ಗಾಳಿ ಬೀಸಿದಾಗ ಆನೆಯನ್ನು ಚಿಕ್ಕ ಇರುವೆಗಳು ಓಡಿಸಿದ ಕಥೆಯನ್ನು ನೀವು ಕೇಳಿರಬಹುದು. ಆದರೆ ಇದೀಗ ಆನೆಗಳು ಕಾಡಿನ ರಾಜನನ್ನು ಓಡಿಸುವ ವಿಡಿಯೋವೊಂದು ವೈರಲ್ ಆಗಿದೆ. ಸಿಂಹವನ್ನು ಕಾಡಿನ ರಾಜ ಎಂದು ಕರೆಯಲಾಗುತ್ತದೆ. ಎಲ್ಲಾ ಚಿಕ್ಕ ಪ್ರಾಣಿಗಳು ಸಿಂಹನನ್ನು (Lion) ಕಂಡರೆ ಗಡ ಗಡ ಅಂತ ನಡುಗುತ್ತವೆ. ಅದರಿಂದ ತಪ್ಪಿಸಿಕೊಳ್ಳಲು ಎನಾದ್ರೂ ಉಪಾಯವನ್ನು ಮಾಡುತ್ತಾ ಇರುತ್ತವೆ. ಕಾಡಿನಲ್ಲಿ (Forest) ಸಿಂಹದ ಘರ್ಜನೆಯನ್ನು ಕೇಳಿ ಇತರ ಎಲ್ಲಾ ಪ್ರಾಣಿಗಳು ಹೆದರುತ್ತವೆ. ಆದರೆ, ಈಗ ವೈರಲ್ ಆಗುತ್ತಿರುವ ವಿಡಿಯೋ (Video) ಇದಕ್ಕೆ ತದ್ವಿರುದ್ಧವಾಗಿದೆ. ಆನೆಗಳ ದೊಡ್ಡ ಹಿಂಡನ್ನು ನೋಡಿದ ಸಿಂಹಗಳು ಕುಟುಂಬ ಸಮೇತ ಓಡುತ್ತಿರುವ ವಿಡಿಯೋ ಸಖತ್ ವೈರಲ್ (Viral) ಆಗಿದೆ.
ವೈರಲ್ ಆಗಿರುವ ವೀಡಿಯೊದಲ್ಲಿ, ಕಾಡಿನಲ್ಲಿ ಸಿಂಹಗಳ ಹಿಂಡು ಒಟ್ಟಿಗೆ ಕುಳಿತಿರುವುದನ್ನು ಕಾಣಬಹುದು. ಆನೆಗಳ ಹಿಂಡು ತಮ್ಮ ಕಡೆಗೆ ಬರುವುದನ್ನು ಸಿಂಹಗಳು ನೋಡುತ್ತವೆ. ಈ ಹಿಂಡನ್ನು ನೋಡಿದ ಸಿಂಹದ ಮರಿಗಳು ಮೊದಲು ಎದ್ದು ಓಡುತ್ತವೆ. ನಂತರ, ಸಿಂಹಿಣಿ ಕೂಡ ಅಲ್ಲಿಂದ ಓಡಲು ಪ್ರಾರಂಭಿಸುತ್ತದೆ. ಕುಟುಂಬದ ಮುಖ್ಯಸ್ಥ ಸಿಂಹವು ಕೊನೆಗೆ ಅಲ್ಲಿಯೇ ನಿಲ್ಲುತ್ತದೆ. ಆದರೆ, ಆನೆಗಳ ಹಿಂಡು ತೀರಾ ಹತ್ತಿರಕ್ಕೆ ಬಂದ ತಕ್ಷಣ ಆತ ಕೂಡ ಅಲ್ಲಿಂದ ಹೆದರಿ ಓಡುತ್ತದೆ.
ಈ ವಾರದ ಆರಂಭದಲ್ಲಿ ಲ್ಯಾನ್ಸ್ ಎಂಬ ಬಳಕೆದಾರರು ಈ ವೀಡಿಯೊವನ್ನು ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ. ಅಂದಿನಿಂದ ಇದು 14 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಮತ್ತು ಸುಮಾರು 40 ಸಾವಿರ ಲೈಕ್ಗಳನ್ನು ಪಡೆದುಕೊಂಡಿದೆ. ಅನೇಕರು ತಮ್ಮ ಖಾತೆಗಳಿಂದ ಈ ವೀಡಿಯೊವನ್ನು ಮರು-ಶೇರ್ ಮಾಡಿದ್ದಾರೆ. ಹಾಗೆಯೆ ಇದೀಗ ಯೂ ಟ್ಯೂಬ್ನಲ್ಲೂ ನಾವು ಕಾಣಬಹುದಾಗಿದೆ.
ಇದನ್ನೂ ಓದಿ: 18,700 ರುಪಾಯಿಗೆ ಸಿಗುತ್ತೆ ಬುಲೆಟ್ ಬೈಕ್! ವೈರಲ್ ಆಯ್ತು ಬಿಲ್
@BornAKang ಬಳಕೆದಾರರಿಂದ ಟ್ವಿಟರ್ನಲ್ಲಿ ವೀಡಿಯೊವನ್ನು ಮರು-ಹಂಚಲಾಗಿದೆ. 'ಸಿಂಹಗಳ ಹಿಂಡು ಹೇಗೆ ಓಡಿಹೋಗುತ್ತದೆ ಎಂದು ನನಗೆ ಆಶ್ಚರ್ಯವಾಗಿದೆ' ಎಂದು ವೀಡಿಯೊಗೆ ಶೀರ್ಷಿಕೆ ನೀಡಲಾಗಿದೆ. ಇಂಟರ್ನೆಟ್ ಬಳಕೆದಾರರೂ ಈ ವೀಡಿಯೊಗೆ ಕಾಮೆಂಟ್ ಮಾಡಿದ್ದಾರೆ. ಒಬ್ಬ ಬಳಕೆದಾರ, 'ಕಾಡಿನ ನಿಜವಾದ ರಾಜ ಆನೆ!' ಇನ್ನೊಬ್ಬ ಬಳಕೆದಾರರು ಬರೆದಿದ್ದಾರೆ, 'ನಾನು ನೋಡಿದ ಮೊದಲ ವಿಷಯವೆಂದರೆ, ಸಿಂಹದ ಧೈರ್ಯ. ಆದರೆ, ನಂತರ ಆ ಮನಸ್ಸು ಬದಲಾಯಿತು.' ಮತ್ತೊಬ್ಬ ಬಳಕೆದಾರ, 'ಆ ಸಿಂಹಗಳು ಎದ್ದು ಓಡಲು ಪ್ರಾರಂಭಿಸಿದ ರೀತಿ ಆಘಾತಕಾರಿಯಾಗಿದೆ' ಎಂದು ಪ್ರತಿಕ್ರಿಯಿಸಿದ್ದಾರೆ.
ಸಣ್ಣ ಮಕ್ಕಳು ಮನೆಯಲ್ಲಿ ಕದ್ದು ಟಿವಿ ನೋಡುತ್ತಾ ಇರುತ್ತಾರೆ. ಅಮ್ಮ ಅಥವಾ ಅಪ್ಪ ಬಂದಾಗ ಯಾವ ರೀತಿಯಾಗಿ ಹೆದರಿ ತನ್ನ ಪಾಡಿಗೆ ತಾವು ಯಾವ ರೀತಿಯಾಗಿ ಕೆಲಸವನ್ನು ಮಾಡುತ್ತವೆಯೋ, ಅದೇ ರೀತಿಯಾಗಿ ಇಲ್ಲಿ ಸಿಂಹ ಕೂಡ ಆನೆ ಹತ್ತಿರ ಬರುವ ತನಕ ಸುಮ್ಮನೆ ಇರುವ ಸಿಂಹಗಳು ಮತ್ತೆ ಹೇಗೆ ಹೆದರಿ ಓಡುತ್ತವೆ ಅಂತ ನೀವೇ ನೋಡಬಹುದು.
ಸಿಂಹಿಣಿ ಮತ್ತು ಅದರ ಕುಟುಂಬ ಒಟ್ಟಾಗಿ ಆನೆಯನ್ನು ಬೇಟೆಯಾಡುವುದನ್ನು ಈ ಹಿಂದೆ ಹಲವಾರು ಜನರು ನೋಡಿದ್ದರು. ಆದರೆ, ಆನೆಗಳ ಹಿಂಡನ್ನು ನೋಡಿ ಸಿಂಹ ಓಡಿ ಹೋಗಿರುವುದು ಇದೇ ಮೊದಲು. ಈ ವಿಡಿಯೋ ಬಗ್ಗೆ ಹಲವರು ಕುತೂಹಲ ಕೆರಳಿಸಿದ್ದಾರೆ. ಸಿಂಹವು ತನ್ನ ಸ್ವಭಾವಕ್ಕೆ ವಿರುದ್ಧವಾಗಿ ಹೇಗೆ ವರ್ತಿಸುತ್ತದೆ? ಈ ಪ್ರಶ್ನೆಯನ್ನೂ ಹಲವರು ಕೇಳಿದ್ದಾರೆ. ಸಹಜವಾಗಿ, ಕಾಡಿನಲ್ಲಿ ಅನೇಕ ಘಟನೆಗಳು ನಡೆಯುತ್ತಿರಬಹುದು, ಈ ಘಟನೆಗಳನ್ನು ನಾವು ಜಾನಪದದ ಮೂಲಕ ತಿಳಿದಿದ್ದೇವೆ. ಆದರೆ ಪ್ರಸ್ತುತ ಕಾಡಿನಲ್ಲಿ ಇಟ್ಟಿರುವ ಹಿಡನ್ ಕ್ಯಾಮರಾದಿಂದ ಎಲ್ಲವೂ ತಿಳಿಯುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ