ವಿಡಿಯೋ ಮುಂದುವರಿಯುತ್ತಿದ್ದಂತೆ, ಆ ಮೂರು ನಾಲ್ಕು ಸಿಂಹಗಳು ಒಮ್ಮೊಮ್ಮೆ ಏಕ ಕಾಲದಲ್ಲಿ ಒಂದು ಉದ್ದನೆಯ ಜಿರಾಫೆಯ ಮೇಲೆ ಒಂದೊಂದಾಗಿ ದಾಳಿ ಮಾಡಲು ಪ್ರಯತ್ನಿಸಿರುವುದನ್ನು ನೋಡಬಹುದು. ಜಿರಾಫೆಯು ಹಿಂದಿನಿಂದ ತನ್ನ ಮೇಲೆ ಜಿಗಿಯಲು ಪ್ರಯತ್ನಿಸುತ್ತಿದ್ದ ಸಿಂಹಗಳನ್ನು ಲೆಕ್ಕಿಸದೆ ತನ್ನ ಉದ್ದನೆಯ ಕಾಲಿನಿಂದ ಹಾಗೆ ಜಾಡಿಸಿ ಹಿಂದಕ್ಕೆ ಒದೆಯುತ್ತದೆ. ಒಟ್ಟಿನಲ್ಲಿ ಈ ದೃಶ್ಯವು ಹೇಗಿತ್ತು ಎಂದರೆ ಒಂದು ಚಲನಚಿತ್ರದಲ್ಲಿ ನಾಯಕ ನಟನನ್ನು ಏಕಕಾಲದಲ್ಲಿಯೇ ಅನೇಕ ಖಳನಾಯಕರು ದಾಳಿ ಮಾಡಿದ ಹಾಗೆ ಇತ್ತು. ಆದರೆ ಜಿರಾಫೆ ಮಾತ್ರ ಯಾವುದೇ ಸಿಂಹವನ್ನು ತನ್ನ ಮೇಲೆ ಹತ್ತಲು ಬಿಡಲೇ ಇಲ್ಲ.

20 ಮಿಲಿಯನ್‌ಗೂ ಹೆಚ್ಚು ಬಾರಿ ವೀಕ್ಷಣೆ

ಈ ಮೈ ಜುಮ್ಮೆನಿಸುವ ವಿಡಿಯೋವನ್ನು 20 ಮಿಲಿಯನ್‌ಗೂ ಹೆಚ್ಚು ಬಾರಿ ವೀಕ್ಷಿಸಲಾಗಿದ್ದು, ಒಂದು ಲಕ್ಷಕ್ಕೂ ಹೆಚ್ಚು ಲೈಕ್‌ಗಳನ್ನು ಸಹ ಈ ವಿಡಿಯೋ ಗಳಿಸಿದೆ. ಇದು ಅನೇಕ ಜನರನ್ನು ಸಹ ದಿಗ್ಭ್ರಮೆಗೊಳಿಸಿದೆ ಎಂದು ಹೇಳಬಹುದು. ಆದರೂ, ಅಂತಿಮ ಫಲಿತಾಂಶ ಏನಾಯ್ತು ಎಂದು ತಿಳಿದುಕೊಳ್ಳುವ ಸ್ವಲ್ಪ ಸಮಯದ ಮೊದಲು ವಿಡಿಯೋ ಕೊನೆಗೊಂಡಿದ್ದರಿಂದ, ಇದರಲ್ಲಿ ಯಾರು ಈ ಹೋರಾಟವನ್ನು ಗೆದ್ದರು ಎಂದು ಕಂಡುಹಿಡಿಯುವುದು ಕಷ್ಟವಾಗಿದ್ದರಿಂದ ಅನೇಕರು ನಿರಾಶೆಗೊಂಡರು.

ಇದನ್ನೂ ಓದಿ: Viral News: ಭಾರತದ ಅತಿ ಕಿರಿಯ ಬಸ್ ಚಾಲಕಿ; ಕುಟುಂಬಕ್ಕಾಗಿ ಚಾಲನೆ ಆರಂಭಿಸಿ, ಬಸ್ ಒಡತಿಯಾದ ಯುವತಿ

ಕಾಮೆಂಟ್ಸ್ ವಿಭಾಗದಲ್ಲಿ ಹಲವಾರು ಜನರು ಧೈರ್ಯಶಾಲಿ ಜಿರಾಫೆಗಾಗಿ ಹುರಿದುಂಬಿಸುತ್ತಿದ್ದರು. ಒಬ್ಬ ಸಾಮಾಜಿಕ ಮಾಧ್ಯಮ ಬಳಕೆದಾರರು ಈ ವಿಡಿಯೋ ನೋಡಿ “ಜಿರಾಫೆಯ ಕಾಲಿಗೆ ತುಂಬಾನೇ ಗಾಯಗಳು ಆಗಿರಬಹುದು, ಏಕೆಂದರೆ ಸಿಂಹಗಳು ಜಿರಾಫೆಯ ಮೇಲೆ ಮಾಡಿದ ಅನೇಕ ಪ್ರಯತ್ನಗಳಿಂದ ಜಿರಾಫೆಗೆ ಸುಸ್ತಾಗಿರಬೇಕು. ಸದ್ಯ ಅದು ಆ ಸಿಂಹಗಳಿಂದ ಬದುಕುಳಿದಿದ್ದರೆ ಸಾಕಪ್ಪಾ ದೇವರೇ” ಎಂದು ಕಾಮೆಂಟ್ ಮಾಡಿದ್ದಾರೆ. ಕೆಲವೊಬ್ಬರು ಇದನ್ನು ನೋಡಿ ಆಶ್ಚರ್ಯಕರವಾದ ಎಮೋಜಿಗಳನ್ನು ಕಾಮೆಂಟ್‌ನಲ್ಲಿ ಹಾಕಿದರೆ, ಇನ್ನೂ ಕೆಲವರು ಇದು ನೋಡಲು ತುಂಬಾನೇ ರೋಚಕವಾಗಿದೆ ಎಂದು ಸೂಚಿಸುವ ಕಣ್ಣಿನಲ್ಲಿ ಹೃದಯಗಳಿರುವ ಎಮೋಜಿಗಳನ್ನು ಹಾಕಿದ್ದಾರೆ.
Published by:Divya D
First published: